For Quick Alerts
ALLOW NOTIFICATIONS  
For Daily Alerts

ಉಗುರಿಗೆ ಬೆಸ್ಟ್ ಶೇಪ್ ನೀಡುವುದು ಹೇಗೆ?

|

ಹೆಣ್ಣಿನ ಸೌಂದರ್ಯದಲ್ಲಿ ಉಗುರುಗಳಿಗೂ ಕೂಡ ಬಹಳ ಮಹತ್ವದ ಸ್ಥಾನ. ಉಗುರುಗಳ ಅಲಂಕಾರಕ್ಕಾಗಿ ಎಷ್ಟೆಲ್ಲಾ ಪ್ರೊಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಹೇಳಿ? ಆದರೆ ಸುಂದರವಾದ ಉಗುರುಗಳಿಲ್ಲದೇ ಇದ್ದರೆ ಖಂಡಿತ ಬೇಸರವಾಗುವುದು ಸಹಜ. ಹೆಚ್ಚಿನವರಿಗೆ ಉಗುರಿನ ಬಗ್ಗೆ ಅಸಡ್ಡೆ. ಕೆಲವರಿಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬ ಆಸೆ ಇದ್ದರೂ ಕೂಡ ಹೇಗೆ ಎಂಬ ಬಗ್ಗೆ ತಿಳಿದಿಲ್ಲ.

Nail Shapes

ಆದರೆ ಕೈಕಾಲುಗಳ ಉಗುರು ಸುಂದರವಾಗಿದ್ದರೆ ನೀವು ಇನ್ನೊಬ್ಬರನ್ನು ಖಂಡಿತ ಅದರಿಂದ ಆಕರ್ಷಿಸಬಹುದು. ಅತ್ಯುತ್ತಮವಾಗಿ ಮೆನಿಕ್ಯೂರ್ ಮಾಡಲಾಗಿರುವ ಉಗುರುಗಳು ನಿಮ್ಮ ಬ್ಯೂಟಿಯನ್ನು ಇಮ್ಮಡಿಗೊಳಿಸುತ್ತದೆ. ಉಗುರಿಗೆ ಆಕಾರ ನೀಡುವುದು ಕೂಡ ಬಹಳ ಮುಖ್ಯವಾಗಿರುವ ಸಂಗತಿ. ನಿಮ್ಮ ಉಗುರಿಗೆ ಯಾವ ಆಕಾರ ಹೊಂದಿಕೆಯಾಗುತ್ತದೆ ಎಂದು ಯೋಚಿಸಿ ಒಮ್ಮೊಮ್ಮೆ ಒಂದೊಂದು ರೀತಿಯ ಆಕಾರವನ್ನು ಮಾಡಿಕೊಳ್ಳಬಹುದು. ಚೌಕಾಕಾರ, ಮೊಟ್ಟೆಯಾಕಾರ, ದುಂಡಗಿನ ಆಕಾರ ಹೀಗೆ ಉಗುರಿಗೆ ಬೇರೆಬೇರೆ ಶೇಪ್ ನೀಡಬಹುದು. ಆಕಾರ ನೀಡುವುದು ಹೇಗೆ ಮತ್ತು ಯಾವೆಲ್ಲಾ ರೀತಿಯ ಆಕಾರ ನೀಡಬಹುದು ಎಂಬ ಬಗ್ಗೆ ನಿಮಗೆ ಗೊತ್ತಿಲ್ಲದೇ ಇದ್ದಲ್ಲಿ ನಿಮ್ಮ ಅನುಮಾನಗಳಿಗೆ ಬೋಲ್ಡ್ ಸ್ಕೈ ಪರಿಹಾರ ನೀಡಲಿದೆ. ಹೌದು ಈ ಲೇಖನದಲ್ಲಿ ಉಗುರಿಗೆ ನೀವು ನೀಡಬಹುದಾದ ವಿಭಿನ್ನ ಆಕಾರಗಳ ಬಗ್ಗೆ ನಾವು ತಿಳಿಸುತ್ತಿದ್ದೇವೆ. ಮುಂದೆ ಓದಿ.

