For Quick Alerts
ALLOW NOTIFICATIONS  
For Daily Alerts

ಈ ಗುಣಗಳು ತಿಳಿದ ಮೇಲೆ ನಿಮಗೆ ಹಣ್ಣು-ತರಕಾರಿ ಸಿಪ್ಪೆ ಎಸೆಯಲು ಮನಸ್ಸು ಬರಲ್ಲ

|
ಇದುನ್ನ ನೋಡಿದ್ಮೇಲೆ ಹಣ್ಣು ತರಕಾರಿ ಸಿಪ್ಪೆಯನ್ನು ಎಸೆಯೋದಿಲ್ಲ | FRUITS | ONEINDIA KANNADA

ಹಣ್ಣು ಎನ್ನುವುದು ಪ್ರಕೃತಿಯು ಜೀವಿಗಳಿಗೆ ನೀಡಿದ ಅತ್ಯುತ್ತಮ ಉಡುಗೊರೆ. ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಹಣ್ಣುಗಳು ಸಹ ವಿಶೇಷ ಗುಣಗಳನ್ನು ಮತ್ತು ಪೋಕಾಂಶಗಳಿಂದ ಕೂಡಿರುತ್ತವೆ. ಈ ಹಣ್ಣುಗಳನ್ನು ಕ್ರಮವಾಗಿ ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪ್ರತಿಯೊಂದು ಹಣ್ಣಿನಲ್ಲೂ ಜೀವಿಗೆ ಅಗತ್ಯವಾದ ವಿಟಮಿನ್, ಪ್ರೋಟಿನ್ ಹಾಗೂ ಪೋಷಕಾಂಶಗಳಿರುತ್ತವೆ. ಹಾಗಾಗಿ ನಾವು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯವು ಉತ್ತವಾಗಿರುತ್ತದೆ. ಹಣ್ಣುಗಳಿಗೆ ರಕ್ಷಾ ಕವಚದಂತೆ ಇರುವ ಹಣ್ಣಿನ ಸಿಪ್ಪೆಗಳಲ್ಲೂ ಸಾಕಷ್ಟು ಔಷಧೀಯ ಗುಣಗಳಿರುತ್ತವೆ. ಅವುಗಳನ್ನು ಬಳಸಿಕೊಂಡು ಸಹ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

vegetable peels

ಈ ಹಿನ್ನೆಲೆಯಲ್ಲಿಯೇ ಅನೇಕ ಆಯುರ್ವೇದ ಔಷಧಗಳಲ್ಲಿ ಹಣ್ಣುಗಳನ್ನು ಹಾಗೂ ಅವುಗಳ ಸಿಪ್ಪೆಗಳನ್ನು ಬಳಸಿಕೊಳ್ಳಲಾಗುವುದು. ನೈಸರ್ಗಿಕವಾಗಿ ಸಿಹಿ ಗುಣಗಳನ್ನು ಒಳಗೊಂಡಿರುವ ಹಣ್ಣುಗಳನ್ನು ಹಾಗೂ ಅವುಗಳ ಸಿಪ್ಪೆಗಳನ್ನು ಸೌಂದರ್ಯ ವರ್ಧಕ ಉತ್ಪತ್ನಗಳಿಗೆ ಹಾಗೂ ಚಿಕಿತ್ಸೆಗಳಿಗೂ ಬಳಸಲಾಗುವುದು. ನಮಗೆ ಹೆಚ್ಚಾದ ಹಣ್ಣುಗಳನ್ನು ಹಾಗೂ ಬೇಡದ ಸಿಪ್ಪೆಗಳನ್ನು ಕಸಕ್ಕೆ ಬಿಸಾಡುವ ಬದಲು ಅವುಗಳನ್ನು ಬಳಸಿಕೊಂಡು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಜ, ಉಳಿದ ಹಣ್ಣು ಮತ್ತು ಅದರ ಸಿಪ್ಪೆಗಳನ್ನು ಬಳಸಿಕೊಂಡು ಉತ್ತಮ ಸೌಂದರ್ಯ ಚಿಕಿತ್ಸೆಯನ್ನು ಪಡೆಯಬಹುದು. ಹಾಗಾದರೆ ಆ ಮಾರ್ಗಗಳು ಯಾವವು? ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

