For Quick Alerts
ALLOW NOTIFICATIONS  
For Daily Alerts

ಇಳಿವಯಸ್ಸಿನಲ್ಲಿ ಕಾಡುವ ಕೂದಲಿನ ಸಮಸ್ಯೆಗೆ ಫಲಪ್ರದ ಮನೆಮದ್ದು

|

ವಯಸ್ಸು ಇಪ್ಪತ್ತಾಯಿದೆಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತದೆ! ತಲೆ ಕೂದಲು ಉದುರುವುದು ಇಂದು ವಿಶ್ವವನ್ನೇ ಕಾಡುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ಆಹಾರ ಪದ್ಧತಿ, ಖನಿಜಾಂಶದ ಕೊರತೆ, ಔಷಧಿಗಳ ಅಡ್ಡ ಪರಿಣಾಮ, ಒತ್ತಡ, ಮಾಲಿನ್ಯ ಮತ್ತು ವಂಶವಾಹಿಗಳು ಕಾರಣವಾಗಿರುತ್ತವೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಹಾಗಾಗಿ ಇಂತಹ ಸಮಸ್ಯೆಯನ್ನು ನಿವಾರಿಸಲು ನಾವು ನಿಮಗಾಗಿ ಪರಿಹಾರಗಳನ್ನು ಸೂಚಿಸುತ್ತಿದ್ದೇವೆ

ಕೂದಲಿನ ಶೈಲಿ ಬದಲಾಯಿಸಿ
ಕೂದಲನ್ನು ಕತ್ತರಿಸುವ ಶೈಲಿ ಬದಲಾಯಿಸಿ ನಿಮ್ಮ ಕೂದಲು ನಿಧಾನವಾಗಿ ಉದುರುತ್ತಿದ್ದರೆ, ನೀವು ಕೂದಲನ್ನು ಉದ್ದ ಬಿಡುವುದು ಒಳ್ಳೆಯದು. ಏಕೆಂದರೆ ಸಣ್ಣ ಮಟ್ಟದಲ್ಲಿ ಕೂದಲು ಕತ್ತರಿಸುತ್ತಿದ್ದರೆ ಕಾಲಾನುಕ್ರಮದಲ್ಲಿ ಬೊಕ್ಕ ತಲೆಯುಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಉದ್ದ ಕೂದಲು ಬಿಡಿ. ಅಬ್ಬಬ್ಬಾ..! ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

Simple home remedies for hair loss

ಔಷಧಗಳ ಬಗ್ಗೆ ಎಚ್ಚರಿಕೆಯಿಂದಿರಿ
ಕೆಲವು ಔಷಧಗಳು ನಿಮ್ಮ ಕೂದಲಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಕೆಲವು ಕೂದಲು ಉದುರುವುದನ್ನು ಸಹ ಪ್ರಚೋದಿಸುತ್ತವೆ. ಹಾಗಾಗಿ ಈ ಕುರಿತು ನಿಮ್ಮ ವೈದ್ಯರ ಬಳಿ ಮಾತನಾಡಿ.

ಒತ್ತಡವನ್ನು
ಒತ್ತಡವನ್ನು ನಿವಾರಿಸಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಹಾಗಾಗಿ ನಿಮ್ಮನ್ನು ನೀವು ಧ್ಯಾನ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬನ್ನಿ. ಕೂದಲಿನ ಸಮಸ್ಯೆ: ಮನೆಯಲ್ಲೇ ಸಿದ್ಧಗೊಳಿಸಿರುವ ಅದ್ಭುತ ತೈಲಗಳು

ಗ್ರೀನ್ ಟೀ
ನಿಮ್ಮ ಕೂದಲಿಗೆ ಗ್ರೀನ್ ಟೀಯನ್ನು ಲೇಪಿಸಿ ಅಧ್ಯಯನಗಳ ಪ್ರಕಾರ ನಿಮ್ಮ ಕೂದಲಿಗೆ ಗ್ರೀನ ಟೀಯನ್ನು ಲೇಪಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಎರಡು ಟೀ ಬ್ಯಾಗ್‍ಗಳನ್ನು ತೆಗೆದುಕೊಂಡು, ಅದನ್ನು ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ತಣ್ಣಗಾದ ಬ್ಯಾಗ್‍ಗಳನ್ನು ಕೂದಲಿಗೆ ಲೇಪಿಸಿ. ಒಂದು ಗಂಟೆಯ ನಂತರ ಸ್ನಾನಮಾಡಿ. ಇದರ ಫಲಿತಾಂಶವನ್ನು ನೋಡಲು ಒಂದು ವಾರ ಹೀಗೆ ಮಾಡಿ. ಹತ್ತು ದಿನಗಳಲ್ಲಿ ನೀವು ಬದಲಾವಣೆಯನ್ನು ಗಮನಿಸುವಿರಿ.

ಆಲ್ಕೋಹಾಲ್ ದೂರವಿಡಿ
ನಿಮಗೆ ಕೂದಲು ಉದುರುತ್ತಿದ್ದರೆ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಆಲ್ಕೋಹಾಲ್ ಕೂದಲು ಬೆಳೆಯುವುದನ್ನು ತಡೆಗಟ್ಟುತ್ತದೆ. ಹಾಗಾಗಿ ಆಲ್ಕೋಹಾಲ್ ಅಂಶಗಳನ್ನು ಸೇವಿಸುವುದನ್ನು ಬಿಡಿ.

ಸರಿಯಾಗಿ ನೀರು ಸೇವಿಸಿ
ಕೂದಲಿನ ಬುಡಗಳು ನಮ್ಮ ದೇಹದಲ್ಲಿರುವ ನಾಲ್ಕನೇ ಒಂದು ಭಾಗ ನೀರನ್ನು ಎಳೆದುಕೊಳ್ಳುತ್ತವೆ. ಹಾಗಾಗಿ ದಿನಕ್ಕೆ ಎಂಟು ಕಪ್ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ.

English summary

Simple home remedies for hair loss

Have you noticed strands of hair on your comb or down the drain when you wash your hair? Is this stressing you out? Stop and take a deep breath right now as stress will only worsen the situation. It is in fact, a major cause of hair fall. have a look for effective home remedies to controll hair loss
Story first published: Thursday, March 26, 2015, 20:00 [IST]
X
Desktop Bottom Promotion