Just In
- 1 hr ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 2 hrs ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- News
ಶಿವಾಜಿನಗರದಲ್ಲಿ ಗೆದ್ದ ಕಾಂಗ್ರೆಸ್; ಲಕ್ಷ್ಮಣ ಸವದಿಗೆ ಸಂತಸ!
- Finance
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬನೇಗಾ ಕೋಟ್ಯಧಿಪತಿ?
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Automobiles
ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್
- Sports
ಹೀಗೆ ಫೀಲ್ಡಿಂಗ್ ಮಾಡಿದ್ರೆ ಯಾವ ಮೊತ್ತವೂ ಎದುರಾಳಿಗೆ ಸಾಕಾಗದು!; ಕೊಹ್ಲಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕಿರಿಕಿರಿ ನೀಡುವ ತಲೆಹೊಟ್ಟಿನ ಸಮಸ್ಯೆಗೆ 'ಬೇವಿನ' ಹೇರ್ ಪ್ಯಾಕ್
ದೇಹವೆಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತದೆ. ಪ್ರತಿಯೊಬ್ಬರು ಏನಾದರೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಅದರಲ್ಲೂ ತಲೆಹೊಟ್ಟಿನ ಸಮಸ್ಯೆಯು ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರನ್ನು ಕಾಡಿರುತ್ತದೆ. ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಶಾಂಪೂಗಳು ಹಾಗೂ ಔಷಧಿಗಳು ಲಭ್ಯವಿದೆ, ಆದರೆ ಫಲಿತಾಂಶ ಮಾತ್ರ ಶೂನ್ಯ!
ಚಿಂತಿಸದಿರಿ ಈ ಲೇಖನದಲ್ಲಿ ಬೇವನ್ನು ಬಳಸಿಕೊಂಡು ತಲೆಹೊಟ್ಟನ್ನು ಹೇಗೆ ನಿವಾರಣೆ ಮಾಡಬಹುದು ಎಂದು ತಿಳಿದುಕೊಳ್ಳುವ. ಇದು ತಲೆಹೊಟ್ಟನ್ನು ನಿವಾರಿಸಿ ಅದರಿಂದ ಆಗುವಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ತಲೆಹೊಟ್ಟನ್ನು ನಿವಾರಿಸಲು ಮತ್ತು ಮುಂದೆ ಅದು ಬರದಂತೆ ತಡೆಯಲು ಬೇವನ್ನು ಬಳಸುವುದು ಹೇಗೆ ಎಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ. ನೀವರಿಯದ ಬೇವಿನ ಎಲೆಗಳ ಸೀಮಾತೀತ ಗುಣಗಳು
ಬೇಕಾಗುವ ಸಾಮಗ್ರಿಗಳು
*40ಕ್ಕೂ ಹೆಚ್ಚು ಬೇವಿನ ಎಲೆಗಳು
*ಒಂದು ಲೀಟರ್ ನೀರು ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ
ಮಾಡುವ ವಿಧಾನ
•ನೀರನ್ನು ಬಿಸಿ ಮಾಡಿಕೊಳ್ಳಿ
•ನೀರಿಗೆ ಬೇವಿನ ಎಲೆಗಳನ್ನು ಹಾಕಿ ಮತ್ತು ರಾತ್ರಿಪೂರ್ತಿ ಹಾಗೆ ಇರಲಿ
•ಬೆಳಿಗ್ಗೆ ಈ ನೀರಿನಿಂದ ಕೂದಲನ್ನು ತೊಳೆಯಿರಿ
•ತಲೆಹೊಟ್ಟಿನಿಂದ ಉಂಟಾಗುವಂತಹ ತುರಿಕೆ ಮತ್ತು ಕಿರಿಕಿರಿಯನ್ನು ಇದು ನಿವಾರಣೆ ಮಾಡುತ್ತದೆ. ಸಮಸ್ಯೆಯನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕಾದರೆ ವಾರದಲ್ಲಿ ಎರಡು ಮೂರು ಸಲ ಹೀಗೆ ಮಾಡಿ. ತಲೆಹೊಟ್ಟು ನಿವಾರಣೆಗೆ ಲೋಳೆಸರದ ಮ್ಯಾಜಿಕ್ ಚಿಕಿತ್ಸೆ
ಇನ್ನೊಂದು ವಿಧಾನ
ಬೇವು, ಮೊಸರು ಮತ್ತು ಮೆಂತೆ ಕೂದಲಿನ ಮಾಸ್ಕ್
ಬೇಕಾಗುವ ಸಾಮಗ್ರಿಗಳು
*2 ಚಮಚ ಮೆಂತೆ ಕಾಳು ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!
*40 ಬೇವಿನ ಎಲೆ
*½ ಕಪ್ ಮೊಸರು
*ಒಂದು ಚಮಚ ಲಿಂಬೆರಸ
•ಮೂರರಿಂದ ನಾಲ್ಕು ಗಂಟೆಗಳ ಕಾಲ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಳ್ಳಿ. ನೆನೆದಿರುವ ಮೆಂತೆ ಕಾಳಿಗೆ ಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಕೆಲವು ಹನಿ ನೀರು ಹಾಕಿ ಸರಿಯಾಗಿ ಪೇಸ್ಟ್ ಮಾಡಿ.
•ಪೇಸ್ಟ್ ಮೃದುವಾದ ಬಳಿಕ ಅದಕ್ಕೆ ನಿಂಬೆರಸ ಮತ್ತು ಮೊಸರು ಹಾಕಿಕೊಳ್ಳಿ.
•ಎಣ್ಣೆಯಂಶವಿರುವ ಕೂದಲಿಗೆ ಇದನ್ನು ಹಚ್ಚಿಕೊಂಡು ಸುಮಾರು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.
•ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.