For Quick Alerts
ALLOW NOTIFICATIONS  
For Daily Alerts

ಉಗುರಿನ ಆರೈಕೆಯ ಬಗ್ಗೆ ಇರುವಂತಹ ಈ ಸತ್ಯಾಸತ್ಯತೆಗಳು ನೀವು ತಿಳಿಯಲೇಬೇಕು

|

ಸುಂದರವಾದ ಉದ್ದ ಉಗುರು, ಅದಕ್ಕೆ ಮನಸೆಳೆಯುವ ಬೇರೆಬೇರೆ ವಿಧದ ಡಿಸೈನ್‌ಗಳ ನೈಲ್‌ ಆರ್ಟ್‌ ಮಾಡಿಸಿಕೊಳ್ಳುವುದು ಈಗಿನ ಟ್ರೆಂಡ್‌. ಎಲ್ಲರ ಕಣ್ಣು ಮೊದಲು ಆಕರ್ಷಿಸುವುದೇ ಚಿತ್ತಾಕರ್ಷಕವಾಗಿರುವ ಉಗುರಿನ ಅಂದವನ್ನು ನೋಡಿ. ಸೌಂದರ್ಯಕ್ಕಿಂತ ಮುಖ್ಯವಾಗಿ ನಮ್ಮ ಆರೋಗ್ಯವನ್ನು ಸೂಚಿಸುವ ಅಂಗವೆಂದರೆ ಅದು ಉಗುರು ಮತ್ತು ಕೂದಲು. ಉಗುರುಗಳು ಉದ್ದವಾಗಿ, ಆರೋಗ್ಯಯುತವಾಗಿ ಕಾಣಬೇಕೆಂದರೆ ನಾವು ಸೇವಿಸುವ ಆಹಾರ ಕ್ರಮವೂ ಮುಖ್ಯವಾಗುತ್ತೆ.ಆದರೆ ಉಗುರಿನ ಕುರಿತಾಗಿ ಕೆಲವೊಂದು ನಂಬಿಕೆಗಳಿವೆ. ಹಾಗೆ ಮಾಡಬಾರದು, ಹೀಗೆ ಮಾಡಬಾರದು ಎನ್ನುವ ಮಿಥ್ಯೆಗಳಿವೆ, ಅವುಗಳು ಎಷ್ಟು ಸರಿ ಎನ್ನುವುದರ ವಿವರಣೆ ಈ ಲೇಖನದಲ್ಲಿದೆ ನೋಡಿ.

nail facts
ಆಹಾರದಲ್ಲಿ ಜೆಲಾಟಿನ್ ದುರ್ಬಲ ಉಗುರುಗಳನ್ನು ಬಲಪಡಿಸುತ್ತದೆ

ಆಹಾರದಲ್ಲಿ ಜೆಲಾಟಿನ್ ದುರ್ಬಲ ಉಗುರುಗಳನ್ನು ಬಲಪಡಿಸುತ್ತದೆ

ಉಗುರಿನ ಆರೋಗ್ಯ ಅಡಗಿರುವುದು ನಾವು ಸೇವಿಸುವ ಆಹಾರದಲ್ಲಿನ ಪೌಷ್ಟಿಕಾಂಶಗಳನ್ನು ಆಧರಿಸಿ. ಅದರಂತೆ ಜೆಲಾಟಿನ್ ಒಂದು ಪ್ರೋಟೀನ್ ಮತ್ತು ಉಗುರುಗಳು ಕೆರಾಟಿನ್‌ನಿಂದ ಮಾಡಲ್ಪಟ್ಟಿದೆ. ಜೆಲಾಟಿನ್ ಉಗುರುಗಳನ್ನು ಬಲಪಡಿಸುತ್ತದೆ ಎಂದು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಸಂಶೋಧನೆಗಳಿಲ್ಲ.

ಉಗುರಿನ ಆರೋಗ್ಯಕ್ಕಾಗಿ ಪ್ರೋಟೀನ್‌ಗಳು ಸೇರಿದಂತೆ ನಿಮ್ಮ ದೈನಂದಿನ ಆಹಾರದಲ್ಲಿ ಉತ್ತಮ ಪೋಷಕಾಂಶವಿರುವ ಆಹಾರಗಳನ್ನು ಸೇರಿಸಿ. ಉಗುರು ಸುಂದರವಾಗಿ ಕಾಣಲು, ಮೇಕ್‌ ಓವರ್‌ ಮಾಡಿಸಿ, ನೀವು ಆಯ್ಕೆ ಮಾಡುವ ನೇಲ್‌ ಆರ್ಟಿಸ್ಟ್ ಕೂಡಾ ನಿಮ್ಮ ಉಗುರಗಳಿಗೆ ಸುಂದರ ರೂಪ ನೀಡಬಹುದು. ಎಲ್ಲವೂ ನಿಮ್ಮ ಆಯ್ಕೆಯಲ್ಲಿದೆ.

