For Quick Alerts
ALLOW NOTIFICATIONS  
For Daily Alerts

ಸದೃಢ ಕೂದಲಿಗಾಗಿ, ಅಡುಗೆ ಸೋಡಾದ ಶಾಂಪೂ!

By Manohar
|

ಕೂದಲಿನ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗಿದೆ. ತಲೆ ಹೊಟ್ಟು, ತಲೆ ಕೂದಲು ಉದುರುವಿಕೆ, ತಲೆ ಕೂದಲು ನೆರೆಯುವುದು ಇತ್ಯಾದಿ ಸಮಸ್ಯೆಗಳು ತಲೆ ಕೂದಲನ್ನು ಹಾಳು ಮಾಡಿಬಿಡುತ್ತವೆ. ಇವುಗಳಿಂದ ಪಾರಾಗಲು ನಾವು ಹಲವಾರು ಔಷಧಿಗಳನ್ನು ಮತ್ತು ಪರಿಹಾರಗಳನ್ನು ಹುಡುಕುತ್ತಾ ಇರುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಸಹ ದೊರೆಯುತ್ತವೆ.

ಇದನ್ನು ಬಳಸಿ ಅವುಗಳಿಂದ ಅಡ್ಡ ಪರಿಣಾಮಗಳನ್ನು ಅನುಭವಿಸುವ ಬದಲಿಗೆ, ಸುಲಭವಾದ ಮತ್ತು ಸುರಕ್ಷಿತವಾದ ಮನೆ ಮದ್ದುಗಳನ್ನು ಬಳಸಿ ಕೂದಲನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಿ. ಅಂತಹ ಮನೆ ಮದ್ದುಗಳಲ್ಲಿ ಇಂದು ನಾವು ನಿಮಗೆ ಹೇಳಲು ಹೋಗುತ್ತಿರುವ ಮನೆ ಮದ್ದು ಬೇಕಿಂಗ್ ಸೋಡಾ.

ಹೌದು ಅಡುಗೆ ಸೋಡಾವು ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಇದು ಒಂದು ಸ್ವಾಭಾವಿಕ ಶಾಂಪೂವಿನಂತೆ ಸಹ ನಿಮ್ಮ ನೆರವಿಗೆ ಬರುತ್ತದೆ. ನೀವು ಬಳಸುವ ಮಾಮೂಲಿ ಶಾಂಪೂಗೆ ಬದಲಾಗಿ ಇದನ್ನು ಬಳಸಿ, ಹೊಳಪಿನಿಂದ ಕೂಡಿದ ಮತ್ತು ಸಿಕ್ಕು ರಹಿತವಾದ ಕೂದಲು ನಿಮ್ಮದಾಗುತ್ತದೆ. ಅಲ್ಲದೆ, ಇದು ಕೂದಲಿನ ಬುಡದಲ್ಲಿ ಉಂಟಾಗುವ ಕೆಲವೊಂದು ಇನ್‌ಫೆಕ್ಷನ್‌ಗಳನ್ನು ಸಹ ದೂರ ಮಾಡುತ್ತದೆ. ಈ ಇನ್‌ಫೆಕ್ಷನ್‌ಗಳು ನಿಮ್ಮ ತಲೆಯಲ್ಲಿ ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ತುರಿಕೆಯನ್ನುಂಟು ಮಾಡುತ್ತವೆ.

Baking Soda Shampoo For Shiny And Strong Hair

ಅಡುಗೆ ಸೋಡಾವನ್ನು ಬಳಸಿಕೊಂಡು ನಿಮ್ಮ ತಲೆಯನ್ನು ತೊಳೆದುಕೊಳ್ಳುವಾಗ ನೊರೆ ಬರುವುದಿಲ್ಲ ಎಂಬುವುದೇ ಇದರ ವಿಶೇಷ....ಆದರೆ ಇದರಿಂದ ನಿಮ್ಮ ಕೂದಲು ಸುಂದರವಾಗಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಇದಕ್ಕಾಗಿ ಬೇಕಿಂಗ್ ಸೋಡಾವನ್ನು ಒಂದೆರಡು ದಿನ ಬಳಸಿ ನೀವು ಸ್ನಾನ ಮಾಡಬೇಕಾಗುತ್ತದೆ ಅಷ್ಟೇ. ಶಾಂಪೂವಿನಲ್ಲಿರುವ ರಾಸಾಯನಿಕಗಳಿಗಿಂತ ಬೇಕಿಂಗ್ ಸೋಡಾವು ಒಳ್ಳೆಯದು ಎಂದು ಹೇಳಬಹುದು. ಜೊತೆಗೆ ಇದು ಕಡಿಮೆ ಬೆಲೆಗೆ ಸಹ ದೊರೆಯುತ್ತದೆ. ಬನ್ನಿ ಬೇಕಿಂಗ್ ಸೋಡಾದಿಂದ ದೊರೆಯುವ ಪ್ರಯೋಜನಗಳನ್ನು ಮತ್ತಷ್ಟು ತಿಳಿದುಕೊಳ್ಳೋಣ.