ಮೊದಲನೆಯದಾಗಿ ಉಗುರುಗಳನ್ನು ಬೆಳೆಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಲ್ಲಿ ಏನು ಮಾಡುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಎಷ್ಟೇ ಜಾಗೃತೆ ವಹಿಸಿದರೂ ಕೂಡ ಉಗುರು ತುಂಡಾಗುವ ಸಮಸ್ಯೆ ಆಗುತ್ತಿದ್ದಲ್ಲಿ ಏನು ಮಾಡಬೇಕು? ಉಗುರಿಗೆ ಶೇಪ್ ನೀಡಬೇಕು ಎಂದರೆ ಮೊದಲು ಉಗುರು ಉದ್ದವಿರಬೇಕಲ್ಲವೇ ಎಂಬ ಪ್ರಶ್ನೆಗೆ ನಾವಿಲ್ಲಿ ಉತ್ತರಿಸುತ್ತಿದ್ದೇವೆ.

ಉಗುರು ಬೆಳೆಯುತ್ತಿಲ್ಲವಾದರೆ ಏನು ಮಾಡುವುದು?

ಉಗುರು ಉದ್ದವಾಗುವುದಿಲ್ಲವಲ್ಲ! ದುಂಡಗಿನ ಆಕಾರ ಬಿಟ್ಟರೆ ಬೇರೆ ಯಾವುದೇ ಆಕಾರ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ನೀವು ಯೋಚಿಸುತ್ತಿರಬಹುದು. ಒಂದು ವೇಳೆ ನಿಮಗೆ ಉಗುರು ಉದ್ದವಾಗುತ್ತಿಲ್ಲವಾದರೆ ಅದಕ್ಕೆ ನೀವು ಹೇಗೆ ಶೇಪ್ ನೀಡಬಹುದು ಮತ್ತು ಯಾವ ಶೇಪ್ ನೀಡಬಹುದು ಎಂಬ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ. ಉಗುರಿನ ತುಂಡಾಗುವಿಕೆಯಿಂದ ಬಳಲುವವರಿಗಾಗಿ ನಾವಿಲ್ಲಿ ಕೆಲವು ಟಿಪ್ಸ್ ಗಳನ್ನು ನೀಡಿದ್ದೇವೆ.

ಅಕ್ರಾಲಿಕ್ ಉಗುರುಗಳು:

ಬಹಳ ತೆಳುವಾಗಿರುವ ಮತ್ತು ಆಗಾಗ ತುಂಡಾಗುವ ಉಗುರುಗಳನ್ನು ನೀವು ಹೊಂದಿದ್ದರೆ ಬೇರೆಬೇರೆ ಆಕಾರದ ಶೇಪಿನ ಉಗುರು ಬೇಕು ಎಂದು ಬಯಸಿದರೆ ಅಕ್ರಾಲಿಕ್ ಉಗುರುಗಳನ್ನು ಬಳಸುವುದು ಬೆಸ್ಟ್ ಆಯ್ಕೆ. ಇವುಗಳು ಹೆಚ್ಚು ಗಟ್ಟುಮುಟ್ಟಾಗಿರುತ್ತದೆ ಮತ್ತು ಆಗಾಗ ತುಂಡಾಗುವ ಸಾಧ್ಯತೆ ಬಹಳ ಕಡಿಮೆ.

ಜೆಲ್ ನೈಲ್ ಪಾಲಿಶ್:

