For Quick Alerts
ALLOW NOTIFICATIONS  
For Daily Alerts

ಉಗುರಿನ ಫಂಗಸ್ ನಿವಾರಣೆಗೆ ಬಳಸಿ ಹೈಡ್ರೋಜೆನ್ ಪೆರಾಕ್ಸೈಡ್

|

ಉಗುರಿನ ಶಿಲೀಂಧ್ರ ಎದುರಾದರೆ ಉಗುರುಗಳು ಕೇವಲ ತಮ್ಮ ಅಂದವನ್ನು ಕಳೆದುಕೊಳ್ಳುವುದು ಮಾತ್ರವಲ್ಲ, ದೃಢನೆಯನ್ನೂ ಕಳೆದುಕೊಳ್ಳುತ್ತವೆ. ಚಿಕ್ಕ ಹಳದಿ ಚುಕ್ಕೆಗಳಂತೆ ಪ್ರಾರಂಭವಾಗುವ ಈ ಸೋಂಕು ನಿಮ್ಮ ಉಗುರಿನ ಮೇಲೆ ಹರಡುತ್ತಾ ಹೋಗುತ್ತದೆ, ಕ್ರಮೇಣ ಇಡಿಯ ಉಗುರಿಗೇ ವ್ಯಾಪಿಸುತ್ತದೆ. ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ನೀಡದಿದ್ದರೆ, ಅದು ನಿಮ್ಮ ಸಂಪೂರ್ಣ ಉಗುರು ಮುಚ್ಚಲು, ದಪ್ಪವಾಗಲು ಮತ್ತು ಅದನ್ನು ಬಿರುಕುಗೊಳಿಸುವಂತೆ ಮಾಡುತ್ತದೆ, ಇದರಿಂದ ನೋವು ಮತ್ತು ಉಗುರು ಸುಲಭವಾಗಿ ತುಂಡಾಗುತ್ತದೆ.

ಅದೃಷ್ಟವಶಾತ್, ಈ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಕೆಲವು ಮನೆಮದ್ದುಗಳಿವೆ. ಇದರಲ್ಲಿ ಸುಲಭ ಮತ್ತು ಫಲಪ್ರದ ಚಿಕಿತ್ಸೆ ಎಂದರೆ ಆಕ್ಸಿಡೇಟಿವ್ ಥೆರಪಿ. ಆಕ್ಸಿಡೇಟಿವ್ ಚಿಕಿತ್ಸೆಯಲ್ಲಿ ಉಗುರಿನ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಹೈಡ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕವನ್ನು ಬಳಸಿಕೊಳ್ಳಲಾಗುತ್ತದೆ.

ಉಗುರಿನ ಶಿಲೀಂಧ್ರಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಪರಿಣಾಮಕಾರಿ ಚಿಕಿತ್ಸೆಯಾಗಿದೆಯೇ?

ಉಗುರಿನ ಶಿಲೀಂಧ್ರಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಪರಿಣಾಮಕಾರಿ ಚಿಕಿತ್ಸೆಯಾಗಿದೆಯೇ?

ಹೈಡ್ರೋಜನ್ ಪೆರಾಕ್ಸೈಡ್ ಒಂದು ಮನೆಮದ್ದಾಗಿದ್ದು, ಇದನ್ನು ಚಿಕ್ಕ ಗೀರುಗಳು ಮತ್ತು ಗಾಯಗಳನ್ನು ಸೋಂಕುನಿವಾರಕಗೊಳಿಸಲು ಬಳಸಲಾಗುತ್ತದೆ. ಉಗುರಿನ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಬಳಸಿದಾಗ, ಅದರ ಶಿಲೀಂಧ್ರ ನಿವಾರಕ ಗುಣಗಳು ಶಿಲೀಂಧ್ರವನ್ನು ಕೊಲ್ಲುತ್ತವೆ, ನಿಮ್ಮ ಉಗುರುಗಳ ಹಾನಿಗೊಳಗಾದ ಭಾಗವು ಮತ್ತೆ ಆರೋಗ್ಯಕರವಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಗುಣಪಡಿಸುವ, ಸೋಂಕುನಿವಾರಕ, ಆಕ್ಸಿಡೈಸರ್, ಬಿಳಿಚುಕಾರಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿರುವ ಈ ದ್ರವವು ಹಲವಾರು ಉಪಯೋಗಗಳನ್ನು ಹೊಂದಿದೆ. ಇದರ ಬಲವಾದ ಶಿಲೀಂಧ್ರ ನಿವಾರಕ ಮತ್ತು ಸೋಂಕು ನಿವಾರಕ ಗುಣಗಳು ಉಗುರಿನ ಶಿಲೀಂಧ್ರದ ತೊಂದರೆಯನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತವೆ.

