For Quick Alerts
ALLOW NOTIFICATIONS  
For Daily Alerts

ಚುಮುಚುಮು ಚಳಿಗೆ ಕೂದಲು ಜೋಪಾನ!

By
|

ಸಾಮಾನ್ಯವಾಗಿ ಚಳಿಗಾಲದಲ್ಲಿ ನಾವು ಬೆವರುವುದಿಲ್ಲ, ಅಥವಾ ಬೆವರಿನಿಂದ ನೆನೆದು ಮುದ್ದೆಯಾಗುವಂತಿಲ್ಲ ಆದರೂ ಸಮಸ್ಯೆಗಳು ನಮ್ಮ ಬೆನ್ನನ್ನು ಹತ್ತದೆ ಬಿಡುವುದಿಲ್ಲ! ಚರ್ಮ ಒಡೆಯುವುದು, ಕೂದಲು ಒಣಗಿ ಹೋಗುವುದು, ತಲೆಹೊಟ್ಟು, ಮುಂತಾದ ಸಮಸ್ಯೆಗಳು ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತವೆ.

ಸಾಮಾನ್ಯವಾಗಿ ಪ್ರತಿಯೊಂದು ಕಾಲದಲ್ಲೂ ಕೂದಲಿನ ಪೋಷಣೆಯನ್ನು ಕಾಲಕ್ಕೆ ತಕ್ಕಂತೆ ಪೋಷಿಸಬೇಕಾಗುತ್ತದೆ, ಅದರಲ್ಲೂ ಚಳಿಗಾಲದಲ್ಲಿ ಕೂದಲುದುರುವ ಸಮಸ್ಯೆ ಕೊಂಚ ಹೆಚ್ಚಾಗಿಯೇ ಕಾಡಲಿದ್ದು ಕೂದಲು ಬಹುಬೇಗನೇ ಒರಟಾಗುತ್ತದೆ. ಬೀಸುವ ಗಾಳಿ ಒರಟಾಗಿರುವುದರಿಂದ ಕೂದಲಿನ ತೇವಾಂಶವನ್ನು ಬದಲಾಯಿಸಿ ಒರಟುಗೊಳಿಸುತ್ತದೆ. ಅಷ್ಟೇ ಅಲ್ಲದೆ ತಲೆಹೊಟ್ಟು, ಕೂದಲು ಹೊಳಪು ಕಳೆದುಕೊಳ್ಳುವುದು, ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಇಂತಹ ಸಮಯದಲ್ಲಿ ಕೊಂಚ ಹೆಚ್ಚಾಗಿಯೇ ಕಾಡುತ್ತದೆ.

ಅದನ್ನು ತಡೆಗಟ್ಟಲು ಕೆಲವೊಂದು ಮನೆಮದ್ದುಗಳನ್ನು ನೀವು ಅನುಸರಿಸಿದಲ್ಲಿ ಕೂದಲಿನ ಈ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಆ ವಿಧಾನಗಳು ಯಾವುವು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ನೈಸರ್ಗಿಕ ವಿಧಾನಗಳನ್ನು ಬಳಸಿ ಕೂದಲಿಗೆ ಯಾವುದೇ ಹಾನಿಉಂಟಾಗದ ರೀತಿಯಲ್ಲಿ ಕೇಶ ಆರೈಕೆಯನ್ನು ಮಾಡಬಹುದಾಗಿದೆ. ಆ ವಿಧಾನಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‎ನಿಂದ ತಿಳಿದುಕೊಳ್ಳಿ.

ವುಲನ್ ಟೋಪಿಯನ್ನು ಧರಿಸಿ

ವುಲನ್ ಟೋಪಿಯನ್ನು ಧರಿಸಿ

ನಿಮ್ಮ ಕಿರೀಟವನ್ನು ಧರಿಸಿ ಚಳಿಗಾಲದಲ್ಲಿ ನಿಮ್ಮ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ. ಸ್ಕಾರ್ವ್ಸ್ ಅಥವಾ ವುಲನ್ ಟೋಪಿಯನ್ನು ಧರಿಸಿ. ನಿಮ್ಮ ತಲೆಗೆ ಸ್ಕಾರ್ಫ್ ಧರಿಸುವಾಗ ಎಚ್ಚರವಹಿಸಿ, ಯಾವುದೇ ಕಾರಣಕ್ಕು ನಿಮ್ಮ ತಲೆಗೆ ರಕ್ತ ಸಂಚಾರ ನಿರ್ಬಂಧಿಸುವಂತಹ ಟೋಪಿ ಅಥವಾ ಸ್ಕಾರ್ಫ್‌ಗಳು ಬೇಡ. ಇದು ಸಹ ನಿಮ್ಮ ಕೂದಲ ಆರೋಗ್ಯವನ್ನು ಕಾಪಾಡುತ್ತದೆ ಎಂದು ತಿಳಿದಿರಲಿ.

