For Quick Alerts
ALLOW NOTIFICATIONS  
For Daily Alerts

ಕಂಕುಳಡಿಯಲ್ಲಿ ಮೊಡವೆಗಳು: ಕಾರಣ ಮತ್ತು ನಿವಾರಿಸುವ ವಿಧಾನ ಇಲ್ಲಿದೆ

|

ಕೆಲವರಿಗೆ ಮುಖ, ಬೆನ್ನನ್ನ ಹೊರತುಪಡಿಸಿ, ಕಂಕುಳಡಿಯೂ ಮೊಡವೆಗಳಾಗುತ್ತವೆ. ಇದಕ್ಕೆ ಬಹುಮುಖ್ಯ ಕಾರಣ ಅಂದ್ರೆ ಸರಿಯಾದ ನೈರ್ಮಲ್ಯ ಕಾಪಾಡಿಕೊಳ್ಳದೇ ಇರುವುದು. ಇದರ ಜೊತೆಗೆ ಇನ್ನೂ ಹಲವಾರು ಕಾರಣಗಳಿವೆ. ಇದರಿಂದ ಸಾಕಷ್ಟು ನೋವು, ಕಿರಿಕಿರಿಯನ್ನು ಅನುಭವಿಸುತ್ತಿರುತ್ತಾರೆ. ಹಾಗಾದರೆ, ಇದನ್ನು ಹೋಗಲಾಡಿಸುವ ಬಗೆ ಹಾಗೂ ಈ ಮೊಡವೆಗಳಿಗೆ ಕಾರಣಗಳೇನು ಎಂಬುದನ್ನು ನೋಡೋಣ.

ಕಂಕುಳಡಿಯ ಮೊಡವೆಗೆ ಕಾರಣ ಹಾಗೂ ಪರಿಹಾರಗಳನ್ನು ಈ ಕೆಳಗೆ ನೀಡಲಾಗಿದೆ:

1. ಇಂಗ್ರೋನ್ ಹೇರ್:

1. ಇಂಗ್ರೋನ್ ಹೇರ್:

ಇಂಗ್ರೋನ್ ಹೇರ್ ಅಂದರೆ, ಒಳಮುಖವಾಗಿ ಬೆಳೆದಿರುವ ಕೂದಲು. ಇವುಗಳಲ್ಲಿ ಕೂದಲು ಮೇಲ್ಮುಖವಾಗಿ ಬೆಳೆಯುವ ಬದಲು, ಚರ್ಮದೊಳಗೆ ಬೆಳೆಯಲು ಶುರುವಾಗುತ್ತವೆ. ಇದು ಮುಂದೆ ಮೊಡವೆ, ಕೀವು ಮೊದಲಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಬಹಳ ನೋವಿನಿಂದ ಕೂಡಿರುವ ಈ ಇಂಗ್ರೋನ್ ಹೇರ್, ಸರಿಯಾಗಿ ಶೇವ್ ಮಾಡದೇ ಇದ್ದಾಗ ಬೆಳೆಯುವುದು. ಆದ್ದರಿಂದ ಅಂಡರ್‌ಆರ್ಮ್ ಶೇವ್ ಮಾಡುವಾಗ ಜಾಗರೂಕರಾಗಿರಿ.

2. ಫೋಲಿಕ್ಯುಲೈಟಿಸ್:

2. ಫೋಲಿಕ್ಯುಲೈಟಿಸ್:

ಫೋಲಿಕ್ಯುಲೈಟಿಸ್ ಎಂಬುದು ಸಾಮಾನ್ಯ ಚರ್ಮದ ಕಾಯಿಲೆಯಾಗಿದ್ದು, ಕೂದಲಲ್ಲಿರುವ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಇದು ಚರ್ಮದ ಮೇಲೆ ಕೂದಲಿನ ಕಿರುಚೀಲಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ತೊಡೆಗಳು, ಕಂಕುಳಡಿ ಮತ್ತು ಕುತ್ತಿಗೆಯ ಸುತ್ತಲೂ ಕಂಡುಬರುವುದು. ಹೆಚ್ಚಿನ ಸಂದರ್ಭಗಳಲ್ಲಿ, ಸ್ವಯಂ-ಆರೈಕೆ ಮತ್ತು ಸರಿಯಾದ ನೈರ್ಮಲ್ಯದಿಂದ ನಿವಾರಣೆಯಾಗುವುದು.