ನಿಯಮಿತವಾದ ಬಳಕೆಯ ಮೂಲಕ, ಸೋಂಕಿನ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆಯು ನಿಮ್ಮ ಉಗುರುಗಳನ್ನು ಕೆಲವೇ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ಗುಣಪಡಿಸುತ್ತದೆ. ಭವಿಷ್ಯದ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು ನಿಮ್ಮ ಉಗುರು ಹಿಂದಿನ ಆರೋಗ್ಯಕ್ಕೆ ಮರಳಿದ ಬಳಿಕವೂ ಒಂದೆರಡು ತಿಂಗಳು ಚಿಕಿತ್ಸೆಯನ್ನು ಮುಂದುವರೆಸಲು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಈ ಚಿಕಿತ್ಸೆಯ ಬಗ್ಗೆ ಸಾಕಷ್ಟು ವೈಜ್ಞಾನಿಕ ಅಧ್ಯಯನಗಳು ಇಲ್ಲವಾದರೂ, ಇದು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಮನೆಮದ್ದಾಗಿದ್ದು, ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುವುದು ಖಚಿತವಾಗಿದೆ.

ಇಂದಿನ ಲೇಖನದಲ್ಲಿ, ಉಗುಗಿನ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಹಂತ-ಹಂತವಾದ ಸಮಗ್ರ ಮಾರ್ಗದರ್ಶಿಯ ಮೂಲಕ ವಿವರಿಸಲಾಗಿದೆ:

ಉಗುರು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಹೈಡ್ರೋಜನ್ ಪೆರಾಕ್ಸೈಡ್ ಬಳಸುವ ವಿಧಾನ

1. ನಿಮ್ಮ ಪಾದಗಳನ್ನು ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ ನೀರಿನಲ್ಲಿ ನೆನೆಸಿ

1. ನಿಮ್ಮ ಪಾದಗಳನ್ನು ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿದ ನೀರಿನಲ್ಲಿ ನೆನೆಸಿ

ಅಗತ್ಯವಿರುವ ಸಾಮಾಗ್ರಿಗಳು

3% ಹೈಡ್ರೋಜನ್ ಪೆರಾಕ್ಸೈಡ್

ಭಟ್ಟಿ ಇಳಿಸಿದ ನೀರು

ಪ್ಲಾಸ್ಟಿಕ್ ನ ಬಕೆಟ್ ಅಥವಾ ಅಗಲವಾದ ತೊಟ್ಟಿ

ಕೆಲವು ಟಿಶ್ಯೂ ಕಾಗದಗಳು

ಬಳಸುವ ವಿಧಾನ

ಪ್ಲಾಸ್ಟಿಕ್ ಬಕೆಟ್ ಅಥವಾ ತೊಟ್ಟಿಯಲ್ಲಿ ಸಮಪ್ರಮಾಣದ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಬಟ್ಟಿ ಇಳಿಸಿದ ನೀರನ್ನು ಹಾಕಿ ಮಿಶ್ರಣ ಮಾಡಿ.

ನೀವು 3% ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣಕ್ಕಿಂತ ಬಲವಾದ ಯಾವುದನ್ನೂ ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ; ಏಕೆಂದರೆ ಇದನ್ನೂ ಹೆಚ್ಚಿನ ಪ್ರಾಬಲ್ಯತೆ ನಿಮ್ಮ ಚರ್ಮಕ್ಕೆ ಹಾನಿ ಮಾಡಬಹುದು.

