For Quick Alerts
ALLOW NOTIFICATIONS  
For Daily Alerts

ದಿನಾ ಸ್ನಾನ ಮಾಡಿದರೆ ದೇಹದ ಮೇಲೆ ಪರಿಣಾಮವೇನು ಗೊತ್ತಾ?

|

ಸ್ನಾನ ಎಂದರೆ ಕೆಲವರಿಗೆ ಖುಷಿಯಾದರೆ, ಇನ್ನು ಕೆಲವರಿಗೆ ಅಲರ್ಜಿ. ಕೆಲವರು ದಿನಕ್ಕೆ ಎರಡರಿಂದ ಮೂರು ಬಾರಿ ಸ್ನಾನ ಮಾಡುವುದುಂಟು. ಇನ್ನು ಕೆಲವರು ವಾರಗಟ್ಟಲೇ ಸ್ನಾನ ಮಾಡದೆ ಕೂರುವುದುಂಟು.

Health Tips

ಆದರೆ ಭೂಮಿಯ ಮುಕ್ಕಾಲು ಭಾಗ ನೀರಿನಿಂದ ತುಂಬಿದಂತೆ ನಮ್ಮ ದೇಹವು 60% ರಷ್ಟು ನೀರಿನಿಂದ ಮಾಡಲ್ಪಟ್ಟಿದೆ ಎನ್ನುವುದು ನಾವು ತಿಳಿದಿರುವ ಸಂಗತಿ. ಹೀಗಾಗಿ ಸ್ನಾನದ ವಿಚಾರಕ್ಕೆ ಬಂದರೆ ದಿನ ನಿತ್ಯ ಸ್ನಾನ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂದು ನುರಿತ ವೈದ್ಯರು ಹೇಳುತ್ತಾರೆ.

ಅಲ್ಲದೇ ದಿನ ನಿತ್ಯ ಸ್ನಾನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಪ್ರಯೋಜನಗಳು ಕೂಡ ಇದೆ. ಹೀಗಾಗಿ ದಿನ ನಿತ್ಯ ಸ್ನಾನ ಮಾಡುವುದು ಅಥವಾ ವಾರಕ್ಕೆ 3-4 ಬಾರಿಯಾದರೂ ಸ್ನಾನ ಮಾಡುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ ವೈದ್ಯರು. ಆದರೆ ಚರ್ಮದ ಸಮಸ್ಯೆ, ಅಲರ್ಜಿಯಂತಹ ಸಮಸ್ಯೆಗಳು ಇದ್ದರೆ ಅಂತವರು ಸ್ನಾನ ಮಾಡುವ ಕುರಿತು ವೈದ್ಯರಿಂದ ಸಲಹೆ ಪಡೆಯುವುದು ಒಳ್ಳೆಯದು.

ಹಾಗಾದರೆ ಇವತ್ತು ದಿನ ನಿತ್ಯ ಸ್ನಾನ ಮಾಡಿದರೆ ಲಾಭವೇನು? ಇದರಿಂದ್ ನಮಗೆ ಯಾವ ಫೀಲ್ ಆಗುತ್ತೆ? ಈ ಬಗ್ಗೆ ವಿಶೇಷ ವರದಿ ಇಲ್ಲಿದೆ.

1.ನಿಮಗೆ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ!

1.ನಿಮಗೆ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ!

ನಿಮಗೆ ಗೊತ್ತಾ ಸ್ನಾನಕ್ಕೂ ಉಸಿರಾಟಕ್ಕೂ ಸಂಬಂಧ ಇದೆ ಎಂದು? ಹೌದು, ಸ್ನಾನಕ್ಕೂ ಉಸಿರ್ರಾಟಕ್ಕೆ ಸಂಬಂಧವಿದೆ. ದಿನ ನಿತ್ಯ ಸ್ನಾನ ಮಾಡುವುದರಿಂದ ನಿಮ್ಮ ಶ್ವಾಸಕೋಶದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ನೀವು ಸ್ನಾನದ ವೇಳೆ ಅತೀ ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳುತ್ತೀರಿ. ಇನ್ನು ನೀರು ಬೆಚ್ಚಗೆ ಇದ್ದರೆ ಇನ್ನು ಉತ್ತಮ. ಬೆಚ್ಚಗಿನ ನೀರು ಎದೆ ಮೇಲೆ ಹಾಕಿದರೆ ನಿಮ್ಮ ಒತ್ತಡ ಕಡಿಮೆ ಆಗುತ್ತದೆ, ಮಾನಸಿಕವಾಗಿ ಸದೃಢರಾಗುತ್ತೀರಿ. ಅಲ್ಲದೇ ಬೆಚ್ಚಗಿನ ನೀರಿನ ಬಿಸಿಯಿಂದಾಗಿ ಸೈನಸ್ ನಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಮೂಗಿನ ಸಮಸ್ಯೆಯೂ ಕ್ಲೀಯರ್ ಆಗುತ್ತದೆ. ಈ ಮೂಲಕ ಉಸಿರಾಟ ಪ್ರಕ್ರಿಯೆ ಸುಗಮವಾಗಿರುತ್ತದೆ.

2. ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ!

2. ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ!

ದಿನ ನಿತ್ಯ ಸ್ನಾನ ಮಾಡುವುದರಿಂದ ಯಂಗ್ ಆಗಿ ಕಾಣುತ್ತೀರಿ. ಹೌದು, ದಿನ ನಿತ್ಯ ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಳಪು ಹೆಚ್ಚುತ್ತದೆ ಇದರಿಂದ ನಮ್ಮ ಲುಕ್ ಕೂಡ ಬದಲಾಗುತ್ತದೆ. ಇನ್ನು ನಮ್ಮ ಚರ್ಮ ಆಯಿಲಿ ಆಗದೆ ಡ್ರೈ ಆಗಿದ್ದರೆ ಅಂತವರು ದಿನ ನಿತ್ಯ ಸ್ನಾನ ಮಾಡುವುದು ಉತ್ತಮ. ಸ್ನಾನದಿಂದ ನಿಮ್ಮ ಡ್ರೈನೆಸ್ ಹೋಗುತ್ತದೆ. ಚಳಿಗಾಲದಲ್ಲಿ ದೇಹ ಡ್ರೈ ಆಗಿ ಗಡಸು ಹೊಂದುವುದು ಸಾಮಾನ್ಯ, ಈ ವೇಳೆ ಸ್ನಾನ ಮಾಡುತ್ತಿದ್ದರೆ ಚರ್ಮವು ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಸ್ನಾನವು ಶುಷ್ಕ ಚರ್ಮಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಸ್ನಾನವು ಆಂಟಿ ಏಜಿಂಗ್ ಪ್ರಾಪರ್ಟಿಸ್ ಹೊಂದಿರುವುದರಿಂದ ಮುಖದಲ್ಲಿ ಸುಕ್ಕು, ನೆರಿಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.

3. ಸ್ನಾನ ಖಿನ್ನತೆಗೂ ಸಹಾಯ ಮಾಡುತ್ತದೆ

3. ಸ್ನಾನ ಖಿನ್ನತೆಗೂ ಸಹಾಯ ಮಾಡುತ್ತದೆ

ಖಿನ್ನತೆ ಹಾಗೂ ಸ್ನಾನಕ್ಕೆ ನಂಟಿದೆ. ಅನೇಕರು ಒತ್ತಡ ಹಾಗೂ ಖಿನ್ನತೆ, ನೋವಿಗೆ ಒಳಪಟ್ಟರೆ ಕೂಡಲೇ ಬಾತ್ ರೂಂ ಗೆ ಹೋಗಿ ಶವರ್ ಒಪನ್ ಮಾಡಿ ಅದರಡಿ ಕುಳಿತುಕೊಳ್ಳುತ್ತಾರೆ. ಇದರಿಂದ ಅನೇಕರಿಗೆ ಬೆಟರ್ ಫೀಲ್ ಸಿಗುತ್ತದೆ. ನೋವು, ಖಿನ್ನತೆ, ಒತ್ತಡ ಕಡಿಮೆ ಆಗುತ್ತದೆ. ಇನ್ನು 5 ಬಾರಿ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಖಿನ್ನತೆಗೆ ಇರುವ ಬೆಸ್ಟ್ ಮೆಡಿಸಿನ್ ಎನ್ನಲಾಗಿದೆ. ಖಿನ್ನತೆಗೆ ಏನೂ ಮದ್ದು ಮಾಡುವುದಕ್ಕಿಂತ ನ್ಯಾಚುರಲ್ ಮದ್ದಿಗೆ ಮೊರೆ ಹೋಗುವುದು ಒಳ್ಳೆಯದಲ್ವಾ? ಹೀಗಾಗಿ ಸ್ನಾನ ಮಾಡುವುದನ್ನು ಟ್ರೈ ಮಾಡಬಹುದು. ಈ ಮೂಲಕ ಖಿನ್ನತೆಯಿಂದ ಹೊರಬರಬಹುದು.

