For Quick Alerts
ALLOW NOTIFICATIONS  
For Daily Alerts

ಪುರುಷರೇ, ಗಡ್ಡದ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ನಂಬಲೇಬೇಡಿ!

|

ಗಡ್ಡ ಬೆಳೆಸುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಬಹುತೇಕ ಯುವಕರಿಂದ ಹಿಡಿದು ವಯಸ್ಸಾದವರೆಗೂ ಇಷ್ಟವಿರುತ್ತದೆ. ಅದರಲ್ಲೂ ಕೆಜಿಎಫ್ ನಂತಹ ಸಿನಿಮಾದಲ್ಲಿ ಯಶ್ ಗಡ್ಡ ಬಿಟ್ಟ ಮೇಲೆ ಇದರ ಕ್ರೇಜ್ ಹೆಚ್ಚಾಗಿದೆ. ಗಡ್ಡ ಬರುವ ಯುವಕರು, ಪುರುಷರು ಸಲೂನ್ ಗೆ ಹೋಗಿ ಗಡ್ಡಕ್ಕೆ ಉತ್ತಮ ಶೇಪ್ ಕೊಡುತ್ತ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅನೇಕ ಯುವತಿಯರಿಗೂ ಗಡ್ಡ ಇರುವ ಹುಡುಗರನ್ನೇ ಇಷ್ಟವಾಗುವುದಂಟು. ಅದಾಗ್ಯೂ ನಮ್ಮ ಪುರುಷರಿಗೆ ಗಡ್ಡದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಹೌದು, ಗಡ್ಡದ ಬಗ್ಗೆ ಅನೇಕ ಮಿಥ್ಯೆಗಳು ಹುಟ್ಟುಕೊಂಡಿದೆ. ಅದನ್ನೇ ಅನೇಕ ಪುರುಷರು ಈಗಲೂ ನಂಬಿದ್ದಾರೆ. ಹಾಗಾದರೆ ಏನದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

20 ವರ್ಷದೊಳಗೆ ಮಾತ್ರ ಗಡ್ಡ ಬರುತ್ತದೆ!

20 ವರ್ಷದೊಳಗೆ ಮಾತ್ರ ಗಡ್ಡ ಬರುತ್ತದೆ!

ಗಡ್ಡದ ಬಗ್ಗೆ ಇರುವ ಮಿಥ್ಯೆಯಲ್ಲಿ ಇದು ಪ್ರಮುಖವಾದದ್ದು. ಅನೇಕ ಯುವಕರು ತಮಗೆ 20 ವರ್ಷದೊಳಗೆ ಗಡ್ಡಬರಬೇಕು ಇಲ್ಲದಿದ್ದರೆ ಮತ್ತೆ ಬರಲ್ಲ ಅನ್ನುವುದನ್ನು ನಂಬಿರುತ್ತಾರೆ. ಇದೇ ರೀತಿ ತಪ್ಪು ಮಾಹಿತಿಯನ್ನು ಕೆಲವರು ಯುವಕರ ತಲೆಯಲ್ಲಿ ತುಂಬಿಸಿರುತ್ತಾರೆ. ಇದು ಅಕ್ಷರಶಃ ಸುಳ್ಳು. ಗಡ್ಡ 20 ವರ್ಷದೊಳಗೆ ಸಂಪೂರ್ಣವಾಗಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲ ಯುವಕರಿಗೆ 20 ವರ್ಷದೊಳಗೆ ಬರುತ್ತದೆ. ಇನ್ನು ಕೆಲವರಿಗೆ ವಯಸ್ಸಾದಂತೆ ಅಂದರೆ 20ರ ಮೇಲೆ 30ರ ಮೇಲೆ 40ರೊಳಗೆ ಬರುವುದುಂಟು. ವಯಸ್ಸು ಜಾಸ್ತಿಯಾದಂತೆ ಜಾಸ್ತಿ ಜಾಸ್ತಿ ಗಡ್ಡ ಬರುತ್ತದೆ. ಇನ್ನು ಕೆಲವರಿಗೆ ಸಣ್ಣ ಪ್ರಾಯದಲ್ಲೇ ಬರುತ್ತದೆ. ಹೀಗಾಗಿ ಸಣ್ಣ ಪ್ರಾಯದಲ್ಲಿ ಬಂದಿಲ್ಲದಿದ್ದರೆ ಕಾಯಿರಿ, ಬರಬಹುದು.