ಈ ದ್ರಾವಣದಲ್ಲಿ ಶಿಲೀಂಧ್ರದ ಸೋಂಕಿಗೆ ಒಳಗಾದ ಉಗುರುಗಳೆಲ್ಲವೂ ಮುಳುಗುವಂತೆ ಪಾದಗಳನ್ನಿರಿಸಿ.

30 ನಿಮಿಷಗಳ ಕಾಲ ಹಾಗೇ ಉಗುರುಗಳು ನೆನೆಯಲಿ

ಬಳಿಕ ಪಾದಗಳನ್ನು ಹೊರತೆಗೆದು ಒಣ ಟಿಶ್ಯೂ ಕಾಗದಗಳಿಂದ ನಿಮ್ಮ ಉಗುರುಗಳನ್ನು ಚೆನ್ನಾಗಿ ಒರೆಸಿ ಒಣಗಿಸಿ. ಈ ಟಿಶ್ಯೂ ತೇವವಾದ ಬಳಿಕ ಎಸೆದು ಹೊಸ ಟಿಶ್ಯೂ ಬಳಸಿ ಉಗುರುಗಳು ಪೂರ್ಣವಾಗಿ ಒಣಗುವಂತೆ ಮಾಡಿ.

ಪಾದರಕ್ಷೆ ತೊಡುವ ಮುನ್ನ ಉಗುರುಗಳು ಸಂಪೂರ್ಣವಾಗಿ ಒಣಗಿದೆ ಎಂದು ಖಚಿತಪಡಿಸಿಕೊಳ್ಳಿ. ಹಾಗಾಗಿ ಹೊರಗೆ ಹೋಗುವ ಸಂದರ್ಭ ಇದ್ದರೆ ಸಾಕಷ್ಟು ಮುಂಚಿತವಾಗಿಯೇ ಈ ಚಿಕಿತ್ಸೆಯನ್ನು ನಡೆಸಬೇಕು.

ನೀವು ಈ ಪ್ರಕ್ರಿಯೆಯನ್ನು ಪ್ರತಿದಿನ ಪುನರಾವರ್ತಿಸಬೇಕು, ಮತ್ತು ಗುಣವಾದ ನಂತರವೂ ಇದನ್ನು ಮುಂದುವರೆಸಬೇಕು. ಏಕೆಂದರೆ ಉಗುರಿನ ಶಿಲೀಂಧ್ರವನ್ನು ಮೂಲದಿಂದ ನಿವಾರಿಸುವುದು ಅಷ್ಟು ಸುಲಭವಲ್ಲ ಮತ್ತು ಸಾಕಷ್ಟು ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ. ಹೊರಗಿನಿಂದ ಗುಣವಾದಂತೆ ಕಂಡರೂ ಆಳದಲ್ಲಿ ಇರುವ ಸೂಕ್ಷ್ಮವಾದ ಒಂದೇ ಕಣ ಈ ಸೋಂಕನ್ನು ಮತ್ತೊಮ್ಮೆ ಉಂಟು ಮಾಡಬಹುದು.

ಈ ವಿಧಾನ ಏಕಾಗಿ ಪರಿಣಾಮಕಾರಿಯಾಗಿದೆ?

ಉಗುರು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವಾಗ ಹೈಡ್ರೋಜನ್ ಪೆರಾಕ್ಸೈಡ್ ಬಳಸುವ ಈ ಆಕ್ಸಿಡೇಟ್ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಿದೆ. ಸೋಂಕಿತ ಮತ್ತು ಪೀಡಿತ ಉಗುರುಗಳನ್ನು ನೆನೆಸಲು ಪೆರಾಕ್ಸೈಡ್ ಅನ್ನು ಬಳಸುವುದು ಈ ವಿಧಾನದಲ್ಲಿ ಒಳಗೊಂಡಿರುತ್ತದೆ. ಈ ಪೆರಾಕ್ಸೈಡ್ ಸೋಂಕಿತ ಭಾಗದಲ್ಲಿ ಆಮ್ಲಜನಕದ ಮಟ್ಟಗಳನ್ನು ಹೆಚ್ಚಿಸುತ್ತದೆ. ಈ ವಾತಾವರಣದಲ್ಲಿ ಶಿಲೀಂಧ್ರಗಳು ಬದುಕಲಾರವು. ಈ ಮೂಲಕ ಉಗುರುಗಳ ಮೇಲಿನ ಶಿಲೀಂಧ್ರವು ನಾಶವಾಗುತ್ತದೆ.

