For Quick Alerts
ALLOW NOTIFICATIONS  
For Daily Alerts

ಸೆಕೆಯಲ್ಲಿ ಮಾಸ್ಕ್‌ ಧರಿಸಿ ಕೂಲ್ ಆಗಿರಲು ಟಿಪ್ಸ್

|

ಕೊರೊನಾ ಬಂದಾಗಿನಿಂದ ಮಾಸ್ಕ್ ಎಂಬುವುದು ನಮ್ಮ ಬಳಿ ಇರಲೇಬೇಕಾದ ವಸ್ತುವಾಗಿದೆ. ಮನೆಯಿಂದ ಹೊರಗಡೆ ಕಾಲಿಡುವಾಗ ಕೊರೊನಾವೈರಸ್‌ನಿಂದ ನಮ್ಮನ್ನು ರಕ್ಷಿಸಲು ಮಾಸ್ಕ್‌ ಅನಿವಾರ್ಯವಾಗಿದೆ. ತಜ್ಞರು ಒಂದು ಮಾಸ್ಕ್‌ ಸಾಕಾಗಲ್ಲ, ಡಬಲ್ ಮಾಸ್ಕ್‌ ಧರಿಸಿ ಎಂದು ಸಲಹೆ ನೀಡುತ್ತಾರೆ.

Tips To Stay Cool While Wearing mask

ಆದರೆ ಮಾಸ್ಕ್‌ ಧರಿಸಿ ಚಳಿಯಿದ್ದಾಗ ಓಡಾಡಲು ಏನೂ ಅನಿಸುವುದಿಲ್ಲ, ಆದರೆ ಸ್ವಲ್ಪ ಸೆಕೆಯಾಗಲು ಆರಂಭಿಸಿದರೆ ಮಾಸ್ಕ್‌ ಅನ್ನು ಒಮ್ಮೆ ಮುಖದಿಂದ ಕಿತ್ತೊಗೆದರೆ ಸಾಕು ಎಂದು ಅನಿಸಲಾರಂಭಿಸುತ್ತದೆ. ಅದರಲ್ಲೂ ಆಸ್ಪತ್ರೆಗಳಲ್ಲಿ8-10 ಗಂಟೆ ನಿರಂತರ ಸೇವೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಹೇಗಪ್ಪಾ ಇರುತ್ತಾರೆ ಎಂದು ಅನಿಸದೆ ಇರಲ್ಲ. ಮನದಲ್ಲಿಯೇ ಅವರಿಗೊಂದು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಕೊರೊನಾದಿಂದ ನಮ್ಮನ್ನು ಕಾಪಾಡಿಕೊಳ್ಳಲು ನಾವು ಧರಿಸುತ್ತಿರುವ ಮಾಸ್ಕ್‌ನಿಂದ ಹಲವು ತೊಂದರೆಗನ್ನು ಅನುಭವಿಸಬೇಕಾಗಿದೆ ಎನ್ನುವುದು ಕೂಡ ಅಷ್ಟೇ ಸತ್ಯ. ಮುಖ ಬೆವರಿದರೆ ತುರಿಸಲು ಆರಂಭಿಸುತ್ತದೆ, ಬೆವತರೆ ಬೆವರಿನ ವಾಸನೆ ಮೂಗಿಗೆ ಬಡೆಯುವುದು, ಕೆಲವರಿಗಂತೂ ಮುಖದಲ್ಲಿ ಗುಳ್ಳೆಗಳು ಏಳುತ್ತವೆ. ಇನ್ನು ತುಂಬಾ ಹೊತ್ತು ಮಾಸ್ಕ್‌ ಧರಿಸಿಯೇ ಇದ್ದರೆ ಬಾಯಿಯ ಆರೋಗ್ಯಕ್ಕೆ ಕೂಡ ಒಳ್ಳೆಯದಲ್ಲ ಎಂದು ದಂತ ವೈದ್ಯರು ಹೇಳುತ್ತಾರೆ.

ತುಂಬಾ ಹೊತ್ತು ಮಾಸ್ಕ್‌ ಧರಿಸಿಯೇ ಇದ್ದರೆ ಬಾಯಿ ದುರ್ವಾಸನೆ ಬೀರುವುದು. ಇಷ್ಟೆಲ್ಲಾ ತೊಂದರೆ ಮಾಸ್ಕ್‌ ಧರಿಸುವುದರಿಂದ ಇದೆ. ಆದರೆ ಏನು ಮಾಡುವುದು ಈಗ ಎಲ್ಲಕ್ಕಿಂತ ಮುಖ್ಯವಾಗಿ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಮಾಸ್ಕ್‌ ಧರಿಸಬೇಕು.

ಆದ್ದರಿಂದ ಮಾಸ್ಕ್‌ ಧರಿಸದೇ ಇರಲು ಸಾಧ್ಯವಿಲ್ಲ. ಆದರೆ ಸೆಕೆ ಇರುವಾಗ ಮಾಸ್ಕ್‌ನಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಬಹುದು, ಅದು ಹೇಗೆ ಎಂದು ನೋಡೋಣ:

