For Quick Alerts
ALLOW NOTIFICATIONS  
For Daily Alerts

ಪುಟ್ಟ ಗಾತ್ರದ ನೆಲ್ಲಿಕಾಯಿಯ ಎಣಿಕೆಗೂ ನಿಲುಕದ ಪ್ರಯೋಜನಗಳು

ನೈಸರ್ಗಿಕವಾಗಿ ದೊರೆಯುವ ನೆಲ್ಲಿಕಾಯಿಯು ಎಲ್ಲದಕ್ಕಿಂತಲೂ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಅದರಲ್ಲೂ ಕೂದಲಿನ ಆರೈಕೆಯ ವಿಷಯಕ್ಕೆ ಬಂದಾಗ, ಕೂದಲ ಬುಡಕ್ಕೆ ರಕ್ತದ ಪರಿಚಲನೆಯನ್ನು ಹೆಚ್ಚಿಸಿ, ಕೂದಲು ಸೊಂಪಾಗಿ ಬೆಳೆಯಲು ಸಹಕರಿಸುತ್ತದೆ....

By Jaya Subramanya
|

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ನೆಲ್ಲಿಕಾಯಿ ತನ್ನ ಅಸದಳ ಗುಣಗಳಿಂದ ಖ್ಯಾತಿಯನ್ನು ಪಡೆದುಕೊಂಡಿದೆ. ವಿಟಮಿನ್ ಸಿ ಯನ್ನು ನೆಲ್ಲಿಕಾಯಿ ಒಳಗೊಂಡಿದ್ದು, ನಿಮ್ಮ ಕೂದಲು ಮತ್ತು ತ್ವಚೆಯ ಆರೋಗ್ಯದ ವಿಷಯದಲ್ಲಿ ನೆಲ್ಲಿಕಾಯಿಯ ಪಾತ್ರ ಹಿರಿದಾದುದಾಗಿದೆ. ಸೊಂಪಾದ ಕೂದಲಿಗಾಗಿ ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್!

ನೆಲ್ಲಿಕಾಯಿಯ ಸೇವನೆಯು ನಿಮ್ಮ ರೋಗವರ್ಧಕ ಶಕ್ತಿಯನ್ನು ಹೆಚ್ಚಿಸಲಿದ್ದು ನಿಮ್ಮ ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ. ಕೂದಲಿನ ಸಮಸ್ಯೆ ಇಂದಿನ ಯುಗದಲ್ಲಿ ಹೆಚ್ಚು ಚಿಂತೆಯನ್ನುಂಟು ಮಾಡುತ್ತಿದೆ. ನೈಸರ್ಗಿಕ ಉತ್ಪನ್ನಗಳಿಂದ ಕೂಡಿರುವ ಎಷ್ಟೋ ಉತ್ಪನ್ನಗಳಲ್ಲಿ ಕೂಡ ರಾಸಾಯನಿಕ ಅಂಶಗಳು ಇದ್ದೇ ಇರುವುದರಿಂದ ಕೂದಲಿನ ಕಾಳಜಿಗೆ ತೊಡಕನ್ನು ಉಂಟುಮಾಡುತ್ತವೆ. ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

ಆದರೆ ನೆಲ್ಲಿಕಾಯಿಯಲ್ಲಿರುವ ಅತ್ಯಂತ ಪ್ರಮುಖ ಅಂಶಗಳು ಕೂದಲಿಗೆ ಮರುಜೀವವನ್ನು ನೀಡಿ ಹೊಳಪು ಬರುವಂತೆ ಮಾಡಿ ಆರೋಗ್ಯವನ್ನು ನೀಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನೆಲ್ಲಿಕಾಯಿಯನ್ನು ಯಾವ ರೂಪದಲ್ಲಿ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಅಂತೆಯೇ ನೆಲ್ಲಿಕಾಯಿಯಿಂದ ಕೂದಲಿಗೆ ಉಂಟಾಗುವ ಪ್ರಯೋಜನಗಳನ್ನು ಅರಿತುಕೊಳ್ಳೋಣ....

ತಲೆಹೊಟ್ಟು

ತಲೆಹೊಟ್ಟು

ತಲೆಹೊಟ್ಟಿಗೆ ನೆಲ್ಲಿಕಾಯಿಯ ಚಿಕಿತ್ಸೆ ಅತ್ಯಪೂರ್ಣವಾದುದಾಗಿದೆ. ಒಣಗಿದ ನೆಲ್ಲಿಕಾಯಿಯನ್ನು ತೆಂಗಿನೆಣ್ಣೆಯಲ್ಲಿ ಬಿಸಿ ಮಾಡಿ ಮತ್ತು ನೆಲ್ಲಿಕಾಯಿ ತುಂಡುಗಳನ್ನು ಬೇರ್ಪಡಿಸಿ. ನಿಮ್ಮ ತಲೆಬುರುಡೆಗೆ ಈ ಎಣ್ಣೆಯನ್ನು ಬಳಸಿಕೊಂಡು ಮಸಾಜ್ ಮಾಡುವುದು ತಲೆಹೊಟ್ಟನ್ನು ನಿವಾರಿಸುತ್ತದೆ.

