For Quick Alerts
ALLOW NOTIFICATIONS  
For Daily Alerts

ಸ್ಟ್ರಾಬೆರಿಯಿಂದ ಪಡೆಯಿರಿ ಸ್ಟ್ರಾಂಗ್ ಕೂದಲು

By Su.Ra
|

ಹಣ್ಣುಗಳು ನಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಕೂದಲು, ಚರ್ಮ, ಮತ್ತು ದೇಹದ ಸಂಪೂರ್ಣ ಸ್ವಾಸ್ಥ್ಯ ಕಾಪಾಡುವಲ್ಲಿ ಹಣ್ಣುಗಳ ಪಾತ್ರ ಪ್ರಮುಖವಾದದ್ದು. ಎಲ್ಲಾ ರೀತಿಯ ಹಣ್ಣುಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತೆ. ಆದ್ರೆ ಕೆಲವು ಹಣ್ಣುಗಳು ಪ್ರದೇಶಾವಾರು ಬೆಳೆಯೋದ್ರಿಂದಾಗಿ ಕೈಗೆಟುಕುವ ಬೆಲೆಯಲ್ಲಿ ಸಿಗೋದು ಸ್ವಲ್ಪ ಕಷ್ಟವೇ.. ಅದ್ರಲ್ಲೂ ಕರ್ನಾಟಕದಲ್ಲಿ ಸ್ಟ್ರಾಬೆರಿ ಹಣ್ಣುಗಳು ಸ್ವಲ್ಪ ಕಾಸ್ಲ್ಟಿಯೇ ಆಗಿರುತ್ತೆ. ದುಬಾರಿ ಅನ್ನಿಸಿದ್ರೂ ಇವು ನಮ್ಮ ಸೌಂದರ್ಯ ವರ್ಧನೆಯಲ್ಲಿ ಸಾಕಷ್ಟು ಮಹತ್ವ ಪಡೆದಿದೆ ಅಂದ್ರೆ ನೀವು ನಂಬಲೇಬೇಕು.

ಕೂದಲುದುರುವ ಸಮಸ್ಯೆ, ತಲೆಹೊಟ್ಟು ಯಾವ ಮಹಿಳೆಯರಿಗೆ ಇರಲ್ಲ ಹೇಳಿ. ಹುಡುಕಿದ್ರೆ ಮನೆಗೊಬ್ಬರಿಗಂತೆ ಪ್ರತಿಮನೆಯಲ್ಲೂ ಕೂದಲಿನ ಸಮಸ್ಯೆಯಿಂದ ಬಳಲುವ ಮಹಿಳೆ ಸಿಕ್ಕೇ ಸಿಗ್ತಾರೆ. ಪ್ರತಿದಿನವೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ತಲೆಕೂದಲಿನ ಸಮಸ್ಯೆಗೆ ಪರಿಹಾರ ಹುಡುಕುವ ಗೋಜಿನಲ್ಲಿ ಬ್ಯುಸಿ ಆಗಿರುವ ಮಹಿಳೆಯರು ಅನೇಕರು. ಅಂತ ಮಹಿಳೆಯರಿಗೆ ಈ ಲೇಖನ ಒಂದು ಕೊಡುಗೆ. ಕೂದಲಿನ ಸಮಸ್ಯೆಗೆ ಸ್ಟ್ರಾಬೆರಿ ಹಣ್ಣಿನ ಬಳಕೆ ಹೇಗೆ ಅನ್ನೋದನ್ನು ತಿಳಿಬೇಕು ಅಂದ್ರೆ ನೀವು ಮುಂದೆ ಓದಲೇಬೇಕು..