ಸಾಮಾನ್ಯವಾಗಿ ಜೆಲ್ ನೈಲ್ ಪಾಲಿಶ್ ಗಳು ಹೆಚ್ಚಿನ ಮಹಿಳೆಯರಿಗೆ ಇಷ್ಟವಾಗುತ್ತದೆ. ಸಾಮಾನ್ಯವಾಗಿರುವ ಅಂದರೆ ರೆಗ್ಯುಲರ್ ನೈಲ್ ಪಾಲಿಶ್ ಗಳಿಗಿಂತ ಈ ಜೆಲ್ ನೈಲ್ ಪಾಲಿಶ್ ಗಳು ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಅದರಲ್ಲಿರುವ ಹೊಳೆಯುವ ಅಂಶವು ಪ್ರತಿಯೊಬ್ಬರೂ ಕೂಡ ಲೈಕ್ ಮುದ್ರೆ ಒತ್ತುವುದಕ್ಕೆ ಕಾರಣ. ಇದರ ಮತ್ತೊಂದು ಲಾಭವೇನೆಂದರೆ ಹೆಚ್ಚುವರಿ ಲೇಯರ್ ನ್ನು ಸೇರಿಸುವ ಮೂಲಕ ತೆಳುವಾದ ಉಗುರುಗಳನ್ನು ಹೊಂದಿರುವವರು ಉಗುರನ್ನು ದಪ್ಪವಾಗಿಸಿ ಬೇಗನೆ ತುಂಡಾಗದಂತೆ ನೋಡಿಕೊಳ್ಳಬಹುದು.ಯಾವುದೇ ಕಾರಣಕ್ಕೂ ಅವುಗಳನ್ನು ಕೀಳಲು ಹೋಗಬೇಡಿ!ಬದಲಾಗಿ ಎಸಿಟೋನ್ ಬಳಸಿ ಮತ್ತು ಕ್ರಮಬದ್ಧವಾಗಿ ರಿಮೂವ್ ಮಾಡಿ.

ಹೊರಪೊರೆಯ ಉಗುರಿನ ಎಣ್ಣೆ:

ಹೆಚ್ಚಿನ ಮಹಿಳೆಯರು ಇದನ್ನು ಬಳಸುವುದಕ್ಕೆ ನಿರ್ಲಕ್ಷಿಸುತ್ತಾರೆ.ಆದರೆ ಉಗುರು ಬಲವಾಗಿ ಬೆಳೆಯುವುದಕ್ಕೆ ಇದು ನೆರವು ನೀಡುತ್ತದೆ ಮತ್ತು ಉಗುರನ್ನು ಆರೋಗ್ಯವಾಗಿರಿಸುವುದಕ್ಕೆ ಸಹಾಯ ಮಾಡುತ್ತದೆ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಉಗುರಿಗೆ ಎಣ್ಣೆ ಹಚ್ಚಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಇನ್ನು ನೀವು ಫ್ಯಾನ್ಸಿಯಾಗಿ ಕಾಣುವುದಕ್ಕಾಗಿ ಉಗುರಿಗೆ ಯಾವ ಶೇಪ್ ನೀಡುವುದು ಒಳಿತು ಎಂಬ ಬಗ್ಗೆ ನಾವಿಲ್ಲಿ ಕೆಲವು ಉಗುರಿನ ವಿಭಿನ್ನ ಶೇಪ್ ಗಳ ಬಗ್ಗೆ ತಿಳಿಸುತ್ತಿದ್ದೇವೆ. ಒಮ್ಮೆ ನೋಡಿ ನೀವೂ ಕೂಡ ನಿಮ್ಮ ಉಗುರಿಗೆ ಈ ಕೆಳಗಿನ ಶೇಪ್ ನೀಡುವುದಕ್ಕೆ ಟ್ರೈ ಮಾಡಬಹುದು.

ಉಗುರಿನ ಆಕಾರದ ವಿಧಗಳು

1. ದುಂಡಗಿನ ಆಕಾರದ ಉಗುರುಗಳು

1. ದುಂಡಗಿನ ಆಕಾರದ ಉಗುರುಗಳು

ಕಾಳಜಿ ತೆಗೆದುಕೊಳ್ಳುವುದಕ್ಕೆ ಬಹಳ ಸುಲಭವಾಗಿರುವ ಆಕಾರವೆಂದರೆ ಅದುವೇ ದುಂಡಗಿನ ಆಕಾರದ ಉಗುರುಗಳು. ಅತೀ ಕಡಿಮೆ ಕಾಳಜಿಯಲ್ಲಿ ನಿಮ್ಮ ಉಗುರು ಅತ್ಯುತ್ತಮವಾಗಿ ಕಾಣಬೇಕು ಎಂದು ನೀವು ಬಯಸುವುದೇ ಆದಲ್ಲಿ ಖಂಡಿತ ಈ ದುಂಡಗಿನ ಆಕಾರವು ಹೇಳಿ ಮಾಡಿಸಿದ್ದಾಗಿದೆ. ಅಷ್ಟೇ ಅಲ್ಲ ಉಗುರಿಗೆ ದುಂಡಗಿನ ಆಕಾರ ನೀಡುವುದು ಬಹಳ ಸುಲಭ ಕೂಡ ಹೌದು.

