For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಗುಣಗಳಿವೆಯೇ? ನಂಬಿಕೆಯೇ ಬರುತ್ತಿಲ್ಲ!

By Jayasubramanya
|

ಪ್ರಾಚೀನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದಿಂದಲೂ ಈ ಬೆಳ್ಳುಳ್ಳಿಯನ್ನು ಕೂದಲು ಉದುರುವಿಕೆಗಾಗಿ ಔಷಧಿಯಾಗಿ ಬಳಸಿಕೊಂಡು ಬರುತ್ತಿದ್ದಾರೆ. ತಜ್ಞರ ಪ್ರಕಾರ ಈ ಮನೆ ಮದ್ದನ್ನು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಬೇಕಂತೆ.

ಒಂದು ವೇಳೆ ಕೂದಲು ಉದುರುವಿಕೆ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ, ಬೆಳ್ಳುಳ್ಳಿ ರಸದ ಜೊತೆಗೆ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುವುದು ಅತ್ಯಗತ್ಯ. ಬೆಳ್ಳುಳ್ಳಿಯಲ್ಲಿರುವ ಪ್ರಮುಖ 15 ಗುಣಗಳು

ಹೌದು, ವಾರಕ್ಕೆ ಎರಡು ಬಾರಿ ಬೆಳ್ಳುಳ್ಳಿ ಎಣ್ಣೆ ಮಸಾಜ್ ಮಾಡಿಕೊಂಡಲ್ಲಿ ವಿಪರೀತ ಕೂದಲುದುರುವ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ವಿಟಮಿನ್ ಸಿ ಅಂಶವನ್ನು ಬೆಳ್ಳುಳ್ಳಿ ಒಳಗೊಂಡಿದ್ದು, ಹಾನಿಗೊಂಡ ಕೂದಲಿಗೆ ರಿಪೇರಿಯನ್ನು ಮಾಡಿ ಉತ್ತಮವಾದ ಪೋಷಣೆಯನ್ನು ಒದಗಿಸುತ್ತದೆ.

ಕಬ್ಬಿಣದ ಅಂಶವನ್ನು ಒಳಗೊಂಡಿರುವ ಬೆಳ್ಳುಳ್ಳಿ, ಪುಟ್ಟದಾಗಿದ್ದರೂ ಸಾಮರ್ಥ್ಯವುಳ್ಳದ್ದಾಗಿದೆ. ನಿಮ್ಮ ಕೂದಲಿನ ಪೋಷಣೆಯಲ್ಲಿ ಬೆಳ್ಳುಳ್ಳಿಯನ್ನು ಯಾವ ತೆರನಾಗಿ ಬಳಸಿಕೊಳ್ಳಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದು, ಇಲ್ಲಿ ಗಮನ ಹರಿಸಿ.

ಬೆಳ್ಳುಳ್ಳಿ ಬೆರೆತ ಎಣ್ಣೆ
ಬೆಳ್ಳುಳ್ಳಿಯನ್ನು ಬೆರೆಸಿಕೊಂಡ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಳ್ಳುವುದು ತಲೆಬುಡದಲ್ಲಿನ ಸೋಂಕನ್ನು ನಿವಾರಿಸಿ ನೆರೆಗೂದಲನ್ನು ತಡೆಗಟ್ಟುತ್ತದೆ. ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

Surprising Ways To Use Garlic In Hair Care

ಎಣ್ಣೆ ತಯಾರಿಸುವುದು ಹೇಗೆ?
ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ರಸ ಸಿದ್ಧಪಡಿಸಿ. ಅರ್ಧ ಕಪ್ ತೆಂಗಿನೆಣ್ಣೆಗೆ 1 ಚಮಚದಷ್ಟು ಬೆಳ್ಳುಳ್ಳಿ ರಸವನ್ನು ಮಿಶ್ರಮಾಡಿಕೊಳ್ಳಿ.
*ಮಂದ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಿಮ್ಮ ತಲೆಬುಡಕ್ಕೆ ಎಣ್ಣೆಯನ್ನು ಮಸಾಜ್ ಮಾಡಿ.
*ನಿಮ್ಮ ತಲೆಬುಡ ಬೆಚ್ಚಗಾಗುವರೆಗೆ ಮಸಾಜ್ ಕ್ರಿಯೆಯನ್ನು ಮುಂದುವರಿಸಿ. ಗಂಟೆಗಳಷ್ಟು ಕಾಲ ಹಾಗೆಯೇ ಬಿಡಿ. ನಂತರ ಶಾಂಪೂ ಬಳಸಿ ಕಂಡೀಶನ್ ಮಾಡಿಕೊಳ್ಳಿ. ಬೆಳ್ಳುಳ್ಳಿಯಲ್ಲಿರುವ ಪ್ರಮುಖ 15 ಗುಣಗಳು

ಹಸಿ ಬೆಳ್ಳುಳ್ಳಿ ಸೇರಮ್
ಇದರಷ್ಟೇ ಪರಿಣಾಮಕಾರಿಯಾದ ಈರುಳ್ಳಿ ರಸವನ್ನು ಬಳಸಿಕೊಂಡು ಬೆಳ್ಳುಳ್ಳಿ ಸೇರಮ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.

