For Quick Alerts
ALLOW NOTIFICATIONS  
For Daily Alerts

ಥತ್ ! ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?

By Su.Ra
|

ಆಗಾಗ ತಲೆಗೆ ಕೈ ಹಾಕಿಕೊಳ್ಳೋದು ಪರಪರ ಅಂತ ಕೆರಕೊಳ್ಳೋದು.. ಅಕ್ಕಪಕ್ಕದವ್ರು ಯಾರಾದ್ರೂ ನೋಡ್ತಾರೇನೋ ಅಂತ ಯೋಚಿಸಿ ಯೋಚಿಸಿ ತಲೆಯನ್ನು ತುರಿಸಿಕೊಳ್ಳೋದು.. ಮತ್ತೂ ಕೆಲವೊಮ್ಮೆ ಯಾರ ಬಗ್ಗೆನೂ ಯೋಚಿಸದೇ ತಲೆತುರಿಕೆಯನ್ನು ಕಂಟ್ರೋಲ್‌ ಮಾಡ್ಕೊಳ್ಳೋಕೆ ಆಗದೆ, ಎಲ್ಲೆಂದರಲ್ಲಿ ತಲೆಕೆರೆದುಕೊಂಡು ಹೇರ್‌ಸ್ಟೈಲ್‌ನ್ನೂ ಕೂಡ ಹಾಳು ಮಾಡ್ಕೊಳ್ಳೋದು.. ಇಂತಹ ತಲೆ ತುರಿಕೆಯ ಸಮಸ್ಯೆ ನಿಮ್ಮಲ್ಲಿದ್ರೆ ಮೊದಲು ನಿಮ್ಮ ಸ್ಕಾಲ್ಪ್‌ ಪರಿಶೀಲಿಸಿಕೊಳ್ಳಬೇಕು. ತಲೆ ತುರಿಕೆ ಯಾಕೆ ಆಗ್ತಾ ಇದೆ ಅನ್ನೋದನ್ನು ಗಮನಿಸಿಕೊಳ್ಳಬೇಕು.. ತಲೆಹೊಟ್ಟಿನ ನಿವಾರಣೆಗೆ-ಬಹೂಪಯೋಗಿ 'ಲೋಳೆಸರ'

ಡ್ರೈ ಮತ್ತು ಡ್ಯಾಮೇಜ್‌ ಆಗಿರುವ ಸ್ಕಾಲ್ಪ್‌ನಿಂದಾಗಿ ತುರಿಕೆ ಆಗ್ತಾ ಇದ್ಯಾ? ಡ್ಯಾಂಡ್ರಫ್‌ ಕಾರಣವಾ ಇಲ್ಲ ತಲೆಯಲ್ಲಿ ಹೇನುಗಳು ಏನಾದ್ರೂ ತುರಿಕೆಗೆ ಕಾರಣವಾಗ್ತಾ ಇದ್ಯಾ? ಅಥ್ವಾ ಇತರೆ ಯಾವುದಾದ್ರೂ ನಾರ್ಮಲ್‌ ಕಾರಣಗಳು ತಲೆತುರಿಕೆಯ ಸಮಸ್ಯೆಯನ್ನು ಉಂಟು ಮಾಡ್ತಾ ಇದ್ಯಾ? ತಲೆತುರಿಕೆ ತಲೆಯಲ್ಲಿ ಬೆವರುವಿಕೆಯಿಂದಲೂ ಆಗಿರಬಹುದು. ತಲೆತುರಿಕೆಗೆ ಕಾರಣವಾಗುವ ಕೆಲವು ಅಂಶಗಳನ್ನು ಇಲ್ಲಿ ನಮೂದಿಸಲಾಗಿದೆ.ಮುಂದೆ ಓದಿ. ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ಹೊಸ ಪ್ರೊಡಕ್ಟ್ ಬಳಸುವ ಮುನ್ನ ಎಚ್ಚರ..

ಹೊಸ ಪ್ರೊಡಕ್ಟ್ ಬಳಸುವ ಮುನ್ನ ಎಚ್ಚರ..

