ಕೂದಲು ಹೊಳೆಯುವಂತಾಗಲು ಮೊಟ್ಟೆಯ ಪಾತ್ರವೇನು ಗೊತ್ತೇ?

Posted By:
Subscribe to Boldsky

ಜಗತ್ತಿನ 60 ಶೇಕಡದಷ್ಟು ಸಾಮಾನ್ಯ ಜನರಿಗೆ ಒರಟು ಮತ್ತು ಒಣ ಕೂದಲು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದು ವಾತಾವರಣದ ಕಲುಷಿತ ವಾತಾವರಣದಿಂದ, ಹಾನಿಕಾರಕ ರಾಸಾಯನಿಕಗಳು, ಒತ್ತಡವಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ತಿನಿಸುಗಳ ಹವ್ಯಾಸದಿಂದಾಗಿ ಈ ತೊಂದರೆ ಕಂಡುಬರುತ್ತದೆ.

ಕೂದಲನ್ನು ಮೃದು ಮತ್ತು ಸಿಲ್ಕಿಯನ್ನಾಗಿ ಮಾಡಲು ಹಲವಾರು ಉತ್ಪನ್ನಗಳನ್ನು ಬಳಸಬಹುದಾಗಿದ್ದು ಇದಲ್ಲದೆ ಮೊಟ್ಟೆಯನ್ನು ಕೂಡ ಕೂದಲನ್ನು ಮೃದು ಮತ್ತು ನುಣುಪಾಗಿಸಲು ಆಗಾಗ್ಗೆ ಬಳಸಬಹುದು.

ಆದರೆ ಮೊಟ್ಟೆಯನ್ನು ಸರಿಯಾದ ವಿಧಾನದಲ್ಲಿ ಕೂದಲಿಗೆ ಹಚ್ಚಿಕೊಳ್ಳುವುದು ಅತ್ಯವಶ್ಯಕವಾಗಿದೆ. ಮೊಟ್ಟೆಯನ್ನು ಬೇರೆ ಉತ್ಪನ್ನಗಳೊಂದಿಗೆ ಮಿಶ್ರಗೊಳಿಸಿ ಬಳಸುವುದು ಕೂಡ ಕೂದಲಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.

Get Smooth Hair With Eggs

ನಿಮ್ಮ ಕೂದಲನ್ನು ಮೃದು ಮತ್ತು ಕಾಂತಿಯುಕ್ತಗೊಳಿಸಲು ಮೊಟ್ಟೆಯನ್ನು ಹೇಗೆ ಬಳಸಬಹುದೆಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಕೂದಲನ್ನು ಮೊಟ್ಟೆಯು ದೃಢಗೊಳಿಸಿ ಸುಂದರಗೊಳಿಸುತ್ತದೆ ಮತ್ತು ಕಾಂತಿಯುಕ್ತಗೊಳಿಸುತ್ತದೆ. ಹಾಗಿದ್ದರೆ ಮೊಟ್ಟೆಯನ್ನು ಇತರ ಉತ್ಪನ್ನಗಳೊಂದಿಗೆ ಬಳಸಿ ಹೇರ್‌ಪ್ಯಾಕ್ ಮಾಡುವುದು ಹೇಗೆಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಮೊಟ್ಟೆ ಪ್ಯಾಕ್

ಮೊಟ್ಟೆಗಳಿಂದ ನಿಮ್ಮ ಕೂದಲನ್ನು ಮೃದುಗೊಳಿಸಲು ಮೊಟ್ಟೆ ಪ್ಯಾಕ್ ಉತ್ತಮವಾದುದು. ಇದು ನಿಮ್ಮ ಹಾನಿಯುತ ಕೂದಲನ್ನು ಆರೋಗ್ಯವಂತಗೊಳಿಸಿ ಕೂದಲನ್ನು ಸಂರಕ್ಷಿಸುತ್ತದೆ. ಆದ್ದರಿಂದ ವಾರಕ್ಕೊಮ್ಮೆ ಮೊಟ್ಟೆ ಮಾಸ್ಕ್ ಅನ್ನು ಕೂದಲಿಗೆ ಬಳಸುವುದು ನಿಮ್ಮ ಕೂದಲನ್ನು ಮೃದುಗೊಳಿಸುತ್ತದೆ. ಮೊಟ್ಟೆಯ ಪ್ಯಾಕ್‌ಗಾಗಿ, ನೀವು ಮೊಟ್ಟೆಯನ್ನು ಕ್ರೀಮ್‌ನೊಂದಿಗೆ ಮಿಶ್ರಗೊಳಿಸಬೇಕು. ಇವರೆಡರ ದಪ್ಪನೆಯ ಮಿಶ್ರಣವನ್ನು ಮಾಡಿಕೊಳ್ಳಿ. ಬ್ರಶ್ ಬಳಸಿ ಕೂದಲಿನ ಪ್ರತಿಯೊಂದು ಎಳೆಗೂ ಹಚ್ಚಿ. ಈ ಪ್ಯಾಕ್ ಅನ್ನು ಒಂದು ಗಂಟೆಯವರೆಗೆ ಕೂದಲಿನಲ್ಲಿ ಹಾಗೆಯೇ ಬಿಡಿ. ಇದು ನಿಮ್ಮ ಕೂದಲನ್ನು ಮೃದು ಮತ್ತು ಕಾಂತಿಯುಕ್ತಗೊಳಿಸುತ್ತದೆ.