ಶಾಂಪೂ ಬಳಕೆ ಬೇಡ

ಶಾಂಪೂ ಬಳಕೆ ಬೇಡ

ಒಂದು ವೇಳೆ ನಿಮಗೆ ಪ್ರತಿದಿನವು ಶಾಂಪೂವನ್ನು ಹಾಕಿಕೊಳ್ಳುವ ಅಭ್ಯಾಸವಿದ್ದರೆ, ಚಳಿಗಾಲದಲ್ಲಿ ಶಾಂಪೂವನ್ನು ಬಳಸುವುದನ್ನು ತಡೆಯುವುದು ಉತ್ತಮ. ಪ್ರತಿದಿನವು ಶಾಂಪೂವನ್ನು ಹಾಕುವುದರಿಂದ ನಿಮ್ಮ ಕೇಶವು ಒಣಗುವುದು ಸಾಮಾನ್ಯವಾಗುತ್ತದೆ. ಹಾಗಾಗಿ ಈ ಚಳಿಗಾಲದಲ್ಲಿ ಆದಷ್ಟು ಕಡಿಮೆ ಶಾಂಪೂವನ್ನು ಬಳಸುವುದು ಉತ್ತಮ.

ಅತ್ಯುತ್ತಮ ಕೇಶಕ್ಕಾಗಿ ಕಂಡೀಶನಿಂಗ್ ಮಾಡಿ

ಅತ್ಯುತ್ತಮ ಕೇಶಕ್ಕಾಗಿ ಕಂಡೀಶನಿಂಗ್ ಮಾಡಿ

ಚಳಿಗಾಲದಲ್ಲಿ ಕೇಶದ ಆರೋಗ್ಯವನ್ನು ಉಳಿಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗ ಕಂಡೀಶನ್ ಮಾಡುವುದು. ಇದು ಚಳಿಗಾಲದಲ್ಲಿ ಕೂದಲಿಗೆ ಅತ್ಯುತ್ತಮ ರಕ್ಷಾ ಕವಚದಂತೆ ಕಾರ್ಯ ನಿರ್ವಹಿಸುತ್ತದೆ. ಅದಕ್ಕಾಗಿ ಪ್ರತಿ ಬಾರಿ ನೀವು ಕೂದಲನ್ನು ತೊಳೆದಾಗಲು ಕಂಡೀಶನಿಂಗ್ ಮಾಡುವುದನ್ನು ಮರೆಯಬೇಡಿ. ಅದರಲ್ಲು ನೀವು ಸ್ವಾಭಾವಿಕವಾಗಿ ಕಂಡೀಶನ್ ಮಾಡಬೇಕೆಂದಾದಲ್ಲಿ, ತೆಂಗಿನ ಹಾಲು ಅತ್ಯುತ್ತಮ ಕಂಡೀಶನರ್ ಆಗಿರುತ್ತದೆ.

ಮೊಟ್ಟೆ, ಮೊಸರಿನ ಹೇರ್ ಪ್ಯಾಕ್ ಪ್ಯಾಕ್

ಮೊಟ್ಟೆ, ಮೊಸರಿನ ಹೇರ್ ಪ್ಯಾಕ್ ಪ್ಯಾಕ್

ಮೊಟ್ಟೆ, ಮೊಸರು ಹಾಗೂ ಆಲೀವ್ ಎಣ್ಣೆ ಮೊಟ್ಟೆ ಹಾಗೂ ಮೊಸರುಗಳೆರಡರಲ್ಲಿಯೂ ಪ್ರೋಟೀನ್ ಅಂಶ ಅಧಿಕವಾಗಿದ್ದು, ಇವು ಮೊಟ್ಟೆಯ ಹೇರ್ ಪ್ಯಾಕ್ ಅನ್ನು ಪ್ರೋಟೀನ್ ಭರಿತ ಹೇರ್ ಪ್ಯಾಕ್ ಅನ್ನಾಗಿಸುತ್ತವೆ. ಅಲ್ಲದೆ ಚಳಿಗಾಲದಲ್ಲಿ ಕೂದಲಿನ ಸುರಕ್ಷತೆಯಲ್ಲಿಯೂ ಕೂಡ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ, ಎರಡು ಟೇಬಲ್ ಚಮಚಗಳ ತು೦ಬಾ ಮೊಸರು, ಹಾಗೂ ಎರಡು ಟೇಬಲ್ ಚಮಚಗಳ ತು೦ಬಾ ಆಲಿವ್ ಎಣ್ಣೆಯನ್ನು ಪಡೆದುಕೊಳ್ಳಿರಿ. ಇವೆಲ್ಲವುಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವುಗಳ ಮಿಶ್ರಣದ ಸಮಪಾಕವು ನಿಮಗೆ ಲಭ್ಯವಾದಾಗ, ಮಿಶ್ರಣವು ಬಳಕೆಗೆ ಸಿದ್ಧಗೊ೦ಡ೦ತೆಯೇ. ಮಿಶ್ರಣವನ್ನು ಸಮನಾಗಿ ಕೂದಲ ಎಳೆಗಳು ಹಾಗೂ ನೆತ್ತಿಯ ಮೇಲೆ ಲೇಪಿಸಿಕೊಳ್ಳಿರಿ ಹಾಗೂ ಕನಿಷ್ಠ ಪಕ್ಷ ಅರ್ಧಗಂಟೆಯವರೆಗೆ ಅದನ್ನು ಕೂದಲ ಮೇಲೆ ಹಾಗೆಯೇ ಇರಗೊಡಿರಿ. ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದು ಬಿಡಿರಿ.