ಉಗುರುಗಳನ್ನು ಫ್ರೀಯಾಗಿ ಬಿಡಲು ಸೌಂದರ್ಯವರ್ಧಕಗಳನ್ನು ಅನ್ವಯಿಸಬೇಡಿ ಎನ್ನುವುದು

ಉಗುರುಗಳನ್ನು ಫ್ರೀಯಾಗಿ ಬಿಡಲು ಸೌಂದರ್ಯವರ್ಧಕಗಳನ್ನು ಅನ್ವಯಿಸಬೇಡಿ ಎನ್ನುವುದು

ಕೆಲವರಿಗೆ ಉಗುರಿಗೆ ನೈಲ್‌ ಪಾಲಿಷ್‌ ಹಚ್ಚದಿದ್ದರೆ ನಿದ್ದೆ ಬರದು. ಇಂಥವರಿಗೆ ನೀವು ಉಗುರಿಗೆ ಸ್ವಲ್ಪ ಸಮಯ ಏನೂ ಹಚ್ಚಬಾರದು, ಉಗುರಿನ ಆರೈಕೆಯನ್ನು ಮಾಡಿಸಿಕೊಳ್ಳಬಾರದು, ಉಗುರುಗಳನ್ನು ಫ್ರೀಯಾಗಿ ಬಿಡಬೇಕು ಎಂದರೆ ಮನಸ್ಸು ಕೇಳದು. ಆದರೆ ನೀವು ಉತ್ತಮ ಗುಣಮಟ್ಟದ ಉಗುರಿನ ಉತ್ಪನ್ನಗಳನ್ನು ಬಳಸುತ್ತಿದ್ದರೆ ಚಿಂತಿಸಬೇಕಾಗಿಲ್ಲ. ಈಗಂತೂ ಎಲ್ಲರೂ ಸ್ವ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುತ್ತಾರೆ. ತಂತ್ರಜ್ಞಾನಗಳೂ ಅಭಿವೃದ್ಧಿ ಹೊಂದಿರುವುದರಿಂದ ಉತ್ತಮವಾದ ಸೇವೆಯನ್ನು ಈಗಿನ ನೇಲ್‌ ಬಾರ್‌ಗಳು ನೀಡುತ್ತಿವೆ. ಹಾಗಾಗಿ ಉಗುರಿಗೆ ವಿಶ್ರಾಂತಿ ನೀಡುವ ಪ್ರಮೇಯವಿಲ್ಲ.

ರಾಸಾಯನಿಕಗಳನ್ನು ಹೊಂದಿರುವ ಉಗುರಿನ ಉತ್ಪನ್ನಗಳನ್ನು ಬಳಸದಿರಿ

ರಾಸಾಯನಿಕಗಳನ್ನು ಹೊಂದಿರುವ ಉಗುರಿನ ಉತ್ಪನ್ನಗಳನ್ನು ಬಳಸದಿರಿ

ಈಗಂತೂ ಎಲ್ಲರೂ ಸಾವಯವ ಉತ್ಪನ್ನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹಾಗಂತ ಉಗುರಿಗೆ ಸಂಬಂಧಿಸಿದ ಯಾವ ಉತ್ಪನ್ನವೂ ರಾಸಾಯನಿಕ ರಹಿತವಾಗಿರುವುದು ಸಾಧ್ಯವಿಲ್ಲ, ನೇಲ್‌ ಪಾಲಿಷ್‌ನಿಂದ ಹಿಡಿದು ರಿಮೂವರ್‌ವರೆಗೂ ಎಲ್ಲವೂ ರಾಸಾಯನಿಕ ಅಂಶಗಳೇ ಆಗಿರುತ್ತದೆ. ಉಗುರಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಹೆಚ್ಚಾಗಿ ಬಳಸುವುದೇ ಪೆಟ್ರೋಲಿಯಂ ಆಗಿರುತ್ತದೆ. ಹಾಗಾಗಿ ರಾಸಾಯನಿಕ ಮುಕ್ತ ವಸ್ತುಗಳಿರದು.

ಮೆನಿಕ್ಯೂರ್‌ ನೈಸರ್ಗಿಕವಾದ ಉಗುರುಗಳನ್ನು ಹಾಳುಮಾಡುತ್ತವೆ

ಮೆನಿಕ್ಯೂರ್‌ ನೈಸರ್ಗಿಕವಾದ ಉಗುರುಗಳನ್ನು ಹಾಳುಮಾಡುತ್ತವೆ

ಇದು ನೇಲ್ ಆರ್ಟ್ ಯುಗ. ತಂತ್ರಜ್ಞಾನವು ನಮ್ಮ ಬಳಕೆಗೆ ತಕ್ಕಂತೆ ಸುಧಾರಿತವಾಗಿದೆ, ಉತ್ಪನ್ನಗಳು ಕೂಡಾ ಬಳಕೆದಾರ ಸ್ನೇಹಿಯಾಗಿದೆ, ನಿಮಗೆ ಬೇಕಾಗಿರುವುದು ಉತ್ತಮವಾದ ಉಗುರು ಸೇವೆಯನ್ನು ಮಾಡಲು ಸುಶಿಕ್ಷಿತ, ವೃತ್ತಿಪರ ಉಗುರು ತಂತ್ರಜ್ಞ. ಉತ್ತಮವಾಗಿ ಅನ್ವಯಿಸುವ ನೇಲ್‌ ಪಾಲಿಷ್‌ ನೈಸರ್ಗಿಕ ಉಗುರುಗಳನ್ನು ಹಾನಿಗೊಳಿಸುವುದಿಲ್ಲ.

