For Quick Alerts
ALLOW NOTIFICATIONS  
For Daily Alerts

ಮೊಡವೆ ಕಲೆಗಳ ವಿಧಗಳು ಹಾಗೂ ಅದನ್ನು ಹೋಗಲಾಡಿಸುವ ಚಿಕಿತ್ಸಾ ವಿಧಾನಗಳು

|

ಮುಖದಲ್ಲಿ ಸಣ್ಣ ಮೊಡವೆ ಕಾಣಿಸಿಕೊಂಡರೆ ಅದರಿಂಗ ಉಂಟಾಗುವ ಕಿರಿಕಿರಿ, ನೋವು ಅಷ್ಟಿಷ್ಟಲ್ಲ. ಪಿಂಪಲ್ ಬಂದು ಮಾಯವಾದರೂ, ಕಲೆ ಹಾಗೇ ಉಳಿದುಕೊಳ್ಳುತ್ತದೆ. ಮೊಡವೆಯಿಂದ ಕಿರಿಕಿರಿ ಮಾತ್ರವಲ್ಲ, ಮುಖದ ಸೌಂದರ್ಯವೇ ಹಾಳಾಗಿ ಹೋಗುತ್ತದೆ. ಇದರಿಂದ ಆತ್ಮವಿಶ್ವಾಸವೇ ಕುಗ್ಗಿಹೋಗುತ್ತದೆ.

Diffrent Types Of Pimple Scar And Treatment To Remove That

ಮೊಡವೆ ಹಾಗೂ ಮೊಡವೆಯಿಂದ ಉಳಿದುಕೊಂಡಿರುವ ಕಲೆಗಳು ತನ್ನಷ್ಟಕ್ಕೆ ಮಾಯವಾಗುತ್ತದೆ ಎಂದುಕೊಂಡರೆ ತಪ್ಪು. ಕೆಲ ಮೊಡವೆ ಕಲೆಗಳು ಹಾಗೇ ಉಳಿದಕೊಳ್ಳುತ್ತದೆ. ಕೆಲ ಮೊಡವೆ ಕಲೆಗಳು ಮಾಯವಾಗಲು ದೀರ್ಘ ಕಾಲ ತಗೆದುಕೊಳ್ಳುತ್ತದೆ. ಮುಖದಲ್ಲಿನ ಮೊಡವೆ ಕಲೆಗಳನ್ನು ಸುಲಭ ಹಾಗೂ ಸರಳವಾಗಿ ತೆಗೆಯಲು ಇಲ್ಲಿದೆ ಟಿಪ್ಸ್.

ಮೊಡವೆ ಉಂಟಾಗಲು ಕಾರವೇನು?

ಮೊಡವೆ ಹಲವಾರು ಕಾರಣಗಳಿಂದ ಉಂಟಾಗುತ್ತದೆ. ದೇಹದಲ್ಲಿ ಹಾರ್ಮೋನ್ ವ್ಯತ್ಯಾಸವಾದಾಗ, ಕಲುಷಿತ ವಾತಾವರಣದಿಂದ, ಸೂರ್ಯನ ಬಿಸಿಲಿನಲ್ಲಿ ಹೆಚ್ಚು ಓಡಾಡಿದರೆ, ಕೆಲವೊಮ್ಮೆ ಸೌಂದರ್ಯ ವರ್ಧಕಗಳಿಂದಲೂ ಉಂಟಾಗುತ್ತದೆ. ಮೊಡವೆಗಳಿಂದ ಮುಖದಲ್ಲಿ ರಂಧ್ರಗಳು ಹಾಗೂ ಕಲೆಗಳು ಬೀಳುವುದರಿಂದ ಅಂದ ಹಾಳಾಗುವುದು.

ಮೊಡವೆ ಕಲೆಗಳ ವಿವಿದ ರೂಪಗಳು

ಮೊಡವೆ ಕಲೆಗಳ ವಿವಿದ ರೂಪಗಳು

1. ಫ್ಲ್ಯಾಟ್ ಮಾರ್ಕ್

ಈ ಮೊಡವೆ ಕಲೆಗಳು ತುಂಬಾ ಆಳವಾಗಿ ಚರ್ಮದ ಮೇಲೆ ಪರಿಣಾಮ ಬೀರುವುದಿಲ್ಲ. ಈ ರೀತಿ ಬಿದ್ದ ಕಲೆಗಳು ಸ್ವಲ್ಪ ದಿನಗಳ ಬಳಿಕ ತನ್ನಿಂದ ತಾನೇ ಮಾಯವಾಗುವುದು. ಈ ಕಲೆಗಳಿಂದ ಮುಖಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ.