ಈಗಾಗಲೇ ಬಳಸುತ್ತಿರುವ ಶಾಂಪೂ, ಕಂಡೀಷನರ್ ಇತ್ಯಾದಿ ಕೂದಲಿನ ಪ್ರೊಡಕ್ಟ್ ಗಳನ್ನು ಬದಲಾಯಿಸುವ ಮುನ್ನ ಒಮ್ಮೆ ಯೋಚಿಸಿ. ನೀವು ಯಾವುದಾದ್ರೂ ತಲೆ ಕೂದಲಿಗಾಗಿ ಬಳಸುವ ಹೊಸ ಪ್ರೊಡಕ್ಟ್‌ಗಳನ್ನು ಟ್ರೈ ಮಾಡಲು ಇಚ್ಛಿಸುತ್ತಿದ್ದೀರಾದ್ರೆ ಮೊದಲು ಆ ಪ್ರೊಡಕ್ಟ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ. ನಿಮ್ಮ ತಲೆ ಕೂದಲಿಗೆ ಅದು ಹೊಂದಾಣಿಕೆಯಾಗುತ್ತಾ ಅನ್ನೋದನ್ನು ವೈದ್ಯರ ಬಳಿ ಪರಿಶೀಲಿಸಿ ಖಾತ್ರಿ ಮಾಡ್ಕೊಳ್ಳಿ..ಒಂದು ವೇಳೆ ಬಳಸಿದ್ದೀರಾದ್ರೆ ಬಳಸಿದ ನಂತ್ರ ಆ ಪ್ರೊಡಕ್ಟ್ ನಿಮಗೆ ಯಾವುದೇ ಕೆಟ್ಟ ಪರಿಣಾಮಗಳನ್ನು ಮಾಡ್ತಿಲ್ಲ ಅನ್ನೋದನ್ನು ಖಾತ್ರಿ ಮಾಡ್ಕೊಳ್ಳಿ. ಒಂದು ವೇಳೆ ನೆಗೆಟಿವ್ ಆಗಿ ವರ್ತಿಸಿದ್ರೆ, ಹಿತವಾಗಿಲ್ಲ ಅಂತ ಅನ್ನಿಸಿದ್ರೆ ಬಳಸಲು ತಂದಿರುವ ಹೊಸ ಪ್ರೊಡಕ್ಟ್ ವೇಸ್ಟ್‌ ಆಗುತ್ತೆ ಅನ್ನೋ ಕಾರಣಕ್ಕೆ ಯಾವುದೇ ಕಾರಣಕ್ಕೂ ಬಳಸುವುದನ್ನು ಮುಂದುವರಿಸಬೇಡಿ. ಕೂಡಲೇ ನಿಲ್ಲಿಸಿಬಿಡಿ.

ಹೊಸ ಪ್ರೊಡಕ್ಟ್ ಬಳಸುವ ಮುನ್ನ ಎಚ್ಚರ..

ಹೊಸ ಪ್ರೊಡಕ್ಟ್ ಬಳಸುವ ಮುನ್ನ ಎಚ್ಚರ..

ಒಂದು ವೇಳೆ ನೆಗೆಟಿವ್ ಆಗಿ ವರ್ತಿಸಿದ್ರೆ, ಹಿತವಾಗಿಲ್ಲ ಅಂತ ಅನ್ನಿಸಿದ್ರೆ ಬಳಸಲು ತಂದಿರುವ ಹೊಸ ಪ್ರೊಡಕ್ಟ್ ವೇಸ್ಟ್‌ ಆಗುತ್ತೆ ಅನ್ನೋ ಕಾರಣಕ್ಕೆ ಯಾವುದೇ ಕಾರಣಕ್ಕೂ ಕಂಟಿನ್ಯೂ ಮಾಡ್ಬೇಡಿ. ಕೂಡಲೇ ಬಳಸುವುದನ್ನು ಎಸೆದುಬಿಡಿ.ಕೂದಲಿಗೆ ಬೇಬಿ ಶಾಂಪೂ ಬಳಕೆ ಮಾಡ್ಬಹುದು ಯಾಕಂದ್ರೆ ಇದು ಮೈಲ್ಡ್‌ ಆಗಿರುತ್ತೆ ಮತ್ತು ಸ್ಕಾಲ್ಪ್‌ ಕ್ಲೀನ್ ಮಾಡಿ ಆರೋಗ್ಯವಾಗಿರಲು ಸಹಕಾರಿಯಾಗಿದೆ.