ಬಿಸಿ ಎಣ್ಣೆಯ ಮಸಾಜ್

ಬಿಸಿ ಎಣ್ಣೆಯ ಮಸಾಜ್

ಚಳಿಗಾಲದಲ್ಲಿ ಕೂದಲು ಒರಟು ಹಾಗೂ ಒಣಗಿದಂತೆ ಕಾಣುತ್ತದೆ. ಇದು ಮಾಯಿಶ್ಚರೈಸ್ ಅನ್ನು ಕಳೆದುಕೊಳ್ಳುತ್ತದೆ ಹಾಗೂ ಕೂದಲಿನ ಅಂದವನ್ನು ಬದಲಾಯಿಸುತ್ತದೆ. ಹಾಗಾಗಿ ಬಿಸಿ ಎಣ್ಣೆಯ ಮಸಾಜ್ ಕೂದಲಿನ ಶೈಲಿಯನ್ನು ಬದಲಾಯಿಸುತ್ತದೆ, ಹಾಗೂ ಮರು - ಹೈಡ್ರೇಟ್ಸ್ ಅನ್ನು ಒದಗಿಸುತ್ತದೆ. ಬಿಸಿ ಎಣ್ಣೆಯು ಚಳಿಗಾಲದಲ್ಲಿ ಉಂಟಾಗಿರುವ ಕೂದಲಿನ ಒರಟನ್ನು ಹೋಗಲಾಡಿಸುತ್ತದೆ. ಬಿಸಿ ಎಣ್ಣೆ ಮಸಾಜ್ ಅನ್ನು ಯಾವುದೇ ಎಣ್ಣೆಯನ್ನು ಬಳಸಿಕೊಂಡು ಕೂಡ ಮಾಡಬಹುದು. ಚಳಿಗಾಲದಲ್ಲಿ ಇದನ್ನು ನಿರಂತರವಾಗಿ ಮಾಡಿದರೆ, ತುಂಬಾ ಉಪಯುಕ್ತವಾಗಿರುತ್ತದೆ.

ಒದ್ದೆಗೂದಲನ್ನು ಕಟ್ಟುವುದನ್ನು ನಿಲ್ಲಿಸಿ

ಒದ್ದೆಗೂದಲನ್ನು ಕಟ್ಟುವುದನ್ನು ನಿಲ್ಲಿಸಿ

ಚಳಿಗಾಲದ ತಂಪು ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಚ್ಚಿನ ಮಹಿಳೆಯರು ತಮ್ಮ ನೀಳಕೂದಲನ್ನು ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಕೂದಲಿನ ಬುಡ ತೆಳ್ಳಗಾಗ ತೊಡಗುತ್ತದೆ. ಇದು ಬಕ್ಕತಲೆಯನ್ನುಂಟು ಮಾಡಬಹುದು, ಅಲ್ಲದೆ ತಲೆಹೊಟ್ಟನ್ನು ಉಂಟು ಮಾಡಿ ಕೂದಲಿಗೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಒದ್ದೆಕೂದಲನ್ನು ಎಂದಿಗೂ ಕಟ್ಟಬೇಡಿ. ಈ ರೀತಿಯ ತಪ್ಪುಗಳನ್ನು ಜನರು ಚಳಿಗಾಲದಲ್ಲಿ ಮಾಡುತ್ತಾರೆ. ಚಳಿಗಾಲದಲ್ಲಿ ಕೇಶ ರಕ್ಷಣೆ ಅತೀ ಅವಶ್ಯಕ ಮತ್ತು ಇದಕ್ಕೆ ಬೇಕಾದ ಆರೈಕೆಯನ್ನು ಮಾಡಲು ಮರೆಯದಿರಿ.

English summary

Winter Hair Care Tips You Should Follow

Winter is about to set in! If your starting to thank your stars for putting an end to all sun damage resulting madness, then go right ahead. But if you want to thank your stars for putting an end to all your hair troubles, then hit the brakes right now! Summer troubles might be gone but winter will bring in a all new set of worries for sure.
X
Desktop Bottom Promotion