 ಸರಿಯಾದ ಮಾಸ್ಕ್‌ ಧರಿಸಿ

ಸರಿಯಾದ ಮಾಸ್ಕ್‌ ಧರಿಸಿ

ಅನೇಕ ಬಗೆಯ ಮಾಸ್ಕ್‌ ದೊರೆಯುತ್ತದೆ. ಸೆಕೆಯಲ್ಲಿ ಕಾಟನ್‌ ಬಟ್ಟೆಯ ಮಾಸ್ಕ್‌ ಧರಿಸಿ. ಉಸಿರಾಡಲು ಸುಲಭವಾಗುವಂಥ ಮಾಸ್ಕ್‌ ಆಯ್ಕೆ ಮಾಡಿ. ಹೆಚ್ಚಿನವರು ಸರ್ಜಿಕಲ್ ಮಾಸ್ಕ್ ಹಾಕಿಕೊಮಡು ಓಡಾಡುತ್ತಾರೆ. ಆಸ್ಪತ್ರೆಗೆ ಹೋಗುವಾಗ ಅಥವಾ ಯಾರಿಗಾದರೂ ಹುಷಾರಿಲ್ಲದಿದ್ದಾಗ ಅವರ ಆರೈಕೆ ಮಾಡುವಾಗ ಮಾತ್ರ ಇಂಥ ಮಾಸ್ಕ್ ಧರಿಸಿ, ಇಲ್ಲದಿದ್ದರೆ ನಾರ್ಮಲ್ ಕಾಟನ್ ಮಾಸ್ಕ್‌ ಧರಿಸಿ. ಅದರಲ್ಲೂ ತೆಳು ಬಣ್ಣದ ಮಾಸ್ಕ್‌ ಧರಿಸಿ. ಕಪ್ಪು ಬಣ್ಣದ ಮಾಸ್ಕ್‌ ಸೆಕೆಯಲ್ಲಿ ಧರಿಸಿದರೆ ಮತ್ತಷ್ಟು ಸೆಕೆಯಾಗುವುದು.

 ಮೇಕಪ್ ಹಚ್ಚಬೇಡಿ

ಮೇಕಪ್ ಹಚ್ಚಬೇಡಿ

ಮುಖಕ್ಕೆ ತುಂಬಾ ಮೇಕಪ್ ಹಾಕಿ ನಂತರ ಮಾಸ್ಕ್ ಹಾಕಿದರೆ ಕಿರಿಕಿರಿ ಅನಿಸುವುದು, ಅಲ್ಲದೆ ತ್ವಚೆಗೆ ಉಸಿರಾಡಲು ಸಾಧ್ಯವಾಗದೆ ಮುಖದಲ್ಲಿ ಗುಳ್ಲೆಗಳು ಬರುವುದು. ಆದ್ದರಿಂದ ಮೇಕಪ್ ಹಾಕದೇ ಇದ್ದರೆ ಒಳ್ಳೆಯದು. ಹಾಕುವುದಾದರೂ ತೆಳು ಮೇಕಪ್ ಹಾಕಿ. ಇದರಿಂದ ಮಾಸ್ಕ್‌ ಧರಿಸಿದಾಗ ತುಂಬಾ ಸೆಕೆಯಾಗುವುದಿಲ್ಲ.

 ಫೇಶಿಯಲ್ ಶೀಲ್ಡ್‌ ಬಳಸುತ್ತೀರಾ?

ಫೇಶಿಯಲ್ ಶೀಲ್ಡ್‌ ಬಳಸುತ್ತೀರಾ?

ಫೇಶಿಯಲ್‌ ಶೀಲ್ಡ್‌ ಬಳಸಿದಾಗ ಮತ್ತಷ್ಟು ಸೆಕೆಯಾಗುವುದು. ತುಂಬಾ ಹೊತ್ತು ಧರಿಸಬೇಡಿ, ಯಾರೂ ಇಲ್ಲದ ಅಥವಾ ಸಾಮಾಜಿಕ ಅಂತರ ಕಾಯ್ದುಕೊಂಡು ಆ ಶೀಲ್ಡ್ ತೆಗೆದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.

ಎಕ್ಸ್‌ಟ್ರಾ ಮಾಸ್ಕ್ ನಿಮ್ಮ ಬಳಿ ಇರಲಿ

ಎಕ್ಸ್‌ಟ್ರಾ ಮಾಸ್ಕ್ ನಿಮ್ಮ ಬಳಿ ಇರಲಿ

ಬಿಸಿಲಿನಲ್ಲಿ ಓಡಾಡುವಾಗ ಒಂದು ಅಥವಾ ಹೆಚ್ಚು ಮಾಸ್ಕ್‌ ಜೊತೆಗೆ ಇರಲಿ. ಒಂದೇ ತುಂಬಾ ಹೊತ್ತು ಬಳಸಬೇಡಿ. ಎರಡು ಅಥವಾ ಮೂರು ಮಾಸ್ಕ್ ಒಂದರ ನಂತರ ಒಮದು ಬಳಸುವುದರಿಂದ ಮುಖ ತುಂಬಾ ಬೆವರಿ, ಮಾಸ್ಕ್‌ ಬೆವರು ನಾತ ಬೀರುವುದನ್ನು ತಡೆಗಟ್ಟಬಹುದು. ಅಲ್ಲದೆ ತ್ವಚೆ ಆರೋಗ್ಯದ ದೃಷ್ಟಿಯಿಂದ ಇದು ಮುಖ್ಯ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಎಲ್ಲಕ್ಕಿಂತ ಮುಖ್ಯವಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ. ಮುಖವನ್ನು ಆಗಾಗ ತೊಳೆದು ಒರೆಸಿ ಅಥವಾ ವೆಟ್‌ ಟಿಶ್ಯೂ ಬಳಸಿ. ಹೀಗೆ ಮಾಡಿದರೆ ಮಾಸ್ಕ್‌ನಿಂದ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಿ.

English summary

Tips to Stay Cool While Wearing a Face Mask in kannada

Tips To Stay Cool While Wearing A Face Mask in kannada, Read on...
Story first published: Tuesday, September 21, 2021, 20:00 [IST]
X
Desktop Bottom Promotion