ಕೂದಲುದುರುವಿಕೆ ತಡೆಗೆ ಸ್ಟ್ರಾಬೆರಿ

ಕೂದಲುದುರುವಿಕೆ ತಡೆಗೆ ಸ್ಟ್ರಾಬೆರಿ

ಕೂದಲುದುರುವುದು ಮಹಿಳೆಯರಿಗೆ ಕಾಡುವ ಒಂದು ಸಾಮಾನ್ಯ ಸಮಸ್ಯೆ ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ಕಬ್ಬಿಣದ ಅಂಶವನ್ನು ಹೀರಿಕೊಂಡು ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಯಾರು ಪ್ರತಿದಿನವೂ ನನ್ನ ಕೂದಲು ಅಷ್ಟು ಉದುರಿತು ಇಷ್ಟು ಉದುರಿತು ಅಂತ ಚಿಂತಿಸಿ ಬೇಸತ್ತಿದ್ದೀರೋ ಅಂತವರಿಗಾಗಿ ಇರುವ ಪರಿಹಾರ ಸ್ಟ್ರಾಬೆರಿ ಹೇರ್ ಪ್ಯಾಕ್.

ಬೇಕಾಗುವ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡುವ ವಿಧಾನ

*ಎರಡು ಸ್ಟ್ರಾಬೆರಿ ಹಣ್ಣುಗಳು( ಕೂದಲು ಉದ್ದ ಇರುವವರು ಹೆಚ್ಚು ಬಳಸ್ಬಹುದು)

*ಕೊಬ್ಬರಿ ಎಣ್ಣೆ ( ನಾಲ್ಕರಿಂದ ಐದು ಸ್ಪೂನ್)

*ಜೇನುತುಪ್ಪ ( ಒಂದು ಸ್ಪೂನ್)

*ಸ್ಟ್ರಾಬೆರಿ ಹಣ್ಣುಗಳನ್ನು ಮೊದಲು ಸ್ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ, ಕೂದಲಿನ ಸ್ಕ್ಯಾಲ್ಪ್ ಗೆ ಹಚ್ಚಿ ಇಪತ್ತು ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳಿಯಿರಿ. ಇದು ನಿಮ್ಮ ಕೂದಲಿನ ಬುಡವನ್ನು ಗಟ್ಟಿಗೊಳಿಸಿ ಕೂದಲುದುರುವ ಸಮಸ್ಯೆಗೆ ಮುಕ್ತಿ ನೀಡುವಲ್ಲಿ ನೆರವಾಗಲಿದೆ.

ತಲೆಹೊಟ್ಟು ನಿವಾರಕ ಸ್ಟ್ರಾಬೆರಿ

ತಲೆಹೊಟ್ಟು ನಿವಾರಕ ಸ್ಟ್ರಾಬೆರಿ

ಸರಿಯಾದ ಸಮಯಕ್ಕೆ ಡ್ಯಾಂಡ್ರಫ್ ಗೆ ಚಿಕಿತ್ಸೆ ಮಾಡದೇ ಇದ್ರೆ ಅದು ಮುಂದೆ ನಿಮ್ಮ ಕೂದಲಿಗೆ ವಿಪರೀತ ಹಾನಿ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.ಸ್ಟ್ರಾಬೆರಿಯಲ್ಲಿರುವ ನ್ಯೂಟ್ರಿಯಂಟ್ ಗಳು ನಿಮ್ಮ ಕೂದಲಿಗೆ ಸರಿಯಾದ ಪೋಷಣೆ ನೀಡಿ ಆರೋಗ್ಯಯುತವಾಗಿ ಮಾಡುವುದು ಅಲ್ಲದೇ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತೆ.

ಬೇಕಾಗುವ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡುವ ವಿಧಾನ

ಮೂರರಿಂದ ನಾಲ್ಕು ಸ್ಟ್ರಾಬೆರಿ ( ನಿಮ್ಮ ಕೂದಲು ಎಷ್ಟು ಉದ್ದ ಇದೆ ಅನ್ನೋದ್ರ ಆಧಾರದ ಮೇಲೆ ಹೆಚ್ಚು ಹಣ್ಣುಗಳನ್ನು ಬಳಕೆ ಮಾಡಬಹುದು)

