For Quick Alerts
ALLOW NOTIFICATIONS  
For Daily Alerts

ಉಗುರಿನ ಫಂಗಸ್‌ ಸಮಸ್ಯೆಗೆ ಬ್ಲೀಚ್‌ ಬಳಸಲೇಬಾರದು, ಏಕೆ? ಇದಕ್ಕೆ ಸೂಕ್ತ ಚಿಕಿತ್ಸೆಯೇನು?

|

ಪಾದಗಳಲ್ಲಿ ಫಂಗಸ್‌ ಸಮಸ್ಯೆ ಉಂಟಾಗುವುದೇ ಸಾಮಾನ್ಯ, ಅದರಲ್ಲೂ ಮಳೆಗಾಲದಲ್ಲಿ ಈ ಸಮಸ್ಯೆ ತುಸು ಅಧಿಕವೇ ಇರುತ್ತದೆ. ಪಾದಗಳಲ್ಲಿ ಫಂಗಸ್‌ ಸಮಸ್ಯೆ ಉಂಟಾದಾಗ ಬೆರಳುಗಳ ಮಧ್ಯ ತುರಿಕೆ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು ಮುಂತಾದ ಸಮಸ್ಯೆ ಉಂಟಾಗುತ್ತದೆ.

ಹೀಗೆ ಉಂಟಾದಾಗ ಪಾದಗಳ ಆರೈಕೆಗೆ ಕೆಲವರು ಬ್ಲೀಚ್ ಬಳಸುತ್ತಾರೆ. ಪಾದಗಳಿಗೆ ಬ್ಲೀಚ್‌ ಬಳಸುವುದರಿಂದ ಉಗುರುಗಳು ಹಾಗೂ ಕಾಲುಗಳು ಬೆಳ್ಳಗೆ, ಸ್ವಚ್ಛವಾಗಿ ಕಾಣುವುದು, ಆದರೆ ನೀವು ಪಾದಗಳಿಗೆ ಬ್ಲೀಚ್‌ ಬಳಸಬಾರದು, ಏಕೆ ಬಳಸಬಾರದು? ಬಳಸುವುದರಿಂದ ಏನಾಗುತ್ತದೆ ಎಂದು ನೋಡೋಣ ಬನ್ನಿ:

ಬ್ಲೀಚ್‌ ಅನ್ನು ಉಗುರಿನ ಫಂಗಸ್‌ಗೆ ಬಳಸಿದರೆ ಉಂಟಾಗುವ ಅಪಾಯಗಳು

ಬ್ಲೀಚ್‌ ಅನ್ನು ಉಗುರಿನ ಫಂಗಸ್‌ಗೆ ಬಳಸಿದರೆ ಉಂಟಾಗುವ ಅಪಾಯಗಳು

ಬ್ಲೀಚ್‌ ಹಾಕಿದಾಗ ಉಗುರಿನ ಫಂಗಸ್‌ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಉಗುರಿಗೆ ಬ್ಲೀಚ್ ಹಾಕಿದಾಗ ಇದು ತ್ವಚೆಗೆ ಹಾಗೂ ಉಗುರಿಗೆ ಹಾನಿ ಮಾಡುತ್ತದೆ, ಇದರಿಂದ ಉಗುರು ಮತ್ತಷ್ಟು ಹಾಳಾಗುವುದು.

ಸೂಚನೆ: ಸಾಂದ್ರತೆಯ ಬ್ಲೀಚ್‌ ಅನ್ನು ತ್ವಚೆಗೆ ಹಾಕಲೇಬಾರದು, ಹಾಕಿದರೆ ತ್ವಚೆ ಸುಟ್ಟು ಹೋಗುವುದು ಹಾಗೂ ವೈದ್ಯಕೀಯ ಚಿಕಿತ್ಸೆಯ ಅಗ್ಯತ ಬೀಉವುದು. ಇನ್ನು ಬ್ಲೀಚ್‌ನ ವಾಸನೆ ತೆಗೆದುಕೊಂಡರೆ ಶ್ವಾಸಕೋಶಕ್ಕೆ ಹಾನಿಯುಂಟು ಮಾಡಬಹುದು. ಬ್ಲೀಚ್‌ ವೇಳೆ ನಿಮ್ಮ ತ್ವಚೆ ಮೇಲೆ ಬಿದ್ದರೆ ಕೂಡಲೇ ನೀರಿನಲ್ಲಿ ತೊಳೆಯಿರಿ.

ಬ್ಲೀಚ್‌ ಬಾತ್‌ ಎಂದರೇನು?

ಬ್ಲೀಚ್‌ ಬಾತ್‌ ಎಂದರೇನು?