ಗಡ್ಡ ಎಂದರೆ ತುರಿಕೆ!

ಗಡ್ಡ ಎಂದರೆ ತುರಿಕೆ!

ಅನೇಕರು ಕೇಳುತ್ತಾರೆ ನಿನ್ನಲ್ಲಿ ಅಷ್ಟು ಗಡ್ಡ ಇದೆ ಅಲ್ವಾ, ಅದು ತುರಿಸಲ್ವಾ ಅಂತ?. ಅನೇಕ ಪುರುಷ ಗಡ್ಡ ತುರಿಕೆ ಉಂಟು ಮಾಡುತ್ತದೆ ಎಂದು ನಂಬಿದ್ದಾರೆ. ಇದೇ ಕಾರಣಕ್ಕೆ ಅನೇಕರು ಫುಲ್ ಶೇವ್ ಮಾಡುವುದಂಟು. ನಿಜ ಹೇಳಬೇಕಾದರೆ ಗಡ್ಡ ತುರಿಸಲ್ಲ. ಗಡ್ಡ ಡ್ರೈ ಆದರೆ ಮಾತ್ರ ತುರಿಕೆ ಉಂಟಾಗುತ್ತದೆ. ಅದನ್ನು ದಿನನಿತ್ಯ ಸರಿಯಾಗಿ ಪಾಲನೆ, ಪೋಷಣೆ ಮಾಡಿದರೆ ಅಂದರೆ ಮೊಯಿಶ್ಚರೈಸ್ ಮಾಡಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ತುರಿಕೆ ಅನ್ನೋ ವಿಚಾರವೇ ಇಲ್ಲ. ಹೀಗಾಗಿ ಗಡ್ಡವನ್ನು ಚೆನ್ನಾಗಿ ಮೆಂಟೇನ್ ಮಾಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ತುರಿಕೆ ಇರುತ್ತದೆ.

ಶೇವಿಂಗ್ ಗಿಂತ ಟ್ರಿಮ್ ಮಾಡೋದು ಒಳ್ಳೆದು!

ಶೇವಿಂಗ್ ಗಿಂತ ಟ್ರಿಮ್ ಮಾಡೋದು ಒಳ್ಳೆದು!

ಅನೇಕ ಪುರುಷರಲ್ಲಿರುವ ಪ್ರಮುಖ ಮಿಥ್ಯೆ ಇದು. ಹೌದು, ಅನೇಕ ಪುರುಷರು ಶೇವ್ ಮಾಡುವುದಕ್ಕಿಂತ ಟ್ರಿಮ್ ಮಾಡಿದರೆ ಒಳ್ಳೆಯದು ಎಂದು ತಿಳಿದುಕೊಂಡಿದ್ದಾರೆ ಇದು ತಪ್ಪು ಕಲ್ಪನೆ. ಶೇವಿಂಗ್ ಮಾಡಿದರೆ ಗಡ್ಡ ಗಡಸಾಗುತ್ತೆ, ಚರ್ಮಕ್ಕೆ ಅಲರ್ಜಿಯಾಗುತ್ತೆ ಎಂದು ಅಂದುಕೊಂಡಿದ್ದಾರೆ. ಆ ರೀತಿ ಆಗೋದಿಲ್ಲ ಸರಿಯಾದ ಕ್ರೀಮ್ ಬಳಸಿ, ಸರಿಯಾದ ವಿಧಾನದಲ್ಲಿ ಶೇವ್ ಮಾಡಿದರೆ ಸ್ಕಿನ್ ಸರಿಯಾಗಿರುತ್ತೆ, ಗಡ್ಡವು ಗಡಸಾಗೋದಿಲ್ಲ. ಇನ್ನು ಶೇವಿಂಗ್ ಆದ ಮೇಲೆ ಆಫ್ಟರ್ ಶೇವರ್ ನಂತಹ ಲೋಶನ್ ಬಳಸಿದರೆ ಅಲರ್ಜಿಯಂತಹ ಸಮಸ್ಯೆ ಉಂಟಾಗುವುದಿಲ್ಲ.