ಪ್ರಾರಂಭಿಕವಾಗಿ ಚೌಕಾಕಾರ ಮಾಡಿ ನಂತರ ನೈಸರ್ಗಿಕವಾಗಿ ಕರ್ವ್ ಶೇಪ್ ನ್ನು ನಿಮ್ಮ ಬೆರಳಿನ ತುದಿಯಿಂದ ನೀಡಿ. ಉಗುರನ್ನು ಉದ್ದ ಬೆಳೆಸುವುದಕ್ಕೆ ಕಷ್ಟವಾಗುವವರಿಗೆ ಇದು ಅತ್ಯುತ್ತಮವಾದ ಲುಕ್ ಆಗಿರುತ್ತದೆ.

ಯಾರಿಗೆ ಹೊಂದಿಕೆಯಾಗುತ್ತದೆ: ಎಲ್ಲಾ ರೀತಿಯ ಬೆರಳಿರುವವರಿಗೂ ಹೊಂದಿಕೆಯಾಗುವ ಆಕಾರ ಇದಾಗಿದೆ.

2. ಮೊಟ್ಟೆ ಆಕಾರದ ಉಗುರುಗಳು

2. ಮೊಟ್ಟೆ ಆಕಾರದ ಉಗುರುಗಳು

ಇದನ್ನು ಬಹಳ ಸಾಂಪ್ರಾದಾಯಿಕ ಶೈಲಿಯ ಆಕಾರ ಎಂದು ಪರಿಗಣಿಸಲಾಗುತ್ತದೆ.ಇದು 1900 ರ ನಂತರ ಮತ್ತು 2000 ನೇ ಇಸವಿಯ ಸಂದರ್ಬದಲ್ಲಿ ಬಹಳ ಪ್ರಸಿದ್ಧಿಯಾಗಿತ್ತು.ಈ ರೀತಿಯ ಉಗುರಿನ ಆಕಾರವು ಅತ್ಯುತ್ತಮವಾದ ನೋಟವನ್ನು ನೀಡುವುದಕ್ಕೆ ನೆರವಾಗುತ್ತದೆ. ಈ ರೀತಿಯ ಉಗುರಿನ ಆಕಾರ ಪಡೆಯುವುದಕ್ಕಾಗಿ ಬದಿಯ ಭಾಗದಲ್ಲಿ ವೃತ್ತಾಕಾರವನ್ನು ಮಾಡುತ್ತಾ ಸಾಗಬೇಕು ಮತ್ತು ಮೊಟ್ಟೆಯಾಕಾರವನ್ನು ಉಗುರಿಗೆ ಒದಗಿಸಬೇಕು. ಅತ್ಯಂತ ಕುಳ್ಳಕುಳ್ಳವಾಗಿರುವ ಬೆರಳುಗಳನ್ನು ಹೊಂದಿರುವವರು ಈ ಆಕಾರದಲ್ಲಿ ಉಗುರನ್ನು ಕತ್ತರಿಸಿಕೊಳ್ಳುವುದರಿಂದಾಗಿ ನಿಮ್ಮ ಬೆರಳುಗಳು ಉದ್ದವಾಗಿ ಕಾಣುವಂತೆ ಮಾಡಬಹುದು.