4. ಸ್ನಾನದಿಂದ ಒಳ್ಳೆ ನಿದ್ದೆ ಬರುತ್ತದೆ!

4. ಸ್ನಾನದಿಂದ ಒಳ್ಳೆ ನಿದ್ದೆ ಬರುತ್ತದೆ!

ಸ್ನಾನದಿಂದ ಮನುಷ್ಯನಿಗೆ ಒಳ್ಳೆ ನಿದ್ದೆ ಪ್ರಾಪ್ತಿಯಾಗುತ್ತದೆ. ಹೌದು, ನೀವು ಫುಲ್ ಡೇ ಕೆಲಸದಲ್ಲಿ ಬ್ಯುಸಿಯಾಗಿದ್ದೀರಿ, ಫುಲ್ ದಣಿವು ಆಗಿರುತ್ತದೆ. ಈ ವೇಳೆ ನೀವು ಮನೆಗೆ ಬಂದು ಸ್ನಾನ ಮಾಡಿದರೆ ನಿಮ್ಮ ದಣಿವು ಸಂಪೂರ್ಣವಾಗಿ ಹೋಗುತ್ತದೆ ಒಳ್ಳೆ ನಿದ್ದೆ ಬರುತ್ತದೆ. ಇನ್ನು ಮಲಗುವ ಎರಡು ಗಂಟೆ ಮುಂಚೆ ಸ್ನಾನ ಮಾಡಿ ಮಲಗಿದರೂ ಒಳ್ಳೆ ನಿದ್ದೆ ಬರುತ್ತದಂತೆ. ಅದರಲ್ಲೂ ಇನ್ ಸೊಮ್ನಿಯಾ ಖಾಯಿಲೆ ಇರೋದು, ವೃದ್ದರಿಗೆ ಸ್ನಾನ ತುಂಬಾನೇ ಒಳ್ಳೆಯದು. ಅಲ್ಲದೇ ದೇಹ ನಮಗೆ ಭಾರ ಅನಿಸಿದರೆ, ದೇಹ ಗಟ್ಟಿಯಾಗಿದೆ ಅನಿಸಿದರು ಸ್ನಾನ ಮಾಡಿದಾಗ ಒಂದು ಫ್ರೀ ಆಗೋ ಫೀಲ್ ಆಗುತ್ತೆ. ಅಲ್ಲದೇ ಒತ್ತಡವೂ ನಿವಾರಣೆಯಾಗುತ್ತದೆ.

5.ಬ್ಯಾಕ್ಟೀರಿಯಾಗಳಿಂದ ಮುಕ್ತಿ!

5.ಬ್ಯಾಕ್ಟೀರಿಯಾಗಳಿಂದ ಮುಕ್ತಿ!

