For Quick Alerts
ALLOW NOTIFICATIONS  
For Daily Alerts

ಸೌಂದರ್ಯವನ್ನು ಕುಗ್ಗಿಸುತ್ತವೆ ನಿಮ್ಮ ಈ ಅಭ್ಯಾಸಗಳು

|

ಪ್ರತಿಯೊಬ್ಬರಿಗೂ ಸೌಂದರ್ಯ ಎನ್ನುವುದು ತುಂಬಾ ಮುಖ್ಯ. ಅದಕ್ಕಾಗಿ, ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಮುಖಕ್ಕೆ ಫೇಸ್ ವಾಶ್, ಕೈಕಾಲುಗಳಿಗೆ ಪೆಡಿಕ್ಯುರ್, ಕೂದಲಿಗೆ ಶಾಂಪೂ-ಕಂಡೀಷನರ್ ಹೀಗೆ ದೇಹದ ಪ್ರತಿಯೊಂದು ಭಾಗಕ್ಕೂ ವಿಭಿನ್ನವಾದ ಆರೈಕೆಯನ್ನು ಮಾಡುತ್ತಾರೆ. ಆದರೆ ಆರೈಕೆಯ ಈ ದಾರಿಯಲ್ಲಿ ನಮಗೇ ಅರಿಯದಂತೆ ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇವುಗಳು ನಮ್ಮ ಸೌಂದರ್ಯ ಕುಂದಲು ಪರೋಕ್ಷವಾಗಿ ಕಾರಣವಾಗುತ್ತವೆ. ಹಾಗಾದರೆ ಪ್ರತಿನಿತ್ಯ ಮಾಡುವ ತಪ್ಪುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸೌಂದರ್ಯ ಕಡಿಮೆಯಾಗಲು ಕಾರಣವಾಗುವ ಅಭ್ಯಾಸಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಫೇಸ್ ವಾಶ್ ಹಚ್ಚಿ ಜೋರಾಗಿ ಉಜ್ಜುವುದು:

1. ಫೇಸ್ ವಾಶ್ ಹಚ್ಚಿ ಜೋರಾಗಿ ಉಜ್ಜುವುದು:

ಅನೇಕ ಜನರು ಫೇಸ್ ವಾಶ್ ಮುಖಕ್ಕೆ ಹಚ್ಚಿ, ಜೋರಾಗಿ ಉಜ್ಜುತ್ತಾರೆ. ಇದು ಸಂಪೂರ್ಣವಾಗಿ ತಪ್ಪು. ಮುಖಕ್ಕೆ ಹಚ್ಚಿದ ನಂತರ ಯಾವಾಗಲೂ ಬೆರಳುಗಳ ತುದಿಯಿಂದ ಲಘು ಮಸಾಜ್ ಮಾಡಬೇಕು. ದಿನಕ್ಕೆ ಒಂದು ಅಥವಾ ಎರಡು ಬಾರಿ ಉಗುರುಬೆಚ್ಚಗಿನ ಅಥವಾ ತಣ್ಣೀರಿನಿಂದ ಮುಖ ತೊಳೆಯುವುದು ಉತ್ತಮ. ಆಲ್ಕೋಹಾಲ್ ನಿಂದ ತಯಾರಿಸಿದ ಫೇಸ್ ವಾಶ್ ಮತ್ತು ಕ್ಲೆನ್ಸರ್ ಮತ್ತು ಹೆಚ್ಚು ರಾಸಾಯನಿಕ ಮುಕ್ತ ಫೇಸ್ ವಾಶ್ ಬಳಸಿ.

2. ವ್ಯಾಕ್ಸಿಂಗ್ ಮುನ್ನ ಪೆಡಿಕ್ಯೂರ್ ಮಾಡಿಕೊಳ್ಳುವುದು:

2. ವ್ಯಾಕ್ಸಿಂಗ್ ಮುನ್ನ ಪೆಡಿಕ್ಯೂರ್ ಮಾಡಿಕೊಳ್ಳುವುದು:

ವ್ಯಾಕ್ಸಿಂಗ್ ಮುಂಚೆಯೇ ಪೆಡಿಕ್ಯೂರ್ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಚರ್ಮಕ್ಕೆ ಸುಲಭವಾಗಿ ಅಂಟಿಕೊಳ್ಳಬಹುದು, ಇದು ಸೋಂಕಿಗೆ ಕಾರಣವಾಗಬಹುದು. ವ್ಯಾಕ್ಸಿಂಗ್ ಮಾಡಿದ ನಂತರ ಕನಿಷ್ಠ 24 ಗಂಟೆಗಳ ನಂತರ ಪಾದೋಪಚಾರ ಅಥವಾ ಪೆಡಿಕ್ಯೂರ್ ಮಾಡುವುದು ಉತ್ತಮ. ಪೆಡಿಕ್ಯೂರ್ ಸಮಯದಲ್ಲಿ ನಿಮ್ಮ ಉಗುರುಗಳ ಹೊರಪೊರೆಗಳನ್ನು ಕತ್ತರಿಸಬೇಡಿ ಏಕೆಂದರೆ ಅವುಗಳು ಚರ್ಮವನ್ನು ಪ್ರವೇಶಿಸಲು ಸೂಕ್ಷ್ಮಜೀವಿಗಳನ್ನು ಆಹ್ವಾನಿಸಬಹುದು.

