For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

By Manu
|

ತಲೆಹೊಟ್ಟು ಎನ್ನುವುದು ಈಗೀಗ ಪ್ರತಿಯೊಬ್ಬರನ್ನು ಕಾಡುತ್ತಿರುವ ಸಮಸ್ಯೆಯಾಗಿ ಬಿಟ್ಟಿದೆ. ಆಧುನಿಕ ಜೀವನ ಶೈಲಿ ಮತ್ತು ಕಲುಷಿತ ವಾತಾವರಣವೇ ಇದಕ್ಕೆ ಮೂಲ ಕಾರಣವೆನ್ನಬಹುದು. ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಲೆಹೊಟ್ಟು ಸಮಸ್ಯೆ ಇದೆ. ಇದರಿಂದ ಪಾರಾಗಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಶಾಂಪೂಗಳು ಲಭ್ಯವಿದೆ. ಥತ್ ! ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?

ಇದನ್ನು ಬಳಸಿಯೂ ತಲೆಹೊಟ್ಟು ನಿವಾರಣೆ ಸಾಧ್ಯವಿಲ್ಲದಾಗ ಕೆಲವರು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳಲ್ಲಿ ತಲೆಹೊಟ್ಟು ಕಾಣಿಸಿಕೊಂಡರೆ ಅವರ ಭುಜದ ಮೇಲೆ ತಲೆಹೊಟ್ಟು ಬಿದ್ದು ಹೇಸಿಗೆ ಮೂಡಿಸುತ್ತದೆ. ಸಿಂಪಲ್ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್‌ಫುಲ್ ಮನೆಮದ್ದು

ಇದಕ್ಕೆ ಪರಿಹಾರ ಇದೆ. ಈ ಲೇಖನದಲ್ಲಿ ಕೆಲವು ತಜ್ಞರು ಹೇಳಿರುವಂತಹ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ. ಇದನ್ನು ಬಳಸಿ ನೋಡಿ.

ಟೀ ಟ್ರೀ ಎಣ್ಣೆ

ಟೀ ಟ್ರೀ ಎಣ್ಣೆ

ತಲೆಹೊಟ್ಟುವಿಗೆ ಅತ್ಯಂತ ಪರಿಣಾಮಕಾರಿಯಾಗಿರುವಂತಹ ಮನೆಮದ್ದು. ಇದು ತಲೆಬುರುಡೆಗೆ ತೇವಾಂಶವನ್ನು ನೀಡಿ ಕಿರಿಕಿರಿ ಉಂಟುಮಾಡುವ ಚರ್ಮವನ್ನು ಸುಧಾರಿಸುವುದು. ಸುಮಾರು 12 ಹನಿಯಷ್ಟು ಟೀ ಟ್ರೀ ಎಣ್ಣೆಯನ್ನು ಬಾದಾಮಿ ಎಣ್ಣೆ, ಜೊಜೊಬಾ ಎಣ್ಣೆ, ಅಥವಾ ಆಲಿವ್ ತೈಲದೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಮುಳುಗಿಸಿ ತಲೆಬುರುಡೆಗೆ ಹಚ್ಚಿ. 30 ನಿಮಿಷ ಕಾಲ ಹಾಗೆ ಬಿಟ್ಟುಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

ಲಿಂಬೆ

ಲಿಂಬೆ

ಲಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಆಮ್ಲೀಯ ಗುಣವು ತಲೆಹೊಟ್ಟನ್ನು ದೂರವಿಡುತ್ತದೆ. ಲಿಂಬೆಯ ರಸವನ್ನು ತೆಗೆದು ತಲೆಗೆ ಹಚ್ಚಬಹುದು ಅಥವಾ ನೇರವಾಗಿ ನಿಂಬೆಯನ್ನು ತಲೆಗೆ ಉಜ್ಜಬಹುದು.

ಅಡುಗೆ ಸೋಡಾ

ಅಡುಗೆ ಸೋಡಾ

ಕೂದಲನ್ನು ಸರಿಯಾಗಿ ಒಣಗಿಸಿ ಮತ್ತು ಸ್ವಲ್ಪ ಅಡುಗೆ ಸೋಡಾವನ್ನು ಕೂದಲಿಗೆ ಸಿಂಪಡಿಸಿಕೊಂಡು ಮಸಾಜ್ ಮಾಡಿಕೊಳ್ಳಿ. ಶಾಂಪೂವಿನಿಂದ ತೊಳೆಯಿರಿ. ಅಡುಗೆ ಸೋಡಾವು ಫಂಗಿಗಳು ಅತಿಯಾಗಿ ಪ್ರತಿಕ್ರಿಯಿಸುವುದನ್ನು ತಡೆಯುತ್ತದೆ. ಇದರಿಂದ ತಲೆಬುರುಡೆಯು ಸ್ವಚ್ಛವಾಗಿರುತ್ತದೆ.

ಬಾಳೆಹಣ್ಣಿನ ಹೇರ್ ಮಾಸ್ಕ್

ಬಾಳೆಹಣ್ಣಿನ ಹೇರ್ ಮಾಸ್ಕ್

ಮಾಗಿದ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಸರಿಯಾಗಿ ಹಿಚುಕಿಕೊಂಡು ಅದಕ್ಕೆ ಒಂದು ಚಮಚ ಮೊಸರು ಮತ್ತು ನಾಲ್ಕು ಚಮಚ ಬಾದಾಮಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. 20 ನಿಮಿಷ ಬಿಟ್ಟು ಶಾಂಪೂವಿನಿಂದ ತೊಳೆಯಿರಿ.

ಶಾಂಪೂ

ಶಾಂಪೂ

ಸಾಲಿಸ್ಯಲಿಕ್ ಆಮ್ಲವು ಹೊಂದಿರುವಂತಹ ಶಾಂಪೂವನ್ನು ಮಕ್ಕಳ ಕೂದಲಿಗೆ ವಾರದಲ್ಲಿ ಎರಡು ಸಲ ಬಳಸಿ. ಇದು ತಲೆಹೊಟ್ಟನ್ನು ನಿವಾರಿಸುತ್ತದೆ. ಆದರೆ ವೈದ್ಯರನ್ನು ಭೇಟಿಯಾಗಿ ಮಗುವಿಗೆ ಯಾವ ರೀತಿಯ ಶಾಂಪೂ ಬಳಕೆ ಮಾಡಬಹುದು ಎಂದು ತಿಳಿದುಕೊಂಡರೆ ಒಳ್ಳೆಯದು.

ತಲೆ ಬಾಚಿಕೊಳ್ಳಿ

ತಲೆ ಬಾಚಿಕೊಳ್ಳಿ

ಶಾಂಪೂ ಹಾಕಿಕೊಳ್ಳುವ ಮೊದಲು ತಲೆಗೆ ಬಾಚಣಿಗೆ ಹಾಕಿದರೆ ತಲೆಹೊಟ್ಟುಯನ್ನು ತೆಗೆಯಬಹುದು. ವೈದ್ಯರು ಸೂಚಿಸಿದಂತಹ ಶಾಂಪೂ ಬಳಸದೆ ಇದ್ದರೆ ಮಕ್ಕಳ ಶಾಂಪೂ ಬಳಸಿರಿ.

English summary

How to get rid of dandruff in kids?

Dandruff is not that common till puberty, but it can be present in some young children which can leave unsightly white flakes on his shoulders. It can be treated with a few home remedies.
X
Desktop Bottom Promotion