For Quick Alerts
ALLOW NOTIFICATIONS  
For Daily Alerts

ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ

|

ನಮ್ಮ ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿದ್ದು, ದಿನವಿಡೀ ಲ್ಯಾಪ್‌ಟಾಪ್‌ಗಳು, ಟಿವಿ ಮತ್ತು ಫೋನ್‌ಗಳಿಗೆ ಅಂಟಿಕೊಂಡಿದೆ. ಇದರಿಂದ ಕಣ್ಣಿಗೆ ಹೊರೆ ಹೆಚ್ಚಾಗುವುದಂತೂ ಖಂಡಿತ. ಆದರೂ ನಮ್ಮ ಕಣ್ಣು ಯಾವಾಗಲೂ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬೇಕು ಎಂದು ಆಸೆ ಪಡುತ್ತೇವೆ. ಇದಕ್ಕೆ ನಾವು ಆರಿಸಿಕೊಳ್ಳುವ ಮಾರ್ಗ ಕಾಂಟ್ಯಾಕ್ಟ್ ಲೆನ್ಸ್.

ಕಾಂಟ್ಯಾಕ್ಟ್ ಲೆನ್ಸ್ ಗಳು, ನಮಗೆ ದೃಷ್ಟಿಯಲ್ಲಿ ಸಹಾಯ ಮಾಡುವುದಲ್ಲದೇ, ಇಂದು ಲಭ್ಯವಿರುವ ಕಲರ್ ಕಲರ್ ಲೆನ್ಸ್ ಗಳು ನಮ್ಮನ್ನ ಟ್ರೆಂಡಿಯಾಗಿ ಕಾಣುವಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅವುಗಳನ್ನು ಸರಿಯಾಗಿ ಬಳಸುವುದು ಮುಖ್ಯ. ಅದಕ್ಕಾಗಿ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಸುರಕ್ಷಿತವಾಗಿ ಧರಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿ ನಾವು ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ನೀವು ಅನುಸರಿಸಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಹೇಳಿದ್ದೇವೆ.

ಕಾಟ್ಯಾಕ್ಟ್ ಲೆನ್ಸ್ ಧರಿಸುವಾಗ ಅನುಸರಿಬೇಕಾದ ಹಾಗೂ ದೂರವಿಡಬೇಕಾದ ಕೆಲವು ಕಾರ್ಯಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ:

ಕಾಂಟ್ಯಾಕ್ಟ್ ಲೆನ್ಸ್ ಬಳಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ:

ಅನೇಕ ಸಲ ಅವಸರದಲ್ಲಿದ್ದಾಗ, ಕೈಗಳನ್ನು ತೊಳೆಯದೇ, ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುತ್ತಾರೆ ಅಥವಾ ತೆಗೆಯುತ್ತಾರೆ. ಹಿಗೆ ಮಾಡಬೇಡಿ, ಏಕೆಂದರೆ ನಿಮ್ಮ ಕೈಯಲ್ಲಿ ರೋಗಾಣುಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಇರಬಹುದು. ಅದು ನಿಮ್ಮ ಲೆನ್ಸ್ ಗೆ ಅಂಟಿಕೊಂಡು, ಕಣ್ಣಿನ ಸೋಂಕುಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುವ ಮೊದಲು ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ. ಅಷ್ಟೇ ಅಲ್ಲ, ನಿಮ್ಮ ಕೈಗಳನ್ನು ತೊಳೆಯಲು ಎಣ್ಣೆಯುಕ್ತ ಸೋಪ್ ಅನ್ನು ಬಳಸಬೇಡಿ, ತೊಳೆಯುವ ನಂತರ ಟವೆಲ್ನಿಂದ ಒರೆಸಿ.

ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ಮಲಗಬೇಡಿ:

ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ಮಲಗಬೇಡಿ:

ನಿಮ್ಮ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ತೆಗೆಯದೇ ಮಲಗಬೇಡಿ. ಹೀಗೆ ಲೆನ್ಸ್ ಇಟ್ಟುಕೊಂಡು ಮಲಗಿದಾಗ, ನಿಮ್ಮ ಕಣ್ಣುಗಳಿಗೆ ಅಗತ್ಯವಾದ ಆಮ್ಲಜನಕ ಸಿಗುವುದಿಲ್ಲ, ಇದು ಕೂಡ ಕಣ್ಣಿನ ಸೋಂಕಿಗೆ ಕಾರಣವಾಗಬಹುದು. ಅಲ್ಲದೆ, ಲೆನ್ಸ್ ಗಳ ಮೂಲಕ ಬ್ಯಾಕ್ಟೀರಿಯಾವು ನಿಮ್ಮ ಕಣ್ಣನ್ನು ತಲುಪುವ ಸಾಧ್ಯತೆ ಇರುತ್ತದೆ. ಇದು ನಿಮ್ಮ ಕಣ್ಣುಗಳಲ್ಲಿ ಉರಿಯನ್ನು ಉಂಟುಮಾಡುತ್ತದೆ.