ಅಡುಗೆ ಸೋಡಾ ಮತ್ತು ಆಪಲ್ ಸಿಡೆರ್ ವಿನೇಗರ್
ಟೇಬಲ್ ಚಮಚ ಆಪಲ್ ಸಿಡೆರ್ ವಿನೇಗರ್ ಜೊತೆಗೆ 3 ಟೇಬಲ್ ಚಮಚ ನೀರನ್ನು ಬೆರೆಸಿಕೊಳ್ಳಿ. ಇದಕ್ಕೆ 1 ಟೇಬಲ್ ಚಮಚ ಅಡುಗೆ ಸೋಡಾವನ್ನು ಹಾಕಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಈ ಪೇಸ್ಟಿಗೆ ನಿಮಗೆ ಅಗತ್ಯವಾದಲ್ಲಿ ಹೆಚ್ಚಿಗೆ ನೀರನ್ನು ಸಹ ಹಾಕಬಹುದು. ಇದನ್ನು ನಿಮ್ಮ ಬೆರಳುಗಳ ಸಹಾಯದಿಂದ ಕೂದಲು ಬುಡಕ್ಕೆ ಲೇಪಿಸಿ. 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ.

ಅಡುಗೆಸೋಡಾ, ಲಿಂಬೆ ಮತ್ತು ಎಸೆನ್ಶಿಯಲ್ ಆಯಿಲ್


ಈ ಮೇಲಿನ ವಸ್ತುಗಳನ್ನು ಹಾಕಿ ತಯಾರಿಸಲಾದ ಶಾಂಪೂವು ನಿಮ್ಮ ಒಣಕೂದಲಿಗೆ ಅತ್ಯುತ್ತಮ ಔಷಧಿಯಾಗಿರುತ್ತದೆ. ಒಂದು ವೇಳೆ ನಿಮಗೆ ಒಣ ಮತ್ತು ಸಿಕ್ಕು ಸಿಕ್ಕಾಗಿರುವ ಕೂದಲು ಇದ್ದಲ್ಲಿ, ಈ ಶಾಂಪೂವಿಗೆ ಲ್ಯಾವೆಂಡರ್, ಪೆಪ್ಪರ್‌ಮಿಂಟ್ ಅಥಾಅ ರೋಸ್ ಮೇರಿ ಎಣ್ಣೆಗಳಂತಹ ಎಸೆನ್ಶಿಯಲ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದು ಒಣ ತ್ವಚೆಗೆ ಹೇಳಿ ಮಾಡಿಸಿದ ಶಾಂಪೂವಾಗಿರುತ್ತದೆ. ಗೌರವರ್ಣದ ತ್ವಚೆಗಾಗಿ ಚಿಟಿಕೆಯಷ್ಟು ಅಡುಗೆ ಸೋಡಾ ಸಾಕು
ಬೇಕಿಂಗ್ ಸೋಡಾದ ಪ್ರಮಾಣವು ಇತರೆ ಪದಾರ್ಥಗಳ ಪ್ರಮಾಣಕ್ಕೆ ಸಮನಾಗಿರಬೇಕು.ಆದರೆ ಯಾವುದೇ ಕಾರಣಕ್ಕು ಎಸೆನ್ಶಿಯಲ್ ಎಣ್ಣೆಯನ್ನು ಬೆರೆಸಿಕೊಳ್ಳುವುದನ್ನು ಮರೆಯಬೇಡಿ. ಈ ಎಣ್ಣೆಗಳು ನಿಮ್ಮ ಕೂದಲನ್ನು ಮೃದು ಮಾಡುತ್ತವೆ, ಏಕೆಂದರೆ ಈ ಶಾಂಪೂವು ಮೊಯಿಶ್ಚರೈಸರ್ ನಂತೆ ಇವು ವರ್ತಿಸುತ್ತವೆ. ಅಲ್ಲದೆ ಇವು ಕೂದಲಿಗೆ ಒಳ್ಳೆಯ ಸುವಾಸನೆಯನ್ನು ಸಹ ನೀಡುತ್ತವೆ.

