For Quick Alerts
ALLOW NOTIFICATIONS  
For Daily Alerts

ಹೊಸದಾಗಿ ಕಿವಿ ಚುಚ್ಚಿಸಿಕೊಂಡಿದ್ದೀರಾ? ಹಾಗಾದ್ರೆ ಈ ಸಲಹೆಗಳನ್ನು ಫಾಲೋ ಮಾಡೋದನ್ನ ಮರೀಬೇಡಿ

|

ನಮ್ಮ ದೇಶದಲ್ಲಿ ಕಿವಿ ಚುಚ್ಚಿಸಿಕೊಳ್ಳುವುದು ಕೇವಲ ಫ್ಯಾಷನ್ ಅಲ್ಲ, ಅದು ಸಾಂಪ್ರದಾಯಿಕ ಹಿನ್ನಲೆಯನ್ನೂ ಹೊಂದಿದೆ. ಕೆಲವು ವರದಿಗಳ ಪ್ರಕಾರ, ಕಿವಿ ಚುಚ್ಚುವುದರಿಂದ ಶ್ರವಣ ದೋಷ, ಒಸಿಡಿ, ಆತಂಕ ಮತ್ತು ನರ ಸಮಸ್ಯೆಗಳಿಗೆ ಪರಿಹಾರ ಸಿಗುವುದಂತೆ. ಇದರ ಹೊರತಾಗಿ, ನಮ್ಮಲ್ಲಿ ಹೆಚ್ಚಿನವರರಿಗೆ ವಿಭಿನ್ನವಾದ ಕಿವಯೋಲೆ ಧರಿಸಲು ಇಷ್ಟಪಡುತ್ತಾರೆ. ಅದಕ್ಕಾಗಿ ಒಂದಕ್ಕಿಂತ ಹೆಚ್ಚು ಕಿವಿ ಚುಚ್ಚಿಸಿಕೊಂಡಿರುತ್ತಾರೆ.

ಆದರೆ, ಕಿವಿ ಚುಚ್ಚಿಸಿಕೊಂಡ ಬಳಿಕ ನಮ್ಮನ್ನು ಕಾಡುವ ಸಾಮಾನ್ಯ ಸಮಸ್ಯೆಯೆಂದರೆ, ಸೋಂಕು, ಚರ್ಮದ ಕಡಿತ ಅಥವಾ ಕೀವುಗಳು. ಇದಕ್ಕೆ ಕಾರಣ ನಾವು ಮಾಡುವ ಕೆಲವು ತಪ್ಪುಗಳು. ಸರಿಯಾದ ಆರೈಕೆ ಮಾಡಿಕೊಂಡರೆ ಇಂತಹ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಆದ್ದರಿಂದ ನಾವಿಲ್ಲಿ ಕಿವಿ ಚುಚ್ಚಿಸಕೊಂಡಾಗ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೇಳಿದ್ದೇವೆ.

ಕಿವಿ ಚುಚ್ಚಿಸಿಕೊಂಡಿದ್ದರೆ, ಯಾವುದೇ ರೀತಿಯ ಹಾನಿ ಅಥವಾ ಸಮಸ್ಯೆಗಳನ್ನು ತಪ್ಪಿಸಲು ಮಾಡಬೇಕಾದ ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಸಲಹೆ 1: ಸೌಮ್ಯವಾದ ಬ್ಯಾಕ್ಟೀರಿಯಾ ವಿರೋಧಿ ಸೋಪ್‌ನಿಂದ ಸ್ವಚ್ಛಗೊಳಿಸಿ:

ಸಲಹೆ 1: ಸೌಮ್ಯವಾದ ಬ್ಯಾಕ್ಟೀರಿಯಾ ವಿರೋಧಿ ಸೋಪ್‌ನಿಂದ ಸ್ವಚ್ಛಗೊಳಿಸಿ:

ಸೋಂಕುಗಳನ್ನು ತಪ್ಪಿಸಲು ನೈರ್ಮಲ್ಯ ಮತ್ತು ಸ್ವಚ್ಛತೆ ಮುಖ್ಯ. ಆದರೆ, ಕಿವಿ ಚುಚ್ಚಿದ ಜಾಗಕ್ಕೆ ಕಠಿಣ ಉತ್ಪನ್ನಗಳನ್ನು ಬಳಸಬಾರದು. ಏಕೆಂದರೆ ಚರ್ಮವು ಸೂಕ್ಷ್ಮವಾಗಿರುವುದರಿಂದ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಸೌಮ್ಯವಾದ, ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಬಳಸಿ. ಇವುಗಳನ್ನು ಬಳಸುವಾಗಲೂ ಸಹ, ಬಹಳ ಎಚ್ಚರಿಕೆ ವಹಿಸಿ.

ಸಲಹೆ 2: ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ:

ಸಲಹೆ 2: ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ:

ಕಿವಿ ಚುಚ್ಚಿದ ಜಾಗದಲ್ಲಿ ಶುಚಿತ್ವವನ್ನು ಕಾಪಾಡುವುದರ ಜೊತೆಗೆ, ದೇಹದ ಇತರ ಭಾಗಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಹೆಚ್ಚಿನ ಸೋಂಕುಗಳು ನಿಮ್ಮ ಕೈಗಳಿಂದ ವರ್ಗಾವಣೆಯಾಗುತ್ತದೆ. ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸದಿದ್ದರೆ, ಕಿವಿ ಚುಚ್ಚಿದ ಪ್ರದೇಶವನ್ನು ಮುಟ್ಟುತ್ತಿದ್ದರೆ, ಸೋಂಕುಗಳ ನೇರವಾಗಿ ವರ್ಗಾವಣೆಯಾಗಬಹುದು. ಆದ್ದರಿಂದ, ನಿಮ್ಮ ಕೈಗಳನ್ನು ಮತ್ತು ಇತರ ಪ್ರದೇಶಗಳನ್ನು ಸ್ವಚ್ಛವಾಗಿಡಲು ನೀವು ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ.