ದೃಢವಾದ ಕೂದಲು

ದೃಢವಾದ ಕೂದಲು

ನೆಲ್ಲಿಕಾಯಿ ಎಣ್ಣೆ ಕೂದಲಿನ ಬೇರುಗಳ ಆಳಕ್ಕೆ ಇಳಿದು ನಿಮ್ಮ ಕೂದಲನ್ನು ಸುದೃಢವಾಗಿಸುತ್ತದೆ. ನೆಲ್ಲಿಕಾಯಿಯ ಎಣ್ಣೆಯನ್ನು ನಿತ್ಯವೂ ಬಳಸುವುದು ಕೂದಲಿನ ಆರೋಗ್ಯವನ್ನು ವರ್ಧಿಸುತ್ತದೆ.

ಕಂಡೀಷನಿಂಗ್

ಕಂಡೀಷನಿಂಗ್

ಇದು ನೈಸರ್ಗಿಕ ಕಂಡೀಷನ್‌ನಂತೆ ಕಾರ್ಯನಿರ್ವಹಿಸಲಿದ್ದು ಕೂದಲನ್ನು ಮೃದುವಾಗಿಸುತ್ತದೆ, ನೀವು ಇದಕ್ಕಾಗಿ ಪ್ರತ್ಯೇಕ ಕಂಡೀಷನರ್ ಅನ್ನು ಬಳಸುವ ಅಗತ್ಯವಿಲ್ಲ. ನೆಲ್ಲಿಕಾಯಿಯ ಪ್ರಯೋಜವನ್ನು ಕೂದಲಿಗೆ ಪಡೆದುಕೊಳ್ಳುವಲ್ಲಿ ಇದೂ ಒಂದು ವಿಧಾನವಾಗಿದೆ.

ಕೂದಲಿನ ಬೆಳವಣಿಗೆ

ಕೂದಲಿನ ಬೆಳವಣಿಗೆ

ವಿಟಮಿನ್ ಸಿ ಅಂಶವು ಕೂದಲು ಬೇಗ ಬೆಳೆಯುವಂತೆ ಮತ್ತು ಉತ್ತಮವಾಗಿ ಪ್ರಗತಿಯನ್ನು ಕಾಣುವಂತೆ ಮಾಡುತ್ತದೆ. ವಾರಕ್ಕೊಮ್ಮೆ ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಕೂದಲಿನ ಬೆಳವಣಿಗೆಯನ್ನು ವೃದ್ಧಿಸುತ್ತದೆ.

ನೆರೆಗೂದಲನ್ನು ತಡೆಯುತ್ತದೆ

ನೆರೆಗೂದಲನ್ನು ತಡೆಯುತ್ತದೆ

ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ಬಳಿಕ ಸ್ನಾನ ಮಾಡಬೇಕು.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ನಿಮ್ಮ ಕೂದಲು ಹೆಚ್ಚುವರಿಯಾಗಿ ಉದುರುತ್ತಿದೆ ಎಂದಾದಲ್ಲಿ ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ ಸಲಹೆಯಾಗಿದೆ. ತಲೆಬುರುಡೆಗೆ ರಕ್ತಸಂಚಾರವುಂಟಾಗಲು ಮಸಾಜ್ ನೆರವಾಗಲಿದೆ. ಕೂದಲಿಗೆ ನೆಲ್ಲಿಕಾಯಿಯಿಂದ ಉಂಟಾಗುವ ಪ್ರಯೋಜನಗಳಲ್ಲಿ ಇದೂ ಒಂದಾಗಿದೆ.

ತುರಿಕೆ ತಲೆಬುರುಡೆ

ತುರಿಕೆ ತಲೆಬುರುಡೆ

ನೆಲ್ಲಿಕಾಯಿ ಎಣ್ಣೆಯಲ್ಲಿ ಕ್ಯಾರೊಟಿನ್ ಅಂಶವಿದ್ದು, ಇದು ತುರಿತ ಮತ್ತು ಪದರಗಳನ್ನು ನಿಯಂತ್ರಿಸುತ್ತದೆ. ತುರಿಕೆಯನ್ನು ನಿಯಂತ್ರಣಕ್ಕೆ ತರುವಲ್ಲಿ ನೆಲ್ಲಿಕಾಯಿ ಪಾತ್ರ ಹಿರಿದಾದುದು.

English summary

Amla, the perfect ingredient to get rid of hair Problem

It is true, amlas can help with every single hair problem you may be having right now. You must have seen a lot of shampoos and oils in the stores having amla in them. So, why don't we try the amla remedies ourselves, right? It would be a lot better to use in its natural form, and it is pretty obvious that chemicals in some form or the other do end up being present in the products you buy. So, here's how amla can benefit your hair!
X
Desktop Bottom Promotion