ಕೂದಲಿನ ಎಲ್ಲಾ ಸಮಸ್ಯೆಗೆ ಪರ್ಫೆಕ್ಟ್ ಹೇರ್ ಪ್ಯಾಕ್

By: manu
Subscribe to Boldsky

ತಲೆಯಲ್ಲಿ ಹೊಟ್ಟು, ತುರಿಕೆ, ಕೂದಲು ಉದುರುವುದು, ತುದಿ ಸೀಳುವುದು, ತಲೆಯ ಚರ್ಮ ಒಣಗಿರುವುದು ಮೊದಲಾದವು ಆರೈಕೆಯ ಕೊರತೆಯ ಮೂಲಕ ಎದುರಾಗುವ ತೊಂದರೆಗಳು. ತಲೆ ಒಣಗಿದರೆ ತಕ್ಷಣ ಆಳವಾದ ಕಂಡೀಶನಿಂಗ್ ಮಾಡುವುದು ಅನಿವಾರ್ಯ.

ಇದರೊಂದಿಗೆ ಆರ್ದತೆ ಮತ್ತು ತೇವ ನೀಡುವುದೂ, ಹೊಟ್ಟನ್ನು ನಿವಾರಿಸುವುದೂ ಅಗತ್ಯ. ಈ ಸೇವೆಗಳನ್ನು ಸೌಂದರ್ಯ ಮಳಿಗೆಗಳಲ್ಲಿ ಪಡೆಯಬಹುದಾದರೂ ಸಾಮಾನ್ಯವಾಗಿ ಇವು ದುಬಾರಿಯಾಗಿರುತ್ತವೆ.

 Hair masks for itchy scalp, split ends and dry hair
  

ಇದಕ್ಕೂ ಉತ್ತಮ ಪರಿಣಾಮ ಬೀರುವ ಮತ್ತು ಅತಿ ಅಗ್ಗವಾಗಿ ತಯಾರಿಸಬಹುದಾದ ಲೇಪನಗಳು ಈ ಕೊರತೆಯನ್ನು ನೀಗಿಸಬಲ್ಲವು. ಬನ್ನಿ, ಸುಲಭವಾಗಿ ನೀವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಕೆಲವು ವಿಧಾನಗಳನ್ನು ಈಗ ನೋಡೋಣ:

ತುದಿ ಸೀಳಿದ ಕೂದಲುಗಳಿಗೆ                  ಸೀಳುತುದಿಯನ್ನು ತಪ್ಪಿಸಲು ಕೆಲವು ಟಿಪ್ಸ್

ಒಂದು ವೇಳೆ ಕೂದಲು ಶಿಥಿಲವಾಗಿದ್ದು ತುದಿಗಳು ಸೀಳಿದ್ದರೆ ಇದಕ್ಕೆ ಪ್ರೂಟೀನ್ ಯುಕ್ತ ಮೊಟ್ಟೆಯ ಕೂದಲ ಲೇಪನವೇ ಸಾಕಾಗುತ್ತದೆ.  ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ವಿಟಮಿನ್ ಇ ಕೂದಲ ದಂಡವನ್ನು ದೃಢಗೊಳಿಸಿ ಸುಲಭವಾಗಿ ಬಾಗುವಂತೆ ಮಾಡುತ್ತದೆ. ಇದರಿಂದ ಕೂದಲು ತುಂಡಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಹಾಗೂ ತಲೆಹೊಟ್ಟಿನ ಸಮಸ್ಯೆಯೂ ನೀಗಿಸುತ್ತದೆ. ಇದರ ಆರೈಕೆಗಾಗಿ ಹೀಗೆ ಮಾಡಿ:

 Hair masks for itchy scalp, split ends and dry hair
 

* ಎರಡು ಮೊಟ್ಟೆಗಳನ್ನು ಒಂದು ಕಪ್ ನಲ್ಲಿ ಅರ್ಧ ಕಪ್ ಮಾಯೋನ್ನೀಸ್ ನೊಂದಿಗೆ ಚೆನ್ನಾಗಿ ಬೆರೆಸಿ.

* ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಬುಡದಿಂದ ತುದಿಯವರೆಗೆ ಆವರಿಸುವಂತೆ ಹಚ್ಚಿ.

* ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಒಣಗಲು ಬಿಡಿ.                 ತಲೆಹೊಟ್ಟಿನ ಸಮಸ್ಯೆಗೆ 'ಬೇವಿನ' ಹೇರ್‌ ಪ್ಯಾಕ್

* ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಕಿರಿಕಿರಿ ನೀಡುವ ಒಣ ಮತ್ತು ಘಾಸಿಗೊಂಡ ಕೂದಲಿಗೆ ಒಂದು ವೇಳೆ ನಿಮ್ಮ ಕೂದಲಿಗೆ ತೇವ ಅಥವಾ ಆರ್ದ್ರತೆಯ ಕೊರತೆಯಾದರೆ ಕೂದಲು ಒಣಗಿ ಸುಲಭವಾಗಿ ಘಾಸಿಗೊಳ್ಳುತ್ತದೆ.

 Hair masks for itchy scalp, split ends and dry hair
  

ಇದರ ಆರೈಕೆಗಾಗಿ ಹೀಗೆ ಮಾಡಿ:

* ಅರ್ಧ ಕಪ್ ಬೆಣ್ಣೆ ಹಣ್ಣಿನ ತಿರುಳು ಮತ್ತು ಅರ್ಧ ಕಪ್ ಮಾಯೋನ್ನೀಸ್ ಅನ್ನು ಬ್ಲಂಡರ್ ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ

* ಬಳಿಕ ಒಂದು ದೊಡ್ಡ ಚಮಚ ಕೊಬ್ಬರಿ ಎಣ್ಣೆ, ಒಂಚು ಚಿಕ್ಕಚಮಚ ಆಲಿವ್ ಎಣ್ಣೆ, ಒಂದು ದೊಡ್ಡ ಚಮಚ ಜೇನು ಸೇರಿಸಿ ಬ್ಲೆಂಡರಿನಲ್ಲಿಯೇ ಬೆರೆಸಿ.

* ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಎಲ್ಲೆಡೆ ಆವರಿಸುವಂತೆ ಹಚ್ಚಿ ದೊಡ್ಡ ಹಲ್ಲುಗಳ ಬಾಚಣಿಗೆಯಿಂದ ಬಾಚುವ ಮೂಲಕ ಹರಡಿಸಿ.

* ಬಳಿಕ ಶವರ್ ಕ್ಯಾಪ್ ಒಂದನ್ನು ಧರಿಸಿ ಕನಿಷ್ಠ ಹದಿನೈದು ನಿಮಿಷ ಹಾಗೇ ಬಿಡಿ

* ಒಂದು ವೇಳೆ ಸಮಯವಿದ್ದರೆ ಬಳಿಕ ಇನ್ನಷ್ಟು ಕೊಬ್ಬರಿ ಎಣ್ಣೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಬಳಿಕ ಸೌಮ್ಯ ಕಂಡೀಶನರ್ ಬಳಸಿ ತೊಳೆದುಕೊಳ್ಳಿ.

English summary

Hair masks for itchy scalp, split ends and dry hair

Deep conditioning is a must if you want to combat dry and brittle hair and get silky smooth locks. To give your hair a little TLC at home, you can whip up these hair masks recommended beauty experts hey will lock the moisture in your hair and make your stresses look flawless. Try these out!
Story first published: Tuesday, August 30, 2016, 10:34 [IST]
Please Wait while comments are loading...
Subscribe Newsletter