ಮನೆಯಿಂದಲೇ ಕೆಲಸ ಮಾಡುವಾಗ, ಪ್ರತಿದಿನ ಸ್ನಾನ ಮಾಡುವುದು ಅಷ್ಟೇನೂ ಅಗತ್ಯವಿಲ್ಲ ಎನಿಸಬಹುದು, ಆದರೆ ಮನೆಯಲ್ಲಿರುವಾಗಲೂ, ಚರ್ಮದ ಮೇಲೆ ಬ್ಯಾಕ್ಟೀರಿಯಾದ ಆಕ್ರಮಣದಿಂದ ಮುಕ್ತವಾಗಿರುವುದಿಲ್ಲ, ಎನ್ನುತ್ತಾರೆ ವೈದ್ಯರು. ಪ್ರತಿದಿನ ಸ್ನಾನ ಮಾಡುವುದು ಮುಖ್ಯ, ಇದು ಒಳ್ಳೆಯ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಶ್ಮಾಣುಗಳ ಸಮತೋಲನವನ್ನು ನಿರ್ವಹಿಸಲು ಅಗತ್ಯ. ಹಾಸಿಗೆಯಲ್ಲಿರುವ ರೋಗಿಗಳು ಮತ್ತು ನಿರ್ದಿಷ್ಟ ರೋಗ ಹೊಂದಿರುವ ವ್ಯಕ್ತಿಗಳಿಗೆ ಪ್ರತಿದಿನ ಸ್ನಾನಮಾಡುವುದನ್ನು ಶಿಫಾರಸು ಮಾಡುವುದಿಲ್ಲ, ಆದರೆ ಅವರು ತಮ್ಮನ್ನು ಮತ್ತು ಸುತ್ತಲಿನ ವಾತಾವರಣವನ್ನು ಇತರ ರೀತಿಯಲ್ಲಿ ಸ್ವಚ್ಛವಾಗಿಡುವಂತೆ ಸಲಹೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

6.ರಕ್ತ ಪರಿಚಲನೆಗೆ ಉತ್ತಮವಾಗುತ್ತೆ!

6.ರಕ್ತ ಪರಿಚಲನೆಗೆ ಉತ್ತಮವಾಗುತ್ತೆ!

ಇನ್ನು ಸ್ನಾನದ ಪ್ರಯೋಜನಗಳನ್ನು ವಿವರಿಸೋದಾದರೆ . ಸ್ನಾನವೂ ರಕ್ತ ಪರಿಚಲನೆಗೆ ನೆರವಾಗುತ್ತದೆ, ಒತ್ತಡದ ವಿರುದ್ಧ ಹೋರಾಡುತ್ತದೆ, ಸ್ನಾಯುವಿನ ಒತ್ತಡ ನಿವಾರಿಸುತ್ತದೆ. ಅಲ್ಲದೇ ಸ್ನಾನವೂ ರಿಲ್ಯಾಕ್ಸ್ ಫೀಲ್ ಕೊಡುತ್ತದೆ. ಎಷ್ಟು ಜನರ ಗಮನಕ್ಕೆ ಇದು ಬಂದಿದ್ಯೋ ಗೊತ್ತಿಲ್ಲ. ಸ್ನಾನ ಮಾಡಿದಾಗ ನಿಮಗೆ ಜೋರು ಹಸಿವು ಆಗಲು ಆರಂಭಿಸುತ್ತದೆ. ಅಂದರೆ ನಮ್ಮ ಮನಸ್ಸಿನ, ಮನದ ಕೊಳೆ, ಭಾರವನ್ನು ಅದು ದೂರ ಮಾಡುತ್ತದೆ.

7. ಸ್ನಾಯುಗಳ ನೋವಿಗೂ ಸ್ನಾನ ಉತ್ತಮ!

7. ಸ್ನಾಯುಗಳ ನೋವಿಗೂ ಸ್ನಾನ ಉತ್ತಮ!

ನಿಮ್ಮ ಸ್ನಾಯುಗಳಲ್ಲಿ ನೋವಿದ್ದರೆ ಸ್ನಾನವೂ ಒಳ್ಳೆಯದು. ಅದರಲ್ಲೂ ಬಿಸಿ ನೀರಿನ ಸ್ನಾನ ಉತ್ತಮ. ಸ್ನಾಯುಗಳ ಸೆಳೆತ, ನೋವು ಇದ್ದರೆ ಆಯುರ್ವೇದ ವೈದ್ಯರು ಬಿಸಿ ನೀರಿನಲ್ಲಿ ಸ್ನಾನ ಮಾಡಲು ಹೇಳುತ್ತಾರೆ. ಕೊಂಚ ಎಣ್ಣೆ ಹಚ್ಚಿ ಬಿಸಿ ನೀರಿನ ಸ್ನಾನ ಮಾಡಿದರೆ ಎಲ್ಲ ನೋವು ಮಂಗಮಾಯವಾಗುತ್ತದೆ.

English summary

Reasons why you need to bath everyday in kannada

Here are reasons why you need to bath everyday, what are the benefits you will get, have a look...
X
Desktop Bottom Promotion