For Quick Alerts
ALLOW NOTIFICATIONS  
For Daily Alerts

ಸೌಂದರ್ಯಕ್ಕೆ ಸಂಬಂಧಿಸಿದಂತೆ ನೀವೇನೇ ಮಾಡಿದರೂ, ಈ ಐದು ವಿಷಯಗಳನ್ನು ನಿಯಂತ್ರಿಸಲಾಗುವುದಿಲ್ಲ

|

ಪ್ರತಿಯೊಬ್ಬರಿಗೂ ದೋಷರಹಿತ ಮುಖ ಹಾಗೂ ಸೊಂಪಾದ ಕೇಶರಾಶಿ ಇರಬೇಕೆಂಬ ಆಸೆಯಿರುತ್ತದೆ. ಅದು ಸಿಗದಿದ್ದಾಗ ನಾನಾ ತರಹದ ಉತ್ಪನ್ನಗಳನ್ನು ಪ್ರಯೋಗ ಮಾಡುತ್ತೇವೆ. ಆದರೆ, ನಾವೊಂದು ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ, ಕೆಲವೊಂದು ವಿಷಯಗಳು ನಾವೆಷ್ಟೇ ಬದಲಾವಣೆ ಮಾಡಲು ಬಯಸಿದರೂ ಅದು ಬದಲಾಗುವುದಿಲ್ಲ. ಏಕೆಂದರೆ, ಅದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಎಂತಹ ಉತ್ಪನ್ನ ಬಳಸಿದರೂ ಬದಲಾಗುವುದಿಲ್ಲ. ಅಂತಹ ಕೆಲವೊಂದು ವಿಚಾರಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಸೌಂದರ್ಯಕ್ಕೆ ಸಂಬಂಧಿಸಿದಂತೆ ನಾವು ನಿಯಂತ್ರಿಸಲಾಗದ 5 ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಮುಟ್ಟಾಗುವ ಮುನ್ನದ ಮೊಡವೆಗಳು:

ಮುಟ್ಟಾಗುವ ಮುನ್ನದ ಮೊಡವೆಗಳು:

ಉಬ್ಬುವಿಕೆ ಮತ್ತು ಮೂಡ್ ಏರಿಳಿತಗಳಂತೆಯೇ, ಮೊಡವೆ ಸಹ ಮುಟ್ಟಿನ ಮುಂಚಿನ ಸಮಯದಲ್ಲಿ ಆಗುವ ಸಾಮಾನ್ಯ ಘಟನೆಯಾಗಿದೆ. ಇದು ಮುಟ್ಟಿನ ಮುಂಚೆಯೇ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ (ಸ್ತ್ರೀ ಹಾರ್ಮೋನುಗಳು) ಮಟ್ಟಗಳಲ್ಲಿನ ಕುಸಿತ ಮತ್ತು ಟೆಸ್ಟೋಸ್ಟೆರಾನ್ (ಪುರುಷ ಹಾರ್ಮೋನ್) ಮಟ್ಟದಲ್ಲಿನ ಸಾಪೇಕ್ಷ ಹೆಚ್ಚಳದಿಂದಾಗಿ ಸಂಭವಿಸುತ್ತದೆ. ಮುಟ್ಟಿನ 5-7 ದಿನಗಳ ಮೊದಲು 1-2 ಮೊಡವೆಗಳಾಗುವುದು ಸಾಮಾನ್ಯವಾಗಿದೆ. ಇದು ರಕ್ತಸ್ರಾವವು ಪ್ರಾರಂಭವಾದ ನಂತರ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ ನಿಮ್ಮ ಮೊಡವೆಗಳು ನಿರಂತರವಾಗಿ, ಕೀವು ಮತ್ತು ನೋವಿನಿಂದ ಕೂಡಿದ್ದರೆ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಬೇಕು.

ಕೂದಲಿನ ಉದ್ದ:

ಕೂದಲಿನ ಉದ್ದ:

ಕೂದಲಿನ ಉದ್ದವು ನಿಮ್ಮ ಕೂದಲು ಅನಾಜೆನ್ (ಬೆಳವಣಿಗೆ) ಹಂತದಿಂದ ನಿಯಂತ್ರಿಸಲ್ಪಡುತ್ತದೆ. ಅನಾಜೆನ್ ಹಂತವೆಂದರೆ, ಕೂದಲಿನ ಬೆಳವಣಿಗೆಯ ಹಂತ. ಈ ಅವಧಿಯು ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನು ಹೆಚ್ಚಾಗಿ ಜೆನೆಟಿಕ್ಸ್ ನಿರ್ಧರಿಸುತ್ತದೆ. ನೆತ್ತಿಯ ಕೂದಲಿಗೆ ಅನಾಜೆನ್ ಹಂತವು ಸರಾಸರಿ 2 ವರ್ಷದಿಂದ 7 ವರ್ಷಗಳವರೆಗೆ ಇರಬಹುದು. ಆದ್ದರಿಂದ ಆನಾಜೆನ್ ಹಂತವು 5 ವರ್ಷಗಳು ಇರುವ ವ್ಯಕ್ತಿಯು ಕೇವಲ 2 ವರ್ಷಗಳ ಅವಧಿಯ ಆನಾಜೆನ್ ಹಂತಕ್ಕಿಂತ ಉದ್ದವಾಗಿ ಕೂದಲು ಬೆಳೆಯುವ ಸಾಮರ್ಥ್ಯವನ್ನು ಹೊಂದಿರುತ್ತಾನೆ.