ಎಂತಹ ನೀರನ್ನು ಬಳಸಬೇಕು ಗೊತ್ತಾ

ಎಂತಹ ನೀರನ್ನು ಬಳಸಬೇಕು ಗೊತ್ತಾ

ಕೂದಲನ್ನು ವಾಷ್ ಮಾಡಲು ಸ್ವಲ್ಪವೇ ಬಿಸಿಯಾಗಿರುವ ನೀರು ಇಲ್ಲವೇ ತಣ್ಣನೆಯ ನೀರನ್ನುಬಳಸಿ. ಅತಿಯಾದ ಬಿಸಿನೀರಿನ ಸ್ನಾನ ಮಾಡೋದ್ರಿಂದ ಕೂದಲಲ್ಲಿರುವ ಮಾಯ್ಚಿರ್‌ ಕಡಿಮೆಯಾಗಿ ಇಚ್ಚಿಂಗ್ ಆರಂಭ ಆಗುವ ಸಾಧ್ಯತೆ ಇರುತ್ತೆ. ಇನ್ನು ಯಾವುದೋ ಪ್ರವಾಸ ಹೋದಾಗ, ಅಥವಾ ಕಾರಣಾಂತರಗಳಿಂದ ಪರ ಊರಿಗೆ ಪ್ರಯಾಣ ಬೆಳೆಸಿದಾಗ ಕೂದಲ ಸ್ನಾನದ ಬಗ್ಗೆ ಜಾಗೃತರಾಗಿರಿ. ಅಲ್ಲಿನ ನೀರು ನಿಮ್ಮ ಕೂದಲಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ತುರಿಕೆಗೆ ಕಾರಣವಾಗ್ಬಹುದು ಅನ್ನುವ ಯೋಚನೆ ಖಂಡಿತ ನಿಮ್ಮಲ್ಲಿರಬೇಕು.

ಇಂತಹ ತಪ್ಪುಗಳನ್ನು ಮಾಡಬೇಡಿ

ಇಂತಹ ತಪ್ಪುಗಳನ್ನು ಮಾಡಬೇಡಿ

ಅತಿಯಾಗಿ ತಲೆಸ್ನಾನ ಮಾಡೋದು, ಕೂದಲಿಗೆ ಎಣ್ಣೆ ಹಚ್ಚದೇ ಇರೋದು ಕೂಡ ತಲೆಯ ತುರಿಕೆಗೆ ಕಾರಣವಾಗ್ಬಹುದು. ಇನ್ನು ಕೆಲವರು ತಲೆ ಸ್ನಾನ ಮಾಡುವಾಗ ಗಡಿಬಿಡಿಯಲ್ಲಿ ಮಾಡ್ತಾರೆ. ಸರಿಯಾಗಿ ವಾಷ್ ಮಾಡೋದಿಲ್ಲ. ಹಚ್ಚಿದ ಶಾಂಪೂ ಮತ್ತು ಕಂಡೀಷನರ್ ಹಾಗೆಯೇ ಕೂದಲಿನಲ್ಲಿ ಇಲ್ಲವೇ ಸ್ಕ್ಯಾಲ್ಪ್ ನಲ್ಲಿ ಉಳಿದು ತುರಿಕೆಗೆ ಕಾರಣವಾಗುತ್ತೆ. ಇನ್ನು ತಲೆಗೆ ಹಚ್ಚಿದ ಎಣ್ಣೆ ಕೂಡ ಸ್ನಾನದ ಬಳಿಕ ಕೂದಲಿನಲ್ಲಿ ಜಿಡ್ಡುಜಿಡ್ಡಾಗಿ ಉಳಿದಿರಬಾರದು. ಹೀಗೆ ಮಾಡಿದ್ರೂ ಕೂಡ ತಲೆತುರಿಕೆಯ ಸಮಸ್ಯೆ ಸರ್ವೇಸಾಮಾನ್ಯವಾಗಿ ಕಂಡುಬರುತ್ತೆ ಅನ್ನೋದು ನೆನಪಿರಲಿ..

