For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ ನೀವೇ ಶ್ಯಾಂಪೂ ತಯಾರಿಸಿ

|

ನೀವೇ ತಯಾರಿಸಿದ ಸೀಗೆಕಾಯಿ ಶ್ಯಾಂಪೂನಷ್ಟು ಪರಿಣಾಮಕಾರಿಯಾದ ಶ್ಯಾಂಪೂ ಮತ್ತೊಂದಿಲ್ಲ. ಈ ಶ್ಯಾಂಪೂ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಸೀಗೆಕಾಯಿ ಶ್ಯಾಂಪೂ ಬಳಸುವವರಿಗೆ ಯಾವುದೇ ರೀತಿಯ ಕೂದಲಿನ ಸಮಸ್ಯೆ ಕಂಡು ಬರುವುದಿಲ್ಲ.

ಸೀಗೆಕಾಯಿ ಶ್ಯಾಂಪೂ ಮಾಡುವ ವಿಧಾನ ನೋಡಿ ಇಲ್ಲಿದೆ:

Steps To Make Shikakai Shampoo

ಸೀಗೆಕಾಯಿ ಶ್ಯಾಂಪೂ ಮಾಡುವ ಸಾಮಾಗ್ರಿಗಳು
* ಸೀಗೆಕಾಯಿ ಅರ್ಧ ಕೆಜಿ
* ಮೆಂತೆ ಕಾಲು ಕೆಜಿ
* ಹೆಸರು ಕಾಳು 1/4 ಕೆಜಿ
* ಕರಿಬೇವಿನ ಎಲೆ 1 ಕಟ್ಟು
* ತುಳಸಿ ( ಎರಡು ಹಿಡಿಯಷ್ಟು)
* ಅಂಟ್ವಾಳ 100 ಗ್ರಾಂ

ತಯಾರಿಸುವ ವಿಧಾನ
ವಿಧಾನ 1:
* ಈ ಸಾಮಾಗ್ರಿಗಳನ್ನು ಬಿಸಿಲಿನಲ್ಲಿ 3-4 ದಿನ ಇಟ್ಟು ಒಣಗಿಸಿ. ಇವು ಒಣಗಿದ ನಂತರ ಪುಡಿ ಮಾಡಿಡಿ. ಸ್ನಾನ ಮಾಡುವಾಗ ಸ್ವಲ್ಪ ನೀರು ಹಾಕಿ ಕಲೆಸಿದರೆ ನೊರೆ ಉಂಟಾಗುತ್ತದೆ. ಇದರಿಂದ ತಲೆ ತೊಳೆಯಿರಿ.
* ಪುಡಿಯನ್ನು ನೀರಿನಲ್ಲಿ ಕಲೆಸಿ ತಲೆಗೆ ಹಚ್ಚಿ ಅರ್ಧ ಗಂಟೆ ಕಾಲ ಇಡಿ. ನಂತರ ತಣ್ಣೀರಿನಲ್ಲಿ ತಲೆ ತೊಳೆಯಿರಿ.
* ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಇಟ್ಟು ಬೇಕಾದಾಗ ಬಳಸುತ್ತಾ ಬಂದರೆ ವರ್ಷದವರೆಗೆ ಇಡಬಹುದು.

ವಿಧಾನ 2
ಈ ವಿಧಾನದಲ್ಲಿ ಹೆಸರುಕಾಳು ಹಾಕಬೇಡಿ, ಅದರ ಬದಲು ನೆಲ್ಲಿಕಾಯಿ ಹಾಕಿ ಹಾಗೂ ಉಳಿದ ಸಾಮಾಗ್ರಿಗಳನ್ನು ಎರಡು ಲೀಟರ್ ನೀರಿಗೆ ಹಾಕಿ 3 ಗಂಟೆಗಳ ನೆನೆ ಹಾಕಿ. ಆ ನೀರನ್ನು ಅರ್ಧವಾಗುಷ್ಟು ಹೊತ್ತು ಕುದಿಸಿ. ನಂತರ ಇದನ್ನು ಬಾಟಲಿನಲ್ಲಿ ತುಂಬಿ ಶ್ಯಾಂಪೂ ರೀತಿ ಬಳಸಬಹುದು.

ಈ ನೈಸರ್ಗಿಕ ಶ್ಯಾಂಪೂನ ಪರಿಣಾಮ ಕೂದಲಿನ ಮೇಲೆ
* ಸೀಗೆಕಾಯಿಯಲ್ಲಿ ವಿಟಮಿನ್ ಸಿ,ಡಿ ಇರುವುದರಿಂದ ಕೂದಲಿನ ಆರೊಗ್ಯಕ್ಕೆ ಒಳ್ಳೆಯದು.
* ಮೆಂತೆಯಲ್ಲಿ ನಿಕೋಟಿನ್ ಆಸಿಡ್, ಪ್ರೊಟೀನ್ ಇದ್ದು ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ.
* ಕರಿಬೇವಿನ ಎಲೆ ಕೂದಲಿಗೆ ಕಪ್ಪು ಬಣ್ಣವನ್ನು ನೀಡುತ್ತದೆ.
* ತುಳಸಿ ಕೂದಲು ಉದುರುವುದನ್ನು ತಡೆಗಟ್ಟುತ್ತದೆ ಹಾಗೂ ತಲೆ ಹೊಟ್ಟು ಬರುವುದಿಲ್ಲ.
* ಅಂಟ್ವಾಳ ಕೂದಲಿನಲ್ಲಿರುವ ಕೊಳೆಯನ್ನು ಹೋಗಲಾಡಿಸುವಲ್ಲಿ ಸಹಕಾರಿ.

English summary

Steps To Make Shikakai Shampoo | Tips For Hair Care | ನೀವೇ ಸೀಗೆಕಾಯಿ ಶ್ಯಾಂಪೂ ತಯಾರಿಸಬಹುದು | ಕೂದಲಿನ ಆರೈಕೆಗೆ ಕೆಲ ಸಲಹೆಗಳು

Try homemade shikakai shampoo; don't worry, we are not asking you to buy expensive products and waste too much of your time.
X
Desktop Bottom Promotion