For Quick Alerts
ALLOW NOTIFICATIONS  
For Daily Alerts

ಇದೇ ಕಾರಣಗಳಿಂದಲೇ ಆಗಾಗ ನಿಮ್ಮ ಸ್ತನಗಳಲ್ಲಿ ತುರಿಕೆ ಉಂಟಾಗುವುದು..

|

ಸ್ತನದ ಸುತ್ತಲೂ ಆಗಾಗ ತುರಿಕೆಯನ್ನು ಅನುಭವಿಸುತ್ತಿದ್ದೀರಾ? ಹೌದು ಎಂದಾದರೆ, ಅದಕ್ಕೆ ತಕ್ಷಣ ಗಮನ ಹರಿಸಬೇಕು. ಇದು ದೊಡ್ಡ ಸಮಸ್ಯೆಯಲ್ಲದಿದ್ದರೂ, ಸ್ತನಗಳಲ್ಲಿ ತುರಿಕೆ ಬರುವುದಕ್ಕೆ ವಿವಿಧ ಕಾರಣಗಳಿವೆ. ಈ ಕಾರಣಗಳನ್ನು ಅರಿತರೆ, ಸ್ತನದ ಸುತ್ತ ಉಂಟಾಗುವ ತುರಿಕೆ, ಕಿರಿಕಿರಿಯನ್ನು ಗುಣಪಡಿಸಲು ಸಹಾಯ ಆಗುವುದು. ಹಾಗಾದರೆ ಬನ್ನಿ, ಈ ತುರಿಕೆಗೆ ಕಾರಣವೇನು ಎಂಬುದನ್ನು ಇಲ್ಲಿ ನೋಡೋಣ.

ಸ್ತನಗಳ ತುರಿಕೆಗೆ ಕೆಲವು ಪ್ರಮುಖ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ:

ಬ್ರಾ ವನ್ನ ನಿಯಮಿತವಾಗಿ ತೊಳೆಯದಿರುವುದು:

ಬ್ರಾ ವನ್ನ ನಿಯಮಿತವಾಗಿ ತೊಳೆಯದಿರುವುದು:

ನೀವು ಧರಿಸುವ ಬ್ರಾವನ್ನು ಸರಿಯಾದ ಸಮಯಕ್ಕೆ ಸ್ವಚ್ಛಗೊಳಸದಿರುವುದು ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ನೀವು ಸ್ತನದ ಮೇಲೆ ಅಥವಾ ಸುತ್ತಲೂ ಯಾವುದೇ ಗಾಯವನ್ನು ಹೊಂದಿದ್ದರೆ, ತೊಳೆಯದ ಬ್ರಾ ಧರಿಸಿದ ಅದು ಸೋಂಕಿಗೆ ಒಳಗಾಗಬಹುದು, ಏಕೆಂದರೆ ಅದು ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಆದ್ದರಿಂದ ನಿಮ್ಮ ಬ್ರಾವನ್ನು ನಿಯಮಿತವಾಗಿ ತೊಳೆಯಿರಿ. ಇದನ್ನು ಧರಿಸಿ ಕೆಲಸ ಮಾಡಿದ್ದರೆ, ಕೊಳೆ ಮತ್ತು ಬೆವರನ್ನು ತೆಗೆಯಲು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಿಸಿಲಿನ ಬೇಗೆ:

ಬಿಸಿಲಿನ ಬೇಗೆ:

ನಿಮ್ಮ ಸ್ತನಗಳ ಚರ್ಮ ಸೂಕ್ಷ್ಮವಾಗಿರುವುದರಿಂದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಇದು ತೀವ್ರವಾದ ತುರಿಕೆಗೆ ಕಾರಣವಾಗುತ್ತದೆ. ಸೂರ್ಯನ ಬೆಳಕಿನಿಂದ ಉಂಟಾಗುವ ಬೆವರಸಾಲೆ ಸ್ತನಗಳಲ್ಲಿ ತುರಿಕೆಗೆ ಕಾರಣವಾಗಬಹುದು.