2. ಉಗುರಿನ ಶಿಲೀಂಧ್ರಕ್ಕೆ ಶಿರ್ಕಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್

2. ಉಗುರಿನ ಶಿಲೀಂಧ್ರಕ್ಕೆ ಶಿರ್ಕಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್

ಅಗತ್ಯವಿರುವ ಸಾಮಾಗ್ರಿಗಳು

3% ಹೈಡ್ರೋಜನ್ ಪೆರಾಕ್ಸೈಡ್

ಬಿಳಿ ಶಿರ್ಕಾ / ಸೇಬಿನ ಶಿರ್ಕಾ (apple cider vinegar)

ಭಟ್ಟಿ ಇಳಿಸಿದ ನೀರು

ಪ್ಲಾಸ್ಟಿಕ್ ತೊಟ್ಟಿ ಅಥವಾ ಬಕೆಟ್

ಟಿಶ್ಯೂ ಕಾಗದಗಳು

ಸೂಚನೆ

ಅಂತರ್ಜಾಲದಲ್ಲಿ ಉಗುರಿನ ಶಿಲೀಂಧ್ರಕ್ಕೆ ವಿಧಾನ 1 ಹೆಚ್ಚು ಪರಿಣಾಮಕಾರಿ ಎಂದು ಸಾಮಾನ್ಯವಾಗಿ ಉಲ್ಲೇಖಿಸಲಾಗಿದ್ದರೂ, ವಿಧಾನ 2 ಅನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ. ಇದಕ್ಕೆ ಕಾರಣ, ಕೆಲವು ಪರಿಸ್ಥಿತಿಗಳಲ್ಲಿ, ಹೈಡ್ರೋಜನ್ ಪೆರಾಕ್ಸೈಡ್ ಮತ್ತು ವಿನೆಗರ್ ಬೆರೆಸಿದಾಗ ಪೆರಾಸೆಟಿಕ್ ಆಮ್ಲವನ್ನು (peracetic acid) ಉತ್ಪತ್ತಿಯಾಗುತ್ತದೆ. ಇದು ಕ್ಷಾರೀಯ ರಾಸಾಯನಿಕವಾಗಿದ್ದು ಅದು ಉಗುರಿನ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಅಪೇಕ್ಷಿತ ಪರಿಣಾಮವನ್ನು ನೀಡಲಾರದು.

ವಿಧಾನ 1

ಪ್ಲಾಸ್ಟಿಕ್ ತೊಟ್ಟಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್, ಬಟ್ಟಿ ಇಳಿಸಿದ ನೀರು ಮತ್ತು ವಿನೆಗರ್ ನ ಸಮಾನ ಪ್ರಮಾಣಗಳನ್ನು ಮಿಶ್ರಣ ಮಾಡಿ.

ನೀವು 3% ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣಕ್ಕಿಂತ ಬಲವಾದ ಯಾವುದನ್ನೂ ಬಳಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ; ಏಕೆಂದರೆ ಹೆಚ್ಚಿನ ಪ್ರಾಬಲ್ಯತೆ ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು.

ಈ ದ್ರಾವಣದಲ್ಲಿ ಶಿಲೀಂಧ್ರದಿಂದ ಪ್ರಭಾವಿತವಾದ ಉಗುರುಗಳು ಮುಳುಗುವಂತೆ ಪಾದಗಳನ್ನು ಇರಿಸಿ.

