For Quick Alerts
ALLOW NOTIFICATIONS  
For Daily Alerts

ಯಾವ ಸೆಲೆಬ್ರೆಟಿಯೂ ಈ 5 ಬ್ಯೂಟಿ ಸೀಕ್ರೆಟ್ ನಿಮಗೆ ಹೇಳುವುದೇ ಇಲ್ಲ!

|

ಪ್ರತಿಯೊಬ್ಬರಿಗೂ ಸೌಂದರ್ಯ, ಬ್ಯೂಟಿ, ಮೇಕಪ್, ಫ್ಯಾಷನ್ ಅಂದ ಕೂಡಲೇ ಫಾಲೋ ಮಾಡೋಣ ಅನ್ನಿಸೋದು ಸೆಲೆಬ್ರಿಟಿಗಳನ್ನು ಅಲ್ಲವೇ? ಕೆಲವು ಹಿರೋಯಿನ್ ಗಳು ಅದೆಷ್ಟು ಆಕರ್ಷಣೀಯವಾಗಿ ಕಾಣುತ್ತಾರೆ ಎಂದರೆ ಅವರ ತರಹವೇ ನಾವೂ ಇರಬೇಕು ಎಂದೆನಿಸುತ್ತದೆ. ಆದರೆ ಅವರ ಹಾಗೆ ಇರಬೇಕು ಎಂದರೆ ಅವರು ಫಾಲೋ ಮಾಡುವ ಕೆಲವು ಬ್ಯೂಟಿ ಸೂತ್ರಗಳನ್ನು ಅನುಸರಿಸಬೇಕು. ಆದರೆ ಅವರು ಅನುಸರಿಸುವ ಬ್ಯೂಟಿ ಸೂತ್ರಗಳು ಕೆಲವು ಗೊತ್ತೇ ಇರುವುದಿಲ್ಲ. ಯಾಕಂದರೆ ಅವರು ಫಾಲೋ ಮಾಡುವ ಕೆಲವು ಬ್ಯೂಟಿ ಸೂತ್ರಗಳನ್ನು ಅವರು ಯಾರೊಂದಿಗೂ ಹಂಚಿಕೊಳ್ಳುವುದೇ ಇಲ್ಲ.

ಪ್ರತಿಯೊಬ್ಬರೂ ಸಾವಿರಗಟ್ಟಲೆ ಬ್ಯೂಟಿ ಟಿಪ್ಸ್ ಗಳನ್ನು ಓದಿರುತ್ತೇವೆ ಮತ್ತು ನೂರಕ್ಕೂ ಅಧಿಕ ಬ್ಯೂಟಿ ಪ್ರೊಡಕ್ಟ್ ಗಳನ್ನು ಆಗಾಗ ಪ್ರಯತ್ನಿಸಿ ನೋಡುತ್ತಲೇ ಇರುತ್ತೇವೆ. ಆದರೆ ಅವುಗಳಲ್ಲಿ ಹೆಚ್ಚಿನ ಬ್ಯೂಟಿ ಟಿಪ್ಸ್ ಗಳು ನಮಗೆ ಹೊಂದಿಕೆಯಾಗುವುದಿಲ್ಲ ಮತ್ತು ಕೆಲವು ಮಾತ್ರ ಅನುಸರಿಸಿದರೆ ಅನುಕೂಲಕ್ಕೆ ಬರುತ್ತದೆ.

ಆದರೆ ಈ ಸೆಲೆಬ್ರಿಟಿಗಳನ್ನು ನೋಡಿ? ಎಷ್ಟು ಪರಿಪೂರ್ಣವಾಗಿ ತಮ್ಮ ಮೇಕಪ್ ಮತ್ತು ಬ್ಯೂಟಿಯನ್ನು ಕಾಪಾಡಿಕೊಂಡಿರುತ್ತಾರೆ ಅಲ್ಲವೇ? ಆದರೆ ಆ ಸೌಂದರ್ಯದ ಗುಟ್ಟನ್ನು ಅವರು ಬಿಟ್ಟುಕೊಡುವುದಿಲ್ಲ. ಅವರು ಫಾಲೋ ಮಾಡುವ ಕೆಲವು ಸೀಕ್ರೆಟ್ ಬ್ಯೂಟಿ ಟಿಪ್ಸ್ ನ್ನು ನಾವಿಲ್ಲಿ ನಿಮಗೆ ರಿವೀಲ್ ಮಾಡುತ್ತಿದ್ದೇವೆ.

