For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತುಟಿಗಳ ಅಂದ ಹೆಚ್ಚಲು ಕಾಳಜಿ ಹೀಗಿರಲಿ

|

ತುಟಿಗಳ ಬಗ್ಗೆ ವರ್ಣಿಸದೆ ಇರುವಂತಹ ಕವಿಗಳೇ ಇಲ್ಲವೆಂದರೂ ತಪ್ಪಾಗದು. ಯಾಕೆಂದರೆ ಸೌಂದರ್ಯದಲ್ಲಿ ತುಟಿಯ ಮಹತ್ವವು ಅಷ್ಟಿದೆ. ಮುಖದ ಮೇಲಿನ ಸೌಂದರ್ಯದಲ್ಲಿ ಕಣ್ಣು ಹಾಗೂ ತುಟಿಗಳು ಪ್ರಮುಖವಾಗಿರುವುದು. ಇದು ನಮ್ಮ ದೇಹದ ಸೌಂದರ್ಯದ ಒಂದು ಅಂಗ ಎಂದು ತಿಳಿದಿದ್ದರೂ ಸಹಿತ ನಾವು ಇದನ್ನು ಕಡೆಗಣಿಸುತ್ತಲೇ ಬಂದಿದ್ದೇವೆ. ಹೀಗಾಗಿ ತುಟಿಗಳು ಹೆಚ್ಚು ನಿರ್ಲಕ್ಷ್ಯ ಒಳಗಾದ ಅಂಗವೆನ್ನಬಹುದು.
ಮಹಿಳೆಯರು ಮೇಕಪ್ ಮಾಡಿಕೊಳ್ಳುವ ವೇಳೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದನ್ನು ಬಿಟ್ಟರೆ ಅದರ ಆರೈಕೆ ಕಡೆ ಗಮನ ಹರಿಸುವುದು ತುಂಬಾ ಕಡಿಮೆ. ಅದರಲ್ಲೂ ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಧೂಳು ಹಾಗೂ ವಾತಾವರಣವು ಕಲುಷಿತವಾಗಿರುವ ಕಾರಣದಿಂದಾಗಿ ತುಂಬಾ ಸೂಕ್ಷ್ಮ ಅಂಗವಾಗಿರುವ ತುಟಿಗಳ ಮೇಲೆ ಇದರ ನೇರ ಪರಿಣಾಮ ಬೀರುವುದು. ಅಲ್ಲದೇ ಚಳಿಗಾಲದಲ್ಲಿ ವಾತಾವರಣದ ಬದಲಾವಣೆಯಿಂದಾಗಿ ತುಟಿಗಳು ಬೇಗ ಒಣಗುತ್ತದೆ. ಇದು ತುಟಿಗಳಿಗೆ ಇನ್ನಷ್ಟು ಕಿರಿಕಿರಿ ಎನಿಸುತ್ತದೆ. ಹೀಗಾಗಿ ತುಟಿಗಳು ಕಪ್ಪಾಗಿ, ತನ್ನ ನೈಸರ್ಗಿಕ ಕಾಂತಿ ಕಳೆದುಕೊಳ್ಳುವುದು. ಇಂತಹ ಸಮಯದಲ್ಲಿ ಹೆಚ್ಚಿನವರು ಕಾಸ್ಮೆಟಿಕ್ ಮೊರೆ ಹೋಗುವರು. ಆದರೆ ನೈಸರ್ಗಿಕ ಕಾಂತಿ ಪಡೆಯಲು ಈ ಲೇಖನದಲ್ಲಿ ನಾವು ನಿಮಗೆ ಕೆಲವೊಂದು ವಿಧಾನಗಳನ್ನು ತಿಳಿಸಿಕೊಡಲಿದ್ದೇವೆ. ಇದು ತುಂಬಾ ನಯ, ಕಾಂತಿ ಹಾಗೂ ನೋಡಿದಾಕ್ಷಣ ಮುತ್ತಿಕ್ಕಬೇಕು ಎನ್ನುವಂತಹ ತುಟಿಗಳನ್ನು ಪಡೆಯಲು ನೆರವಾಗಲಿದೆ.