ಮಾಡುವ ವಿಧಾನ
ಬೆಳ್ಳುಳ್ಳಿ ರಸವನ್ನು ಬೇರ್ಪಡಿಸಿಕೊಂಡು ಅದಕ್ಕೆ ಒಂದು ಚಮಚದಷ್ಟು ಈರುಳ್ಳಿ ರಸ ಸೇರಿಸಿಕೊಳ್ಳಿ. ಹತ್ತಿಯ ಉಂಡೆಯನ್ನು ಎಣ್ಣೆಯಲ್ಲಿ ಅದ್ದಿ ನಿಮ್ಮ ತಲೆಬುಡಕ್ಕೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ. ತಲೆಬುಡಕ್ಕೆ ಎಣ್ಣೆಯನ್ನು ಮಸಾಜ್ ಮಾಡಿ. ತಲೆಬುಡ ಬೆಚ್ಚಗಾಗುವರೆಗೆ ಎಣ್ಣೆ ಹಚ್ಚಿ. ಗಂಟೆಗಳವರೆಗೆ ಹಾಗೆಯೇ ಬಿಡಿ. ಶಾಂಪೂ ಹಚ್ಚಿ ಕಂಡೀಶನ್ ಬಳಸಿಕೊಳ್ಳಿ.

ಬೆಳ್ಳುಳ್ಳಿ ಕಂಡೀಶನರ್
ಬೆಳ್ಳುಳ್ಳಿಯನ್ನು ನಿಮ್ಮ ಕೂದಲಿಗೆ ಕಂಡೀಶನ್‎ನಂತೆ ಕೂಡ ಬಳಸಿಕೊಳ್ಳಬಹುದಾಗಿದೆ.

ಮಾಡುವ ವಿಧಾನ
*ಬಿಸಿಲಿಗೆ ಸ್ವಲ್ಪ ಬೆಳ್ಳುಳ್ಳಿಯನ್ನು ಒಣಗಿಸಿಕೊಳ್ಳಿ, ಇದನ್ನು ಹುಡಿ ಮಾಡಿಕೊಳ್ಳಿ ಮತ್ತು ನಿಮ್ಮ ನಿಯಮಿತ ಕಂಡೀಶನರ್‏ಗೆ ಈ ಪುಡಿಯನ್ನು ಬೆರೆಸಿಕೊಳ್ಳಿ. ಬೆಳ್ಳುಳ್ಳಿ ರಸವನ್ನು ಕಂಡೀಶನರ್‎ನೊಂದಿಗೆ ಬಳಸಿಕೊಂಡು ಇನ್ನಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಬೆಳ್ಳುಳ್ಳಿ ಮಾಸ್ಕ್
ವಿಟಮಿನ್ ಇ ಯೊಂದಿಗೆ ಬೆಳ್ಳುಳ್ಳಿಯಲ್ಲಿ ಸೆಲೇನಿಯಮ್ ಇದ್ದು ಆಲೀವ್ ಆಯಿಲ್ ಮತ್ತು ಮೊಟ್ಟೆಯೊಂದಿಗೆ ಇದನ್ನು ಬೆರೆಸಿಕೊಂಡು ನಿಮ್ಮ ಕೂದಲಿಗೆ ನೈಸರ್ಗಿಕ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ. ಹೇರ್ ಮಾಸ್ಕ್ ಅನ್ನು ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸುತ್ತಿದ್ದೇವೆ

ಸಾಮಾಗ್ರಿಗಳು
*1 ಮೊಟ್ಟೆಯ ಬಿಳಿ ಭಾಗ
*1 ಚಮಚ ಆಲೀವ್ ಆಯಿಲ್
*1 ಚಮಚ ಬೆಳ್ಳುಳ್ಳಿ ಎಣ್ಣೆ

ಮಾಡುವ ವಿಧಾನ
*ಪಾತ್ರೆಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ. ಪ್ಯಾಕ್ ಚೆನ್ನಾಗಿ ಮಿಶ್ರಗೊಳ್ಳುವರೆಗೆ ಕಲಸಿಕೊಳ್ಳಿ.
* ಇನ್ನು ತಲೆಗೂದಲು ಮತ್ತು ಬುಡಕ್ಕೆ ಈ ಮಾಸ್ಕ್ ಅನ್ನು ಹಚ್ಚಿಕೊಂಡು, 30 ನಿಮಿಷಗಳ ಕಾಲ ಹಾಗೆಯೇ ಬಿಡಿ.
* ಇವೆಲ್ಲಾ ಮುಗಿದ ದೈನಂದಿನ ಶಾಂಪೂ ಮತ್ತು ಕಂಡೀಶನರ್ ಬಳಸಿಕೊಂಡು ಕೂದಲು ತೊಳೆದುಕೊಳ್ಳಿ.

