For Quick Alerts
ALLOW NOTIFICATIONS  
For Daily Alerts

ಅಚ್ಚರಿಗೆ ತಳ್ಳುವ ಈ ಪುಟ್ಟ ಬೆಳ್ಳುಳ್ಳಿಯ ಕಾರುಬಾರು!

By Deepu
|

ಬೆಳ್ಳುಳಿ ಕೇವಲ ಸಾರು ಮತ್ತು ಗೊಜ್ಜುಗಳಿಗೆ ಮಾತ್ರ ಪ್ರಯೋಜನಕ್ಕೆ ಬರುತ್ತದೆ ಎಂದು ಬಹುತೇಕ ಜನರು ಭಾವಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದಿಂದಲೂ ಈ ಬೆಳ್ಳುಳ್ಳಿಯನ್ನು ಕೂದಲು ಉದುರುವಿಕೆಗಾಗಿ ಔಷಧಿಯಾಗಿ ಬಳಸಿಕೊಂಡು ಬರುತ್ತಿದ್ದಾರೆ. ತಜ್ಞರ ಪ್ರಕಾರ ಈ ಮನೆ ಮದ್ದನ್ನು ವಾರಕ್ಕೆ ಎರಡು ಬಾರಿ ಮಾಡಿಕೊಳ್ಳಬೇಕಂತೆ. ಒಂದು ವೇಳೆ ಕೂದಲು ಉದುರುವಿಕೆ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ, ಬೆಳ್ಳುಳ್ಳಿ ರಸದ ಜೊತೆಗೆ ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುವುದು ಅತ್ಯಗತ್ಯ.

ಎಣ್ಣೆ ಮಸಾಜ್ ಕೂದಲ ಬುಡಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತದೆ. ಅಧ್ಯಯನಗಳ ಪ್ರಕಾರ ಹೀಗೆ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಮಸಾಜ್ ಮಾಡುವಿಕೆಯು ಕೂದಲಿನ ಬುಡಕ್ಕೆ ಅಗತ್ಯವಾದ ರಕ್ತ ಸಂಚಾರವನ್ನು ಒದಗಿಸುತ್ತದೆಯಂತೆ. ಈ ರಕ್ತ ಸಂಚಾರವು ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ. ತಜ್ಞರು ಬೆಳ್ಳುಳ್ಳಿ ರಸವನ್ನು ಸ್ವಚ್ಛವಾದ ಮತ್ತು ತೊಳೆದ ಕೂದಲಿಗೆ ಮಾತ್ರ ಲೇಪಿಸುವಂತೆ ತಿಳಿಸುತ್ತಾರೆ.

Garlic Juice For Hair Regrowth: 1 Week Remedy

ಒಂದು ವೇಳೆ ಕೂದಲಿಗೆ ನೀವು ಈ ರಸವನ್ನು ಲೇಪಿಸಿಕೊಳ್ಳಬೇಕು ಎಂದಲ್ಲಿ, ಆ ಕೂದಲು ಎಣ್ಣೆ ಅಥವಾ ಇತರೆ ಎಣ್ಣೆಯಂತಹವುಗಳನ್ನು ಲೇಪಿಸಿರಬಾರದು ಎಂಬುದನ್ನು ನೆನಪಿಟ್ಟುಕೊಳ್ಳಿ. ಬೆಳ್ಳುಳ್ಳಿ ರಸವನ್ನು ಹೇಗೆ ಸಿದ್ಧಪಡಿಸುವುದು? ಇದಕ್ಕಾಗಿ ಮೂರು ಬೆಳ್ಳುಳ್ಳಿಗಳನ್ನು ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ಈ ಬೆಳ್ಳುಳ್ಳಿಗಳನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಅದನ್ನು ಒಂದು ಬಟ್ಟೆಯಲ್ಲಿ ಹಿಂಡಿದರೆ ರಸ ಬರುತ್ತದೆಯಲ್ಲವೇ, ಆ ರಸವನ್ನು ತೆಗೆದುಕೊಳ್ಳಿ. ಈ ರಸವನ್ನು ಗಾಳಿಯಾಡದ ಜಾಡಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಅಗತ್ಯವಾದಾಗ ಅದನ್ನು ಬಳಸಬಹುದು.

