For Quick Alerts
ALLOW NOTIFICATIONS  
For Daily Alerts

ಹೋಳಿ 2022: ಮುಖ ಹಾಗೂ ಉಗುರಿಗೆ ಇವುಗಳನ್ನು ಹಚ್ಚಿಕೊಂಡರೆ, ಹೋಳಿ ಬಣ್ಣಗಳನ್ನು ಸುಲಭವಾಗಿ ತೆಗೆಯಬಹುದು

|

ಬಣ್ಣಗಳ ಹಬ್ಬ ಹೋಳಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹಬ್ಬವನ್ನು ಕೆಲವರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ವಿಜೃಂಭಣೆಯಿಂದ ಆಚರಿಸಿದರೆ, ಇನ್ನೂ ಕೆಲವರು ಬಣ್ಣಗಳಿಂದ ಚರ್ಮಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಹೋಳಿ ಆಡಲು ಹೋಗುವುದೇ ಇಲ್ಲ. ಇದು ಕೂಡ ಒಪ್ಪಿಕೊಳ್ಳುವಂತದ್ದೇ, ಏಕೆಂದರೆ ಹೋಳಿಯಾಟಕ್ಕೆ ಬಳಸುವ ಬಣ್ಣಗಳಲ್ಲಿ ಹೆಚ್ಚಿನವು ರಾಸಾಯನಿಕಗಳಿಂದ ತುಂಬಿಕೊಂಡಿರುತ್ತವೆ. ಇದರಿಂದ ಕೂದಲು ಹಾಗೂ ಚರ್ಮದ ಅಲರ್ಜಿಯಂತಹ ನಾನಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಹೋಳಿ ಹಬ್ಬದ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲೇಬೇಕು.

ಆದರೆ, ಈ ಬಣ್ಣಗಳಿಂದಾಗಿ ನಿಮ್ಮ ಚರ್ಮ ಮತ್ತು ಕೂದಲಿಗೆ ಹಾನಿಯಾಗದಂತೆ, ಹೋಳಿಯಾಡುವ ಮುನ್ನ ಕೆಲವು ವಸ್ತುಗಳನ್ನು ನಿಮ್ಮ ತ್ವಚೆಗೆ ಬಳಸಬಹುದು. ಇದರಿಂದ ಬಣ್ಣಗಳಿಂದ ಆಗುವ ಸಮಸ್ಯೆಯನ್ನು ತಡೆಯಬಹುದು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಸನ್‌ಸ್ಕ್ರೀನ್ ಮತ್ತು ಮಾಯಿಶ್ಚರೈಸರ್ ಬಳಸಿ:

ಸನ್‌ಸ್ಕ್ರೀನ್ ಮತ್ತು ಮಾಯಿಶ್ಚರೈಸರ್ ಬಳಸಿ:

ಇತರ ದಿನಗಳಂತೆ, ಹೋಳಿ ಆಡುವ ಮೊದಲು ಸಹ ಸನ್‌ಸ್ಕ್ರೀನ್ ಬಳಸಿ. ಹೊರಹೋಗುವ ಮೊದಲು ಮತ್ತು ಬಿಸಿಲಿನಲ್ಲಿ ಹೋಳಿ ಆಡುವ ಮೊದಲು, ನಿಮ್ಮ ಚರ್ಮಕ್ಕೆ ಸನ್‌ಸ್ಕ್ರೀನ್ ಕ್ರೀಮ್ ಹಚ್ಚಿಕೊಳ್ಳುವುದು ತುಂಬಾ ಮುಖ್ಯ. ಇದು ನಿಮ್ಮ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ನಿಮ್ಮ ತ್ವಚೆಯನ್ನು ಹೈಡ್ರೀಕರಿಸಿ ಮತ್ತು ಆರ್ಧ್ರಕವಾಗಿರಿಸುತ್ತದೆ.

ಐಸ್ ಬಳಸಿ:

ಐಸ್ ಬಳಸಿ:

ಹೋಳಿ ಆಡುವ ಮೊದಲು ನಿಮ್ಮ ಚರ್ಮದ ಮೇಲೆ ಐಸ್ ಅನ್ನು ಅನ್ವಯಿಸಬಹುದು. ಇದು ನಿಮ್ಮ ಚರ್ಮದ ರಂಧ್ರಗಳನ್ನು ಮುಚ್ಚುವ ಕೆಲಸ ಮಾಡುತ್ತದೆ. ಸುಮಾರು 10 ನಿಮಿಷಗಳ ಕಾಲ ನಿಮ್ಮ ಕ್ಲೀನ್ ಮುಖದ ಮೇಲೆ ಐಸ್ ಕ್ಯೂಬ್‌ಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಈ ಟ್ರಿಕ್ ನಿಮ್ಮ ತ್ವಚೆಯೊಳಗೆ ಬಣ್ಣಗಳನ್ನು ಸೇರಿಕೊಳ್ಳದಂತೆ ತಡೆಯುವುದು ಜೊತೆಗೆ ಯಾವುದೇ ಹಾನಿ ಆಗುವುದಿಲ್ಲ.

