For Quick Alerts
ALLOW NOTIFICATIONS  
For Daily Alerts

ನಿಮ್ಮ ಮುಖ ಮತ್ತು ಕೂದಲಿನ ಆರೈಕೆಗೆ ಈ ಒಂದು ವಸ್ತು ಸೇರಿಸಿ, ಮ್ಯಾಜಿಕ್ ನೋಡಿ

|

ಮುಖವಿರಲಿ ಅಥವಾ ಕೂದಲಿರಲಿ, ಅವುಗಳ ಆರೈಕೆಗೆ ನೈಸರ್ಗಿಕ ವಸ್ತುಗಳನ್ನು ಬಳಸುವುದರಿಂದ ಅವುಗಳ ಆರೋಗ್ಯ ಚೆನ್ನಾಗಿರುತ್ತದೆ. ನೈಸರ್ಗಿಕ ಚಿಕಿತ್ಸೆಯ ಉತ್ತಮ ವಿಷಯವೆಂದರೆ ಈ ಪರಿಣಾಮವು ದೀರ್ಘಕಾಲದವರೆಗೆ ಇರಲಿದ್ದು, ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಅದೇ ರೀತಿ ಸದ್ಯ ಇರುವ ಚಳಿಗಾಲದಲ್ಲಿ ಸಿಗುವ ಬಹಳಷ್ಟು ಹಸಿರು ಸೊಪ್ಪುಗಳನ್ನು ಬಳಸಿಕೊಂಡು ಸೌಂದರ್ಯ ಕಾಪಾಡಿಕೊಳ್ಳಬಹುದು. ಅವುಗಳಲ್ಲಿ ಒಂದು ಪಾಲಕ್. ಹಾಗಾದರೆ ಈ ಸೊಪ್ಪನ್ನು ಬಳಸುವುದರಿಂದ ನಿಮ್ಮ ಮುಖ ಮತ್ತು ಕೂದಲನ್ನು ಹೇಗೆ ಆರೋಗ್ಯವಾಗಿರಿಸಿಕೊಳ್ಳಬಹುದು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ತ್ವಚೆ ಹಾಗೂ ಕೂದಲಿಗೆ ಪಾಲಕ್‌ನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

1. ಪಾಲಕ್- ಜೇನುತುಪ್ಪ ಫೇಸ್ ಮಾಸ್ಕ್:

1. ಪಾಲಕ್- ಜೇನುತುಪ್ಪ ಫೇಸ್ ಮಾಸ್ಕ್:

ಬೇಕಾಗುವ ಪದಾರ್ಥ:

ಒಂದು ಕಪ್ ಸಣ್ಣದಾಗಿ ಕೊಚ್ಚಿದ ಪಾಲಕ್, ಒಂದು ಚಮಚ ಜೇನುತುಪ್ಪ, ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ನಿಂಬೆ ರಸ

ಬಳಸುವ ವಿಧಾನ:

ಪಾಲಕ್ ಸೊಪ್ಪನ್ನು ತೊಳೆದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಉಳಿದ ಪದಾರ್ಥಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ತೊಳೆಯಿರಿ. ಹತ್ತಿ ಬಟ್ಟೆಯಿಂದ ಮುಖ ಒರೆಸಿದ ನಂತರ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಚರ್ಮವು ಹೊಳೆಯುತ್ತದೆ.

2. ಮೊಸರು- ಪಾಲಕ್ ಫೇಸ್ ಮಾಸ್ಕ್:

2. ಮೊಸರು- ಪಾಲಕ್ ಫೇಸ್ ಮಾಸ್ಕ್:

ಬೇಕಾಗುವ ಪದಾರ್ಥ:

4-5 ಪಾಲಕ್ ಎಲೆಗಳು, 2-3 ಟೇಬಲ್ಸ್ಪೂನ್ ಮೊಸರು

ಬಳಸುವ ವಿಧಾನ:

ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಮೊಸರಿನೊಂದಿಗೆ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಿ ಮತ್ತು 10-15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ಫೇಸ್ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿದರೆ ಕೆಲವೇ ದಿನಗಳಲ್ಲಿ ತ್ವಚೆಯ ಮೇಲೆ ಹೊಳಪು ಕಾಣಿಸಿಕೊಳ್ಳುತ್ತದೆ.

3. ಪಾಲಕ್- ಕಡಲೆ ಹಿಟ್ಟಿನ ಫೇಸ್ ಮಾಸ್ಕ್:

3. ಪಾಲಕ್- ಕಡಲೆ ಹಿಟ್ಟಿನ ಫೇಸ್ ಮಾಸ್ಕ್:

ಬೇಕಾಗುವ ಪದಾರ್ಥ:

10-15 ಪಾಲಕ್ ಎಲೆಗಳು, 1-2 ಚಮಚ ಕಡಲೆ ಹಿಟ್ಟು, 2-3 ಚಮಚ ಹಾಲು, 1 ಚಮಚ ಜೇನುತುಪ್ಪ

ಬಳಸುವ ವಿಧಾನ:

ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ತಯಾರಿಸಿದ ಈ ಪೇಸ್ಟ್‌ಗೆ ಹಾಲು, ಜೇನುತುಪ್ಪ, ಕಡಲೆ ಹಿಟ್ಟನ್ನು ಬೆರೆಸಿ ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೊಳೆಯುವ ತ್ವಚೆಗಾಗಿ ವಾರದಲ್ಲಿ ಎರಡು ಬಾರಿ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.

4. ಪಾಲಕ್ ತೆಂಗಿನ ಎಣ್ಣೆ ಹೇರ್ ಮಾಸ್ಕ್;

4. ಪಾಲಕ್ ತೆಂಗಿನ ಎಣ್ಣೆ ಹೇರ್ ಮಾಸ್ಕ್;

ಬೇಕಾಗುವ ಪದಾರ್ಥ:

ಒಂದು ಕಪ್ ಪಾಲಕ್, 2 ಚಮಚ ತೆಂಗಿನ ಎಣ್ಣೆ, ಒಂದು ಚಮಚ ಜೇನುತುಪ್ಪ

ಬಳಸುವ ವಿಧಾನ:

ಪಾಲಕ್ ಸೊಪ್ಪನ್ನು ತೊಳೆದ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ತೆಂಗಿನೆಣ್ಣೆ ಬೆರೆಸಿ ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಈ ಮಾಸ್ಕ್ ಬಳಸಿ.

English summary

Palak Masks to get Glowing Skin and Shining Hair in Kannada

Here we talking about Palak Masks to get Glowing Skin and Shining Hair in Kannada, read on
Story first published: Thursday, January 27, 2022, 18:05 [IST]
X
Desktop Bottom Promotion