For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗೆ, ನೈಸರ್ಗಿಕ ಎಲೆಗಳಿಂದ ಆರೈಕೆ

By CM Prasad
|

ಕೂದಲು ಉದುರುವ ಸಮಸ್ಯೆ ಮತ್ತು ತಲೆಹೊಟ್ಟಿನ ಸಮಸ್ಯೆ ಈಗ ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಹಲವಾರು ಮಾತ್ರೆಗಳು, ಎಣ್ಣೆಗಳು, ಔಷಧಿಗಳು ಮತ್ತು ಚಿಕಿತ್ಸೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳೆಲ್ಲದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನು ಅವರು ನೀಡುವುದಿಲ್ಲ. ಜೊತೆಗೆ ಅವುಗಳೆಲ್ಲವೂ ನಿಮಗೆ ಹೊಂದಿಕೊಳ್ಳುತ್ತವೆ ಎಂಬ ಭರವಸೆಯನ್ನು ಸಹ ನೀಡಲಾಗುವುದಿಲ್ಲ. ಆದರೂ ಅವುಗಳು ನಿಮ್ಮನ್ನು ಆಕರ್ಷಿಸುತ್ತವೆ ಎಂಬುದು ಸುಳ್ಳಲ್ಲ.

ಕೇಶರಾಶಿಯ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ಬಳಸುವ ಸಂಗತಿಗಳನ್ನು ನಾವು ಈ ತಾಣದಲ್ಲಿ ಸಾಕಷ್ಟು ಬಾರಿ ಹೇಳಿದ್ದೇವೆ. ಹೌದು! ಇಂದೂ ಸಹ ಕೇಶರಾಶಿಯ ಆರೈಕೆಗೆ ಸಂಬಂಧಪಟ್ಟಂತೆ ಪ್ರಾಕೃತಿಕವಾಗಿ ದೊರಕುವ ವಿವಿಧ ಎಲೆಗಳಿಂದ ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯನ್ನು ತಡೆಗಟ್ಟುವ ವಿಶಿಷ್ಟ ಸಂಗತಿಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ.

ನಾವು ಈ ಹಿಂದೆ ಹಣ್ಣುಗಳಿಂದ ಹೂವುಗಳಿಂದ ನೆರವಾಗುವ ವಿಧಾನಗಳನ್ನು ತಿಳಿಸುತ್ತಿದ್ದೇವೆ, ಆದರೆ ಎಲೆಗಳೂ ಸಹ ನಿಮ್ಮ ಕೂದಲ ಆರೈಕೆಗೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸುತ್ತವೆ. ನಾವು ನೀಡಿರುವ ಐದು ವಿಧದ ಎಲೆಗಳ ಆರೈಕೆಯ ಸಂಗತಿಗಳಿಂದ ನಿಮ್ಮ ಕೇಶದ ಆರೋಗ್ಯ ಇಮ್ಮಡಿಗೊಳ್ಳುತ್ತದೆ ಅದರಲ್ಲೂ ಕೊನೆಯ ಸಂಗತಿಯಂತೂ ನಿಮ್ಮನ್ನು ಹೆಚ್ಚು ಅಚ್ಚರಿಯನ್ನುಂಟು ಮಾಡುತ್ತದೆ.

ಕರಿಬೇವಿನ ಎಲೆಗಳು

Leaves for fighting dandruff and hair fall
100 ಮಿಲಿ ತೆಂಗಿನ ಎಣ್ಣಿಗೆ ಒಂದು ಬಟ್ಟಲು ಕರಿಬೇವನ್ನು ಸೇರಿಸಿ, ಎಣ್ಣೆಯೊಂದಿಗೆ ಕಪ್ಪಾಗುವವರೆಗೆ ಬಿಸಿಮಾಡಿ. ಈ ಮಿಶ್ರಣವನ್ನು ನಿಮ್ಮ ತಲೆಯ ಭಾಗದ ಚರ್ಮಕ್ಕೆ ಕ್ರಮವಾಗಿ ಹಚ್ಚಿಕೊಂಡರೆ ಕೂದಲ ಬಣ್ಣ ಕುಂದುವುದನ್ನು ತಡೆಯುತ್ತದೆ. ಇದರಲ್ಲಿ ಅಮೈನೋ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಸತ್ವಗಳು ಅಡಗಿದ್ದು, ತಲೆಹೊಟ್ಟನ್ನು ಶಮನಗೊಳಿಸಿ ನಿಮ್ಮ ಕೂದಲನ್ನು ಸದೃಢಗೊಳಿಸುತ್ತದೆ.