* ಆಲೂಗಡ್ಡೆಯ ಸಿಪ್ಪೆ
ಆಲೂಗಡ್ಡೆಯ ಸಿಪ್ಪೆಯನ್ನು ಸಾಮಾನ್ಯವಾಗಿ ಯಾವ ಸಂಗತಿಗೂ ಬಳಸದೆ ಬಿಸಾಡುತ್ತೇವೆ. ಆದರೆ ಆ ಸಿಪ್ಪೆಗಳು ಸಮೃದ್ಧವಾದ ಕಿಣ್ವಗಳನ್ನು ಮತ್ತು ವಿಟಮಿನ್ ಸಿ ಇಂದ ಕೂಡಿರುತ್ತವೆ. ಈ ಸಿಪ್ಪೆಯನ್ನು ಬಿಸಾಕುವ ಬದಲು ಕಣ್ಣಿನ ಮೇಲೆ ಇಟ್ಟುಕೊಂಡರೆ ಉತ್ತಮ ಚಿಕಿತ್ಸೆ ದೊರೆಯುವುದು. ಆಲೂಗಡ್ಡೆಯ ಸಿಪ್ಪೆಯನ್ನು ಫ್ರಿಜ್‍ನಲ್ಲಿ 10-15 ನಿಮಿಷಗಳ ಕಾಲ ಇಟ್ಟು ತಂಪಾಗಿಸಿಕೊಳ್ಳಿ. ತಣ್ಣಗಾದ ಸಿಪ್ಪೆಯನ್ನು ಕಣ್ಣಿನ ಮೇಲೆ ಇರಿಸಿಕೊಳ್ಳಿ. 15-20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಕಣ್ಣಿನ ಸುತ್ತಲು ಇರುವ ಕಪ್ಪು ಕಲೆ ಮತ್ತು ಉರಿಯೂತಗಳು ಕಡಿಮೆಯಾಗುತ್ತವೆ.

* ಬಾಳೆ ಹಣ್ಣು ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆ
ಬಾಳೆ ಹಣ್ಣು ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಎಸೆಯುವ ಬದಲು ಅವುಗಳಿಂದ ಹಲ್ಲಿನ ರಕ್ಷಣೆ ಪಡೆಯಬಹುದು. ಬಾಳೆ ಹಣ್ಣು ಮತ್ತು ಕಿತ್ತಲೆ ಹಣ್ಣಿನ ಸಿಪ್ಪೆಯ ಒಳ ಭಾಗದಿಂದ ಹಲ್ಲನ್ನು ಉಜ್ಜಬೇಕು. ಈ ಸಿಪ್ಪೆಗಳಲ್ಲಿ ಮೆಗ್ನೀಶಿಸಿಯಂ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿವೆ. ಇವು ದಂತ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡುತ್ತವೆ. ಹಲ್ಲುಗಳು ಸ್ವಚ್ಛತೆಯಿಂದ ಪ್ರಕಾಶಮಾನವಾಗಿ ಕಾಣುವುದು.

* ನಿಂಬೆ ಹಣ್ಣಿನ ಸಿಪ್ಪೆ
ನಿಂಬೆ ಹಣ್ಣು ಮತ್ತು ಅದರ ಸಿಪ್ಪೆಯು ಅದ್ಭುತವಾದ ಔಷಧೀಯ ಗುಣಗಳನ್ನು ಒಳಗೊಂಡಿದೆ. ನಿಂಬೆ ಸಿಪ್ಪೆಯು ಕೀಟಗಳನ್ನು ದೂರ ಇಡಲು ಸಹಾಯ ಮಾಡುತ್ತದೆ. ಹಣ್ಣಿನಲ್ಲಿ ಮತ್ತು ಸಿಪ್ಪೆಯಲ್ಲಿ ಸಿಟ್ರಿಕ್ ಗುಣಗಳಿರುತ್ತವೆ. ಇವು ಮನೆಯಲ್ಲಿ ಕೀಟಗಳನ್ನು ದೂರ ಇಡಲು ಸಹಾಯ ಮಾಡುತ್ತವೆ. ಕೀಟಗಳು ಇರುವ ಸ್ಥಳ ಅಥವಾ ಬಾಲಿಲುಗಳ ಸಂಧಿಯಲ್ಲಿ ನಿಂಬೆ ಹಣ್ಣಿನ ಸಿಪ್ಪೆಗಳನ್ನು ಇಟ್ಟರೆ ಕೀಟಗಳು ದೂರ ಹೋಗುತ್ತವೆ. ನಿಂಬೆ ಹಣ್ಣಿನ ಸಿಪ್ಪೆಯನ್ನು ತ್ವಚೆಯ ಮೇಲೆ ಉಜ್ಜಿಕೊಳ್ಳುವುದರಿಂದ, ತ್ವಚೆಯ ಮೇಳಿರು ಕೊಳೆ ಹಾಗೂ ಕಲೆಗಳು ನಿವಾರಣೆಯಾಗುತ್ತವೆ. ಜೊತೆಗೆ ಸೋಂಕುಗಳಿಂದ ರಕ್ಷಣೆ ನೀಡುತ್ತವೆ.

