For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀ ಕುಡಿಯಿರಿ, ಕೂದಲು ಫಳಫಳಾ ಅನ್ನತ್ತೆ

|
Green tea
ಕೂದಲು ಉದುರುವ ಸಮಸ್ಯೆ ಈಗ ಎಲ್ಲರೂ ದೂರುವ ವಿಚಾರ. ಹೊಗೆ, ಧೂಳು, ಬದಲಾಗುವ ವಾತಾವರಣ, ಒತ್ತಡ, ಹಾರ್ಮೋನುಗಳ ಅಸಮತೋಲನ ಹೀಗೆ ಅನೇಕವು ಇದಕ್ಕೆ ಕಾರಣ. ಆದರೆ ಈ ರೀತಿ ಕೂದಲು ಉದುರುವಿಕೆಗೆ ಗ್ರೀನ್ ಟೀ ಔಷಧಿಯಂತೆ ಕೆಲಸ ಮಾಡುತ್ತದೆ.

ಗ್ರೀನ್ ಟೀ ಕೂದಲಿಗೆ ಹೇಗೆ ಪೋಷಣೆ ನೀಡುತ್ತದೆ ಎಂದು ತಿಳಿದುಕೊಳ್ಳೋಣ:

* ಗ್ರೀನ್ ಟೀಯನ್ನು ಸೇವಿಸುವ ಮೂಲಕ ಅಥವಾ ಅದನ್ನು ತಲೆಗೆ ಲೇಪಿಸಿಕೊಳ್ಳುವ ಮೂಲಕವೂ ಕೂದಲು ಉದುರುವಿಕೆ ತಡೆಗಟ್ಟಬಹುದು.

* ತಲೆಗೆ ಹಚ್ಚಿಕೊಳ್ಳುವ ಎಣ್ಣೆಯೊಂದಿಗೆ ಗ್ರೀನ್ ಟೀ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಬೆರಳಿನಿಂದ ವರ್ತುಲಾಕಾರವಾಗಿ ಮಸಾಜ್ ಮಾಡಿಕೊಳ್ಳುತ್ತಾ ಇರಬೇಕು. ಹೀಗೆ ಆಗಾಗ್ಗೆ ಮಾಡಿಕೊಳ್ಳುತ್ತಿದ್ದರೆ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ.

* ಗ್ರೀನ್ ಟೀ ಸೇವನೆಯಿಂದ ರಕ್ತಕಣಗಳು ಸುಧಾರಿಸಿಕೊಂಡು ರಕ್ತ ಸಂಚಲನ ಹೆಚ್ಚುವಂತೆ ಮಾಡುತ್ತದೆ. ರಕ್ತ ಸಂಚಲನದಿಂದ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ.

* ಗ್ರೀನ್ ಟೀ ಅಂಶ ಹೊಂದಿರುವ ಶಾಂಪೂ ಬಳಕೆಯೂ ಕೂದಲು ಬೇಗನೆ ಉದುರುವುದನ್ನು ತಡೆಗಟ್ಟುತ್ತದೆ. ಟೀ ಸೊಪ್ಪನ್ನು ಸ್ನಾನ ಮಾಡುವಾಗ ತಲೆಯ ಬುಡಕ್ಕೆ ಹಚ್ಚುವುದರಿಂದ ಹೊಟ್ಟು ನಿವಾರಣೆಗೊಂಡು ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.

* ಗ್ರೀನ್ ಟೀಯಲ್ಲಿರುವ ಕ್ಯಟೆಚಿನ್ ಅಂಶ ಆಂಟಿ ಬಯೋಟಿಕ್ ನಂತೆ ಕೆಲಸ ಮಾಡುತ್ತದೆ. ಇದು ಕೂದಲನ್ನು ಸುಪೋಷಿತಗೊಳಿಸಿ ರಕ್ತ ಸಂಚಲನ ಹೆಚ್ಚಿಸುತ್ತದೆ. ರಕ್ತಸಂಚಲನ ನಿಯಮಿತವಾಗಿ ಆಗದಿರುವುದೂ ಕೂಡ ಕೂದಲು ಉದುರಲು ಒಂದು ಕಾರಣ.

* ಗ್ರೀನ್ ಟೀ ಕೇವಲ ಕೂದಲಿಗೆ ಮಾತ್ರವಲ್ಲ, ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲೂ ಬಳಕೆಯಾಗುತ್ತದೆ.

ಆರೋಗ್ಯಕರವಾದ ಈ ಗ್ರೀನ್ ಟೀ ಕೂದಲನ್ನು ಗಟ್ಟಿಗೊಳಿಸಿ, ಕೂದಲಿನ ಬೆಳವಣಿಗೆಗೆ ಹೆಚ್ಚು ಉಪಯೋಗವಾಗುತ್ತದೆ. ಆದ್ದರಿಂದ ದೇಹಕ್ಕೂ ಮತ್ತು ಕೂದಲಿಗೂ ಆರೋಗ್ಯ ತಂದುಕೊಡುವ ಗ್ರೀನ್ ಟೀ ಸೇವನೆ ಉತ್ತಮ.

English summary

Green tea | Use green tea to cure hairfall | ಗ್ರೀನ್ ಟೀ | ಕೂದಲುದುರುವಿಕೆಗೆ ಗ್ರೀನ್ ಟೀ ಮದ್ದು

Green tea becomes the home remedy to cure hairfall. Produced form camellia sinensis plant, green tea is a medicine to cure hairfall. So take a look how to use green tea to cure hairfall.
Story first published: Wednesday, August 10, 2011, 14:32 [IST]
X
Desktop Bottom Promotion