10 ನಿಮಿಷ ಹಾಗೇ ನೆನೆಯಲು ಬಿಡಿ ಬಳಿಕ ಹೊರತೆಗೆಯಿರಿ.

ಒಣ ಟಿಶ್ಯೂ ಕಾಗದಗಳಿಂದ ನಿಮ್ಮ ಉಗುರುಗಳನ್ನು ಒಣಗಿಸಿ. ಬಳಕೆಯ ನಂತರ ಟಿಶ್ಯೂಗಳನ್ನು ತ್ಯಜಿಸಿ.

ಪಾದರಕ್ಷೆ ತೊಡುವ ಮುನ್ನ ನಿಮ್ಮ ಉಗುರುಗಳು ಸಂಪೂರ್ಣವಾಗಿ ಒಣಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ವಿಧಾನ 2

ಪ್ಲಾಸ್ಟಿಕ್ ತೊಟ್ಟಿಯಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಬಟ್ಟಿ ಇಳಿಸಿದ ನೀರಿನ ಸಮಾನ ಭಾಗಗಳನ್ನು ಮಿಶ್ರಣ ಮಾಡಿ.

ವಿಧಾನ ಒಂದರಲ್ಲಿ ಉಲ್ಲೇಖಿಸಲಾದ ಹಂತಗಳನ್ನು ಅನುಸರಿಸಿ.

2 ನೇ ದಿನ, ಸಮಾನ ಪ್ರಮಾಣದ ಶಿರ್ಕಾ ಮತ್ತು ಭಟ್ಟಿ ಇಳಿಸಿದ ನೀರನ್ನು ಬಳಸಿ ಅದೇ ಹಂತಗಳನ್ನು ಅನುಸರಿಸಿ.

ಸಮಸ್ಯೆ ಕಡಿಮೆಯಾಗುವವರೆಗೆ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಶಿರ್ಕಾವನ್ನು ದಿನ ಬಿಟ್ಟು ದಿನ, ಅಂದರೆ ಒಂದು ದಿನ ಶಿರ್ಕಾ, ಒಂದು ದಿನ ಹೈಡ್ರೋಜನ್ ಪೆರಾಕ್ಸೈಡ್ ಹೀಗೆ ಬಳಸಿ.

ನೀವು ಈ ಪ್ರಕ್ರಿಯೆಯನ್ನು ಪ್ರತಿದಿನವೂ ಪುನರಾವರ್ತಿಸಬೇಕು, ಮತ್ತು ಗುಣವಾದ ನಂತರವೂ ಒಂದೆರಡು ತಿಂಗಳು ಮುಂದುವರೆಸಬೇಕು. ಉಗುರಿನ ಶಿಲೀಂಧ್ರವನ್ನು ಗುಣಪಡಿಸುವುದು ಅಷ್ಟು ಸುಲಭವಲ್ಲ ಮತ್ತು ಸಾಕಷ್ಟು ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ.

ಈ ವಿಧಾನ ಏಕೆ ಪರಿಣಾಮಕಾರಿಯಾಗಿ?

ಶಿರ್ಕಾ ಆಮ್ಲೀಯ ದ್ರಾವಣವಾಗಿದ್ದು ಅದು ತುರಿಕೆ ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮ ಮತ್ತು ಉಗುರುಗಳ ಪಿಹೆಚ್ ಮಟ್ಟಗಳ ಸಮತೋಲನವನ್ನು ಪುನಃಸ್ಥಾಪಿಸುತ್ತದೆ. ಈ ಗುಣಲಕ್ಷಣಗಳಿರುವ ದ್ರವವು ಶಿಲೀಂಧ್ರಗಳು ಸಂತಾನೋತ್ಪತ್ತಿ ಮಾಡಲು ಪ್ರತಿಕೂಲವಾದ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ಸೋಂಕನ್ನು ನಿವಾರಿಸುತ್ತದೆ. ಸೇಬಿನ ಶಿರ್ಕಾ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಉಗುರಿನ ಶಿಲೀಂಧ್ರದಿಂದ ಉಂಟಾಗುವ ನೋವನ್ನೂ ಕಡಿಮೆ ಮಾಡುತ್ತದೆ.