ಅಡುಗೆ ಸೋಡಾ, ಲಿಂಬೆ ಮತ್ತು ಎಸೆನ್ಶಿಯಲ್ ಆಯಿಲ್
ಈ ಮೇಲಿನ ವಸ್ತುಗಳನ್ನು ಹಾಕಿ ತಯಾರಿಸಲಾದ ಶಾಂಪೂವು ನಿಮ್ಮ ಒಣಕೂದಲಿಗೆ ಅತ್ಯುತ್ತಮ ಔಷಧಿಯಾಗಿರುತ್ತದೆ. ಒಂದು ವೇಳೆ ನಿಮಗೆ ಒಣ ಮತ್ತು ಸಿಕ್ಕು ಸಿಕ್ಕಾಗಿರುವ ಕೂದಲು ಇದ್ದಲ್ಲಿ, ಈ ಶಾಂಪೂವಿಗೆ ಲ್ಯಾವೆಂಡರ್, ಪೆಪ್ಪರ್‌ಮಿಂಟ್ ಅಥಾಅ ರೋಸ್ ಮೇರಿ ಎಣ್ಣೆಗಳಂತಹ ಎಸೆನ್ಶಿಯಲ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದು ಒಣ ತ್ವಚೆಗೆ ಹೇಳಿ ಮಾಡಿಸಿದ ಶಾಂಪೂವಾಗಿರುತ್ತದೆ. ಅಡುಗೆ ಸೋಡಾದ ಪ್ರಮಾಣವು ಇತರೆ ಪದಾರ್ಥಗಳ ಪ್ರಮಾಣಕ್ಕೆ ಸಮನಾಗಿರಬೇಕು.ಆದರೆ ಯಾವುದೇ ಕಾರಣಕ್ಕು ಎಸೆನ್ಶಿಯಲ್ ಎಣ್ಣೆಯನ್ನು ಬೆರೆಸಿಕೊಳ್ಳುವುದನ್ನು ಮರೆಯಬೇಡಿ. ಈ ಎಣ್ಣೆಗಳು ನಿಮ್ಮ ಕೂದಲನ್ನು ಮೃದು ಮಾಡುತ್ತವೆ, ಏಕೆಂದರೆ ಈ ಶಾಂಪೂವು ಮೊಯಿಶ್ಚರೈಸರ್ ನಂತೆ ಇವು ವರ್ತಿಸುತ್ತವೆ. ಅಲ್ಲದೆ ಇವು ಕೂದಲಿಗೆ ಒಳ್ಳೆಯ ಸುವಾಸನೆಯನ್ನು ಸಹ ನೀಡುತ್ತವೆ.

ಒಣ ಶಾಂಪೂ
ಒಂದು ವೇಳೆ ನಿಮಗೆ ತಲೆಯನ್ನು ತೊಳೆದುಕೊಂಡು ಅದನ್ನು ಒಣಗಿಸುವಷ್ಟು ಪುರುಸೊತ್ತು ಇಲ್ಲವಾದಲ್ಲಿ, ಎಣ್ಣೆಯಿರುವ ಕೂದಲಿನೊಂದಿಗೆ ಮನೆಯಿಂದ ಹೊರಗೆ ಹೋಗಬೇಡಿ. ಇದಕ್ಕಾಗಿ ನಿಮಗೆ ಒಂದು ಸರಳ ಉಪಾಯ ಇದೆ. ಅಡುಗೆ ಸೋಡಾದ ಜೊತೆಗೆ ಸ್ವಲ್ಪ ಬೇಬಿ ಪೌಡರನ್ನು ಬೆರೆಸಿಕೊಂಡು, ಅದನ್ನು ನಿಮ್ಮ ಕೂದಲ ಮೇಲೆ ಚಿಮುಕಿಸಿಕೊಳ್ಳಿ. ನಂತರ ಇದನ್ನು ಬಾಚಣಿಗೆಯಿಂದ ಬಾಚಿಕೊಳ್ಳಿ. ಇದು ನಿಮ್ಮ ತಲೆಕೂದಲಿನಲ್ಲಿರುವ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ ಮತ್ತು ಕೂದಲನ್ನು ಹೊಳಪಿನಿಂದ ಇರಿಸುತ್ತದೆ.

English summary

Baking Soda Shampoo For Shiny And Strong Hair

Baking soda has many uses, but do you know that you can use it for your hair as well? Baking soda removes dandruff, makes your hair shiny, cleanses your hair and scalp and also prevents hair fall due to an oily scalp. Baking soda also improves hair quality, and you can use it as a natural shampoo. Instead of your regular shampoo, use baking soda to get shiny and lustrous hair. It also kills certain scalp infections that may cause itching, dandruff and hair fall.
X
Desktop Bottom Promotion