3. ಚೌಕ ಆಕಾರದ ಉಗುರುಗಳು

3. ಚೌಕ ಆಕಾರದ ಉಗುರುಗಳು

ಚೌಕಾಕಾರದಲ್ಲಿ ಉಗುರನ್ನು ಕತ್ತರಿಸುವುದು ಬಹಳ ಪ್ರಸಿದ್ಧಿಯಾಗಿರುವ ಆಕಾರಗಳಲ್ಲಿ ಒಂದೆನಿಸಿದೆ.ಉಗುರಿನ ನೈಸರ್ಗಿಕ ಅಗಲವನ್ನು ಈ ಶೇಪ್ ನಲ್ಲಿ ನೀಡಲಾಗಿರುವುದರಿಂದಾಗಿ ಉಗುರು ತುಂಡಾಗುವ ಸಾಧ್ಯತೆ ಈ ರೀತಿಯ ಆಕಾರದಲ್ಲಿ ಬಹಳ ಕಡಿಮೆ ಇರುತ್ತದೆ. ಈ ರೀತಿಯ ಉಗುರನ್ನು ಪಡೆಯುವುದಕ್ಕಾಗಿ ಮೊದಲಿಗೆ ಅವುಗಳನ್ನು ಟ್ರಿಮ್ ಮಾಡುವ ಸಾಧನ ಬಳಸಿ ಟ್ರಿಮ್ ಮಾಡಿ. ನೇರವಾಗಿ ಅವುಗಳಿಗೆ ಆಕಾರ ನೀಡಿ. ಬದಿಗಳಲ್ಲಿ ಒರಟಿದ್ದರೆ ಅದನ್ನು ಸ್ವಚ್ಛಗೊಳಿಸಿ.

4.ಸ್ಕೋವಲ್ ಆಕಾರದ ಉಗುರುಗಳು

4.ಸ್ಕೋವಲ್ ಆಕಾರದ ಉಗುರುಗಳು

ಚೌಕಾಕಾರ ಮತ್ತು ಮೊಟ್ಟೆಯಾಕಾರಕ್ಕೆ ವಿಭಿನ್ನತೆ ನೀಡುವ ವಿಶೇಷ ಆಕಾರವೇ ಸ್ಕೋವಲ್. ಅಂದರೆ ಸ್ಕ್ಯಾರ್ ಮತ್ತು ಓವಲ್ ಶೇಪ್ ಎರಡರ ಸಮ್ಮಿಶ್ರಣ ಎಂದು ಹೇಳಬಹುದು.ವಿಶ್ವದಲ್ಲಿರುವ ಮತ್ತೊಂದು ಪ್ರಸಿದ್ಧ ಉಗುರಿನ ಆಕಾರಗಳಲ್ಲಿ ಸ್ಕೋವಲ್ ಶೇಪ್ ಕೂಡ ಪ್ರಮುಖವಾದದ್ದು. ಇದರ ಸುತ್ತಲಿನ ದುಂಡಾಕಾರದ ಬದಿಗಳಿಂದಾಗಿ ಇವುಗಳನ್ನು ಕಾಳಜಿ ಮಾಡುವುದು ಸುಲಭ. ಇನ್ನು ಚೌಕಾಕಾರವೂ ಕೂಡ ಇದರಲ್ಲಿ ಸಮ್ಮಿಶ್ರಣಗೊಂಡಿರುವುದರ ಪರಿಣಾಮವಾಗಿ ಕ್ಲಾಸಿ ಲುಕ್ ನಿಮ್ಮದಾಗುತ್ತದೆ. ಈ ಆಕಾರವನ್ನು ಪಡೆಯುವುದಕ್ಕಾಗಿ ಮೊದಲಿಗೆ ಉಗುರನ್ನು ಓವಲ್ ಶೇಪ್ ಮಾಡಿ ಮತ್ತು ಟಿಪ್ ಗಳನ್ನು ಚೌಕಾಕಾರಕ್ಕೆ ಸ್ವಲ್ಪವೇ ಸ್ವಲ್ಪ ಟಿಪ್ ಮಾಡಿದರೆ ಸ್ಕೋವಲ್ ಆಕಾರವನ್ನು ಪಡೆಯಬಹುದು.

