For Quick Alerts
ALLOW NOTIFICATIONS  
For Daily Alerts

ಡಲ್ ಆಗಿರುವ ಕಣ್ಣುಗಳನ್ನು ಆಕರ್ಷಕಗೊಳಿಸಲು ಇಲ್ಲಿವೆ ಸಲಹೆಗಳು

|

ನಿಮ್ಮ ಕಣ್ಣುಗಳ ಹೊಳಪು ಮತ್ತು ಕಾಂತಿ ಮುಖವನ್ನು ಮತ್ತುಷ್ಟು ಸುಂದರವಾಗಿಸುತ್ತದೆ. ಅಷ್ಟೇ ಅಲ್ಲ, ಮನಸ್ಸಿನ ಕನ್ನಡಿ ಕಣ್ಣು ಎಂಬ ಮಾತೇ ಇದೆ. ಆದರೆ ಇದೇ ಕಣ್ಣುಗಳು ಡಾರ್ಕ್ ಸರ್ಕಲ್ ಅಥವಾ ಡಲ್‌ನೆಸ್‌ನಿಂದ ತುಂಬಿಕೊಂಡಿದ್ದರೆ, ಸೌಂದರ್ಯವೇ ಹಾಳಾಗಿ ಬಿಡುತ್ತದೆ.

ಇಂದಿನ ಕಾಲದಲ್ಲಿ ಲ್ಯಾಪ್ ಟಾಪ್ ಮುಂದೆ 10-12 ಗಂಟೆಗಳ ಕಾಲ ಕಳೆಯುತ್ತಾರೆ ಜೊತೆಗೆ ಮೊಬೈಲ್ ಬೇರೆ. ಇದರಿಂದಾಗಿ ಕಣ್ಣಿನ ಆರೋಗ್ಯ ಹಾಳಾಗುತ್ತದೆ. ಅದಕ್ಕಾಗಿ ನಾವಿಲ್ಲ ಕಣ್ಣುಗಳನ್ನು ಸುಂದರ ಮತ್ತು ಹೊಳೆಯುವಂತೆ ಮಾಡಲು ಸಲಹೆಗಳನ್ನು ಹೇಳಿದ್ದೇವೆ.

ಕಣ್ಣುಗಳನ್ನು ಸುಂದರ ಮತ್ತು ಹೊಳೆಯುವಂತೆ ಮಾಡಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

1. ಕಣ್ಣಿಗೆ ಕೋಲ್ಡ್ ಪ್ಯಾಕ್:

1. ಕಣ್ಣಿಗೆ ಕೋಲ್ಡ್ ಪ್ಯಾಕ್:

ನಿಮ್ಮ ಕಣ್ಣುಗಳು ತುಂಬಾ ದಣಿದಿದ್ದರೆ, ಅದಕ್ಕಾಗಿ ಸರಳ ಪರಿಹಾರಗಳಿವೆ. ಸೌತೆಕಾಯಿಯಿಂದ ಎರಡು ಹೋಳುಗಳನ್ನು ಕತ್ತರಿಸಿ ಸ್ವಲ್ಪ ಸಮಯದವರೆಗೆ ಫ್ರಿಜ್ ನಲ್ಲಿಡಿ. ತಣ್ಣಗಾದ ನಂತರ, ಅವುಗಳನ್ನು ಕಣ್ಣುಗಳ ಮೇಲಿಟ್ಟು, ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ಇದಲ್ಲದೇ, ಹತ್ತಿಗೆ ಪನ್ನೀರನ್ನು ಹಾಕಿ ಅದನ್ನು ಕಣ್ಣಿಗೆ ಹಚ್ಚಬಹುದು. ಇದು ಕಣ್ಣಿನ ಆಯಾಸವನ್ನು ನಿವಾರಿಸುವುದಲ್ಲದೆ, ಡಾರ್ಕ್ ಸರ್ಕಲ್ ಕಡಿಮೆ ಮಾಡುತ್ತದೆ.