ತ್ವಚೆಯ ರಂಧ್ರಗಳು:

ತ್ವಚೆಯ ರಂಧ್ರಗಳು:

ತ್ವಚೆಯ ರಂಧ್ರಗಳು ಅಥವಾ ನಾವು ಸಾಮಾನ್ಯವಾಗಿ ತೆರೆದ ರಂಧ್ರಗಳು ಎಂದು ಕರೆಯುತ್ತೇವೆ. ಇದು ಚರ್ಮದ ಮೇಲೆ ತೈಲ/ಸೆಬಾಸಿಯಸ್ ಗ್ರಂಥಿಗಳ ತೆರೆಯುವಿಕೆಯಾಗಿದ್ದು, ಅವು ನಮ್ಮ ಚರ್ಮದ ನೈಸರ್ಗಿಕ ಮತ್ತು ಅಗತ್ಯ ಭಾಗವಾಗಿದೆ. ಎಣ್ಣೆಯುಕ್ತ ಚರ್ಮ ಹೊಂದಿರುವ ವ್ಯಕ್ತಿಗಳಲ್ಲಿ ಇದು ಸಾಮಾನ್ಯವಾಗಿ ಹೆಚ್ಚು ಪ್ರಾಮುಖ್ಯವಾಗಿದ್ದು, ವಯಸ್ಸಾದಂತೆ ಗಾತ್ರದಲ್ಲಿ ಹೆಚ್ಚಾಗುತ್ತದೆ. ನಾವು ಅವುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಆದರೆ ಸರಿಯಾದ ತ್ವಚೆಯ ಆರೈಕೆ ಮತ್ತು ಕೆಲವು ಚಿಕಿತ್ಸೆಗಳೊಂದಿಗೆ ನಾವು ಅದರ ತೆರೆಯುವಿಕೆಯನ್ನು ಕಡಿಮೆ ಮಾಡಬಹುದು.

ಪ್ರತಿದಿನ 100 ಕೂದಲಿನ ಎಳೆಗಳು ಉದುರುವುದು:

ಪ್ರತಿದಿನ 100 ಕೂದಲಿನ ಎಳೆಗಳು ಉದುರುವುದು:

ಕೂದಲು ಉದುರುವುದು ಕೂದಲಿನ ಬೆಳವಣಿಗೆಯ ಚಕ್ರದ ನೈಸರ್ಗಿಕ ಭಾಗವಾಗಿದೆ. ಕೂದಲು 4 ಹಂತಗಳಲ್ಲಿ ಬೆಳೆಯುತ್ತದೆ ಮತ್ತು ಸಾಯುತ್ತದೆ: ಅನಾಜೆನ್ (ಬೆಳವಣಿಗೆಯ ಹಂತ), ಕ್ಯಾಟಜೆನ್ (ಪರಿವರ್ತನೆಯ ಹಂತ), ಟೆಲೋಜೆನ್ (ವಿಶ್ರಾಂತಿ ಹಂತ) ಮತ್ತು ಎಕ್ಸೋಜೆನ್ (ಕೂದಲು ಉದುರುವ ಹಂತ). ಕೂದಲು ಈ ಚಕ್ರವನ್ನು ಪೂರ್ಣಗೊಳಿಸಿದ ನಂತರ ಅದು ಉದುರಿಹೋಗುತ್ತದೆ. ಆದ್ದರಿಂದ ಪ್ರತಿದಿನ 100-150 ಕೂದಲಿನ ಎಳೆಗಳನ್ನು ಕಳೆದುಕೊಳ್ಳುವುದು ಸಹಜ.

ನೈಸರ್ಗಿಕ ಚರ್ಮದ ಬಣ್ಣ:

ನೈಸರ್ಗಿಕ ಚರ್ಮದ ಬಣ್ಣ:

ಸ್ಕಿನ್ ಟೋನ್ ಮತ್ತು ಬಿಳಿಯಾಗುವುದರ ನಡುವೆ ವ್ಯತ್ಯಾಸವಿದೆ. ಪ್ರತಿಯೊಬ್ಬರೂ ತಮ್ಮದೇ ಆದ ವಿಭಿನ್ನ ನೈಸರ್ಗಿಕ ಚರ್ಮದ ಬಣ್ಣವನ್ನು ಹೊಂದಿದ್ದು, ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಚರ್ಮದ ಬಣ್ಣವು ವಿಶಿಷ್ಟ ಮತ್ತು ವಿಲಕ್ಷಣವಾಗಿದ್ದು, ಅದರ ಬಗ್ಗೆ ಹೆಮ್ಮೆ ಪಡಬೇಕು.

English summary

Expert Says Premenstrual breakouts, Hair length, Natural skin colour and others are Things we Cannot Control

Here we talking about Expert Says premenstrual breakouts, hair length, natural skin colour and others are things we cannot control, read on
Story first published: Tuesday, November 16, 2021, 13:20 [IST]
X
Desktop Bottom Promotion