lip care tips

ತುಟಿಗಳ ಆರೈಕೆಗೆ ಕೆಲವು ನೈಸರ್ಗಿಕ ವಿಧಾನಗಳು

ಅತೀ ಅಗತ್ಯವೆಂದಾದಾಗ ಮಾತ್ರ ಲಿಪ್ ಸ್ಟಿಕ್ ಬಳಸಿ

ಅತೀ ಅಗತ್ಯವೆಂದಾದಾಗ ಮಾತ್ರ ಲಿಪ್ ಸ್ಟಿಕ್ ಬಳಸಿ

ಲಿಪ್ ಸ್ಟಿಕ್ ನಲ್ಲಿ ರಾಸಾಯನಿಕಗಳು ಇದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಲಿಪ್ ಸ್ಟಿಕ್ ನಲ್ಲಿ ಮೇಣ, ಸುಗಂಧ ದ್ರವ್ಯ, ವರ್ಣದ್ರವ್ಯ, ಎಣ್ಣೆ ಮತ್ತು ಆಲ್ಕೋಹಾಲ್ ಮಿಶ್ರಣವಿರುವುದು. ಬೇರೆ ಬೇರೆ ರೀತಿಯ ಲಿಪ್ ಸ್ಟಿಕ್ ತಯಾರಿಸಿಕೊಳ್ಳಲು ವಿವಿಧ ರೀತಿಯ ಮೇಣ, ವರ್ಣದ್ರವ್ಯ, ಎಣ್ಣೆ ಮಿಶ್ರಣವನ್ನು ಬಳಸಲಾಗುತ್ತದೆ. ದೀರ್ಘಕಾಲ ತನಕ ರಾಸಾಯನಿಕಗಳನ್ನು ಬಳಸುವುದು ದೇಹಕ್ಕೆ ಒಳ್ಳೆಯ ವಿಚಾರವಲ್ಲ. ಲಿಪ್ ಸ್ಟಿಕ್ ಯಾವಾಗ ಅತೀ ಅಗತ್ಯವಿದೆಯಾ ಆಗ ಮಾತ್ರ ಬಳಸಿಕೊಳ್ಳಿ. ಇದರಲ್ಲಿ ರಾಸಾಯನಿಕವಿದೆ ಮತ್ತು ಇದು ತುಟಿಗಳಿಗೆ ಒಳ್ಳೆಯದಲ್ಲ. ಶಿಯಾ ಬೆಣ್ಣೆ, ವಿಟಮಿನ್ ಇ, ಜೊಜೊಬಾ ಎಣ್ಣೆ ಇತ್ಯಾದಿ ಜತೆಗೆ ನೀವು ಲಿಪ್ ಸ್ಟಿಕ್ ಬಳಸಿಕೊಳ್ಳಿ. ಇದು ಮೊಶ್ಚಿರೈಸ್ ನೀಡುವುದು. ಲಿಪ್ ಸ್ಟಿಕ್ ಬದಲಿಗೆ ನೀವು ಲಿಪ್ ಬಾಮ್ ಬಳಸಿಕೊಳ್ಳಿ. ಕೆಲವೊಂದು ಉನ್ನತ ದರ್ಜೆಯ ಉತ್ಪನ್ನಗಳನ್ನು ಬಳಸಿ. ನಿವಿಯಾ ಮತ್ತು ಮೇಬೆಲ್ಲೈನ್ ಉತ್ತಮವಾಗಿದೆ.