ಗಡ್ಡದ ಪ್ರಾಡಕ್ಟ್ ಗಳ ಬಗ್ಗೆ ಇರುವ ಮಿಥ್ಯೆ!

ಗಡ್ಡದ ಪ್ರಾಡಕ್ಟ್ ಗಳ ಬಗ್ಗೆ ಇರುವ ಮಿಥ್ಯೆ!

ಅನೇಕರು ಬಿಯರ್ಡ್ ಪ್ರಾಡಕ್ಟ್ ಗಳನ್ನು ದೂರುತ್ತಿರುತ್ತಾರೆ. ಗಡ್ಡದ ಪ್ರಾಡಕ್ಟ್ ಗಳಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುತ್ತಿರುತ್ತಾರೆ. ಆದರೆ ಅದು ದೊಡ್ಡ ಸುಳ್ಳು. ಯಾಕೆಂದರೆ ಕೆಲ ಪ್ರಾಡಕ್ಟ್ ಗಳು ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತದೆ. ಉದಾಹರಣೆಗೆ ಬೀಯರ್ಡ್ ಆಯಿಲ್ ನಿಮ್ಮ ಗಡ್ಡವನ್ನು ಹೈಟ್ ಆಡ್ರೇಗಿ ಇಡುತ್ತದೆ. ಇದರಿಂದ ಗಡ್ಡ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೇ ಕೆಲ ಪ್ರಾಡಕ್ಟ್ ಗಳು ಗಡ್ಡದ ಗಡಸುತನವನ್ನು ತೆಗೆಯುತ್ತದೆ. ಅಲ್ಲದೇ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಇವೆಲ್ಲವೂ ಗಡ್ಡದ ಬೆಳವಣಿಗೆ ಹಾಗೂ ನರೀಶಿಂಗ್ ಗೆ ಸಹಾಯ ಮಾಡುತ್ತದೆ.

ಯಾವುದೇ ವಾತಾವರಣಕ್ಕೂ ಸೂಟ್ ಆಗುತ್ತದೆ!

ಯಾವುದೇ ವಾತಾವರಣಕ್ಕೂ ಸೂಟ್ ಆಗುತ್ತದೆ!

ನಮ್ಮಲ್ಲಿ ಅನೇಕ ಪುರುಷರಲ್ಲಿ ತಪ್ಪು ಕಲ್ಪನೆ ಉಂಟು. ಬೇಸಿಗೆಕಾಲದಲ್ಲಿ ಗಡ್ಡ ಸಮಸ್ಯೆ ಉಂಟು ಮಾಡುತ್ತದೆ. ಮುಖಕ್ಕೆ ಜಾಸ್ತಿ ಸೆಕೆ ಆಗುತ್ತದೆ ಅಂದುಕೊಂಡಿರುತ್ತಾರೆ. ಇನ್ನು ಮಳೆಗಾಲ ಹಾಗೂ ಚಳಿಗಾಲದಲ್ಲಿ ಗಡ್ಡ ಬೆಳೆಸುವುದು ಸೂಕ್ತ ಎಂದು ಅಂದುಕೊಂಡಿರುತ್ತಾರೆ. ಅಲ್ಲದೇ ಮಳೆ ಹಾಗೂ ಚಳಿಗಾಲದಲ್ಲಿ ಗಡ್ಡ ನಮ್ಮ ಮುಖವನ್ನು ಬಿಸಿಯಾಗಿ ಇಡುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಇದು ಸುಳ್ಳು. ಯಾವ ಕಾಲದಲ್ಲೂ ಗಡ್ಡ ಬೆಳೆಸಬಹುದು. ಬಿಸಿಲಿನಲ್ಲಿ ಸೆಕೆಗೆ ಗಡ್ಡ ಕಾರಣವಾಗಲ್ಲ. ಮಳೆ, ಚಳಿಗಾಲಕ್ಕೆ ಮುಖಕ್ಕೆ ಚಳಿಯಿಂದ ರಕ್ಷಣೆ ಸಿಗುವುದಿಲ್ಲ.

English summary

Most Common Myths About Beards Busted in kannada

These are the common myths about Beards, to know this interesting facts read this article,
X
Desktop Bottom Promotion