ಸಮಯಕ್ಕೆ ಸರಿಯಾಗಿ ಬದಲಾಯಿಸಿ:

ಸಮಯಕ್ಕೆ ಸರಿಯಾಗಿ ಬದಲಾಯಿಸಿ:

ಮಾರುಕಟ್ಟೆಯಲ್ಲಿರುವ ಎಲ್ಲಾ ಕಾಂಟ್ಯಾಕ್ಟ್ ಲೆನ್ಸ್ ಗಳಲ್ಲಿ ವ್ಯಾಲಿಡಿಟಿ ಡೇಟ್ ಇರುತ್ತದೆ. ಆದ್ದರಿಂದ ಅದರಲ್ಲಿರುವ ಸಮಯದವರೆಗೆ ಮಾತ್ರ ಅವುಗಳನ್ನು ಬಳಸಿ. ಅವಧಿ ಮೀರಿದ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಬಳಸಬೇಡಿ. ಇದು ಬಹಳಷ್ಟು ಕಣ್ಣಿನ ಸಮಸ್ಯೆಗಳನ್ನು ಉಂಟುಮಾಡಬಹುದು.

ಲೆನ್ಸ್ ಕೇಸ್ ತೊಳೆಯಿರಿ:

ಲೆನ್ಸ್ ಕೇಸ್ ತೊಳೆಯಿರಿ:

ನಾವು ಸಾಮಾನ್ಯವಾಗಿ ಲೆನ್ಸ್ ಕೇಸ್ ನ್ನು ಕ್ಲೀನ್ ಮಾಡುವುದನ್ನು ಮರೆತುಬಿಡುತ್ತೇವೆ, ಕೇವಲ ಲೆನ್ಸ್ ಅನ್ನು ಕ್ಲೀನ್ ಮಾಡುವತ್ತ ಗಮನ ಹರಿಸುತ್ತೇವೆ. ಆದರೆ, ಪ್ರತಿ ಬಾರಿ ಕಾಂಡ್ಯಾಕ್ಟ್ ಲೆನ್ಸ್ ಬಳಸುವಾಗ, ಅದರ ಪೆಟ್ಟಿಗೆಯನ್ನು ಸ್ವಚ್ಛಗೊಳಿಸಿ. ಪ್ರತಿ 3 ತಿಂಗಳಿಗೊಮ್ಮೆ ಲೆನ್ಸ್ ಕೇಸ್ ಅನ್ನು ಬದಲಾಯಿಸುತ್ತಿರಿ.

ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಮಾಡಬಾರದ ಕೆಲಸಗಳು:

ಕಾಂಟ್ಯಾಕ್ಟ್ ಲೆನ್ಸ್ ಬಳಸುವಾಗ ಮಾಡಬಾರದ ಕೆಲಸಗಳು:

  • ಜೋರು ಗಾಳಿಯಿದ್ದಾಗ ಅಥವಾ ಭಾರೀ ಮಳೆಯಿದ್ದಾಗ, ಈಜುವಾಗ, ಬೈಕ್ ಚಾಲನೆ ಮಾಡುವಾಗ ಲೆನ್ಸ್ ಹಾಕಿಕೊಳ್ಳಬೇಡಿ. ಅಂತಹ ಸಂದರ್ಭಗಳಲ್ಲಿ, ಧೂಳು ಮತ್ತು ಕೊಳಕು ನಿಮ್ಮ ಕಣ್ಣಿಗೆ ಹೋಗುವ ಅಪಾಯವಿದೆ. ಇದು ನಿಮ್ಮ ಲೆನ್ಸ್ ಗಳನ್ನು ಹಾಳು ಮಾಡಬಹುದು. ಅಲ್ಲದೆ, ಇದು ಕಣ್ಣಿನ ಸೋಂಕಿಗೆ ಕಾರಣವಾಗಬಹುದು.
  • ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ದೀರ್ಘಕಾಲ ಬಳಸಿದರೆ, ಅದು ಶುಷ್ಕತೆಗೆ ಕಾರಣವಾಗಬಹುದು. ನಿಮ್ಮ ಕಣ್ಣುಗಳು ಒಣಗದಂತೆ ಕಾಪಾಡಲು, ಮನೆಯಿಂದ ಹೊರಬಂದಾಗಲೆಲ್ಲಾ ಸನ್ಗ್ಲಾಸ್ ಧರಿಸಿ,
  • ಕಾಂಟ್ಯಾಕ್ಟ್ ಲೆನ್ಸ್ ಅನ್ನು ಹೆಚ್ಚು ಗಂಟೆಗಳ ಕಾಲ ಧರಿಸಬೇಡಿ, ನಿಮ್ಮ ಕಣ್ಣುಗಳಲ್ಲಿ ಯಾವುದೇ ಉರಿಯ ಭಾವನೆ ಇದ್ದಲ್ಲಿ, ತಕ್ಷಣ ನಿಮ್ಮ ವೈದ್ಯರ ಬಳಿ ಹೋಗಿ.
English summary

Safety Tips for Contact Lens Wearers in Kannada

Eyes one of the most important sense organs that needs proper care. Here is what you need to keep in mind while wearing your contact lens.
X
Desktop Bottom Promotion