For Quick Alerts
ALLOW NOTIFICATIONS  
For Daily Alerts

ಗುಂಗುರು ಕೂದಲಿನ ಆರೈಕೆಗೆ ಬರಿಯ ಐದು ನಿಮಿಷಗಳು

By Super
|

ಕೆಲವು ಫ್ಯಾಷನ್ ಗಳು ಎಂದಿಗೂ ಔಟ್ ಡೇಟೆಡ್ ಅಥವಾ ಅಂದ ಕಾಣುವುದಿಲ್ಲ ಎಂದಾಗುವುದಿಲ್ಲ. ಸದಾ ಕಾಲ ಡಿಮಾಂಡ್ ಇರುವ ಅದೆಷ್ಟೋ ಫ್ಯಾಷನ್ ವಿಧಾನಗಳಿವೆ. ಇದು ಕೂದಲಿನ ವಿಷಯದಲ್ಲೂ ಸತ್ಯ. ನೀಟಾಗಿ ತಲೆ ಬಾಚುವುದು ಹಳೆಯ ವಿಧಾನವಾಗಿದ್ದರೆ ಹೇರ್ ಸ್ಟ್ರೇಟನಿಂಗ್ ಇಂದಿನ ಯುಗದ ಹೊಸ ವಿಧಾನ. ಅಂದೂ ಇಂದೂ ಚಾಲ್ತಿಯಲ್ಲಿರುವ ಒಂದು ಕೇಶ ವಿನ್ಯಾಸ ಎಂದರೆ ಗುಂಗುರು ಕೂದಲು.

ಗುಂಗುರು ಕೂದಲು ಎಂದಿಗೂ ಔಟ್ ಆಫ್ ಫ್ಯಾಷನ್ ಆಗಿದ್ದಿಲ್ಲ. ಕೆಲವರಿಗೆ ಇದು ಸ್ವಾಭಾವಿಕವಾಗಿಯೇ ದೊರಕಿದ್ದರೆ ಇನ್ನೂ ಕೆಲವರು ಗುಂಗುರು ಕೂದಲು ಬೇಕು ಎಂದು ಅದೆಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ. ಅದೇನೆ ಇದ್ದರು ಗುಂಗುರು ಕೂದಲು ಇದರೆ ಆಗಲಿಲ್ಲ ಅವುಗಳ ಆರೈಕೆ ಹೇಗೆ ಎಂಬುದೂ ತಿಳಿದಿರಬೇಕು. ಕೂದಲನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡುವುದೂ ಒಂದು ಕಲೆ.

ಗುಂಗುರು ಕೂದಲಿನ ಆರೈಕೆ ನೇರವಾದ ಕೂದಲಿನ ಆರೈಕೆಯಂತಲ್ಲ. ಇದು ಕಷ್ಟದ ಕೆಲಸ. ಇದಕ್ಕೆ ಗುಂಗುರು ಕೂದಲಿನ ಬಗ್ಗೆ ಸರಿಯಾಗಿ ತಿಳಿದಿರುವುದು ಅಗತ್ಯ. ಹೀಗೆ ಮಾಡಿದರೆ ಆರೋಗ್ಯದ ಜೊತೆಗೆ ಕೂದಲಿನ ಅಂದ ಕೂಡ ಹೆಚ್ಚಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲದಲ್ಲಿ ಕೇಶ ರಕ್ಷಣೆ: ಮಾಡಲೇಬಾರದ ತಪ್ಪುಗಳು

ಅಂಗಡಿಗಳಲ್ಲಿ ವಿಚಾರಿಸಿದರೆ ಹತ್ತಾರು ತರಹದ ಲೇಪನಗಳು ಸಿಗಬಹುದು ಆದರೆ ಕೂದಲಿನ ಆರೋಗ್ಯದ ದೃಷ್ಟಿಯಿಂದ ಸ್ವಾಭಾವಿಕ ವಸ್ತುಗಳು ಉತ್ತಮ. ಎಂಟು ಚಮಚ ಕೆಮೆಲಿಯಾ ಎಣ್ಣೆ, ಒಂದು ಚಮಚ ಹರಳೆಣ್ಣೆ ಹಾಗೂ ಸಂಸ್ಕರಿಸದ ಅವಕಾಡೊ ಎಣ್ಣೆಯನ್ನು ಒಂದು ಬಾಟಲಿಯಲ್ಲಿ ಹಾಕಿ ಮಿಶ್ರಣ ಮಾಡಿಡಿ. ಇದನ್ನುನಿಯಮಿತವಾಗಿ ಬಳಸಿ ಮತ್ತು ನುಣುಪಾದ ಮತ್ತು ಆಕರ್ಷಕ ಕೂದಲನ್ನು ಪಡೆಯಿರಿ.