ಸಲಹೆ 3: ಅತಿಯಾದ ಸ್ವಚ್ಛತೆಯನ್ನು ತಪ್ಪಿಸಿ:

ಸಲಹೆ 3: ಅತಿಯಾದ ಸ್ವಚ್ಛತೆಯನ್ನು ತಪ್ಪಿಸಿ:

ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಅದರ ಮಿತಿಮೀರಿ ಹೋಗುವುದರ ನಡುವೆ ಒಂದು ಸೂಕ್ಷ್ಮ ರೇಖೆ ಇದೆ. ಅತಿಯಾದ ಶುಚಿಗೊಳಿಸುವಿಕೆಯು ಸೂಕ್ಷ್ಮವಾದ ಕಿವಿ ಚುಚ್ಚಿದ ಪ್ರದೇಶಕ್ಕೆ ಜಾನಿಮಾಡಬಹುದು. ಆದ್ದರಿಂದ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಚರ್ಮಕ್ಕೆ ಹಾನಿ ಮಾಡುವಂತಹ ಟಿಸ್ಯು ಪೇಪರ್, ಬ್ರಷ್, ಇಯರ್ ಬಡ್ಸ್‌, ಕುಂಚಗಳು, ರಾಸಾಯನಿಕ-ಸೇರಿಸಿದ ಉತ್ಪನ್ನಗಳು ಇತ್ಯಾದಿಗಳನ್ನು ಬಳಸಬೇಡಿ.

ಸಲಹೆ 4: ಆ ಜಾಗವನ್ನು ಕೆರೆದುಕೊಳ್ಳಬೇಡಿ:

ಸಲಹೆ 4: ಆ ಜಾಗವನ್ನು ಕೆರೆದುಕೊಳ್ಳಬೇಡಿ:

ಕಿವಿಯ ಚರ್ಮವು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದ್ದು, ಸುಲಭವಾಗಿ ತುರಿಕೆಗೆ ಕಾರಣವಾಗಬಹುದು. ಇತರ ಸಂದರ್ಭಗಳಲ್ಲಿ, ತುರಿಕೆ ಬಂದಾಗ ಯಾವುದೇ ವಸ್ತುವಿನ ಸಹಾಯದಿಂದ ಕೆರೆದುಕೊಂಡಿರಬಹುದು, ಆದರೆ ಈಗ ಕಿವಿ ಚುಚ್ಚಿಸಿಕೊಂಡಿರುವುದರಿಂದ ಆ ಗಾಐ ಹಸಿಯಾಗಿರುತ್ತದೆ. ಆದ್ದರಿಂದ ಯಾವುದೇ ತುರಿಕೆಯು ಗಾಯ, ಕೀವಿಗೆ ಕಾರಣವಾಗಬಹುದು. ಆದ್ದರಿಂದ ತುರಿಕೆ ಅಥವಾ ಆಡುವಂತೆ ಅನಿಸಿದಾಗಲೆಲ್ಲ, ನಿಮ್ಮ ಮನಸ್ಸನ್ನು ಬೇರೆ ಕೆಲಸದೆಡೆಗೆ ಕೊಂಡೊಯ್ಯಿರಿಅಥವಾ ಸೌಮ್ಯವಾದ ಶೂನ್ಯ-ರಾಸಾಯನಿಕ ಲೋಷನ್ ಅನ್ನು ಹಚ್ಚಿ.

ಸಲಹೆ 5: ಗಾಯ ಗುಣವಾಗುವ ಮುನ್ನ ಆಭರಣಗಳನ್ನು ಬದಲಾಯಿಸಬೇಡಿ:

ಸಲಹೆ 5: ಗಾಯ ಗುಣವಾಗುವ ಮುನ್ನ ಆಭರಣಗಳನ್ನು ಬದಲಾಯಿಸಬೇಡಿ:

ಜನರು ಮಾಡುವ ಒಂದು ಸಾಮಾನ್ಯ ತಪ್ಪು ಎಂದರೆ ಅವರ ಕಿವಿ ಚುಚ್ಚಿದ ಗಾಯವು ವಾಸಿಯಾಗುವ ಮೊದಲೇ ಕಿವಿಯೋಲೆಗಳನ್ನು ಬದಲಾಯಿಸುವುದು . ಇದು ಅಪಾಯಕಾರಿಯಾಗಬಹುದು, ಮತ್ತಷ್ಟು ಹಾನಿಗೆ ಕಾರಣವಾಗುತ್ತದೆ. ಆಭರಣವನ್ನು ತೆಗೆದು ಇನ್ನೊಂದನ್ನು ಹಾಕಿಕೊಳ್ಳುವ ಮೊದಲು ಒಂದು ಅಥವಾ ಎರಡು ವಾರ ಕಾಯಿರಿ. ಸಮಯದ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

English summary

New Ear Piercing Dos & Don'ts To Avoid Damage in Kannada

Here we talking about New Ear Piercing Dos & Don'ts To Avoid Damage in Kannada, read on
X
Desktop Bottom Promotion