For Quick Alerts
ALLOW NOTIFICATIONS  
For Daily Alerts

ತಲೆಯಲ್ಲಿ ತುರಿಕೆಯೇ? ಹಾಗಾದರೆ ಚೆಂಡುಹೂವನ್ನು ಪ್ರಯತ್ನಿಸಿ

|

ತಲೆಯಲ್ಲಿ ತುರಿಕೆಗೆ ಕೆಲವಾರು ಕಾರಣಗಳಿವೆ. ಮೊತ್ತ ಮೊದಲ ಕಾರಣ ತಲೆಯೊಳಗೆ ಏನೂ ಹೊಳೆಯದೇ ಇರುವುದು. ಪ್ರಶ್ನೆ ಕೇಳಿದಾಗ ಉತ್ತರ ಗೊತ್ತಿಲ್ಲದೇ ಇದ್ದರೆ ತಲೆತುರಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೆಲವು ಬಾರಿ ತುರಿಕೆ ಬೇರೆ ಕಾರಣಗಳಿಂದ ಅಸಹನೀಯವಾಗಿರುತ್ತದೆ.

ತಲೆಹೊಟ್ಟು ಕೆಲವು ಬಗೆಯ ಸೋಂಕು, ತಲೆಗೂದಲ ಬುಡ ಸಡಿಲವಾಗಿರುವುದು, ಹೇನು ಸೀರುಗಳು ಚರ್ಮವನ್ನು ಕಿತ್ತು ತಿನ್ನುತ್ತಿರುವುದು ಇತ್ಯಾದಿ ಕಾರಣಗಳಿವೆ. ಇದನ್ನು ತಡೆಯಲಾರದೇ ತುರಿಸಿಕೊಂಡ ಪರಿಣಾಮವಾಗಿ ಚರ್ಮ ಕೆಂಪಗಾಗಿ ಸೂಕ್ಷ್ಮಗೀರುಗಳನ್ನೂ ಪಡೆಯುತ್ತದೆ. ಈ ಸ್ಥಿತಿಗೆ scalp psoriasis ಅಥವಾ scalp infection ಅಥವಾ ತಲೆಯಚರ್ಮದ ಸೋಂಕು ಪ್ರಮುಖ ಕಾರಣವಾಗಿದೆ.

Suffering Itchy scalp? Fix it with marigold flowers

ಇವನ್ನು ನಿವಾರಿಸಲು ನಿಸರ್ಗ ಹಲವಾರು ಔಷಧಗಳನ್ನು ನೀಡಿದ್ದು ಇದರಲ್ಲಿ ಅತ್ಯಂತ ಪ್ರಬಲವಾದುದೆಂದರೆ ಗೊಂಡೆಹೂವು ಅಥವಾ ಚೆಂಡುಹೂವು. ರಾಸಾಯನಿಕ ಆಧಾರಿಕ ಪ್ರಸಾಧನಗಳು ಆ ಕ್ಷಣಕ್ಕೆ ಶಮನ ನೀಡಿದರೂ ಇವುಗಳ ಅಡ್ಡಪರಿಣಾಮಗಳು ಭಾರಿಯಾಗಬಲ್ಲವು. ಬದಲಿಗೆ ನೈಸರ್ಗಿಕ ತೈಲ ಸಹಿತ ಇತರ ವಿಧಾನಗಳ ಬಳಕೆ ಕೊಂಚ ನಿಧಾನವಾಗಿಯಾದರೂ ಸುರಕ್ಷಿತವಾಗಿ ಈ ಸೋಂಕನ್ನು ನಿವಾರಿಸಿ ತುರಿಕೆಯ ತೊಂದರೆಯನ್ನು ತಪ್ಪಿಸಬಲ್ಲವು. ಈ ಬಗ್ಗೆ ಕೆಲವು ಸುಲಭವಾದ ವಿಧಾನಗಳನ್ನು ನೀಡಲಾಗಿದೆ, ಅವು ಯಾವುದು ಎಂಬುದನ್ನು ಮುಂದೆ ಓದಿ...

ತಲೆಯ ಚರ್ಮಕ್ಕಾಗಿ ಗೊಂಡೆಹೂವಿನ ದ್ರಾವಣ
* ಅರ್ಧ ಲೀಟರ್ ಕುದಿಯುತ್ತಿರುವ ನೀರಿನಲ್ಲಿ ನಾಲ್ಕು ಗೊಂಡೆಹೂವುಗಳನ್ನು ಬಿಡಿಸಿ ಹಾಕಿ ಎರಡು ನಿಮಿಷ ಕುದಿಸಿ.
* ಬಳಿಕ ಉರಿ ನಂದಿಸಿ ಐದು ನಿಮಿಷ ತಣಿಯಲು ಬಿಡಿ.
* ಬಳಿಕ ಇದಕ್ಕೆ ಅರ್ಧ ಲಿಂಬೆಹಣ್ಣಿನ ರಸವನ್ನು ಸೇರಿಸಿ ಕಲಕಿ


* ಈ ನೀರಿನಿಂತ ಹೂವುಗಳನ್ನು ಸೋಸಿ ಈ ನೀರು ಉಗುರುಬೆಚ್ಚಗಾಗುವ ತನಕ ಕಾಯಿರಿ.
* ಈ ನೀರಿನಿಂದ ತಲೆಯನ್ನು ನಯವಾದ ಮಸಾಜ್ ಮೂಲಕ ತೊಳೆದುಕೊಳ್ಳಿ.
* ಬಳಿಕ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ.
* ಸ್ನಾನದ ಬಳಿಕ ತಲೆ ಒಣಗಿಸಿಕೊಳ್ಳುವ ಮುನ್ನ ಸೇಬಿನ ಶಿರ್ಕಾ ಸೇರಿಸಿದ ನೀರಿನಿಂದ ಕೊಂಚ ಒದ್ದೆಯಾಗಿಸಿ ಮತ್ತೊಮ್ಮೆ ಶಾಂಪೂ ಬಳಸಬಹುದು. ತುರಿಕೆ ಹೆಚ್ಚಿರದೇ ಇದ್ದಲ್ಲಿ ಈ ಹಂತ ಅವಶ್ಯಕತೆವಿಲ್ಲ.
* ಶಾಂಪೂ ಬಳಿಕ ತಲೆಯನ್ನು ಒಣಗಿಸಲು ಹೇರ್ ಡ್ರಯರ್ ಬಳಸದಿರಿ, ಇದರಿಂದ ತುರಿಕೆ ಮತ್ತೊಮ್ಮೆ ಪ್ರಾರಂಭವಾಗಬಹುದು.
ಈ ದ್ರಾವಣ ಬಹುತೇಕ ಎಲ್ಲಾ ರೀತಿಯ ತುರಿಕೆಗಳನ್ನು ನಿವಾರಿಸುತ್ತದೆ. scalp psoriasis ಸ್ಥಿತಿಗೂ ಈ ನೀರು ಅತ್ಯುತ್ತಮವಾಗಿದೆ.
English summary

Suffering Itchy scalp? Fix it with marigold flowers

An itchy scalp can make you restless throughout the day. The irritation and scratching can lead to redness and rashes. Often this is a symptom of an underlying condition like scalp psoriasis or scalp infection. So here are simple remedies from marigold flower infusion recipe for treating an itchy scalp
Story first published: Tuesday, March 22, 2016, 10:02 [IST]
X
Desktop Bottom Promotion