For Quick Alerts
ALLOW NOTIFICATIONS  
For Daily Alerts

ತಲೆಕೂದಲಿನ ರಕ್ಷಣೆಯಲ್ಲಿ ಹುಳಿ ಮಜ್ಜಿಗೆಯ ಚಮತ್ಕಾರ

By Su.Ra
|

ಬುದ್ಧ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಹೇಳಿದಾಗ ಹೇಗೆ ಯಾವ ಮನೆಯೂ ಸಿಗಲಿಲ್ಲವೋ ಹಾಗೆ ಈಗಿನ ಜಮಾನದಲ್ಲಿ ಕೂದಲುದುರುವ ಸಮಸ್ಯೆ ಯಾರ ಮನೆಯಲ್ಲಿ ಇಲ್ಲವೋ ಅಂತಹ ಮನೆ ಹುಡುಕೋಕೆ ಹೇಳಿದ್ರೆ ಅದೂ ಕೂಡ ಖಂಡಿತ ಅಸಾಧ್ಯವಾದ ಕೆಲಸವೇ..ಪುರುಷ, ಮಹಿಳೆ ಅನ್ನೋ ಬೇಧಭಾವವಿಲ್ಲದೆ ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರು ಕೂದಲುದುರುವ ಸಮಸ್ಯೆ ಎದುರಿಸಿಯೇ ಎದುರಿಸ್ತಾ ಇರುತ್ತಾರೆ.

ಅದರ ಪರಿಹಾರಕ್ಕಾಗಿ ಇಲ್ಲಸಲ್ಲದ ಪ್ರಯತ್ನಗಳೂ ಮುಂದುವರಿದಿರುತ್ತೆ. ಯಾಕಂದ್ರೆ ಬೊಕ್ಕತಲೆಯಾದ್ರೆ ಏನು ಮಾಡೋದು ಅನ್ನೋದು ಪುರುಷರ ಚಿಂತೆಯಾದ್ರೆ, ಛೇ ಕೆಟ್ಟ ಕೂದಲಿನಿಂದ ಎಂತಹ ಅಲಂಕಾರ ಮಾಡೋಕೆ ಸಾಧ್ಯ, ಕೂದಲು ದಟ್ಟವಾಗಿ ಉದ್ದವಾಗಿ ಇದ್ದಿದ್ರೆ ಏನೆಲ್ಲ ಹೇರ್ ಸ್ಟೈಲ್ ಮಾಡಬಹುದಲ್ಲ ಅನ್ನೋದು ಮಹಿಳೆಯರ ಆಸೆ. ಅಮೃತದಂತಹ ಮಜ್ಜಿಗೆಯ ಕರಾಮತ್ತಿಗೆ ತಲೆಬಾಗಲೇಬೇಕು!

ಆದ್ರೆ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೆಲ್ಲ ಅಲೆದರಂತೆ ಅನ್ನುವ ಹಾಗೆ ವರ್ತಿಸುವವರೇ ಅಧಿಕ ಮಂದಿ. ಮನೆಯ ಅಡುಗೆ ಮನೆಯಲ್ಲಿ ಪರಿಹಾರವಿದ್ರೂ ಕೂಡ ಊರೆಲ್ಲ ಅಲೆದಾಡಿ , ಡಾಕ್ಟರ್ ಬಳಿ ಸುತ್ತಾಡಿ, ಇಲ್ಲಸಲ್ಲದ ಔಷಧಿ ಮಾಡಿ, ಏನೇ ಮಾಡಿದ್ರೂ ಪರಿಹಾರ ಸಿಗ್ತಿಲ್ಲ ಅಂತ ಗೊಣಗಿಕೊಳ್ಳುವವರಿಗೇನು ಕಡಿಮೆ ಇಲ್ಲ ಬಿಡಿ. ಆದ್ರೆ ಸಿಂಪಲ್ ಆಗಿರುವ ಮತ್ತು ಕೂಡಲೇ ಪರಿಹಾರ ನೀಡುವ ಮನೆಮದ್ದು ನಿಮ್ಮ ಅಂಗೈಯಲ್ಲೇ ಇರುತ್ತೆ. ಅವುಗಳಲ್ಲಿ ಒಂದು ಹುಳಿ ಮಜ್ಜಿಗೆ. ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?