ಮಹಿಳೆಯರೇ ನಿಮ್ಮ ಕೂದಲು ಉದುರುವಿಕೆಗೆ ಕಾರಣ ಏನು ಗೊತ್ತೇ?

ಮೊಟ್ಟೆ ಹಾಗೂ ಶ್ಯಾಂಪೂ

ಕೆಲವರು ಮೊಟ್ಟೆಯ ವಾಸನೆಗೆ ಅದನ್ನು ಇಷ್ಟಪಡುವುದಿಲ್ಲ. ನೀವು ಇದಕ್ಕಾಗಿ ಒಂದು ಸುರಕ್ಷಿತ ವಿಧಾನವನ್ನು ಅನುಸರಿಸಬಹುದು, ಈ ಸಮಸ್ಯೆಯನ್ನು ಹೋಗಲಾಡಿಸಲು ಶ್ಯಾಂಪೂವನ್ನು ಮೊಟ್ಟೆಯೊಂದಿಗೆ ನಿಮಗೆ ಮಿಶ್ರಗೊಳಿಸಬಹುದು. ಶ್ಯಾಂಪೂ ಹಾಗೂ ಮೊಟ್ಟೆ ಬೆರೆಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಹೀಗೂ ಕೂಡ ಮೊಟ್ಟೆ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಬಳಸಬಹುದು.

ಮೊಟ್ಟೆ ಹಾಗೂ ಮೆಹೆಂದಿ

ನಿಮ್ಮ ಕೂದಲನ್ನು ಮೃದು ಹಾಗೂ ಕಾಂತಿಯುಕ್ತಗೊಳಿಸಲು ಮೆಹೆಂದಿವನ್ನೂ ಕೂದಲಿಗೆ ಹಚ್ಚಿಕೊಳ್ಳಬಹುದು. ನಿಮ್ಮ ಬಿಳಿ ಕೂದಲನ್ನು ಬಣ್ಣಬರುವಂತೆ ಮಾಡಲು ಮೆಹೆಂದಿಯನ್ನು ಬಳಸುತ್ತಾರೆ. ಮೆಹೆಂದಿ ಹಾಗೂ ಮೊಟ್ಟೆಯನ್ನು ಬಳಸಿ ನಿಮ್ಮ ಕೂದಲನ್ನು ಮೃದುವಾಗಿಸುವ ಹೇರ್ ಪ್ಯಾಕ್ ಅನ್ನು ನಿಮಗೆ ಸಿದ್ಧಪಡಿಸಬಹುದು. ಈ ಮಿಶ್ರಣವನ್ನು ಪೇಸ್ಟ್ ತರ ಮಾಡಿಕೊಂಡು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ. ಇದರಿಂದ ನಿಮ್ಮ ಕೂದಲು ಮೃದುಗೊಂಡು, ಸುಂದರವಾಗಿ ಹಾಗೂ ಕಾಂತಿಯುಕ್ತವಾಗುತ್ತದೆ.

ಮೊಟ್ಟೆ

ಮೊಟ್ಟೆಯನ್ನು ಹಾಗೆಯೇ ಬಳಸಿ ಕೂಡ ನಿಮ್ಮ ಕೂದಲನ್ನು ಮೃದುಗೊಳಿಸಬಹುದು. ನೀವು ಇದಕ್ಕಾಗಿ ಎರಡು ಮೊಟ್ಟೆಗಳನ್ನು ಒಡೆದು ಒಳಗಿನ ಭಾಗವನ್ನು ಪಾತ್ರೆಗೆ ಸುರಿದುಕೊಳ್ಳಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ 20-30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಅದನ್ನು ತೊಳೆಯಿರಿ. ನಿಮ್ಮ ಕೂದಲನ್ನು ಮೃದುಗೊಳಿಸುವ ಅತ್ಯಂತ ಸುಲಭದ ವಿಧಾನ ಇದಾಗಿದೆ. ಮೊಟ್ಟೆಯ ವಾಸನೆಯನ್ನು ನಿವಾರಿಸಲು ನೀವು ಉತ್ತಮ ಗುಣಮಟ್ಟದ ಶ್ಯಾಂಪೂವನ್ನು ಬಳಸಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

English summary

Get Smooth Hair With Eggs

There are many products that can be used to make hair smooth and silky. Out of these products, eggs are frequently used in making the hair smooth. But not many know how to make hair smooth with eggs. Just using eggs in any manner does not make your hair better.
Story first published: Monday, June 16, 2014, 10:38 [IST]
Please Wait while comments are loading...
Subscribe Newsletter