 ಚೆನ್ನಾಗಿ ನೀರು ಕುಡಿಬೇಕು

ಚೆನ್ನಾಗಿ ನೀರು ಕುಡಿಬೇಕು

ಪ್ರತಿ ದಿನ 8 ಲೋಟ ನೀರು ಕುಡಿಯೋದನ್ನು ಮರೀಬೇಡಿ.ವಿಟಮಿನ್ ಬಿ, ಸಿ, ಮತ್ತು ಕಬ್ಬಿಣ, ಝಿಂಕ್ ಅಂಶವಿರುವ ಆಹಾರಗಳನ್ನು ಸೇವಿಸಿ..ಕ್ರಮಬದ್ಧವಾದ ಆಹಾರ ಕ್ರಮ ಕೂಡ ನಿಮ್ಮ ತಲೆಯ ಸಮಸ್ಯೆಯನ್ನು ದೂರಮಾಡುತ್ತೆ. ಯಾವಾಗ ನೀವು ಕೂದಲಿನ ಪೋಷಣೆಗೆ ಬೇಕಾದ ಆಹಾರಗಳನ್ನು ಸ್ವೀಕರಿಸುವುದಿಲ್ಲವೋ ಆಗ ನಿಮಗೆ ಗೊತ್ತಿಲ್ಲದೆ ಕೂದಲಿನ ಆರೋಗ್ಯ ಹದಗೆಟ್ಟಿರುತ್ತೆ.

ಅತಿಯಾದ ಹೇರ್ ಸ್ಟೈಲ್ ಮಾಡಬೇಡಿ..

ಅತಿಯಾದ ಹೇರ್ ಸ್ಟೈಲ್ ಮಾಡಬೇಡಿ..

ಕೆಲವರಿಗೆ ಅದೆಷ್ಟು ಸ್ಟೈಲ್ ಮಾಡಿದ್ರೂ ಸಾಕಾಗೋದಿಲ್ಲ. ಪಾರ್ಟಿ, ಫಂಕ್ಷನ್ ಮಾತ್ರವಲ್ಲ ಪ್ರತಿದಿನವೂ ಕೂದಲನ್ನು ಒಂದಲ್ಲ ಒಂದು ರೀತಿಯಲ್ಲಿ ಟ್ವಿಸ್ಟ್ ಮಾಡ್ತಲೇ ಇರ್ತಾರೆ. ಹೀಗೆ ಅತಿಯಾಗಿ ಹೇರ್ ಸ್ಟೈಲ್ ಮಾಡೋದು ಕೂಡ ಕೂದಲಿಗೆ ಮಾರಕ. ಅಷ್ಟೇ ಅಲ್ಲ ಕೂದಲಿನ ಅಲಂಕಾರಕ್ಕಾಗಿ ಅತಿಯಾಗಿ ಹೇರ್‌ ಸ್ಟೈಲ್‌ ಪ್ರೊಡಕ್ಟ್‌ಗಳನ್ನು, ಜಲ್ ಗಳು, ಹೇರ್ ಸೆಟ್ ಆಗಿ ಕೂರಲು ಬಳಸುವ ಕೆಮಿಕಲ್‌ಗಳು ಕೂಡ ತಲೆ ತುರಿಕೆ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಬಹುದು.. ಇಂತಹ ಇರಿಟೇಷನ್‌ ಕಡಿಮೆ ಮಾಡಲು ಆಲಿವ್ ಆಯಿಲ್ ಮತ್ತು ಅಲ್‌ಮಂಡ್ ಆಯಿಲ್ ಮಿಕ್ಸ್ ಮಾಡಿ ಸ್ಕಾಲ್ಪ್‌ಗೆ ಹಚ್ಚಿಕೊಳ್ಳೋದ್ರಿಂದ ತಲೆಕೂದಲಿನ ತುರಿಕೆ ನಿಯಂತ್ರಣದಲ್ಲಿರುತ್ತೆ.