3. ಉಗುರಿನ ಶಿಲೀಂಧ್ರದ ನಿವಾರಣೆಗಾಗಿ ಅಡಿಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್

3. ಉಗುರಿನ ಶಿಲೀಂಧ್ರದ ನಿವಾರಣೆಗಾಗಿ ಅಡಿಗೆ ಸೋಡಾ ಮತ್ತು ಹೈಡ್ರೋಜನ್ ಪೆರಾಕ್ಸೈಡ್

ಅಗತ್ಯವಿರುವ ಸಾಮಾಗ್ರಿಗಳು

½ ಕಪ್ ಅಡುಗೆ ಸೋಡಾ

1 ಕಪ್ 3% ಹೈಡ್ರೋಜನ್ ಪೆರಾಕ್ಸೈಡ್

1 ಕಪ್ ಬಿಳಿ ಶಿರ್ಕಾ

4 ಕಪ್ ಬೆಚ್ಚಗಿನ ನೀರು

½ ಕಪ್ ಎಪ್ಸಮ್ ಉಪ್ಪು

ಪ್ಲಾಸ್ಟಿಕ್ ತೊಟ್ಟಿ

ಟಿಶ್ಯೂ ಕಾಗದಗಳು

ಬಳಕೆಯ ವಿಧಾನ

ಅಡಿಗೆ ಸೋಡಾ, ಪೆರಾಕ್ಸೈಡ್, ಶಿರ್ಕಾ, ಎಪ್ಸಮ್ ಉಪ್ಪು ಮತ್ತು ನೀರನ್ನು ಪ್ಲಾಸ್ಟಿಕ್ ತೊಟ್ಟಿಯಲ್ಲಿ ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿ.

ನೀವು 3% ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣಕ್ಕಿಂತ ಬಲವಾದ ಯಾವುದನ್ನೂ ಬಳಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ; ಇದನ್ನೂ ಹೆಚ್ಚಿನ ಪ್ರಬಲ ದ್ರಾವಣ ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು.

ಈ ದ್ರಾವಣದಲ್ಲಿ ಶಿಲೀಂಧ್ರದಿಂದ ಪ್ರಭಾವಿತವಾದ ಉಗುರುಗಳು ನೆನೆಯುವಂತೆ ಪಾದಗಳನ್ನು ಮುಳುಗಿಸಿ.

10 ನಿಮಿಷ ಹಾಗೇ ಇರಿಸಿ ಬಳಿಕ ಹೊರತೆಗೆಯಿರಿ.

ಒಣ ಟಿಶ್ಯೂ ಕಾಗದಗಳಿಂದ ನಿಮ್ಮ ಉಗುರುಗಳನ್ನು ಒಣಗಿಸಿ. ಬಳಕೆಯ ನಂತರ ಟಿಶ್ಯೂಗಳನ್ನು ತ್ಯಜಿಸಿ.

ಪಾದರಕ್ಷೆ ತೊಡುವ ಮುನ್ನ ನಿಮ್ಮ ಉಗುರುಗಳು ಸಂಪೂರ್ಣವಾಗಿ ಒಣಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೀವು ಈ ಪ್ರಕ್ರಿಯೆಯನ್ನು ಪ್ರತಿದಿನವೂ ಪುನರಾವರ್ತಿಸಬೇಕು, ಮತ್ತು ಗುಣವಾದ ನಂತರವೂ ಒಂದೆರಡು ತಿಂಗಳು ಮುಂದುವರೆಸಬೇಕು. ಉಗುರಿನ ಶಿಲೀಂಧ್ರವನ್ನು ಗುಣಪಡಿಸುವುದು ಅಷ್ಟು ಸುಲಭವಲ್ಲ ಮತ್ತು ಸಾಕಷ್ಟು ತಾಳ್ಮೆ ಮತ್ತು ಶ್ರಮ ಬೇಕಾಗುತ್ತದೆ.