3. ತುಂಬಾ ಶಾಂಪೂ ಮಾಡುವುದು:

3. ತುಂಬಾ ಶಾಂಪೂ ಮಾಡುವುದು:

ಶಾಂಪೂ ನೆತ್ತಿಯ ಮೇಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ. ಆದ್ದರಿಂದ ಹೆಚ್ಚು ಶಾಂಪೂ ಮಾಡಿದರೆ, ಅದು ನಿಮ್ಮ ಕೂದಲನ್ನು ಒಣಗಿಸಿ ನಿರ್ಜೀವವಾಗಿಸಬಹುದು. ನಿಮ್ಮ ಕೂದಲಿನ ಪ್ರಕಾರವನ್ನು ಅವಲಂಬಿಸಿ, ವಾರಕ್ಕೆ ಎಷ್ಟು ಬಾರಿ ನಿಮ್ಮ ಕೂದಲನ್ನು ತೊಳೆಯಬೇಕು ಎಂಬುದನ್ನು ನಿರ್ಧರಿಸಬಹುದು.

4. ಒಣ ಕೂದಲಿನಲ್ಲಿ ಈಜುವುದು:

4. ಒಣ ಕೂದಲಿನಲ್ಲಿ ಈಜುವುದು:

ಸ್ವಿಮ್ಮಿಂಗ್ ಪೂಲ್‌ನ ನೀರಿನಲ್ಲಿ ಕೂದಲನ್ನು ಹಾನಿ ಮಾಡುವ ಅನೇಕ ರಾಸಾಯನಿಕಗಳಿವೆ. ಆದ್ದರಿಂದ, ಒಣ ಕೂದಲಿನಲ್ಲಿ ಈಜುವುದನ್ನು ತಪ್ಪಿಸಬೇಕು. ಈಜುವ ಮೊದಲು ನಿಮ್ಮ ಕೂದಲನ್ನು ನೀರಿನಿಂದ ಸ್ವಲ್ಪ ಒದ್ದೆಮಾಡಿ. ಈಜಿದ ತಕ್ಷಣ ನಿಮ್ಮ ಕೂದಲನ್ನು ಶಾಂಪೂ ಮಾಡಿ, ಅದು ನಿಮ್ಮ ಕೂದಲಿನ ಸೌಂದರ್ಯ, ಹೊಳಪು ಮತ್ತು ಶಕ್ತಿಯನ್ನು ಕಾಪಾಡುತ್ತದೆ.

5. ಕಿವಿ ಸ್ವಚ್ಛಗೊಳಿಸುವುದು:

5. ಕಿವಿ ಸ್ವಚ್ಛಗೊಳಿಸುವುದು:

ಸಾಮಾನ್ಯವಾಗಿ ಜನರು ಹತ್ತಿಯ ಬಡ್ಸ್‌ ಬಳಸಿ, ಕಿವಿಯನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ, ಅದು ಸರಿಯಲ್ಲ. ಈ ಇಯರ್ ಬಡ್ಸ್ ಹೆಚ್ಚು ಕಲ್ಮಶ ಒಳಗೆ ಬರಲು ಅನುವು ಮಾಡಿಕೊಡುತ್ತದೆ. ಇದು ಶ್ರವಣಕ್ಕೆ ಸಹಾಯ ಮಾಡುವ ಕಿವಿಯ ಸಣ್ಣ ಮೂಳೆಗಳನ್ನು ಹಾನಿಗೊಳಿಸಬಹುದು. ಕಿವಿಯಲ್ಲಿರುವ ಗುಗ್ಗಿಯನ್ನು ಸ್ವಚ್ಛಗೊಳಿಸಲು ನೀವು ವೈದ್ಯರ ಸಹಾಯವನ್ನು ತೆಗೆದುಕೊಳ್ಳಬಹುದು.

English summary

These Habits Can Reduce Your Beauty in Kannada

Here we talking about These Habits Can Reduce Your Beauty in Kannada, read on
Story first published: Wednesday, October 6, 2021, 10:42 [IST]
X
Desktop Bottom Promotion