ಗುಟ್ಟು 1

ಗುಟ್ಟು 1

ಚೆನ್ನಾಗಿ ನೀರು ಕುಡಿಯಿರಿ

ನೀವು ಯಾವತ್ತೂ ಕೂಡ ಬಾಯಾರಿಕೆಯಿಂದ ಬಳಲಬಾರದು. ಯಾವಾಗಲೂ ಕೂಡ ಚೆನ್ನಾಗಿ ನೀರು ಕುಡಿಯಬೇಕು. ಬಾಲಿವುಡ್ ನಟಿ ಪ್ರಾಚಿ ಹೇಳುವ ಪ್ರಕಾರ ಆಕೆ ಚೆನ್ನಾಗಿ ನೀರು ಕುಡಿಯದೇ ಇದ್ದರೆ ಅವಳ ಚರ್ಮ ಚಪ್ಪಟೆಯಾಗಿ ಕಳಾಹೀನವಾಗುತ್ತದೆಯಂತೆ. ಅದೇ ಕಾರಣಕ್ಕೆ ಆಕೆ ಯಾವಾಗಲೂ ನೀರು ಕುಡಿಯುತ್ತಾಳಂತೆ. ಇನ್ನು ಐಶ್ವರ್ಯ ರೈ ಬಚ್ಚನ್ ಕೂಡ ಇದಕ್ಕೆ ಹೊರತಾಗಿಲ್ಲ. ನಿಮ್ಮ ದೇಹವು ಯಾವಾಗಲೂ ಹೈಡ್ರೇಟ್ ಆಗಿಯೇ ಇರುವುದರಿಂದ ಹೆಚ್ಚು ಸುಂದರವಾಗಿ ಕಾಣಲು ಸಾಧ್ಯವಾಗುತ್ತದೆ.

ಗುಟ್ಟು 2

ಗುಟ್ಟು 2

ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಕಡ್ಡಾಯ

ಚರ್ಮದ ಕಾಂತಿ ಹೆಚ್ಚಿಸುವುದಕ್ಕೆ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಬಹಳ ಮುಖ್ಯ. ವಯಸ್ಸಾದಂತೆ ಕಾಣುವುದು ಮತ್ತು ಚರ್ಮದ ಕ್ಯಾನ್ಸರ್ ಸಮಸ್ಯೆಗೆ ಪ್ರಮುಖವಾಗಿರುವ ಕಾರಣವೆಂದರೆ ಸೂರ್ಯನ ನೇರಳಾತೀತ ಕಿರಣಗಳು. ಮಳೆಯ ವಾತಾವರಣವೇ ಆಗಿರಲಿ ಅಥವಾ ಸೂರ್ಯನ ಶಾಖವೇ ಇರಲಿ, ಚರ್ಮಕ್ಕೆ ಸನ್ ಸ್ಕ್ರೀನ್ ಅಪ್ಲೈ ಮಾಡುವುದನ್ನು ಮರೆಯಬೇಡಿ. ನೀವು ಹೊರಗಡೆ ಹೊರಡುವ 15 ನಿಮಿಷ ಮುನ್ನವೇ ಸನ್ ಸ್ಕ್ರೀನ್ ನ್ನು ಅಪ್ಲೈ ಮಾಡಿ. ಆಗ ಚರ್ಮವು ಕ್ರೀಮ್ ನ್ನು ಹೀರಿಕೊಂಡು ನಿಮ್ಮ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಕಾಜೋಲ್ ಯಾವತ್ತೂ ಕೂಡ ಸನ್ ಸ್ಕ್ರೀನ್ ಅಪ್ಲೈ ಮಾಡುವುದನ್ನು ತಪ್ಪಿಸುವುದೇ ಇಲ್ಲವಂತೆ!