ತುಟಿಗಳನ್ನು ಹೈಡ್ರೇಟ್ ಆಗಿಡಿ

ತುಟಿಗಳನ್ನು ಹೈಡ್ರೇಟ್ ಆಗಿಡಿ

ದೇಹದ ಶೇ.50-60ರಷ್ಟು ಭಾಗವು ನೀರಿನಾಂಶದಿಂದ ಕೂಡಿದೆ. ಈ ಮಟ್ಟವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು ಮತ್ತು ಇದರ ಪರಿಣಾಮವು ಚರ್ಮದ ಮೇಲೆ ಕಾಣಿಸಿಕೊಳ್ಳುವುದು. ತುಟಿಗಳು ನೈಸರ್ಗಿಕವಾಗಿ ಸ್ವಯಂ ಸಂರಕ್ಷಣೆ ಮಾಡುವುದು ತುಂಬಾ ಕಡಿಮೆ. ಹೀಗಾಗಿ ಇದು ಮೊದಲಿಗೆ ಪರಿಣಾಮ ತೋರಿಸಿಕೊಡುವುದು. ತುಟಿಗಳ ನೈಸರ್ಗಿಕ ಬಣ್ಣ ಉಳಿಸಿಕೊಳ್ಳಲು ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ಹೀಗಾಗಿ ತುಟಿಗಳಲ್ಲಿ ತೇವಾಂಶ ಇಟ್ಟುಕೊಳ್ಳಲು ನೀವು ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಕುಡಿಯಬೇಕು. ಇಷ್ಟು ಮಾತ್ರವಲ್ಲದೆ ನಿಮ್ಮ ಆಹಾರ ಕ್ರಮದಲ್ಲಿ ನೀರಿನಾಂಶ ಹೆಚ್ಚಾಗಿರುವಂತಹ ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ, ದ್ರಾಕ್ಷಿ ಮತ್ತು ಲಿಂಬೆ ಬಳಸಿ.

ತುಟಿಗಳನ್ನು ನೆಕ್ಕುವುದು ಅಥವಾ ಕಚ್ಚುವುದನ್ನು ಇಂದೇ ಬಿಟ್ಟುಬಿಡಿ

ತುಟಿಗಳನ್ನು ನೆಕ್ಕುವುದು ಅಥವಾ ಕಚ್ಚುವುದನ್ನು ಇಂದೇ ಬಿಟ್ಟುಬಿಡಿ

ಬಾಯಿಯ ಜೊಲ್ಲು ತುಟಿಗಳಿಗೆ ಮೊಶ್ಚಿರೈಸ್ ನೀಡುವ ಬದಲು ಅದನ್ನು ಮತ್ತಷ್ಟು ಒಣಗುವಂತೆ ಮಾಡುವುದು. ಚರ್ಮ ತಜ್ಞರ ಪ್ರಕಾರ ತುಟಿಗಳನ್ನು ನೆಕ್ಕಿಕೊಂಡು ಅದನ್ನು ಒದ್ದೆಯಾಗಿ ಇಡುತ್ತೇವೆಂದು ಭಾವಿಸಿದ್ದರೆ ಅದು ಖಂಡಿತವಾಗಿಯೂ ತಪ್ಪು. ಹೀಗೆ ಮಾಡಿದರೆ ಆಗ ತುಟಿಗಳು ಮತ್ತಷ್ಟು ಒಣಗಿ ಹೋಗುವುದು. ಕೆಲವರಿಗೆ ತುಟಿಗಳಿಗೆ ಕಚ್ಚುವ ಅಭ್ಯಾಸವಿರುವುದು, ಆದರೆ ಇದನ್ನು ಬಿಡಬೇಕು. ಯಾಕೆಂದರೆ ಇದು ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಇದರ ಬದಲಿಗೆ ಲಿಪ್ ಬಾಮ್ ತೆಗೆದುಕೊಂಡು ಒಣಗಿದ ವೇಳೆ ಅದನ್ನು ಹಚ್ಚಿಕೊಳ್ಳಿ.

ತುಟಿ ಕಚ್ಚುವುದು ಮತ್ತು ತುಟಿ ಬಾಮ್ ನೆಕ್ಕುವುದು ತುಂಬಾ ಜನರು ಎದುರಿಸುತ್ತಿರುವಂತಹ ವಿಲಕ್ಷಣ ನಡತೆಯಾಗಿದೆ. ಇದು ಧೈರ್ಯಗುಂದಿರುವುದು ಅಥವಾ ಒತ್ತಡದ ಲಕ್ಷಣವಾಗಿದೆ. ಇದು ಒಂದು ಕ್ಷಣಕ್ಕೆ ನಿಮ್ಮ ನರಗಳಿಗೆ ಶಮನ ನೀಡಬಹುದು. ಆದರೆ ದೀರ್ಘಾವಧಿಗೆ ಇದು ತುಟಿಗಳಿಗೆ ಹಾನಿ ಉಂಟು ಮಾಡುವುದು. ಇದು ತುಟಿಗಳನ್ನು ತುಂಬಾ ಒಣ, ಒಡೆದ ಮತ್ತು ಕೆಲವೊಂದು ಸಲ ರಕ್ತಸ್ರಾವವು ಆಗಬಹುದು. ಇದನ್ನು ತಡೆಯಲು ಒಳ್ಳೆಯ ವಿಧಾನವೆಂದರೆ ರುಚಿ ಹೊಂದಿರುವ ಲಿಪ್ ಬಾಮ್ ಬಳಸಬೇಡಿ ಮತ್ತು ಒತ್ತಡ ಕಡಿಮೆ ಮಾಡಲು ನೀವು ಬೇರೆ ದಾರಿಗಳನ್ನು ಹುಡುಕಿಕೊಳ್ಳಿ.