ಹೌದು. ಹುಳಿಯಾದ ಮಜ್ಜಿಗೆಯಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಸ್ಕ್ಯಾಲ್ಪ್ ನಲ್ಲಿ ಅಡಗಿ ಕುಳಿತಿರುವ ಕೀಟಾಣುಗಳನ್ನು ತೊಡೆದು ಹಾಕಿ ತಲೆಕೂದಲಿನ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಹಾಗಾಗಿ ಹುಳಿ ಮಜ್ಜಿಗೆ ಬಳಸಿ ಹೇಗೆ ತಲೆಕೂದಲಿನ ಸಂರಕ್ಷಣೆ ಮಾಡಿಕೊಳ್ಳಬಹುದು ಅನ್ನುವುದಕ್ಕೆ ಒಂದಷ್ಟು ಸಲಹೆಗಳು ಇಲ್ಲಿವೆ ನೋಡಿ...

ಹುಳಿ ಮಜ್ಜಿಗೆಯ ಮಸಾಜ್

ಹುಳಿ ಮಜ್ಜಿಗೆಯ ಮಸಾಜ್

ಮೊದಲನೆಯದಾಗಿ ಕೇವಲ ಹುಳಿ ಮಜ್ಜಿಗೆಯನ್ನೇ ನೀವು ವಾರಕ್ಕೆ ಮೂರು ನಾಲ್ಕು ಬಾರಿ ತಲೆಯ ನೆತ್ತಿಗೆ ಹಚ್ಚಿ ಮಸಾಜ್ ಮಾಡಿಕೊಂಡ್ರೆ ಡ್ಯಾಂಡ್ರಫ್ ಸಮಸ್ಯೆ ಪರಿಹಾರವಾಗಲಿದೆ. ಅದರ ಜೊತೆಗೆ ಇನ್ನಿತರೆ ಕೆಲವು ವಸ್ತುಗಳನ್ನು ಬಳಕೆ ಮಾಡೋದ್ರಿಂದ ಇನ್ನೂ ಉತ್ತಮವಾದ ಫಲಿತಾಂಶ ಪಡೆದುಕೊಳ್ಳಬಹುದು.

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಹುಳಿ ಮಜ್ಜಿಗೆ ಮತ್ತು ಮೆಂತೆ ಪುಡಿ

ಮೆಂತೆಯ ಒಂದಷ್ಟು ಕಾಳುಗಳನ್ನು ಪುಡಿಮಾಡಿ ಅದನ್ನು ಮಜ್ಜಿಗೆಯಲ್ಲಿ ನೆನಸಿಡಿ. ಒಂದು ರಾತ್ರಿ ನೆನಸಿಟ್ಟರೂ ಪರವಾಗಿಲ್ಲ. ಹೀಗೆ ನೆನಸಿದ ನಂತ್ರ ಅದನ್ನು ತಲೆಯ ಸ್ಕಾಲ್ಪ್ ಸೇರಿದಂತೆ ಕೂದಲಿಗೆ ಹಚ್ಚಿ ಅರ್ಧ ಅಥವಾ ಒಂದು ಗಂಟೆಯ ನಂತ್ರ ತೊಳೆದುಕೊಳ್ಳೋದ್ರಿಂದ ಕೂದಲಿನ ಆರೋಗ್ಯ ಉತ್ತಮಗೊಳ್ಳಲಿದೆ. ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗೋದು ಅಲ್ಲದೆ ಕೂದಲು ಗಟ್ಟುಮುಟ್ಟಾಗಿ ಶೈನಿಯಾಗಿ ಮತ್ತು ಆರೋಗ್ಯದಾಯಕವಾಗಿ ಬೆಳೆಯಲು ಇದು ನೆರವಾಗಲಿದೆ.

ಹುಳಿ ಮಜ್ಜಿಗೆಗೆ ಬೇವಿನ ರಸ

ಹುಳಿ ಮಜ್ಜಿಗೆಗೆ ಬೇವಿನ ರಸ

ತಲೆಯ ಹೊಟ್ಟಿನ ಜೊತೆಗೆ ನಿಮ್ಮ ತಲೆಯಲ್ಲಿ ಅಥವಾ ನಿಮ್ಮ ಮಕ್ಕಳ ತಲೆಯಲ್ಲಿ ಹೇನುಗಳಾಗಿದ್ದಲ್ಲಿ ಹುಳಿಮಜ್ಜಿಗೆಗೆ ಒಂದಷ್ಟು ಕಹಿ ಬೇವಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿಕೊಳ್ಳಿ. ಬೇವಿನಲ್ಲಿರುವ ಕಹಿಯ ಅಂಶವೂ ಹೇನುಗಳ ನಿವಾರಣೆಗೆ ಸಹಾಯ ಮಾಡಿದ್ರೆ ಹುಳಿ ಮಜ್ಜಿಗೆ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಿ ಕೂದಲು ಬಲಗೊಳ್ಳುವಂತೆ ಮಾಡುತ್ತೆ.