3. ಡರ್ಮಟೈಟಿಸ್ ಅಲರ್ಜಿ:

3. ಡರ್ಮಟೈಟಿಸ್ ಅಲರ್ಜಿ:

ನಿಮಗೇನಾದರೂ ಯಾವುದಾದರೂ ಡಿಯೋಡ್ರೆಂಟ್ ಬಳಸಿದ ತಕ್ಷಣ ಅಥವಾ ಯಾವುದೋ ಡಿಟರ್ಜೆಂಟ್ ಬಳಸಿ ತೊಳೆದ ಬಟ್ಟೆಯನ್ನು ದರಿಸಿದ ಮರುಕ್ಷಣ ಕಂಕುಳಡಿ ಮೊಡವೆ ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಡರ್ಮಟೈಟಿಸ್ ಅಲರ್ಜಿ ಇದೆ ಎಂದರ್ಥ. ಇದನ್ನು ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂದು ಕರೆಯಲಾಗುತ್ತದೆ. ನಿಮ್ಮ ಚರ್ಮಕ್ಕೆ ಅಲರ್ಜಿ ಇರುವ ವಸ್ತು ಅಥವಾ ಘಟಕಾಂಶದೊಂದಿಗೆ ಸಂಪರ್ಕಕ್ಕೆ ಬಂದಾಗ ಇದು ಸಂಭವಿಸುತ್ತದೆ. ಆದ್ದರಿಂದ ನಿಮಗೆ ಕೆಲವು ಪದಾರ್ಥಗಳಿಗೆ ಅಲರರ್ಜಿಯಿದ್ದರೆ, ನಿಮ್ಮ ದೇಹಕ್ಕೆ ಬಳಸುವ ಮೊದಲು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡಿ.

4. ಕಂಕುಳಡಿ ಕಿರಿಕಿರಿ:

4. ಕಂಕುಳಡಿ ಕಿರಿಕಿರಿ:

ಸ್ವಲ್ಪ ಬಿಗಿಯಾದ ಟಿ-ಶರ್ಟ್ ಧರಿಸಿದಾಗ ಉಂಟಾಗುವ ಕಿರಿಕಿರಿ ಯು ಸಹ ಕಂಕುಳಡಿಯ ಮೊಡವೆಗಳಿಗೆ ಕಾರಣವಾಗಬಹುದು. ನಾವು ಇಂತಹ ಬಿಗಿಯಾದ ಬಟ್ಟೆ ಧರಿಸಿದಾಗ ಅಂಡರ್ ಆರ್ಮ್ ಚರ್ಮದಿಂದ ಚರ್ಮಕ್ಕೆ ಅಥವಾ ಚರ್ಮದಿಂದ ಬಟ್ಟೆಗೆ ಘರ್ಷಣೆಗೆ ಒಳಗಾಗುತ್ತದೆ. ಇದರಿಂದ ಗಾಯ, ಕಿರಿಕಿರಿ ಮತ್ತು ಸೋಂಕನ್ನು ಉಂಟಾಗಬಹುದು. ಜೊತೆಗೆ ನಿಮ್ಮ ಕಂಕುಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಥವಾ ನೇರವಾಗಿ ಪರ್ಫ್ಯೂಮ್ ಅಥವಾ ಡಿಯೋಡರೆಂಟ್ ಬಳಸಿದರೆ, ಅದು ಕಿರಿಕಿರಿಯನ್ನು ಉಂಟುಮಾಡಿ, ಮೊಡವೆಗೆ ಕಾರಣವಾಗಬಹುದು.

5. ಬೆವರುವಿಕೆ:

5. ಬೆವರುವಿಕೆ:

ನೀವು ತುಂಬಾ ಬೆವರುತ್ತಿದ್ದರೆ, ನಿಮ್ಮ ಕಂಕುಳಡಿ ಮೊಡವೆಗಳು ಬರಬಹುದು. ಜೊತೆಗೆ ಹಳೆಯ ರೇಜರ್ ಬಳಕೆಯಿಂದಲೂ ಕಂಕುಳಡಿ ಮೊಡವೆ ಬರುವ ಸಾಧ್ಯತೆ ಇದೆ. ಹಳೆಯ ರೇಜರ್ ನಿಂದ ಶೀಲೀಂಧ್ರಗಳು ಚರ್ಮಕ್ಕೆ ತಾಗಿ ಮುಂದೆ ಮೊಡವೆಗೆ ಕಾರಣವಾಗುವುದು.