ಬೆಳ್ಳುಳ್ಳಿಯ ರಸವನ್ನು ನೇರವಾಗಿ ಕೂದಲಿಗೆ ಲೇಪಿಸಬೇಡಿ. ಏಕೆಂದರೆ ನಿಮ್ಮ ಕೂದಲ ಬುಡದಲ್ಲಿ ಗಾಯಗಳಾಗಿರುತ್ತವೆ. ಇವು ಕಣ್ಣಿಗೆ ಕಾಣುವಷ್ಟು ದೊಡ್ಡದಿರುವುದಿಲ್ಲವಾದರೂ, ಅವು ಗಾಯಗಳೇ. ಬೆಳ್ಳುಳ್ಳಿಯಲ್ಲಿರುವ ಆಮ್ಲದ ಗುಣಗಳು ನಿಮ್ಮ ಗಾಯವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತವೆ. ಅದಕ್ಕಾಗಿ ನಿಮ್ಮ ಕೂದಲನ್ನು ರೋಸ್ ವಾಟರಿನಲ್ಲಿ ಅರ್ಧ ಗಂಟೆ ನೆನೆಸಿ. ರೊಸ್ ವಾಟರ್ ನಿಮ್ಮ ಕೂದಲಿಗೆ ಸ್ವಾಭಾವಿಕ ಮಾಯಿಶ್ಚರೈಸರ್ ರೀತಿ ವರ್ತಿಸುತ್ತದೆ. ಇದು ಬೆಳ್ಳುಳ್ಳಿ ರಸ ಲೇಪಿಸಿದ ಮೇಲೆ ನಿಮ್ಮ ಕೂದಲು ಸಿಕ್ಕಾಗುವುದನ್ನು ತಡೆಯುತ್ತದೆ. ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ

ಕೂದಲು ಮತ್ತೆ ಬೆಳೆಯಲು ಬೆಳ್ಳುಳ್ಳಿ ರಸವನ್ನು ಲೇಪಿಸಿದ ನಂತರ, ಈ ರಸದಲ್ಲಿ ಕೂದಲು ಅರ್ಧ ಗಂಟೆ ನೆನೆಯಲು ಬಿಡಿ. ಈ ಅವಧಿಯ ನಂತರ ತಲೆಯನ್ನು ಮೃದುವಾಗಿ ಬಾಚಿಕೊಳ್ಳಿ. ಆಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಅದನ್ನು ತೊಳೆಯಿರಿ. ತಲೆಯನ್ನು ತೊಳೆಯಲು ಮೆದುವಾದ ಹೋಮ್‌ಮೇಡ್ ಶಾಂಪೂವನ್ನು ಬಳಸಿ. ಈ ಬೆಳ್ಳುಳ್ಳಿಯ ವಾಸನೆ ಹೋಗುವುದು ಸ್ವಲ್ಪ ಕಷ್ಟ. ಇದಾದ 15 ನಿಮಿಷಗಳ ನಂತರ ಹೋಮ್‌ಮೇಡ್ಮಾ ಯಿಶ್ಚರೈಸಿಂಗ್ ಕಂಡೀಶನರ್ ಅನ್ನು ಕೂದಲಿನ ತುದಿಗೆ ಲೇಪಿಸಿ ಮತ್ತು ಅದನ್ನು ತಣ್ಣೀರಿನಲ್ಲಿ ತೊಳೆಯಿರಿ.

ಬೆಳ್ಳುಳ್ಳಿ ರಸವನ್ನು ಎಷ್ಟು ದಿನಕ್ಕೊಮ್ಮೆ ಬಳಸಬಹುದು? ಈ ರಸವನ್ನು ವಾರಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಳಸಿ. ಒಂದು ತಿಂಗಳು ಇದನ್ನು ಸಮರ್ಪಕವಾಗಿ ಬಳಸಿದ ನಂತರ ನೀವು ಕೂದಲು ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣಬಹುದು. ಬೆಳ್ಳುಳ್ಳಿ ರಸ ಹೇಗೆ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ? ಇದಕ್ಕೆ ಕಾರಣ ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್ ಎಂಬ ಅಂಶವಾಗಿದೆ.


ಈ ಅಂಶವು ನಿಮ್ಮ ಕೂದಲ ಬುಡಕ್ಕೆ ಹಿಮೋಗ್ಲೋಬಿನ್ ಪ್ರಸಾರವನ್ನು ಹೆಚ್ಚಿಸುತ್ತದೆ, ಹೀಗೆ ಇದು ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯಲ್ಲಿ ಅಧಿಕ ಪ್ರಮಾಣದ ತಾಮ್ರದ ಅಂಶ ಇರುತ್ತದೆ, ಇದು ಕೂದಲು ದಪ್ಪಗೆ ಮತ್ತು ಆರೋಗ್ಯಕರವಾಗಿರುವಂತೆ ಮಾಡಲು ಸಹಕರಿಸುತ್ತದೆ. ಈಗ ಗೊತ್ತಾಯಿತಲ್ಲವೇ ಬೆಳ್ಳುಳ್ಳಿಯ ಮಹಾತ್ಮೆ ಇದನ್ನು ಇಂದೇ ಪ್ರಯತ್ನಿಸಿ ನೋಡಿ.
English summary

Garlic Juice For Hair Regrowth: 1 Week Remedy

Garlic juice for hair fall has been used over centuries. In ancient times, people used this pungent herb to treat hair fall, scalp infections and even dandruff. According to experts, it is suggested to use this effective remedy twice a week if hair fall is extremely bad and uncontrollable.
Story first published: Sunday, December 6, 2015, 10:55 [IST]
X
Desktop Bottom Promotion