ಹುಳಿ ಮಜ್ಜಿಗೆಯೊಂದಿಗೆ ದಾಸವಾಳ ಸೊಪ್ಪು

ಹುಳಿ ಮಜ್ಜಿಗೆಯೊಂದಿಗೆ ದಾಸವಾಳ ಸೊಪ್ಪು

ಚಳಿಗಾಲದಲ್ಲಿ ಮತ್ತು ನೀವು ಬೇರೆ ಯಾವುದಾದ್ರೂ ಸ್ಥಳಕ್ಕೆ ಕೆಲವು ದಿನಗಳ ಮಟ್ಟಿಗೆ ಪ್ರಯಾಣ ಬೆಳೆಸಿ ಬಂದಾಗ ಕೂದಲು ಜಿಡ್ಡುಜಿಡ್ಡಾಗಿರುತ್ತೆ ಮತ್ತು ಒರಟು ಒರಟಂತಾಗಿ ಕಳೆ ಕಳೆದುಕೊಂಡಿರುತ್ತೆ. ಅಂತಹ ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುವುದು ಹುಳಿ ಮಜ್ಜಿಗೆ. ಹುಳಿ ಮಜ್ಜಿಗೆಗೆ ಒಂದಷ್ಟು ದಾಸವಾಳದ ಸೊಪ್ಪನ್ನು ಅರೆದು ಮಿಕ್ಸ್ ಮಾಡಿ. ಈ ಮಿಶ್ರಣದ ಪ್ಯಾಕ್ ತಯಾರಿಸಿಕೊಂಡು ಸುಮಾರು ಒಂದು ಗಂಟೆಯ ನಂತ್ರ ಕೂದಲನ್ನು ತೊಳೆಯಿರಿ. ಕೂದಲು ಮೊದಲಿನ ರೀತಿ ಫಳಫಳ ಹೊಳೆಯಲು ಇದು ಸಹಾಯ ಮಾಡಲಿದೆ. ದಾಸವಾಳ ಸೊಪ್ಪು ಉತ್ತಮ ಕಂಡೀಷನರ್ ಆಗಿ ಕೆಲಸ ನಿರ್ವಹಿಸಲಿದೆ.

ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆ

ಮೆಹಂದಿ ಪುಡಿ ಮತ್ತು ಹುಳಿ ಮಜ್ಜಿಗೆ

ಎಲ್ಲರಿಗೂ ತಿಳಿದಿರುವಂತೆ ಮೆಹಂದಿ ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾದ ಮನೆಮದ್ದು. ಕೂದಲು ಬಿಳಿಯಾಗಿರುವವರು ಕಲ್ಲರಿಂಗ್ ಗಾಗಿ ಕೂಡ ಮೆಹಂದಿಯನ್ನು ಬಳಸ್ತಾರೆ. ಮೆಹಂದಿ ಪುಡಿಯೊಡನೆ ಹುಳಿಮಜ್ಜಿಗೆ ಸೇರಿಸಿ ತಲೆಗೆ ಅಪ್ಲೈ ಮಾಡಿಕೊಳ್ಳೋದ್ರಿಂದ ಕೂದಲು ಮತ್ತಷ್ಟು ಅತ್ಯುತ್ತಮಗೊಳ್ಳಲು ಸಹಕಾರಿಯಾಗಿರುತ್ತೆ. ಯಾರಿಗೆ ಕೂದಲು ಉದುರುವ ಸಮಸ್ಯೆ ಇದಿಯೋ ಅಂತವರು ಮತ್ತು ಕೂದಲಿನ ಬಣ್ಣ ಗಾಢವಾಗಿ ಬರುವಂತೆ ಮಾಡಲು ಅಷ್ಟೇ ಯಾಕೆ ಈ ಪ್ಯಾಕ್ ಕೂಡ ತಲೆಹೊಟ್ಟನ್ನು ನಿವಾರಿಸಿ ಕೂದಲಿನ ಆರೋಗ್ಯ ವೃದ್ಧಿಗೆ ನೆರವಾಗುತ್ತೆ.

English summary

How to Make a Sour Buttermilk Mask for Healthy Hair

Buttermilk is yummy, but did you know it also makes a nifty treatment for your hair and scalp? Buttermilk will make your hair more manageable...have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more