ತಪ್ಪಾದ ಸೋಪ್ ಮತ್ತು ಡಿಟರ್ಜೆಂಟ್ ಬಳಸುವುದು:

ತಪ್ಪಾದ ಸೋಪ್ ಮತ್ತು ಡಿಟರ್ಜೆಂಟ್ ಬಳಸುವುದು:

ಸ್ನಾನ ಮಾಡಲು ಕಠಿಣ ಸೋಪ್ ಮತ್ತು ಒಗೆಯಲು ಡಿಟರ್ಜೆಂಟ್ ಬಳಸುವುದರಿಂದ ಚರ್ಮದ ಕಿರಿಕಿರಿ ಉಂಟಾಗಬಹುದು. ನಿಮ್ಮ ಚರ್ಮ ಪ್ರಕಾರಕ್ಕೆ ಅನುಗುಣವಾಗಿ ಸೋಪ್ ಅನ್ನು ಆಯ್ಕೆ ಮಾಡಿ. ನಿಮ್ಮ ಅಲರ್ಜಿಗೆ ಕಾರಣವಾಗುವ ವಸ್ತುಗಳನ್ನು ಗುರುತಿಸಿ ಮತ್ತು ಅವುಗಳನ್ನು ದೂರವಿಡಿ. ವಾಷಿಂಗ್ ಮಿಷಿನ್ ನಲ್ಲಿ ಬ್ರಾ ಸಂಪೂರ್ಣವಾಗಿ ಒಣಗಿದರೂ ಬಿಸಿಲಿನಲ್ಲಿ ಅದನ್ನು ಮತ್ತೆ ಒಣಗಿಸಿ.

ಸರಿಯಾದ ಬ್ರಾ ಬಟ್ಟೆಯನ್ನು ಆರಿಸದಿರುವುದು:

ಸರಿಯಾದ ಬ್ರಾ ಬಟ್ಟೆಯನ್ನು ಆರಿಸದಿರುವುದು:

ಉಸಿರಾಡಲು ಸಾಧ್ಯವಾಗದ ಫ್ಯಾಬ್ರಿಕ್ ಕೂಡ ಚರ್ಮದ ಕಿರಿಕಿರಿಗೆ ಕಾರಣವಾಗಬಹುದು. ಬ್ರಾಗಳನ್ನು ಎಲ್ಲಾ ರೀತಿಯ ಬಟ್ಟೆಗಳಿಂದ ತಯಾರಿಸಲಾಗುತ್ತದೆ. ಅವುಗಳಲ್ಲಿ ಕೆಲವು ನಿಮ್ಮ ಸ್ತನಗಳಿಗೆ ತುಂಬಾ ತುರಿಕೆ ಉಂಟುಮಾಡಬಹುದು. ನಿಮ್ಮ ಬ್ರಾ ಸೈಜ್, ಫ್ಯಾಬ್ರಿಕ್ ಮತ್ತು ಆಕಾರವು ನಿಮಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸರಿಯಾದ ಬ್ರಾ ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳಿ.

ಗರ್ಭಧಾರಣೆ ಅಥವಾ ಸ್ತನ್ಯಪಾನ:

ಗರ್ಭಧಾರಣೆ ಅಥವಾ ಸ್ತನ್ಯಪಾನ:

ಹೆರಿಗೆಯ ನಂತರ ಸ್ತನ್ಯಪಾನ, ಇದು ಸ್ತನದ ಆಕಾರ ಮತ್ತು ಗಾತ್ರವನ್ನು ಬದಲಾಯಿಸುತ್ತದೆ ಜೊತೆಗೆ ತುರಿಕೆ ಉಂಟಾಗಲು ಕಾರಣವಾಗುತ್ತದೆ. ಎದೆಹಾಲು ನೀಡುವ ಪ್ರಕ್ರಿಯೆಯು ಶುಷ್ಕ ಮತ್ತು ಕಿರಿಕಿರಿಯುಂಟುಮಾಡುವ ಚರ್ಮ ಹಾಗೂ ಬಿರುಕುಗಳಿಗೆ ಕಾರಣವಾಗುತ್ತದೆ. ಸರಿಯಾದ ಬ್ರಾ ಧರಿಸುವುದು ಮತ್ತು ಚರ್ಮವನ್ನು ತೇವಗೊಳಿಸುವುದರಿಂದ ಈ ಸಮಸ್ಯೆಯನ್ನು ದೂರ ಮಾಡಬಹುದು.

ಎಸ್ಜಿಮಾ:

ಎಸ್ಜಿಮಾ:

ಎಸ್ಜಿಮಾ ದೀರ್ಘಕಾಲದ ಚರ್ಮದ ಸ್ಥಿತಿಯಾಗಿದ್ದು ಅದು ಉರಿಯೂತ, ಒಣಚರ್ಮ ಮತ್ತು ತುರಿಕೆಗೆ ಕಾರಣವಾಗಬಹುದು. ಸ್ತನಗಳು ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಇದು ಸಂಭವಿಸಬಹುದು.

English summary

Reasons Why Boobs are Itching in Kannada

Here Reasons why boobs are itching in kannada, read on
Story first published: Tuesday, August 3, 2021, 17:22 [IST]
X
Desktop Bottom Promotion