ಎಸ್ ಪಿಎಫ್ ಇರುವ ಲಿಪ್ ಬಾಮ್ ಬಳಸಿ

ಎಸ್ ಪಿಎಫ್ ಇರುವ ಲಿಪ್ ಬಾಮ್ ಬಳಸಿ

ಬಿಸಿಲಿಗೆ ಹೊರಗಡೆ ಹೋದರೆ ಆಗ ನೇರವಾಗಿ ತುಟಿಗಳಿಗೆ ಸೂರ್ಯನ ಕಿರಣಗಳು ಬಿದ್ದು ಅದು ಕಪ್ಪಾಗುವುದು. ಯುವಿ ಕಿರಣಗಳು ಚರ್ಮಕ್ಕೆ ಉಂಟು ಮಾಡುವಷ್ಟೇ ಹಾನಿಯನ್ನು ತುಟಿಗಳ ಮೇಲೆ ಮಾಡುವುದು. ಬಿಸಿಲಿಗೆ ಹೊರಗಡೆ ಹೋಗುವುದು ಅನಿವಾರ್ಯವಾದಾಗ ಎಸ್ ಪಿಎಫ್ ಹೊಂದಿರುವಂತಹ ಲಿಪ್ ಬಾಮ್ ಬಳಸಿಕೊಳ್ಳಿ. ಹಲವಾರು ಉತ್ತಮ ಗುಣಮಟ್ಟದ ಕಂಪೆನಿಗಳು ಲಿಪ್ ಸ್ಟಿಕ್, ಗ್ಲೊಸೆಸ್ ಮತ್ತು ಲಿಪ್ ಬಾಮ್ ಗಳನ್ನು ಮಾರುತ್ತದೆ ಇವುಗಳನ್ನು ಬಳಸಿ.

ವಾರದಲ್ಲಿ ಒಂದು ಸಲ ಸತ್ತ ಚರ್ಮ ಕಿತ್ತುಹಾಕಿ

ವಾರದಲ್ಲಿ ಒಂದು ಸಲ ಸತ್ತ ಚರ್ಮ ಕಿತ್ತುಹಾಕಿ

ಸತ್ತ ಚರ್ಮದ ಪದರದ ಬದಲಿಗೆ ಬೇರೆ ಚರ್ಮವನ್ನು ಅಳವಡಿಸಲು ಚರ್ಮದ ಅಂಗಾಂಶಗಳು ಹೆಚ್ಚಿನ ನಿರಂತರ ಪ್ರಕ್ರಿಯೆಗೆ ಒಳಗಾಗುವುದು. ಈ ಪ್ರಕ್ರಿಯೆಯು ಚರ್ಮವನ್ನು ತುಂಬಾ ನಯ ಹಾಗೂ ಬಿಗಿಯಾಗಿಡುವುದು. ಆದರೆ ಈ ಪದರವು ಸಂಪೂರ್ಣವಾಗಿ ತೆಗೆಯದೆ ಇದ್ದರೆ ಆಗ ಚರ್ಮವು ಸತ್ತಂತೆ ಮತ್ತು ನಿಸ್ತೇಜವಾದಂತೆ ಕಾಣಿಸುವುದು. ಇದೇ ರೀತಿ ತುಟಿಗಳಿಗೆ ಕೂಡ.