ಗುಟ್ಟು 3

ಗುಟ್ಟು 3

ತೇವಾಂಶ ಕಾಪಾಡಿಕೊಳ್ಳುವುದು

ಸೆಲ್ಫ್-ಟ್ಯಾನರ್ ನ್ನು ಒಳಗೊಂಡಿರುವ ತೇವಾಂಶವಿರುವ ಬಾಡಿ ಲೋಷನ್ ನ್ನು ಹಚ್ಚಿಕೊಳ್ಳುವುದನ್ನು ಮರೆಯಬೇಡಿ. ಇದು ನಿಮ್ಮ ಚರ್ಮ ಸುಕ್ಕುಗಟ್ಟಿದಂತಾಗುವುದನ್ನು ಮತ್ತು ಸ್ಲಿಮ್ಮಿಂಗ್ ಪರಿಣಾಮಗಳನ್ನು ತಡೆಯುವುದಕ್ಕೆ ನೆರವಾಗುತ್ತದೆ. ಕೈರಾ ಅಡ್ವಾಣಿ ಯಾವಾಗಲೂ ಕೂಡ ಚರ್ಮಕ್ಕೆ ಕ್ರೀಮಿಂಗ್ ಮಾಡುವುದನ್ನು ಮರೆಯುವುದೇ ಇಲ್ಲವಂತೆ.

ಗುಟ್ಟು 4

ಗುಟ್ಟು 4

ವ್ಯಾಯಾಮ

ನಿಮ್ಮ ಮುಖ ಹೊಳಪು ಬರಬೇಕು ಎಂದರೆ ಕೇವಲ ಫೇಶಿಯಲ್ ಮಾತ್ರದಿಂದಲೇ ಸಾಧ್ಯ ಅಂದುಕೊಳ್ಳಬೇಡಿ. ವ್ಯಾಯಾಮವು ರಕ್ತಪರಿಚಲನೆಯನ್ನು ಮತ್ತು ಆಮ್ಲಜನಕದ ಸಾಮರ್ಥ್ಯವನ್ನು ಹೆಚ್ಚಿಸಿ ಚರ್ಮವು ಹೊಳಪು ಬರುವಂತೆ ಮಾಡುತ್ತದೆ. ಹಾಗಾಗಿ ಥ್ರೆಡ್ ಮಿಲ್ ನ್ನು ಬಳಸಿ ಮತ್ತು ಆರೋಗ್ಯದ ಹೊಳಪನ್ನು ಎಂಜಾಯ್ ಮಾಡಿ! ಬಾಲಿವುಡ್ ನಟಿ ಕಟ್ರೀನಾ ಕೈಫ್ ವರ್ಕ್ ಔಟ್ ಮಾಡುವುದನ್ನು ತಪ್ಪಿಸುವುದೇ ಇಲ್ಲ ಮತ್ತು ಆಕೆಯ ಸುಂದರ ಚರ್ಮದ ಗುಟ್ಟೇ ವ್ಯಾಯಾಮವಂತೆ!

ಗುಟ್ಟು 5

ಗುಟ್ಟು 5

ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ

ವಿಟಮಿಮ್ ಎ,ಸಿ ಮತ್ತು ಇ ಗಳು ಸಾಕಷ್ಟು ಚರ್ಮದ ಸಮಸ್ಯೆಯ ವಿರುದ್ಧ ಹೋರಾಡುತ್ತವೆ. ಆಂಟಿ ಆಕ್ಸಿಡೆಂಟ್ ಗಳನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದಲೂ ಕೂಡ ಚರ್ಮಕ್ಕೆ ಸಹಾಯವಾಗುತ್ತದೆ. ಆಲಿಯಾ ಭಟ್ ಸಲಾಡ್ ಗಳನ್ನು ಸೇವಿಸುವುದಕ್ಕೆ ಇಷ್ಟಪಡುತ್ತಾಳಂತೆ ಮತ್ತು ಆಕೆಯ ಚರ್ಮದ ಕಾಂತಿಗೆ ಪ್ರಮುಖ ಕಾರಣವೇ ಅತ್ಯುತ್ತಮವಾದ ಡಯಟ್ ಎನ್ನುತ್ತಾಳೆ ಆಲಿಯಾ. ಸಾಕಷ್ಟು ಹಣ್ಣು ಮತ್ತು ತರಕಾರಿ ಸೇವನೆಯು ನಿಮ್ಮ ಚರ್ಮದ ಆರೋಗ್ಯದ ಕೀಲಿಕೈ ಆಗಿರುತ್ತದೆ.

English summary

No Celebrity Can Reveal This Beauty Secret For You

Every One wantsto have healthy skin and attractive body shape. But To get attractive shape one need to follow some beauty rules. Here are some beauty secret, take a look.
Story first published: Friday, December 6, 2019, 15:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more