ಒಂದು ಮೊಟ್ಟೆಯ ಬಿಳಿಯ ಭಾಗ

ಕೆಲವು ಹನಿಗಳಷ್ಟು ಆಲಿವ್ ಆಯಿಲ್

ಸ್ಟ್ರಾಬೆರಿಯನ್ನು ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಳಿ. ಅದಕ್ಕೆ ಮೊಟ್ಟೆಯ ಬಿಳಿಯ ಭಾಗ ಮತ್ತು ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣವನ್ನು ಕೂದಲಿಗೆ ಹಚ್ಚಿ ಪ್ಯಾಕ್ ಮಾಡ್ಕೊಂಡು 15 ನಿಮಿಷ ಹಾಗೆಯೇ ಬಿಡಿ. ನಂತ್ರ ಶಾಂಪ್ಯೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ. ಬೆಳಿಗ್ಗೆ ಸ್ನಾನಕ್ಕೂ ಮುನ್ನ ವಾರಕ್ಕೆ ಮೂರು ಬಾರಿ ಇದನ್ನು ರಿಪೀಟ್ ಮಾಡಿ. ಇದು ಡ್ಯಾಂಡ್ರಫ್ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ. ಅಷ್ಟೇ ಅಲ್ಲ ವೀಕ್ ಆಗಿರುವ ಕೂದಲನ್ನು ಸ್ಟ್ರಾಂಗ್ ಮಾಡುತ್ತೆ.

ಕೂದಲಿನಲ್ಲಿ ಫಂಗಲ್‌ಗಳು ಬೆಳವಣಿಗೆ ಹೊಂದುವುದನ್ನು ನಿಯಂತ್ರಿಸುತ್ತೆ

ಕೂದಲಿನಲ್ಲಿ ಫಂಗಲ್‌ಗಳು ಬೆಳವಣಿಗೆ ಹೊಂದುವುದನ್ನು ನಿಯಂತ್ರಿಸುತ್ತೆ

ಸ್ಟ್ರಾಬರಿಯಲ್ಲಿ ಮೆಗ್ನೀಷಿಯಂ ಅಂಶಗಳು ಹೇರಳವಾಗಿರುತ್ತೆ.ಸ್ಟ್ರಾಬೆರಿಯನ್ನು ಹೆಚ್ಚಾಗಿ ಆಯಿಲಿ ಮತ್ತು ಗ್ರೀಸಿಯಾಗಿರುವ ಕೂದಲಿಗೆ ಬಳಕೆ ಮಾಡಲಾಗುತ್ತೆ.ಮಾಯ್ಚರೈಸರ್ ಗಳನ್ನು ಬಳಕೆ ಮಾಡದೇ ಹಾಗೆಯೇ ಕೇವಲ ಸ್ಟ್ರಾಬೆರಿ ಹಾಕಿ ಪ್ಯಾಕ್ ತಯಾರಿಸಿಕೊಂಡ್ರೆ ಕೂದಲು ಹೆಚ್ಚು ಡ್ರೈ ಆಗುವ ಸಾಧ್ಯತೆ ಇರುತ್ತೆ. ಹಾಗಾಗಿ ತೀರಾ ಶುಷ್ಕ ಕೂದಲಿರುವವರು ಇದನ್ನು ಬಳಕೆ ಮಾಡದೇ ಇರೋದು ಒಳಿತು. ಬಳಕೆ ಮಾಡುವುದಾದರೆ ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್ ಇತ್ಯಾದಿ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳೋದು ಒಳ್ಳೇದು.