ಬೆಳ್ಳುಳ್ಳಿ ಸಾಲ್ವ್
ಬೆಳ್ಳುಳ್ಳಿಯನ್ನು ಬಳಸಿಕೊಂಡು ಸಾಲ್ವ್ ಅನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಬೆಳ್ಳುಳ್ಳಿಯೊಂದೇ ತ್ವಚೆಗೆ ಕಿರಿಕಿರಿ ಉಂಟುಮಾಡುತ್ತಿದೆ ಎಂದಾದಲ್ಲಿ ಅಲೋವೇರಾ ಮತ್ತು ಜೇನು ಬಳಸಿಕೊಂಡು ಸಾಲ್ವ್ ಸಿದ್ಧಪಡಿಸಿಕೊಳ್ಳಬಹುದಾಗಿದೆ.

ಸಾಮಾಗ್ರಿಗಳು
*1 ಚಮಚ ಬೆಳ್ಳುಳ್ಳಿ
*1 ಚಮಚ ಜೇನು
*1 ಚಮಚ ಅಲೋವೇರಾ ಜೆಲ್

ತಯಾರಿಸುವ ವಿಧಾನ
*ಪಾತ್ರೆಯಲ್ಲಿ, ಎಲ್ಲಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಿ. ನುಣ್ಣಗಿನ ಪೇಸ್ಟ್ ಆಗುವವರೆಗೆ ಕಲಸಿಕೊಂಡು, ಇದನ್ನು ತಲೆಗೆ ರಾತ್ರಿ ಹಚ್ಚಿಕೊಳ್ಳಿ.
*ಇನ್ನು 20 ನಿಮಿಷಗಳ ನಂತರ ತಲೆ ತೊಳೆದುಕೊಳ್ಳಿ. ಕೂದಲಿನ ಬುಡದಲ್ಲಿರುವ ತುರಿಕೆ ಮತ್ತು ಅಲರ್ಜಿ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ.

ಬೆಳ್ಳುಳ್ಳಿ ಸ್ಪ್ರೇ
ನಿಮ್ಮ ಕೂದಲಿನ ಪೋಷಣೆಗೆ ಬೆಳ್ಳುಳ್ಳಿ ಸ್ಪ್ರೇಯನ್ನು ಬಳಸಿಕೊಳ್ಳಬಹುದಾಗಿದೆ. ಈ ನೈಸರ್ಗಿಕ ಮನೆಮದ್ದು ನಿಮ್ಮ ಕೂದಲಿಗೆ ಅತ್ಯುತ್ತಮ ಎಂದೆನಿಸಿದೆ.

ಸಾಮಾಗ್ರಿಗಳು
*1 ಚಮಚ ಬೆಳ್ಳುಳ್ಳಿ ರಸ
*1 ಚಮಚ ಆಲೀವ್ ಆಯಿಲ್
*1 ಕಪ್ ಬಟ್ಟಿ ಇಳಿಸಿದ ನೀರು
*10 ಹನಿಗಳಷ್ಟು ಲ್ಯಾವೆಂಡರ್ ಆಯಿಲ್

ಮಾಡುವ ವಿಧಾನ
ಪಾತ್ರೆಯಲ್ಲಿ ಈ ಎಲ್ಲಾ ಮಿಶ್ರಣಗಳನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಸಾಮಾಗ್ರಿಗಳನ್ನು ಮಿಶ್ರಮಾಡಿ. ಗಾಜಿನ ಬಾಟಲಿಯಲ್ಲಿ ದ್ರಾವಣವನ್ನು ಸುರಿದುಕೊಳ್ಳಿ. ಬಳಸುವ ಮುನ್ನ ಚೆನ್ನಾಗಿ ಶೇಕ್ ಮಾಡಿ. ಒಣಗಿದ ಜಾಗದಲ್ಲಿ ಇದನ್ನು ತೆಗೆದಿರಿಸಿ.

ಎಚ್ಚರಿಕೆ
ದ್ರಾವಣವನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತೆಗೆದಿರಿಸಬೇಡಿ, ಬೆಳ್ಳುಳ್ಳಿ ಪ್ಲಾಸ್ಟಿಕ್‎ನೊಂದಿಗೆ ಕೆಟ್ಟದಾಗಿ ಪ್ರತಿಕ್ರಿಯಿಸಿ ಕೆಟ್ಟ ವಾಸನೆಯನ್ನು ಹರಡಬಹುದು.

English summary

Surprising Ways To Use Garlic In Hair Care

ಬೆಳ್ಳುಳ್ಳಿ ಕೇವಲ ಸಾರು ಮತ್ತು ಗೊಜ್ಜುಗಳಿಗೆ ಮಾತ್ರ ಪ್ರಯೋಜನಕ್ಕೆ ಬರುತ್ತದೆ ಎಂದು ಬಹುತೇಕ ಜನರು ಭಾವಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ. ಬೆಳ್ಳುಳ್ಳಿಯ ಉಪಯೋಗದ ಕುರಿತು ಇನ್ನಷ್ಟು ಮಾಹಿತಿಗಾಗಿ ಫೋಟೋ ಕ್ಲಿಕ್ ಮಾಡಿ...
Story first published: Tuesday, August 23, 2016, 19:55 [IST]
X
Desktop Bottom Promotion