ಕೆಲವೊಂದು ತ್ವಚೆ ಸಮಸ್ಯೆಗೆ ಚರ್ಮರೋಗ ತಜ್ಞರು ಬ್ಲೀಚ್‌ ಬಾತ್‌ ತೆಗೆದುಕೊಳ್ಳಲು ಸಲಹೆ ನೀಡಬಹುದು. ಬ್ಲೀಚ್‌ ಬಂದರೆ ಸ್ವಲ್ಪ ಪ್ರಮಾಣದ ಬ್ಲೀಚ್‌ (1/2 ಕಪ್) ಅನ್ನು ಸ್ನಾನದ ಒಂದು ದೊಡ್ಡ ಬಕೆಟ್‌ಗೆ ಹಾಕಿ ಸ್ನಾನ ಮಾಡುವುದು. ಇದು ಬ್ಲ್ಯಾಕ್ಟಿರಿಯಾಗಳನ್ನು, ಫಂಗಸ್‌ಗಳನ್ನು ಕೊಲ್ಲುವುದು ಆದರೆ ಉಗುರಿನ ಫಂಗಸ್‌ ಸಮಸ್ಯೆಗೆ ಬ್ಲೀಚ್‌ ಬಳಸಬಾರದು.

ಉಗುರಿನ ಸೋಂಕಿಗೆ ಚಿಕಿತ್ಸೆಯೇನು?

ಉಗುರಿನ ಸೋಂಕಿಗೆ ಚಿಕಿತ್ಸೆಯೇನು?

ಆ್ಯಂಟಿಫಂಗಲ್‌ ಔಷಧಗಳು

ನಿಮಗೆ ಚರ್ಮರೋಗ ಔಷಧಗಳನ್ನು ಅಂದ್ರೆ ಮಾತ್ರೆಗಳನ್ನು ನೀಡುವರು. ಇದನ್ನು 12 ವಾರಗಳ ಕಾಲ ತೆಗೆದುಕೊಳ್ಳಬೇಕಾಗುವುದು, ಕೆಲವೊಮ್ಮೆ ಇನ್ನೂ ಅಧಿಕ ಸಮಯ ತೆಗೆಯಬೇಕು. ಕೆಲವೊಮ್ಮೆ ಈ ಔಷಧಗಳಿಂದ ಅಡ್ಡಪರಿಣಾಮ ಉಂಟಾಗಬಹುದು, ಆದ್ದರಿಂದ ಪ್ರಾರಂಭದಲ್ಲಿಯೇ ಈ ಔಷಧ ನಿಮಗೆ ಆಗುತ್ತೋ, ಇಲ್ಲವೋ ಎಂದು ಪರೀಕ್ಷಿಸಿದ ಬಳಿಕವಷ್ಟೇ ಆ ಚಿಕಿತ್ಸ ಮುಂದುವರೆಸುತ್ತಾರೆ, ಇಲ್ಲದಿದ್ದರೆ ಪರ್ಯಾಯ ಚಿಕಿತ್ಸೆ ಸೂಚಿಸುತ್ತಾರೆ.

ಲೇಸರ್ ಥೆರಪಿ

ನಿಮಗೆ ಆ್ಯಂಟಿಫಂಗಲ್‌ ಔಷಧ ಅಡ್ಡಪರಿಣಾಮ ಬೀರುವುದಾದರೆ ಲೇಸರ್ ಥೆರಪಿ ಒಂದು ಆಯ್ಕೆ ಆಗಿದೆ. ಈ ಚಿಕಿತ್ಸೆ ಮೂಲಕ ಉಗುರಿನಲ್ಲಿ ಫಂಗಸ್ ಸಮಸ್ಯೆ ಹೆಚ್ಚುವುದನ್ನು ತಡೆಗಟ್ಟಬಹುದಾಗಿದೆ.

ಟೋನೇಲ್‌ ರಿಮೂವಲ್ ಅಥವಾ ಡಿಬ್ರೈಡ್ಮೆಂಟ್‌

ಈ ಚಿಕಿತ್ಸೆಯಲ್ಲಿ ನಿಮ್ಮ ಹಾನಿಗೊಳಗಾದ ಉಗುರಿನ ಮೇಲಿನ ಪದರವನ್ನು ತೆಗೆಯಲಾಗುವುದು, ಇದನ್ನು ಪರಿಣಿತರಷ್ಟೇ ಮಾಡಬೇಕು, ಇಲ್ಲದಿದ್ದರೆ ತ್ವಚೆಗೆ ಹಾನಿಯುಂಟಾಗುವುದು, ಕೆಲವೊಂದು ಕೇಸ್‌ಗಳಲ್ಲಿ ಉಗುರು ಸಂಪೂರ್ಣ ಹಾಳಾಗಿದ್ದರೆ ವೈದ್ಯರು ಉಗುರನ್ನು ತೆಗೆಯಹುದು.

ಉಗುರುಗಳ ಫಂಗಸ್‌ಗೆ ಕಾರಣವೇನು?

ಉಗುರುಗಳ ಫಂಗಸ್‌ಗೆ ಕಾರಣವೇನು?