ಚರ್ಮಕ್ಕೆ ಎಣ್ಣೆ ಹಚ್ಚಿ:

ಚರ್ಮಕ್ಕೆ ಎಣ್ಣೆ ಹಚ್ಚಿ:

ಹೊರಗೆ ಹೋಗಿ ಹೋಳಿ ಆಡುವ ಮೊದಲು ನಿಮ್ಮ ಚರ್ಮಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಿ. ತೈಲವು ಬಣ್ಣಗಳನ್ನು ನಿಮ್ಮ ಚರ್ಮದೊಳಗೆ ಬರಲು ಬಿಡುವುದಿಲ್ಲ. ಜೊತೆಗೆ ಹೀಗೆ ಮಾಡುವುದರಿಂದ ಸುಲಭವಾಗಿ ಬಣ್ಣವನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ನೀವು ಚರ್ಮಕ್ಕಾಗಿ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಕ್ಯಾಸ್ಟರ್ ಎಣ್ಣೆಯನ್ನು ಬಳಸಬಹುದು.

ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿ:

ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿ:

ಉಗುರುಗಳಿಗೆ ಆದ ಹೋಳಿ ಬಣ್ಣಗಳನ್ನು ತೆಗೆದುಹಾಕುವುದು ತುಂಬಾ ಕಷ್ಟ. ಈ ಬಣ್ಣಗಳು ವಾರಗಳವರೆಗೆ ಉಗುರುಗಳ ಮೇಲೆ ಇರುತ್ತವೆ. ಇದಕ್ಕೆ ಸುಲಭ ಪರಿಹಾರವೆಂದರೆ ನೇಲ್ ಪೇಂಟ್ ಹಚ್ಚುವುದು. ಇವು ನಿಮ್ಮ ಉಗುರುಗಳನ್ನು ರಕ್ಷಿಸುತ್ತವೆ. ಇದರ ಮೇಲೆ ಅಂಟಿರುವ ಬಣ್ಣಗಳನ್ನು ತೊಳೆಯುವುದು ಸುಲಭ. ಈ ಮೂಲಕ ನಿಮ್ಮ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸುತ್ತದೆ.

ದೇಹ ಸಂಪೂರ್ಣ ಆವರಿಸುವ ಬಟ್ಟೆಗಳನ್ನು ಧರಿಸಿ:

ದೇಹ ಸಂಪೂರ್ಣ ಆವರಿಸುವ ಬಟ್ಟೆಗಳನ್ನು ಧರಿಸಿ:

ಹೌದು, ಹೋಳಿ ಆಡಲು ಹೋಗುವಾಗ, ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ಆವರಿಸುವ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ. ಬಣ್ಣಗಳು ಕಡಿಮೆ ತಾಗಲು ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿ. ಇದರಿಂದ ಹೆಚ್ಚಿನ ಬಣ್ಣಗಳು ನಿಮ್ಮ ಚರ್ಮಕ್ಕೆ ಆಗುವುದಿಲ್ಲ, ಜೊತೆಗೆ ಯಾವುದೇ ಅಲರ್ಜಿಯ ಸಮಸ್ಯೆಯೂ ಉಂಟಾಗುವುದಿಲ್ಲ. ಆದ್ದರಿಂದ ಈ ಬಾರಿ ಹೋಳಿ ಬಣ್ಣ ಆಡುವಾಗ ಈ ಸಲಹೆಗಳನ್ನು ಪಾಲಿಸಿ, ನಿಮ್ಮ ತ್ವಚೆಯನ್ನು ರಾಸಾಯನಿಕಯುಕ್ತ ಬಣ್ಣಗಳಿಂದ ಕಾಪಾಡಿಕೊಳ್ಳಿ.

English summary

Holi 2022: Apply these Things on Face and Nails Before Holi to Remove Color in Kannada

Here we talking about Holi 2022: apply these things on face and nails before Holi to remove color in kannada, read on
Story first published: Monday, March 14, 2022, 17:19 [IST]
X
Desktop Bottom Promotion