* ಕಿತ್ತಳೆ ಮತ್ತು ದ್ರಾಕ್ಷಿ ಸಿಪ್ಪೆ
ಕಿತ್ತಳೆ ಮತ್ತು ದ್ರಾಕ್ಷಿ ಸಿಪ್ಪೆಗಳು ಉತ್ತಮ ಪರಿಮಳದಿಂದ ಕೂಡಿರುತ್ತವೆ. ನೀವು ಸ್ನಾನ ಮಾಡುವ ಟಬ್ ಅಥವಾ ಬಕೇಟ್ ನೀರಿಗೆ ಕಿತ್ತಳೆ ಮತ್ತು ದ್ರಾಕ್ಷಿ ಸಿಪ್ಪೆಯನ್ನು ಹಾಕಿ ಸ್ವಲ್ಪ ಸಮಯ ಬಿಡಿ. ನಂತರ ಸಿಪ್ಪೆಯನ್ನು ತೆಗೆದು ಪಕ್ಕಕ್ಕಿಡಿ. ಬಳಿಕ ಆ ನೀರಿನಲ್ಲಿಯೇ ಸ್ನಾನ ಮಾಡಿ. ಇವುಗಳ ಹಾಗೆಯೇ ಸೌತೆಕಾಯಿಯ ಸಿಪ್ಪೆಯು ಸಹ ತಂಪಾಗಿಸುವ ಗುಣಗಳನ್ನು ಒಳಗೊಂಡಿವೆ. ಸೌತೆಕಾಯಿಯ ಸಿಪ್ಪೆಯಲ್ಲಿರುವ ಔಷಧೀಯ ಗುಣಗಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಇಡಲು ಸಹಾಯಮಾಡುವುದು.

* ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ, ಪುಡಿಮಾಡಿಕೊಳ್ಳಬೇಕು. ನಂತರ ಆ ಪುಡಿಗೆ ಸ್ವಲ್ಪ ಜೇನುತುಪ್ಪ ಮತ್ತು ಮೊಸರಿನೊಂದಿಗೆ ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣವನ್ನು ಮುಖ ಮತ್ತು ತ್ವಚೆಯ ಮೇಲೆ ಅನ್ವಯಿಸಿ ಮಸಾಜ್ ಮಾಡಬಹುದು. ಇದರಿಂದ ತ್ವಚೆಯು ಉತ್ತಮ ಹೊಳಪು ಹಾಗೂ ಆರೋಗ್ಯವನ್ನು ಪಡೆದುಕೊಳ್ಳುವುದು. ಚರ್ಮವನ್ನು ಸದಾ ಕಾಲ ತೇವವಾಗಿ ಇಟ್ಟುಕೊಳ್ಳಲು ಬೆಣ್ಣೆ ಹಣ್ಣಿನ ಸಿಪ್ಪೆ, ಪಪ್ಪಾಯ ಹಣ್ಣಿನ ಸಿಪ್ಪೆ, ಬಾಳೆ ಹಣ್ಣಿನ ಸಿಪ್ಪೆಗಳನ್ನು ತ್ವಚೆಯ ಮೇಲೆ ಉಜ್ಜಿಕೊಳ್ಳುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ತ್ವಚೆಯು ಉತ್ತಮ ಹೊಳಪಿನಿಂದ ಕೂಡಿರುತ್ತವೆ.

English summary

Ways To Use Leftover Fruit And Vegetable Peels

Before chucking leftover fruit and vegetable peels into the bin, stop and think twice. There are several ways to put them to good use. Read on to find out how.
X
Desktop Bottom Promotion