ಬೇಕಾಗುವ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು ಮತ್ತು ಪ್ಯಾಕ್ ಮಾಡುವ ವಿಧಾನ

*ಸ್ಟ್ರಾಬೆರಿ - ಐದರಿಂದ ಆರು ಹಣ್ಣುಗಳು

*ಅವಕಾಡೋ ಪೇಸ್ಟ್ - ಒಂದು ಹಣ್ಣಿನ ತಿರುಳು

*ಕೊಬ್ಬರಿ ಎಣ್ಣೆ - ಮೂರರಿಂದ ನಾಲ್ಕು ಸ್ಪೂನ್

ಜೇನುತುಪ್ಪ- ಒಂದು ಸ್ಪೂನ್

ಮಾಡುವ ವಿಧಾನ

ಮಾಡುವ ವಿಧಾನ

ಮೊದಲು ಸ್ಟ್ರಾಬೆರಿ ಹಣ್ಣುಗಳನ್ನು ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಳಿ. ಅದ್ರ ಜೊತೆಗೆ ಚೆನ್ನಾಗಿ ಬಲಿತಿರುವ ಅವಕಾಡೋ ಅಥ್ವಾ ಬೆಣ್ಣೆಹಣ್ಣನ್ನು ತೆಗೆದುಕೊಂಡು ಅದ್ರ ತಿರುಳನ್ನು ಚೆನ್ನಾಗಿ ಸ್ಮ್ಯಾಶ್ ಮಾಡ್ಕೊಳ್ಳಿ. ಈ ಎರಡು ಪೇಸ್ಟನ್ನು ಮಿಕ್ಸ್ ಮಾಡಿ. ನಂತ್ರ ಅದಕ್ಕೆ ಕೊಬ್ಬರಿ ಎಣ್ಣೆ ಇಲ್ಲವೇ ನಿಮ್ಗೆ ಇಷ್ಟವಾಗಿರುವ ಬೇರೆ ಯಾವುದೇ ಎಣ್ಣೆ ಉದಾಹರಣೆಗೆ ಹರಳೆಣ್ಣೆ, ಆಲಿವ್ ಆಯಿಲ್ ನ್ನೂ ಕೂಡ ಸೇರಿಸಿಕೊಳ್ಳಬಹುದು. ಜೇನುತುಪ್ಪ ಒಂದು ಸ್ಪೂನ್ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕೂದಲಿನ ಸ್ಕ್ಯಾಲ್ಪ್ ಗೆ ಮತ್ತು ಕೂದಲಿಗೆ ಅಪ್ಲೈ ಮಾಡಿ 20 ರಿಂದ 30 ನಿಮಿಷ ಹಾಗೆಯೇ ಬಿಡಿ. ನಂತ್ರ ಹದವಾಗಿರುವ ಬಿಸಿನೀರಿನಲ್ಲಿ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ನಿಮ್ಮ ತಲೆಯಲ್ಲಿ ಫಂಗಲ್ ಗಳು ಬೆಳವಣಿಗೆ ಹೊಂದಿ ಕೂದಲಿಗೆ ಆಗುವ ಹಾನಿ ನಿಯಂತ್ರಣಕ್ಕೆ ಬರುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ..

ಮಾಡುವ ವಿಧಾನ

ಮಾಡುವ ವಿಧಾನ

ಒಟ್ಟಿನಲ್ಲಿ ಸ್ಟ್ರಾಬೆರಿ ಹಣ್ಣುಗಳು ಕೂದಲಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತೆ ಅನ್ನೋದು ಮಾತ್ರ ಸತ್ಯ. ನಿಮ್ಗೂ ಕೂದಲಿನ ಸಮಸ್ಯೆ ಇದ್ದಲ್ಲಿ, ಈ ಪ್ಯಾಕ್ ಗಳನ್ನು ಟ್ರೈ ಮಾಡಿ ನೋಡಿ. ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ನೈಸರ್ಗಿಕ ಪ್ಯಾಕ್ ಗಳಾಗಿರೋದ್ರಿಂದ ಯಾವುದೇ ಆತಂಕವಿಲ್ಲದೆ ನೀವು ಇವುಗಳನ್ನು ಟ್ರೈ ಮಾಡಬಹುದು..

English summary

Best Benefits Of Strawberries For Hair care

Weekends are always a time for face masks and hair masks. We can easily get luscious and juicy red strawberries these days, so why not take advantage of this tiny fruit? yes read a lot about the benefits of this tiny fruit for hair, so thought of giving it a try.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more