ವಾರದಲ್ಲಿ ಒಂದು ಸಲ ನೀವು ನೈಸರ್ಗಿಕ ಸ್ಕ್ರಬ್ ಬಳಸಿಕೊಂಡು ಸತ್ತ ಚರ್ಮವನ್ನು ಕಿತ್ತುಹಾಕಿ ಮತ್ತು ಒಣ ಚರ್ಮವನ್ನು ದೂರ ಮಾಡಿ. ಇದಕ್ಕಾಗಿ ನೀವು ಆಲಿವ್ ತೈಲ ಮತ್ತು ಸಕ್ಕರೆ ಬಳಸಿಕೊಂಡು ಸ್ಕ್ರಬ್ ಮಾಡಬಹುದು. ಸ್ಕ್ರಬ್ ಮಾಡಿದ ಬಳಿಕ ನೀವು ತುಟಿಗಳಿಗೆ ಬೆಣ್ಣೆ ಹಚ್ಚಬಹುದು ಅಥವಾ ತುಟಿಗಳ ಮೊಶ್ಚಿರೈಸರ್ ಹಚ್ಚಬಹುದು. ಇದು ತುಟಿಗಳ ಸೌಂದರ್ಯದ ಆರೈಕೆಯಲ್ಲಿ ಅತೀ ಪ್ರಾಮುಖ್ಯತೆ ಪಡೆದಿರುವುದು.

ತುಟಿಗಳಲ್ಲಿ ತೇವಾಂಶ ಕಾಯ್ದುಕೊಳ್ಳಿ

ತುಟಿಗಳಲ್ಲಿ ತೇವಾಂಶ ಕಾಯ್ದುಕೊಳ್ಳಿ

ತುಟಿಗಳಲ್ಲಿ ತೇವಾಂಶ ಕಡಿಮೆಯಾದರೆ ಆಗ ತುಟಿಗಳಿಗೆ ಸಮಸ್ಯೆ ಆಗುವುದು. ಇದನ್ನು ತಡೆಯಲು ಪೂರ್ವ ತಯಾರಿ ನಡೆಸುವುದು ಒಳ್ಳೆಯ ವಿಧಾನ. ಸ್ವಲ್ಪ ಪೌಡರ್ ಅನ್ನು ನಿಮ್ಮ ಕರವಸ್ತ್ರಕ್ಕೆ ಹಾಕಿಕೊಳ್ಳಿ ಮತ್ತು ಅದನ್ನು ತುಟಿಗಳ ಮೇಲಿಡಿ. ಇದನ್ನು ಮೆತ್ತಗೆ ಒತ್ತಿ. ಇದರಿಂದ ತೇವಾಂಶ ಉಳಿಯುವುದು.

ತುಟಿಗಳ ಸುತ್ತಲಿನ ನೆರಿಗೆ ತಡೆಯಿರಿ

ತುಟಿಗಳ ಸುತ್ತಲಿನ ನೆರಿಗೆ ತಡೆಯಿರಿ

ಬಿಸಿಲು, ವಯಸ್ಸು ಮತ್ತು ಧೂಮಪಾನದಿಂದಾಗಿ ತುಟಿಗಳ ಸುತ್ತಲು ನೆರಿಗೆ ಉಂಟಾಗುವುದು. ನೀವು ಧೂಮಪಾನ ಮಾಡುತ್ತಲಿದ್ದರೆ ಬಿಟ್ಟುಬಿಡಿ. ಇದು ಮಾತ್ರ ಒಳ್ಳೆಯ ಪರಿಹಾರ. ಆದರೆ ಇದು ಬೇರೆ ಎರಡು ಕಾರಣಗಳಿಂದಲೂ ನಡೆಯಬಹುದು. ಇದರಿಂದ ರೆಟಿನಾಲ್ ಇರುವಂತಹ ಆ್ಯಂಟಿ ಏಜಿಂಗ್ ಕ್ರೀಮ್ ಬಳಸಿಕೊಳ್ಳಿ. ಇದು ಮುಖವನ್ನು ಹೈಡ್ರೇಟ್ ಆಗಿಡುವುದು.