ಎಣ್ಣೆ ಹಚ್ಚುವುದು:

ಎಣ್ಣೆ ಹಚ್ಚುವುದು:

ನೇರವಾದ ಎಣ್ಣೆಗಿಂತ ಬೇಗನೆ ಗುಂಗುರು ಕೂದಲು ಒಣಗುವ ಕಾರಣ ಇವುಗಳಿಗೆ ಹೆಚ್ಚಿನ ಎಣ್ಣೆಯ ಅಗತ್ಯ ಇದೆ. ಇದಕ್ಕೆ ಕಾರಣ ಗುಂಗುರು ಆಕಾರ ಕೂದಲಿನ ಬುಡದಲ್ಲಿರುವ ಸ್ವಾಭಾವಿಕ ಎಣ್ಣೆಯ ಅಂಶವನ್ನು ಕೂದಲಿನ ತುದಿಯ ತನಕ ಬರಲು ಬಿಡುವುದಿಲ್ಲ. ಒಣ ಕೂದಲು ಯಾವತ್ತೂ ಆರೋಗ್ಯಕರವಲ್ಲ. ಇದು ಬಲಹೀನವಾಗಿರುತ್ತದೆ. ಇದಕ್ಕಾಗಿ ಆಲೀವ್ ಎಣ್ಣೆ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಇನ್ನಿತರ ಸ್ವಾಭಾವಿಕ ಎಣ್ಣೆಗಳನ್ನು ಹಚ್ಚಬಹುದು.

ಹೇರ್ ಪ್ಯಾಕ್ಸ್:

ಹೇರ್ ಪ್ಯಾಕ್ಸ್:

ಗುಂಗುರು ಕೂದಲಿನ ಆರೈಕೆಯ ಬಗ್ಗೆ ಹುಡುಕುತ್ತಾ ಹೋದಂತೆ ನಿಮಗೆ ಹೇರ್ ಪ್ಯಾಕ್ಸ್ ಸಿಕ್ಕೇ ಸಿಗುತ್ತದೆ. ಇದು ನಿಮ್ಮ ಅಡುಗೆಯ ಮನೆಯಲ್ಲೇ ಇದೆ. ಮೇಯನೇಸ್, ಮೊಟ್ಟೆ, ಹಾಲು, ಮೊಸರು, ಜೇನು ಮತ್ತು ಲಿಂಬೆ ಬಹಳ ಉತ್ತಮವಾದ ಹೇರ್ ಪ್ಯಾಕ್ಸ್ ಆಗಿದೆ.

ಶಾಂಪೂ:

ಶಾಂಪೂ:

ಆದಷ್ಟೂ ಕಡಿಮೆ ಶಾಂಪೂ ಬಳಸಿ. ಶಾಂಪೂವಿನ ಅಂಶ ನಮ್ಮ ಗುಂಗುರು ಕೂದಲಿನ ನಡುವೆ ಸಿಕ್ಕಿ ಇದು ಕೂದಲಿನ ಆರೋಗ್ಯವನ್ನು ಕೆಡಿಸುತ್ತದೆ. ಸ್ವಾಭಾವಿಕವಾದ ದಾರಿಗಳಿಂದ ಕೂದಲಿನ ಸ್ವಚ್ಛತೆಗೆ ಮುಂದಾಗಿ.

ಕಂಡೀಷನರ್:

ಕಂಡೀಷನರ್:

ಕಂಡೀಷನರ್ ಗುಂಗುರು ಕೂದಲಿಗೆ ಖಂಡಿತವಾಗಿ ಬೇಕಾಗುತ್ತದೆ. ಇಲದಿದ್ದಲ್ಲಿ ಕೂದಲು ಅಂದವಾಗಿಯೂ ಕಾಣುವುದಿಲ್ಲ ಆರೋಗ್ಯವೂ ಸರಿಯಾಗಿರುವುದಿಲ್ಲ. ಇದಕ್ಕಾಗಿ ಸ್ವಾಭಾವಿಕವಾಗಿರುವ ಕೆಲವು ವಸ್ತುಗಳೆಂದರೆ ಜೇನುತುಪ್ಪ, ಮೊಟ್ಟೆಗಳು, ಸೇಬು ಹಣ್ಣಿನಿಂದ ಮಾಡಿದ ವಿನೆಗರ್, ಚಹಾ.

ಬಾಚುವುದು:

ಬಾಚುವುದು:

ಬಾಚಣಿಗೆಯ ಬಗ್ಗೆಯೂ ಬಹಳಷ್ಟು ಜಾಗೃತೆ ವಹಿಸಬೇಕಾಗುತ್ತದೆ. ದೊಡ್ಡ ಹಲ್ಲಿನ ಬಾಚಣಿಗೆಯನ್ನೇ ಆರಿಸಿಕೊಳ್ಳಿ. ಇದು ಕೂದಲಲ್ಲಿ ಸಿಕ್ಕಿಹಾಕಿಕೊಂಡು ಕೂದಲನ್ನು ಉದುರಿಸುವ ಹಾಗೆ ಇರಬಾರದು.

ಈಗ ನಿಮ್ಮನ್ನು ಯಾರಾದರೂ ಗುಂಗುರು ಕೂದಲಿದೆ ಏನು ಮಾಡುತ್ತೀ ಎಂದು ಕೇಳಿದರೆ ಉತ್ತರ ನಿಮ್ಮ ಬಳಿ ಸಿದ್ಧವಿರುತ್ತದೆ. ಅಲ್ಲವೇ?

English summary

Taming Curly Hair In 5 minutes

One hairstyle that never goes out of fashion is curly hair. Some get it as a gift from god while others make efforts towards getting those curly locks. Whatever be the case it is essential to know how to manage curly hair.
Story first published: Monday, January 20, 2014, 12:03 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more