2. ಐ-ಡ್ರಾಪ್:

2. ಐ-ಡ್ರಾಪ್:

ನೀವು ಕಣ್ಣಿನ ಕಿರಿಕಿರಿ, ಶುಷ್ಕತೆ ಅಥವಾ ಆಯಾಸವನ್ನು ಹೊಂದಿದ್ದರೆ, ಐ ಡ್ರಾಪ್ ಸಹ ಬಳಸಬಹುದು. ಇದಕ್ಕಾಗಿ, ಕಣ್ಣಿನ ತಜ್ಞರನ್ನು ಸಂಪರ್ಕಿಸಿದ ನಂತರವೇ ಬಳಸುವುದು ಉತ್ತಮ.

3. ಐ ಕ್ರೀಮ್ ಬಳಸುವುದು:

3. ಐ ಕ್ರೀಮ್ ಬಳಸುವುದು:

ಯಾವಾಗಲೂ ಚರ್ಮದ ಆರೈಕೆಯ ದಿನಚರಿಯೊಂದಿಗೆ ದಿನವನ್ನು ಪ್ರಾರಂಭಿಸಿ. ಮುಖದ ಮೇಲೆ ಹಾಗೂ ಕಣ್ಣಿನ ಕೆಳಗೆ ನಿಯಮಿತವಾಗಿ ಐ-ಕ್ರೀಮ್ ಬಳಸಿ. ಇದು ಕಣ್ಣಿನ ಸುತ್ತಲಿನ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಅಲ್ಲದೆ, ಕಣ್ಣುಗಳ ಸುತ್ತ ಮಸಾಜ್ ಮಾಡಿ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

4. ಕಣ್ಣಿನ ಮಸಾಜ್:

4. ಕಣ್ಣಿನ ಮಸಾಜ್:

ಪ್ರತಿದಿನ ಕ್ರೀಮ್ ಅಥವಾ ಎಣ್ಣೆಯನ್ನು ಹಚ್ಚಿ, ಕಣ್ಣುಗಳ ಸುತ್ತ ನಿಧಾನವಾಗಿ ಮಸಾಜ್ ಮಾಡಿ. ಈ ಕಾರಣದಿಂದಾಗಿ, ಚರ್ಮವು ಹೊಳೆಯುತ್ತದೆ ಮತ್ತು ಕಣ್ಣುಗಳು ಕೂಡ ಅರಳುತ್ತವೆ.

5. ಮಸ್ಕರಾವನ್ನು ಹಚ್ಚಿ:

5. ಮಸ್ಕರಾವನ್ನು ಹಚ್ಚಿ:

ಕಣ್ಣುಗಳನ್ನು ಹೈಲೈಟ್ ಮಾಡಲು ನೀವು ಐಲೈನರ್ ಅಥವಾ ಕಾಜಲ್ ಅನ್ನು ಬಳಸಬಹುದು. ಇದು ಕಣ್ಣುಗಳಿಗೆ ಹೊಳಪನ್ನು ನೀಡುವುದಲ್ಲದೇ, ಪ್ರಕಾಶಮಾನವಾಗಿ ಕಾಣುತ್ತವೆ. ಇದರ ಹೊರತಾಗಿ, ಐಬ್ರೋವ್ ಪೆನ್ಸಿಲ್ ಅನ್ನು ಸಹ ಬಳಸಬಹುದು.

6. ಕನ್ಸೀಲರ್ ಬಳಸಿ:

6. ಕನ್ಸೀಲರ್ ಬಳಸಿ:

ನಿಮ್ಮ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ ಹೊಂದಿದ್ದರೆ, ಕನ್ಸೀಲರ್ ಅನ್ನು ಸಹ ಬಳಸಬಹುದು. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ. ಇದಕ್ಕಾಗಿ, ಸ್ವಲ್ಪ ಕನ್ಸೀಲರ್ ತೆಗೆದುಕೊಂಡು ಅದನ್ನು ನಿಮ್ಮ ಬೆರಳುಗಳಿಂದ ಅಥವಾ ಸ್ಪಂಜಿನಿಂದ ಪ್ಯಾಟ್ ಮಾಡಿ.

English summary

Tips To Make Tired Eyes Look Beautiful in Kannada

Here we talking about Tips To Make Tired Eyes Look Beautiful in Kannada, read on
Story first published: Thursday, October 14, 2021, 18:37 [IST]
X
Desktop Bottom Promotion