ಶೀತ ಹುಣ್ಣುಗಳಿಂದ ಪಾರಾಗಿ

ಶೀತ ಹುಣ್ಣುಗಳಿಂದ ಪಾರಾಗಿ

ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಟೈಪ್-1 ನಿಂದಾಗಿ ಶೀತ ಹುಣ್ಣುಗಳು ಕಾಣಿಸಿಕೊಳ್ಳುವುದು. ಆದರೆ ನೀವು ಆಘಾತಕ್ಕೆ ಒಳಗಾಗಬೇಡಿ. ಯಾಕೆಂದರೆ ವಿಶ್ವದಲ್ಲಿ ಶೇ.90ರಷ್ಟು ಜನರಲ್ಲಿ ಈ ವೈರಸ್ ಸುಪ್ತ ರೂಪದಲ್ಲಿದೆ. ಬಿಸಿಲಿಗೆ ಅತಿಯಾಗಿ ಒಗ್ಗಿಕೊಂಡಾಗ ಅಥವಾ ಒತ್ತಡಕ್ಕೆ ಒಳಗಾದಾಗ ಮತ್ತು ಅನಾರೋಗ್ಯಕ್ಕೆ ಒಳಗಾದ ವೇಳೆ ಇದು ಹೊರಬರುವುದು.

ಇದನ್ನು ತಡೆಯಲು ಅತ್ಯುತ್ತಮ ವಿಧಾನವೆಂದರೆ ನೀವು ಎಲ್ಲಾ ಸಮಯದಲ್ಲಿ ಬ್ರಾಡ್ ಸ್ಪೆಕ್ಟ್ರಮ್ ಸ್ಕ್ರೀನ್ ಬಳಸಿ. ಆದರೆ ಈಗಲೂ ಇದ್ದರೆ ಆಗ ನೀವು ಲಿಂಬೆ ಇರುವ ಕ್ರೀಮ್ ಬಳಸಿ.

ತುಟಿಗಳ ಸೌಂದರ್ಯಕ್ಕೆ ಕೆಲವು ಮನೆಮದ್ದುಗಳು

ತುಟಿಗಳ ಸೌಂದರ್ಯಕ್ಕೆ ಕೆಲವು ಮನೆಮದ್ದುಗಳು

ಪ್ರತಿಯೊಬ್ಬರು ತುಂಬಾ ನಯ ಹಾಗೂ ಸುಂದರವಾದ ತುಟಿಗಳನ್ನು ಬಯಸುವರು. ಯಾವುದೇ ರಾಸಾಯನಿಕಗಳು ಇಲ್ಲದೆ ಇರುವ ಮತ್ತು ಮನೆಯಲ್ಲೇ ತಯಾರಿಸಬಹುದಾದ ಮದ್ದುಗಳನ್ನು ಬಳಸಿ.

* ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ ಮಿಶ್ರಣ ಮಾಡಿ. ಇದನ್ನು ತುಟಿಗಳಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡಿ ತುಟಿಗಳಲ್ಲಿ ಹಾಗೆ ಇರಲಿ.

* ಒಣ ಮತ್ತು ಒಡೆದ ತುಟಿಗಳಿಗಾಗಿ ವ್ಯಾಸಲಿನ್ ಜತೆಗೆ ಆಲಿವ್ ತೈಲವನ್ನು ಮಿಶ್ರಣ ಮಾಡಿಕೊಂಡು ದಿನಕ್ಕೆ 3-4 ಸಲ ಬಳಸಿ.

* ಲಿಂಬೆರಸ ಮತ್ತು ಗ್ಲಿಸರಿನ್ ಮಿಶ್ರಣ ಮಾಡಿಕೊಂಡು ಪ್ರತಿನಿತ್ಯವೂ ರಾತ್ರಿ ತುಟಿಗಳಿಗೆ ಹೆಚ್ಚಿಕೊಳ್ಳಿ. ಇದು ತುಟಿಗೆ ಕಾಂತಿ ನೀಡುವುದು.

English summary

Simple Tips To Keep your Lips Beautiful In Winter

Due to pollution and due to rampant use of harsh cosmetics, lips tend to turn dark and lose their natural beauty over time. And we are forced to depend on cosmetics even more. what if you could find a few ways to break that cycle? Doesn’t that sound good? To regain their natural color and beauty, here are some tips for beautiful lips which will help you regain the soft, luscious lips look.
Story first published: Thursday, January 9, 2020, 12:40 [IST]
X
Desktop Bottom Promotion