ಈ ವಿಧಾನ ಏಕಾಗಿ ಪರಿಣಾಮಕಾರಿಯಾಗಿದೆ?

ಅಡಿಗೆ ಸೋಡಾದಲ್ಲಿ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುವ ಶಿಲೀಂಧ್ರ ನಿವಾರಕ ಗುಣಗಳಿವೆ. ಈ ಪರಿಹಾರವು ಶಿಲೀಂಧ್ರವನ್ನು ಕೊಲ್ಲುವ ಜೊತೆಗೇ ನಿಮ್ಮ ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಉಗುರಿನ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಜೊತೆಗೇ ಇದು ಮತ್ತೆ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಸಲಹೆಗಳು

ಉಗುರಿನ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಜೊತೆಗೇ ಇದು ಮತ್ತೆ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಸಲಹೆಗಳು

  • ನಿಮ್ಮ ಎಲ್ಲಾ ಪಾದರಕ್ಷೆ ಮತ್ತು ಸಾಕ್ಸ್‌ಗಳನ್ನು ಸ್ವಚ್ಛಗೊಳಿಸಿ ಮತ್ತು ಸೋಂಕುರಹಿತಗೊಳಿಸುತ್ತಾ ಇರಿ.
  • ನಿಮ್ಮ ಉಗುರು ಕತ್ತರಿಸುವ ಕ್ಲಿಪ್ಪರ್‌ಗಳನ್ನು ಬಿಸಿನೀರು ಮತ್ತು ಮದ್ಯಸಾರದೊಂದಿಗೆ ಸೋಂಕುರಹಿತಗೊಳಿಸಿ.
  • ನೀವು ಹೊರಗಿರುವಾಗ ನಿಮ್ಮ ಬೆರಳುಗಳು ಮತ್ತು ಕಾಲ್ಬೆರಳುಗಳನ್ನು ಹೊರಗಿನ ಗಾಳಿಗೆ ಒಡ್ಡದಂತೆ ಮುಚ್ಚಿರುವಂತೆ ಎಚ್ಚರ ವಹಿಸಿ.
  • ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ ಮತ್ತು ಸ್ವಚ್ಛವಾಗಿರಿಸಿ.
  • ನಿಮ್ಮ ಕೈ ಕಾಲುಗಳನ್ನು ತೊಳೆದ ನಂತರ ನಿಮ್ಮ ಉಗುರುಗಳನ್ನು ಚೆನ್ನಾಗಿ ಒಣಗಿಸಿ.
  • ಸೂಕ್ಷ್ಮ ಪ್ರದೇಶಗಳಲ್ಲಿ ಆಶ್ರಯ ಪಡೆದಿರುವ ಶಿಲೀಂಧ್ರಗಳನ್ನು ಕೊಲ್ಲಲು ನಿಯಮಿತವಾಗಿ ನಿಮ್ಮ ಕೈಗವಸುಗಳು ಮತ್ತು ಬೂಟುಗಳನ್ನು ಶಿಲೀಂಧ್ರ ನಿವಾರಕ ದ್ರಾವಣ ( ಆಂಟಿ-ಫಂಗಲ್ ಸ್ಪ್ರೇ) ಗಳೊಂದಿಗೆ ಸಿಂಪಡಿಸಿಕೊಳ್ಳುತ್ತಿರಿ.
  • ನಿಮ್ಮ ಬೂಟುಗಳು ಮತ್ತು ಸಾಕ್ಸ್‌ಗಳನ್ನು ಯಾವಾಗಲೂ ಸರಿಯಾಗಿ ಒಣಗಿಸಿ. ತೇವಾಂಶವೇ ನಿಮ್ಮ ದೊಡ್ಡ ಶತ್ರು ಏಕೆಂದರೆ ತೇವ ಇರುವ ಭಾಗದಲ್ಲಿ ಶಿಲೀಂಧ್ರಗಳು ಭಾರೀ ಸಂಖ್ಯೆಯಲ್ಲಿ ವೃದ್ದಿಸುತ್ತವೆ.
  • ಉಗುರಿನ ಶಿಲೀಂಧ್ರ ಚಿಕಿತ್ಸೆಗಾಗಿ ಹೈಡ್ರೋಜನ್ ಪೆರಾಕ್ಸೈಡ್ ಬಳಸುವಾಗ ಎದುರಾಗುವ ಅಡ್ಡಪರಿಣಾಮಗಳು