5. ಬಾದಾಮಿ ಆಕಾರದ ಉಗುರುಗಳು

5. ಬಾದಾಮಿ ಆಕಾರದ ಉಗುರುಗಳು

ಓವಲ್ ಶೇಪ್ ನಂತೆಯೇ ಕಾಣುವ ಉಗುರಿನ ಆಕಾರವಾಗಿದೆ. ಆದರೆ ಉಗುರಿನ ಮೇಲ್ಬಾಗದಲ್ಲಿ ಅಥವಾ ತುದಿಗಳಲ್ಲಿ ಹೆಚ್ಚು ಚೂಪಾಗಿರುತ್ತದೆ ಅಷ್ಟೇ. ಪ್ರಾರಂಭದಲ್ಲಿ ಅಗಲವಾಗಿರುತ್ತದೆ ಮತ್ತು ಮುಂದೆ ಸಾಗುತ್ತಾ ಬದಿಗಳು ಚೂಪಾಗುತ್ತಾ ಸಾಗುತ್ತದೆ. ಅಂತಿಮವಾಗಿ ಬಾದಾಮಿಯಂತೆ ಕಾಣುವುದರಿಂದಾಗಿ ಬಾದಾಮಿ ಶೇಪಿನ ಉಗುರು ಎಂದು ಕರೆಯಲಾಗುತ್ತದೆ.ಈ ರೀತಿಯ ಉಗುರನ್ನು ಪಡೆಯುವುದಕ್ಕಾಗಿ ಉಗುರಿನ ಕೇಂದ್ರ ಬಿಂದುವನ್ನು ಗಮನಿಸಿ ಮತ್ತು ಎರಡೂ ಬದಿಗಳಿಗೂ ಆಕಾರ ನೀಡಿ. ಆ ಮೂಲಕ ಕೇಂದ್ರದಿಂದ ಮುಂದೆ ಸಾಗುತ್ತಾ ಉಗುರು ಚೂಪಾಗಬೇಕು. ನಂತರ ಅದನ್ನು ಸ್ಮೂತ್ ಮಾಡಿ ಮತ್ತು ಎಡ್ಜ್ ಗಳು ಶಾರ್ಪ್ ಆಗದಂತೆ ನೋಡಿಕೊಳ್ಳಿ.

6. ಸ್ಟಿಲ್ಲೆಟ್ಟೋ ಆಕಾರದ ಉಗುರುಗಳು

6. ಸ್ಟಿಲ್ಲೆಟ್ಟೋ ಆಕಾರದ ಉಗುರುಗಳು

ಈ ರೀತಿ ಎಳೆಯಲು ನಿಮಗೆ ಸ್ವಲ್ಪ ಧೈರ್ಯ ಬೇಕು. ಇದು ಅಸಾಮಾನ್ಯವಾಗಿರುವುದಾಗಿದೆ ಆದರೆ ರಿಹಾನಾಳಂತ ಸೆಲೆಬ್ರಿಟಿಗಳು ಯಾವಾಗಲೂ ಕೂಡ ಈ ರೀತಿಯ ಲುಕ್ ಗೆ ಆಸೆ ಪಡುತ್ತಾರೆ. ಈ ರೀತಿಯ ಶೇಪ್ ನೀಡುವುದರಿಂದಾಗಿ ನಿಮ್ಮ ಉಗುರು ಉದ್ದವಾಗಿ ಕಾಣುತ್ತದೆ.ಬಾದಾಮಿ ಆಕಾರದ ಉಗುರಿನ್ನು ಮಾಡುವಾಗ ಹೇಗೆ ನೀವು ಕೇಂದ್ರಬಿಂದುವನ್ನು ಗುರುತಿಸುತ್ತೀರೋ ಹಾಗೆಯೇ ಈ ಆಕಾರ ಮಾಡುವಾಗಲೂ ಕೂಡ ಕೇಂದ್ರಬಿಂದುವನ್ನು ಗುರುತಿಸಿ ಮತ್ತು ಕೇಂದ್ರವನ್ನು ತಲುಪುವಂತೆ ಎರಡೂ ಬದಿಗಳಲ್ಲಿ ಆಕಾರ ನೀಡಬೇಕು. ಆದರೆ ಈ ನೈಲ್ ಶೇಪ್ ಬೇಗನೆ ತುಂಡಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಕ್ರಾಲಿಕ್ ಅಥವಾ ಜೆಲ್ ನೈಲ್ಸ್ ಇದಕ್ಕಾಗಿ ಬಳಸುವುದು ಒಳ್ಳೆಯದು.