ಶೂ ಧರಿಸಿದಾಗ ಸೆಕೆಯಲ್ಲಿ ಕಾಲು ಬೆವರಿದಾಗ ಅಥವಾ ಧರಿಸಿರುವ ಶೂ ಒದ್ದೆಯಾಗಿದ್ದರೆ ಈ ಸೋಂಕಿನ ಸಮಸ್ಯೆ ಉಂಟಾಗುವುದು. ಇನ್ನು ಈ ಸಮಸ್ಯೆ ಇರುವವರಲ್ಲಿಯೂ ಸೋಂಕಿನ ಸಮಸ್ಯೆ ಉಂಟಾಗುವುದು:

* ರಕ್ತ ಸಂಚಾರದ ಕೊರತೆ ಅದರಲ್ಲೂ ಪಾದಗಳಿಗೆ ಸರಿಯಾಗಿ ರಕ್ತ ಸಂಚಾರವಾಗದಿದ್ದಾಗ

* ಮಧುಮೇಹ

* ಉಗುರಿಗೆ ಗಾಯವಾಗಿದ್ದರೆ

* ಇಂಪ್ಯಾಕ್ಟೆಡ್ ಇಮ್ಯೂನೆ ಸಿಸ್ಟಮ್ ಫಂಕ್ಷನ್ (ನಿದ್ದೆ, ಆಹಾರಕ್ರಮ, ಒತ್ತಡ, ಶುಚಿತ್ವ ಇವೆಲ್ಲಾ ಸರಿಯಿಲ್ಲದಿದ್ದರೆ ಈ ಸಮಸ್ಯೆ ಉಂಟಾಗುವುದು)

ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಹೇಗೆ?

* ಉಗುರು ಕತ್ತರಿಸಲು, ಶುಚಿತ್ವಕ್ಕೆ ನಿಮ್ಮದೇ ವಸ್ತು ಬಳಸಿ, ಉದಾಹರಣೆಗೆ ನೇಲ್‌ ಕಟರ್, ನೇಲ್‌ ಕ್ಲಿಪ್ಪರ್ ಮೊದಲಾದೆವು. ನೀವು ಪಡೆಕ್ಯೂರ್‌ ಮಾಡಿಸುವುದಾದರೆ ನಿಮ್ಮದೇ ಸಾಧನ ಕೊಂಡೊಯ್ಯಿರಿ.

* ಉಗುರುಗಳನ್ನು ಸ್ವಚ್ಛವಾಗಿಡಿ, ಇದರಿಂದ ಉಗುರುಗಳಲ್ಲಿ ಬಿರುಕು ಉಂಟಾಗುವುದನ್ನು ತಡೆಗಟ್ಟಬಹುದು.

*ಪ್ಯೂಮಿಕ್ ಸ್ಟೋನ್, ಮತ್ತಿತರ ಕಾಲು ಶುಚಿತ್ವದ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ

* ಕಾಲುಗಳಿಗೆ ಸೋಂಕು ಉಂಟು ಮಾಡುವ ಪಾದರಕ್ಷೆ ಬಳಸಬೇಡಿ

* ಶ್ವಚ್ಛವಾದ ಸಾಕ್ಸ್ ಬಳಸಿ.

* ಹೋಟೆಲ್, ಸಾರ್ವಜನಿಕ ಸ್ನಾನಗೃಹ ಬಳಸುವಾಗ ಚಪ್ಪಲಿ ಧರಿಸಿ. ಮಣ್ಣಿನಲ್ಲಿ ಓಡಾಡುವಾಗ ಚಪ್ಪಲಿ ಧರಿಸಿ.

ಕೊನೆಯದಾಗಿ: ಉಗುರಿನ ಫಂಗಸ್‌ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ನೀವು ಚಿಕಿತ್ಸೆ ನೀಡದಿದ್ದರೆ ಸಮಸ್ಯೆ ತುಂಬಾ ಹೆಚ್ಚಾಗುವುದು, ಅಲ್ಲದೆ ತುಂಬಾ ನೋವು ಅನುಭವಿಸಬೇಕಾಗುವುದು. ಆದ್ದರಿಂದ ಉಗುರಿನ ಸ್ವಚ್ಛತೆ ಕಡೆ ಗಮನ ನೀಡಿ. ಉಗುರಿಗೆ ಹಾನಿಯಾಗುವಾಗ ಉಗುರಿನ ಬಣ್ಣದಲ್ಲಿ ವ್ಯತ್ಯಾಸ, ಉಗುರುಗಳಲ್ಲಿ ಬಿರುಕು ಕಾಣಿಸುವುದು, ಇವುಗಳನ್ನು ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆದರೆ ಉಗುರಿನ ಫಂಗಸ್ ಸಮಸ್ಯೆ ಹೆಚ್ಚಾಗುವುದನ್ನು ತಡೆಗಟ್ಟಬಹುದು.

English summary

Why You Shouldn’t Use Bleach to Get Rid of Toenail Fungus in Kannada

Why you shouldn’t use bleach to get rid of toenail fungus in Kannada, read on...
Story first published: Thursday, July 22, 2021, 9:11 [IST]
X
Desktop Bottom Promotion