ಕಂಕುಳಡಿಯ ಮೊಡವೆ ತೊಡೆದುಹಾಕುವುದು ಹೇಗೆ ?;

ಕಂಕುಳಡಿಯ ಮೊಡವೆ ತೊಡೆದುಹಾಕುವುದು ಹೇಗೆ ?;

1. ಎಕ್ಸ್ಫೋಲಿಯೇಟ್:

ಕಂಕುಳಡಿಯನ್ನು ಸರಿಯಾಗಿ ಸ್ಕ್ರಬ್ ಮಾಡುವುದು ಅಥವಾ ಎಫ್ಫೋಲಿಯೇಟಿಂಗ್ ಮಾಡುವುದು ಮೊಡವೆಗಳನ್ನು ದೂರವಿಡಲು ಅತ್ಯಂತ ಸುಲಭವಾದ ಮಾರ್ಗವಾಗಿದೆ. ಇದು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವವನ್ನು ತೆಗೆದುಹಾಕಿ, ಕಂಕುಳಡಿಯ ಚರ್ಮದ ರಂಧ್ರಗಳನ್ನು ಅನ್‌ಕ್ಲಾಗ್ ಮಾಡುತ್ತದೆ.

2. ಸಡಿಲವಾದ ಬಟ್ಟೆ ಧರಿಸಿ:

2. ಸಡಿಲವಾದ ಬಟ್ಟೆ ಧರಿಸಿ:

ನೀವು ಕಂಕುಳಡಿಯ ಮೊಡವೆಗೆ ಒಳಗಾಗುವವರಾಗಿದ್ದರೆ, ಸಡಿಲವಾದ ಬಟ್ಟೆಗಳನ್ನು ಧರಿಸಿ. ಏಕೆಂದರೆ ನಿಮ್ಮ ಚರ್ಮವನ್ನು ಆಗೊಮ್ಮೆ ಈಗೊಮ್ಮೆ ಉಸಿರಾಡಲು ಬಿಡಬೇಕು. ಸಡಿಲವಾದ ಹಾಗೂ ಕಾಟನ್ ಬಟ್ಟೆ ಧರಿಸುವುದು ಇದಕ್ಕಿರುವ ದಾರಿಯಾಗಿದೆ. ಜೊತೆಗೆ ನಿಮ್ಮ ಬಟ್ಟೆಗಳನ್ನು ನಿಯಮಿತವಾಗಿ ತೊಳೆಯಿರಿ. ಬೆವರು ಸಂಗ್ರಹವಾದ ಬಟ್ಟೆಗಳನ್ನು ಮತ್ತೆ ಧರಿಸಬೇಡಿ.

3. ನಿಮಗೆ ಸೂಕ್ತವಾದ ಉತ್ಪನ್ನಗಳನ್ನು ಬಳಸಿ:

3. ನಿಮಗೆ ಸೂಕ್ತವಾದ ಉತ್ಪನ್ನಗಳನ್ನು ಬಳಸಿ:

ನೀವು ಸೂಕ್ಷ್ಮ ಚರ್ಮವನ್ನು ಹೊಂದಿರುವವರಾಗಿದ್ದರೆ ಅಥವಾ ಕೆಲವು ಪದಾರ್ಥಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ಉತ್ಪನ್ನಗಳನ್ನು ಖರೀದಿಸುವ ಮೊದಲು ಸರಿಯಾಗಿ ಪರೀಕ್ಷಿಸಿ ತೆಗೆದುಕೊಳ್ಳಿ. ಸೌಮ್ಯವಾದ ಮತ್ತು ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಹೊಂದುವ ಉತ್ಪನ್ನಗಳನ್ನು ಆರಿಸಿಕೊಳ್ಳುವುದು ಅಲರ್ಜಿಗಳು ಮತ್ತು ಅನಪೇಕ್ಷಿತ ಮೊಡವೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

4. ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

4. ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

ಸಾಮಾನ್ಯವಾಗಿ, ಕಂಕುಳಡಿ ಮೊಡವೆಗಳನ್ನು ತಪ್ಪಿಸಲು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಬೆವರುವಿಕೆಯಿಂದ ಈ ಸಮಸ್ಯೆಯಾಗಿದ್ದರೆ, ಬೆವರುಗಳನ್ನು ತೆಗೆದುಹಾಕಲು ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ನಿಮ್ಮ ಮೊಡವೆ ಕಡಿಮೆಯಾಗದಿದ್ದರೆ, ಸಂಬಂಧಿತ ವೈದ್ಯರನ್ನು ಸಂಪರ್ಕ ಮಾಡುವುದು ಉತ್ತಮ.

English summary

Pimple Under Armpit: Causes, Treatment, Prevention in Kannada

Here we talking about Pimple Under Armpit: Causes, Treatment, Prevention in Kannada, read on
X
Desktop Bottom Promotion