ಕೊತ್ತಂಬರಿ ಎಲೆಗಳು

ನೀರನ್ನು ಬಳಸಿ ಕೊತ್ತಂಬರಿ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದರ ರಸವನ್ನು ನಿಮ್ಮ ತಲೆಯ ಭಾಗದ ಚರ್ಮಕ್ಕೆ ಹಚ್ಚಿ. ಅರ್ಧ ಘಂಟೆಯ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ಚರ್ಮದ ಉತ್ಕರ್ಷಣವನ್ನು ನಿಯಂತಿಸುವುದಲ್ಲದೇ, ಜೀವಕೋಶಗಳ ಹಾನಿಯನ್ನು ತಡೆಯುತ್ತದೆ. ಇದರಿಂದ ನಿಮ್ಮ ಕೇಶವು ಸದೃಢಗೊಂಡು ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಬೇವಿನ ಎಲೆಗಳು

ಇದರಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಸೋಂಕು ನಿರೋಧಕ ಗುಣವು ಹೆಚ್ಚಿದ್ದು, ಈ ಲಕ್ಷಣಗಳು ನಿಮ್ಮ ಕೇಶವರ್ಧನೆಗೆ ಮತ್ತು ತಲೆಹೊಟ್ಟಿನ ನಿವಾರಣೆಗೆ ಹೆಚ್ಚು ನೆರವಾಗಲಿದೆ. ಬೇವಿನ ಗಟ್ಟಿಯಾದ ಪೇಸ್ಟ್ ಅನ್ನು ನೀರಿನೊಂದಿಗೆ ಹದವಾಗಿ ಬೆರೆಸಿ ತಲೆಯ ಚರ್ಮದ ಭಾಗಕ್ಕೆ ಹಚ್ಚಿಕೊಳ್ಳಿ. ಒಂದು ಘಂಟೆಯ ನಂತರ ಸೌಮ್ಯವಾದ ಶ್ಯಾಂಪೂವಿನೊಂದಿಗೆ ನೀರಿನಿಂದ ಸ್ವಚ್ಛಗೊಳಿಸಿ. ಇದು ನಿಮ್ಮ ಕೇಶದ ಕಾಂತಿಯನ್ನು ಹೆಚ್ಚಿಸಿ ತಲೆಹೊಟ್ಟನ್ನು ನಿವಾರಿಸುತ್ತದೆ.

ದಾಸವಾಳದ ಎಲೆಗಳು
ಈ ಹೂವಿನಲ್ಲಿರುವ ಗುಣಗಳಂತೆ, ಇದರ ಎಲೆಗಳೂ ಸಹ ಕೂದಲುದುರುವಿಕೆ, ಮತ್ತು ನೆತ್ತಿಯ ಭಾಗದ ಚರ್ಮದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಬೇರನ್ನು ಸದೃಢಗೊಳಿಸಿ ತಲೆಹೊಟ್ಟನ್ನು ನಿವಾರಿಸುವ ಗುಣ ಹೊಂದಿದೆ. ನೀವು ಮಾಡಬೇಕಿರುವುದು ಇಷ್ಟೇ, ಈ ಎಲೆಗಳಿಂದ ತಯಾರಿಸಿದ ಪೇಸ್ಟ್ ಅನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ನಿಮ್ಮ ತಲೆಯ ಚರ್ಮದ ಭಾಗಕ್ಕೆ ಹಚ್ಚಿ. ಎರಡರಿಂದ ಮೂರುಘಂಟೆಗಳು ಕಳೆದ ಮೇಲೆ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ. ಇದು ನಿಜಕ್ಕೂ ನಿಮ್ಮ ಕೇಶದ ಆರೋಗ್ಯಕ್ಕೆ ಸಹಕಾರಿಯಾಗಲಿದೆ.

ಗೋರಂಟಿ ಎಲೆಗಳು
ನಿಮ್ಮ ಕೂದಲ ಆರೈಕೆಗೆ ಇದು ರಾಮಬಾಣವಿದ್ದಂತೆ. ಇದು ನಿಮ್ಮ ಕೇಶದ ಬೆಳವಣೆಗೆಗೆ ನೆರವಾಗಲಿದ್ದು, ತಲೆಹೊಟ್ಟನ್ನು ನಿವಾರಿಸಿ ಬಣ್ಣವನ್ನು ಕಾಪಾಡಲು ಮಹತ್ವದ ಪಾತ್ರ ವಹಿಸುತ್ತದೆ. ಗೊರಂಟಿ ಎಲೆಗಳಿಗೆ ಸಾಸಿವೆ ಎಣ್ಣೆ ಮತ್ತು ಮೊಸರನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಯ ಭಾಗದ ಚರ್ಮಕ್ಕೆ ನಯವಾಗಿ ತಿಕ್ಕಿ. ಅರ್ಧ ಗಂಟೆಯಾದ ಮೇಲೆ ನೀರಿನಿಂದ ಸ್ವಚ್ಛಗೊಳಿಸಿ. ಇದು ನಿಮ್ಮ ಕೂದಲನ್ನು ಹೆಚ್ಚು ನಳನಳಿಸುವಂತೆ ಮಾಡುತ್ತದೆ.

English summary

Leaves for fighting dandruff and hair fall

Not just fruits and flowers, even leaves are a simple and natural way for hair growth and preventing dandruff. These five leaves should be in your beauty cabinet for better hair care. The last one will take you by surprise!
Story first published: Saturday, January 16, 2016, 18:14 [IST]
X
Desktop Bottom Promotion