2. ವೈಟ್ ಹೆಡ್ ಮಾರ್ಕ್

2. ವೈಟ್ ಹೆಡ್ ಮಾರ್ಕ್

ಈ ರೀತಿಯ ಕಲೆಗಳು ಕೆನ್ನೆ, ಗಲ್ಲದ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಕಲೆಗಳು ಬಿದ್ದಾಗ, ಮುಖದಲ್ಲಿ ರಂಧ್ರ ಉಂಟಾಗುವುದು ಹಾಗೂ ಮುಖದ ನುಣುಪು ಮಾಯವಾಗುವುದು. ಈ ಕಲೆಗಳು ಮುಖದಲ್ಲಿ ಆಳವಾಗಿ ಬೀಳುವುದರಿಂದ ರಂಧ್ರಗಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಮುಖಂದ ಅಂದ ಹಾಳುಗುತ್ತದೆ.

3. ಎದ್ದು ಕಾಣುವ ಕಲೆಗಳು

3. ಎದ್ದು ಕಾಣುವ ಕಲೆಗಳು

ಈ ರೀತಯ ಕಲೆಗಳನ್ನು ಹೈಪರ್‌ಟ್ರೋಫಿಕ್ ಅಥವ ಕೆಲಾಯ್ಡ್ ಮಾರ್ಕ್ ಎಂದು ಕರೆಯತ್ತಾರೆ. ಈ ಕಲೆಗಳು ಬಿದ್ದರೆ ಹೋಗಲಾಡಿಸುವುದು ಅಷ್ಟು ಸುಲಭವಲ್ಲ. ಕಲೆಗಳು ಆಳವಾಗಿ ಬೀಳುವುದರಿಂದ ಮೊಡವೆ ಮಾಯವಾದರೂ ಕಲೆಗಳು ಹಾಗೇ ಎದ್ದು ಕಾಣುತ್ತಿರುತ್ತವೆ. ಇದರಿಂದ ತ್ವಚೆ ಸೌಂದರ್ಯ ಹಾಳಾಗುವುದು. ಇಂತಹ ಕಲೆಗಳನ್ನು ಹೋಗಿಸಲು ಸೌಂದರ್ಯ ಚಿಕಿತ್ಸೆ ಮೊರೆ ಹೋಗಬೇಕಾಗುತ್ತದೆ.

ಮೊಡವೆ ಕಲೆಗಳನ್ನು ಸೌಂದರ್ಯ ಚಿಕಿತ್ಸೆ ಮೂಲಕ ಹೇಗೆ ಹೋಗಲಾಡಿಸುವುದು

ಮೊಡವೆ ಕಲೆಗಳನ್ನು ಸೌಂದರ್ಯ ಚಿಕಿತ್ಸೆ ಮೂಲಕ ಹೇಗೆ ಹೋಗಲಾಡಿಸುವುದು

ಕೆಮಿಕಲ್ ಪೀಲಿಂಗ್(Chemical Peeling)

ಮೊಡವೆ ಕಲೆಗಳನ್ನು ಹೋಗಿಸಲು ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿ ಚರ್ಮದ ಮೇಲ್ಪದರವನ್ನು ತೆಗೆದು ಕಲೆಯನ್ನು ಹೋಗಲಾಡಿಸಲಾಗುವುದು. ಕೆಮಿಕಲ್ ಪೀಲಿಂಗ್‌ನಲ್ಲಿ ಆಲ್ಫಾ-ಹೈಡ್ರೋಕ್ಸಿ ಆಮ್ಲಗಳಾದ ಗ್ಲೈಕೋಲಿಕ್ ಆ್ಯಸಿಡ್, ಸ್ಯಾಲಿಸೈಕ್ಲಿಕ್ ಆ್ಯಸಿಡ್, ಟ್ರೈಕ್ರೋರಾಸೆಟ್ರಿಕ್ ಆ್ಯಸಿಡ್ ಮತ್ತು pyruvic ಆ್ಯಸಿಡ್ ಬಳಸಲಾಗುವುದು.

ಮೈಕ್ರೊಡರ್ಮಾಬ್ರೇಶನ್ (Microdermabrasion)

ಮೈಕ್ರೊಡರ್ಮಾಬ್ರೇಶನ್ (Microdermabrasion)

ಈ ವಿಧಾನದಲ್ಲಿ ತುಂಬಾ ಆಳವಾಗಿ ಬಿದ್ದ ಕಲೆಗಳನ್ನು ತ್ವಚೆಯ ಮೇಲಿನ ಪದರವನ್ನು ತೆಗೆಯುವ ಮೂಲಕ ಹೋಗಲಾಡಿಸಲಾಗುವುದು. ವೈಡ್ ಹೆಡ್ ಮಾರ್ಕ್‌ನಂತಹ ಕಲೆಗಳನ್ನು ಹೋಗಲಾಡಿಸಲು ಈ ಚಿಕಿತ್ಸೆ ವಿಧಾನ ಬಳಸಬಹುದು.