    ಉಗುರಿನ ಶಿಲೀಂಧ್ರ ಚಿಕಿತ್ಸೆಗಾಗಿ ಹೈಡ್ರೋಜನ್ ಪೆರಾಕ್ಸೈಡ್ ಬಳಸುವಾಗ ಎದುರಾಗುವ ಅಡ್ಡಪರಿಣಾಮಗಳು

    ನೀವು ಈ ಕೆಳಗಿನ ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸಿದರೆ, 2% ಕ್ಕಿಂತ ದುರ್ಬಲವಾದ ದ್ರಾವಣವನ್ನು ಬಳಸಲು ಪ್ರಯತ್ನಿಸಿ. ಈ ದ್ರಾವಣ ಸಿಗದಿದ್ದರೆ ಈ ದ್ರಾವಣಕ್ಕೇ ಹೆಚ್ಚು ನೀರು ಬೆರೆಸಿ ದುರ್ಬಲಗೊಳಿಸಲು ಸಹ ಪ್ರಯತ್ನಿಸಬಹುದು.

    • ಹೈಡ್ರೋಜನ್ ಪೆರಾಕ್ಸೈಡ್ ಕೆಲವರ ಚರ್ಮಕ್ಕೆ ಉರಿ ತರಿಸಬಹುದು. ಈ ಅಲರ್ಜಿ ಇರುವ ವ್ಯಕ್ತಿಗಳಿಗೆ ಇದು ಚರ್ಮ ಕೆಂಪಗಾಗುವುದು, ಉರಿ ಮತ್ತು ಸೌಮ್ಯವಾದ ತುರಿಕೆಗೆ ಕಾರಣವಾಗುತ್ತದೆ.
    • ಇದು ನಿಮ್ಮ ಚರ್ಮವನ್ನು ತೀರಾ ಒಣಗಿಸಬಹುದು ಮತ್ತು ಪಾದಗಳ ಬಿರುಕುಗಳನ್ನು ಇನ್ನಷ್ಟು ಆಳವಾಗಿಸಬಹುದು.
    • ಪೆರಾಕ್ಸೈಡ್ ನಿಮ್ಮ ಚರ್ಮದ ಹೊರಪದರ ಸಿಪ್ಪೆಯಂತೆ ಸುಲಿಯಲು ಕಾರಣವಾಗಬಹುದು.
    • ನಿಮ್ಮ ಚರ್ಮದ ಮೇಲೆ ಅಸಹಜ ಬಣ್ಣವನ್ನು ನೀವು ಎಂದಾದರೂ ಗಮನಿಸಿದರೆ, ಅದು ಉಗುರಿನ ಶಿಲೀಂಧ್ರವಾಗಿರಬಹುದು. ಮುಂದಿನ ಬಾರಿ ಇದು ಸಂಭವಿಸಿದಾಗ, ಏನು ಮಾಡಬೇಕೆಂದು ನಿಮಗೆ ತಿಳಿದಿದೆ. ನೀವು ಎಂದಾದರೂ ಉಗುರಿನ ಶಿಲೀಂಧ್ರವನ್ನು ಎದುರಿಸಿದ್ದೀರಾ? ಚಿಕಿತ್ಸೆ ನೀಡಲು ನಿಮಗೆ ಯಾವ ವಿಧಾನ ಸಹಾಯ ಮಾಡಿದೆ? ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.

English summary

How To Use Hydrogen Peroxide For Nail Fungus in Kannada

Here we are discussing about How To Use Hydrogen Peroxide For Nail Fungus in Kannada. Read more.
Story first published: Wednesday, September 23, 2020, 13:43 [IST]
X
Desktop Bottom Promotion