ಸುಲಭ ಪರಿಹಾರ ಕ್ರಮಗಳು

ಸುಲಭ ಪರಿಹಾರ ಕ್ರಮಗಳು

ಕೂದಲಿಗೆ ಆಗಾಗ ಅಂದ್ರೆ ಅಟ್‌ಲೀಸ್ಟ್‌ ವಾರಕ್ಕೊಮ್ಮೆಯಾದ್ರೂ ಅಲ್‌ವೀರಾ ಜಲ್‌ ಅಪ್ಲೈ ಮಾಡಿ 15 ರಿಂದ 20 ನಿಮಿಷದ ನಂತ್ರ ವಾಷ್‌ ಮಾಡಿ. ಇದ್ರಿಂದ ಸ್ಕಾಲ್ಪ್‌ನಲ್ಲಿ ಮಾಯ್ಚಿರೈಸರ್‌ ಕಾಯ್ದುಕೊಳ್ಳಲು ಸಾಧ್ಯವಾಗುತ್ತೆ. ಮತ್ತು ತುರಿಕೆ ಸಮಸ್ಯೆ ನಿವಾರಣೆಯಾಗಿ ಕೂದಲು ಹೆಲ್ತಿಯಾಗಿ ಶೈನಿಯಾಗಿ ಬೆಳೆಯಲು ಸಹಕಾರಿಯಾಗಿದೆ.

ಬಾಚಣಿಗೆಯ ಬಳಕೆ ಹೇಗಿರಬೇಕು

ಬಾಚಣಿಗೆಯ ಬಳಕೆ ಹೇಗಿರಬೇಕು

ಯಾವಾಗ್ಲೂ ಬೇರೆಬೇರೆ ಕೆಲ್ಸಕ್ಕೆ ಬೇರೆ ಬೇರೆ ಬಾಚಣಿಗೆ ಬಳಸಿ.. ಎಣ್ಣೆ ಹಚ್ಚಿಕೊಂಡಾಗ ಕೂದಲು ಬಾಚಿದ ಬಾಚಣಿಗೆಯನ್ನು ಸ್ನಾನದ ನಂತರ ಅಂದ್ರೆ ಹೇರ್‌ ವಾಷ್‌ ಆದ ನಂತ್ರವೂ ಬಳಕೆ ಮಾಡ್ಬೇಡಿ.. ಹಾಗೆ ಬಳಕೆ ಮಾಡೋದಾದ್ರೆ ಆ ಬಾಚಣಿಗೆಯನ್ನು ಕ್ಲೀನಾಗಿ ವಾಷ್‌ ಮಾಡಿ ಒಣಗಿಸಿ ನಂತ್ರ ಬಳಸಿ.. ಇನ್ನು ನಿಮ್ಮ ಬಾಚಣಿಗೆಯನ್ನು ಇತರರೊಂದಿಗೆ ಶೇರ್‌ ಮಾಡಿಕೊಳ್ಳದೇ ಇರೋದೆ ಲೇಸು. ಈಗಂತೂ ಸಿಕ್ಕು ಬಿಡಿಸಲು, ಹೇರ್ ಪಾರ್ಟೀಷಿಯನ್ ಮಾಡಲು ಹೀಗೆ ಪ್ರತಿಯೊಂದಕ್ಕೂ ಬೇರೆಬೇರೆ ಶೇಪಿನ ಬಾಚಣಿಗೆಗಳು ಲಭ್ಯವಿದೆ. ಸಾಧ್ಯವಿದ್ದಲ್ಲಿ ಕೊಂಡುಕೊಂಡು ಸೂಕ್ಷ್ಮವಾಗಿ ಕೂದಲನ್ನು ಹ್ಯಾಂಡಲ್ ಮಾಡಿ.. ಹೀಗೆ ಮಾಡಿದಾಗ ತುರಿಕೆಯೂ ಇರೋದಿಲ್ಲ. ಕೂದಲೂ ಆರೋಗ್ಯವಾಗಿರಲು ಸಾಧ್ಯವಾಗುತ್ತೆ. ಒಟ್ಟಿನಲ್ಲಿ ತುರಿಕೆಯ ಕಾರಣಗಳನ್ನು ತಿಳಿದು ಪರಿಹಾರ ಕಂಡುಕೊಳ್ಳೋದು ಸೂಕ್ತ. ಅದಕ್ಕೂ ಮೀರಿ ತುರಿಕೆಯ ಸಮಸ್ಯೆ ನಿಮ್ಮನ್ನ ಬಾಧಿಸಿದ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ...

English summary

What Causes Dandruff? and how to get rid from these dandruff

Dandruff is one of the most common hair problems faced by men and women alike. The white flakes can be annoying and embarrassing and they only show themselves at the most inappropriate of times! What’s more? They also cause acne and mess with our skin too.
Story first published: Wednesday, December 23, 2015, 18:00 [IST]
X
Desktop Bottom Promotion