7. ಬಲ್ಲೇರಿನಾ ಆಕಾರದ ಉಗುರುಗಳು

7. ಬಲ್ಲೇರಿನಾ ಆಕಾರದ ಉಗುರುಗಳು

ಇದು ಹೆಚ್ಚು ಸೂಕ್ಷ್ಮವಾಗಿರುವ ಆವೃತ್ತಿಯಾಗಿದೆ.ಇದು ಕೂಡ ಅದೇ ಮೇಲಿನ ರೀತಿಯ ಶೇಪ್ ಮಾಡುವ ತಂತ್ರಗಾರಿಕೆಯನ್ನು ಅನುಸರಿಸುತ್ತದೆ.ಮೊದಲಿಗೆ ಉಗುರಿನ ಕೇಂದ್ರಬಿಂದುವನ್ನು ಗುರುತಿಸಿಕೊಳ್ಳಿ ಮತ್ತು ಆ ಹಂತಕ್ಕೆ ಉಗುರನ್ನು ಫೈಲ್ ಮಾಡುತ್ತಾ ಸಾಗಬೇಕು. ಅದಾದ ನಂತರ ಟಿಪ್ಸ್ ಗಳನ್ನು ಚೌಕಾಕಾರಗೊಳಿಸಬೇಕು.ಬೋಲ್ಡ್ ಆಗಿರಬೇಕು ಅನ್ನಿಸುವ ಮತ್ತು ಸಾಕಷ್ಟು ಆರಾಮದಾಯಕವಾಗಿರಬೇಕು ಅನ್ನಿಸುವ ಆಕಾರವನ್ನು ನೀವು ಉಗುರಿಗೆ ನೀಡಬೇಕು ಎಂದು ಬಯಸಿದರೆ ಇದು ಹೇಳಿ ಮಾಡಿಸಿದ ಶೇಪ್ ಆಗಿದೆ. ಈ ರೀತಿಯ ಉಗುರನ್ನು ಪಡೆಯುವುದಕ್ಕಾಗಿ ನೀವು ಉದ್ದವಾಗಿರುವ ಉಗುರನ್ನು ಹೊಂದಿರಬೇಕಾಗುತ್ತದೆ ಹಾಗಾಗಿ ಆದಷ್ಟು ಆಕ್ರಾಲಿಕ್ ಅಥವಾ ಜೆಲ್ ನೈಲ್ ಗಳನ್ನು ಇದಕ್ಕಾಗಿ ಬಳಸಿಕೊಳ್ಳಬಹುದು.

ಬಹುಶ್ಯ ಇದೀಗ ನಿಮಗೆ ಸಲೂನ್ ಗೆ ತೆರಳಿ ಉಗುರಿಗೆ ಶೇಪ್ ನೀಡುವಾಗ ಯಾವ ರೀತಿಯ ಶೇಪ್ ನೀಡಲು ಹೇಳಬಹುದು ಎಂಬ ಬಗ್ಗೆ ಒಂದು ಐಡಿಯಾ ಸಿಕ್ಕಿದೆ. ಕೆಲವು ಆಕಾರಗಳನ್ನು ನೀವು ಮನೆಯಲ್ಲೇ ಕೂಡ ಪ್ರಯತ್ನಿಸಬಹುದು. ಸ್ಟಿಲ್ಲೆಟ್ಟೋ ಮತ್ತು ಬಲ್ಲೇರಿನಾ ಆಕಾರವನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಆಕಾರಗಳನ್ನು ನೀವು ಮನೆಯಲ್ಲಿ ಟ್ರೈ ಮಾಡಬಹುದು. ಉತ್ತಮವಾಗಿ ಉಗುರಿಗೆ ಆಕಾರ ನೀಡಿದರೆ ನೈಲ್ ಪಾಲಿಶ್ ಹಚ್ಚದೇ ಇದ್ದಾಗಲೂ ಕೂಡ ಉಗುರುಗಳು ಉತ್ತಮವಾಗಿ ಕಾಣಿಸುತ್ತವೆ. ಈ ರೀತಿಯ ಆಕಾರ ನೀಡುವಿಕೆಯಿಂದಾಗಿ ಉಗುರುಗಳು ಪರಿಷ್ಕರಿಸಿದಂತೆ ಕಾಣುತ್ತವೆ ಮತ್ತು ನಿಮಗೆ ಅತ್ಯುತ್ತಮ ಲುಕ್ ನೀಡುತ್ತದೆ. ಹಾಗಾಗಿ ಟ್ರೈ ಮಾಡಿ ನೋಡಿ.

English summary

How To Achieve The Perfect Nail Shape

Attractive nail shape always able to draw the attention. Here we have given how to grow and shape the nail to look attractive. Take a look.
X
Desktop Bottom Promotion