ಡರ್ಮಲ್ ಗ್ರಾಫ್ಟಿಂಗ್(Dermal Grafting)

ಡರ್ಮಲ್ ಗ್ರಾಫ್ಟಿಂಗ್(Dermal Grafting)

ಈ ವಿಧಾನದಲ್ಲಿ ಸೂಜಿ ಬಳಸಿ ಮೊಡವೆಯನ್ನು ಒಡೆದು ಅದರಲ್ಲಿರುವ ಕೀವು ಅನ್ನು ಹೊರತೆಗೆಯಲಾಗುತ್ತದೆ. ಇದರಿಂದ ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಾಗಿ ಮೊಡವೆ ಕಡಿಮೆಯಾಗುವುದು ಹಾಗೂ ಮುಖದ ಕಲೆಗಳು ಮಾಯವಾಗುತ್ತದೆ.

ಪಂಚ್ ಟೆಕ್ನಿಕ್ (Punch Technique)

ಪಂಚ್ ಟೆಕ್ನಿಕ್ (Punch Technique)

ಈ ಚಿಕಿತ್ಸೆಯಲ್ಲಿ ಹಲವಾರು ಸೆಶನ್ಸ್ ಇದ್ದು, ಇದನ್ನು ಹಂತ ಹಂತವಾಗಿ ನೀಡಲಾಗುವುದು. ಈ ಚಿಕಿತ್ಸೆ ವಿಧಾನದಲ್ಲಿ ಚರ್ಮದ ಒಂದೊಂದೆ ಪದರವನ್ನು ತೆಗೆಯಲಾಗುವುದು. ಹಾಗೂ ಮೊಡವೆಯಿಂದ ಉಂಟಾದ ಗಾಯವನ್ನು ಸ್ಟಿಚ್ ಮಾಡಿ ಕಲೆ ಎದ್ದು ಕಾಣದಂತೆ ಮಾಡಲಾಗುವುದು.

ಲೇಸರ್ ಟ್ರೀಟ್‌ಮೆಂಟ್(Laser Treatment)

ಲೇಸರ್ ಟ್ರೀಟ್‌ಮೆಂಟ್(Laser Treatment)

ಈ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತೆ. ಲೇಸರ್ ಟ್ರೀಟ್‌ಮೆಂಟ್ ಮೂಲಕ ಹಾಳಾದ ತ್ವಚೆಯನ್ನು ಸರಿಪಡಿಸಿ, ಕೊಲೆಜಿನ್ ಉತ್ಪತ್ಪಿಯನ್ನು ಹೆಚ್ಚಿಸಲಾಗುವುದು. ಇದರಿಂದ ತ್ವಚೆ ಕಲೆ ಇಲ್ಲವಾಗುವುದು.

ನೀಡ್ಲಿಂಗ್ ಥೆರಪಿ(Needling Therapy)

ನೀಡ್ಲಿಂಗ್ ಥೆರಪಿ(Needling Therapy)

ಇದರಲ್ಲಿ ಸೂಜಿ ಮೂಲಕ ಚುಚ್ಚಿ ಮುಖದಲ್ಲಿ ಕೊಲೆಜಿನ್ ಉತ್ಪತ್ತಿಯನ್ನು ಹೆಚ್ಚು ಮಾಡಲಾಗುವುದು. ಇದರಿಂದಾಗಿ ಕಲೆಗಳು ಇಲ್ಲವಾಗುವುದು.

ಸಲಹೆ

ನೀವು ಚರ್ಮರೋಗ ತಜ್ಞರನ್ನು ಭೇಟಿ ಮಾಡಿದಾಗ ನಿಮ್ಮ ಮುಖದ ಕಲೆಗಳ ತೀವ್ರತೆ ಮೇಲೆ ನಿಮಗೆ ಯಾವ ಬಗೆಯ ಚಿಕಿತ್ಸೆ ಉತ್ತಮ ಎಂಬ ಸಲಹೆ ನೀಡಲಾಗುವುದು.

English summary

Diffrent Types Of Pimple Scar And Treatment To Remove That

If you are juggling with the thought of how to remove pimple marks, here is a full-proof guide for you. Read on.
Story first published: Saturday, February 29, 2020, 13:38 [IST]
X
Desktop Bottom Promotion