ನೀವು ಮೆನಿಕ್ಯೂರ್‌, ಪೆಡಿಕ್ಯೂರ್‌ ಮಾಡಿಸಿಕೊಳ್ಳುವಾಗ ನೋವು, ಗಾಯ, ಉಗುರು ಕಿತ್ತು ಬಂದರೆ ಕೆಲವೊಮ್ಮೆ ಅದು ಅಲ್ಲಿ ಕೆಲಸ ಮಾಡುವ ನೇಲ್‌ ಎಕ್ಸ್‌ಪರ್ಟ್‌ಗಳ ತಪ್ಪುಗಳೂ ಆಗಿರಬಹುದು. ಅವರ ಅನುಭದ ಕೊರೆತಯಿಂದ ನಿಮ್ಮ ಉಗುರಿನ ಅಂದ ಕೆಡಬಹುದು. ಹಾಗಾಗಿ ನೇಲ್‌ ಸ್ಪಾಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ. ಇತರರ ಸಲಹೆಯನ್ನೂ ಪಡೆಯಿರಿ.

ನೇಲ್‌ಪಾಲಿಷ್‌ ದೀರ್ಘಕಾಲ ಉಳಿಯಬೇಕೆಂದರೆ ಫ್ರಿಡ್ಜ್‌ನಲ್ಲಿಡಬೇಕು..!

ನೇಲ್‌ಪಾಲಿಷ್‌ ದೀರ್ಘಕಾಲ ಉಳಿಯಬೇಕೆಂದರೆ ಫ್ರಿಡ್ಜ್‌ನಲ್ಲಿಡಬೇಕು..!

ನೇಲ್‌ ಪಾಲಿಶ್‌ ಆವಿಯಾಗುವುದು ಅಥವಾ ಗಟ್ಟಿಯಾಗುವುದು ಬೇಗ. ಹಾಗಾಗಿ ಪ್ರತಿ ಬಳಕೆಯ ನಂತರ ಅದನ್ನು ಸರಿಯಾಗಿ ಮುಚ್ಚಬೇಕು ಎನ್ನುತ್ತಾರೆ. ಇಲ್ಲವಾದರೆ ಎಷ್ಟೇ ದುಡ್ಡು ಕೊಟ್ಟು ಖರೀದಿಸಿದ್ದಾಗಿರಲಿ, ಗಾಳಿಯಾಡಿದರೆ ಗಟ್ಟಿಯಾಗಿಬಿಡುತ್ತದೆ, ನೀವು ನೇಲ್‌ಪಾಲಿಶ್‌ ಫ್ರಿಡ್ಜ್‌ನಲ್ಲಿಟ್ಟರೆ ಹಚ್ಚುವಾಗ ಅದನ್ನು ಕೊಠಡಿಯ ಉಷ್ಣಾಂಶಕ್ಕೆ ತಂದು ಹಚ್ಚಲೇಬೇಕು. ಫ್ರಿಡ್ಜ್‌ನಲ್ಲಿಟ್ಟರೆ ಹೆಚ್ಚು ಕಾಲ ಬರುತ್ತದೆ ಎನ್ನುವುದಕ್ಕೆ ಅರ್ಥವಿಲ್ಲ.

ಕೆಲವು ಜನರ ಉಗುರುಗಳ ಮೇಲಿನ ಹಸಿರು ವಸ್ತುವು ಮಚ್ಚೆ ಅಥವಾ ಶಿಲೀಂಧ್ರ

ಕೆಲವು ಜನರ ಉಗುರುಗಳ ಮೇಲಿನ ಹಸಿರು ವಸ್ತುವು ಮಚ್ಚೆ ಅಥವಾ ಶಿಲೀಂಧ್ರ

ಕೆಲವರ ಉಗುರಿನ ಮೇಲೆ ಕೆಲವೊಂದು ಮಚ್ಚೆಗಳು ಅಥವಾ ಹಸಿರು ಬಣ್ಣದ ಕಲೆಯಂತೆ ಇರುವ ಗುರುತುಗಳೂ ಇರಬಹುದು. ಕೆಲವೊಮ್ಮೆ ಅಚಾನಕ್ಕಾಗಿ ಕಾಣಿಸಿಕೊಳ್ಳುವ ಇದನ್ನು ಮಚ್ಚೆ ಅಥವಾ ಸೋಂಕು ಎಂದು ಹೇಳಲಾಗುವುದಿಲ್ಲ. ಎಲ್ಲದಕ್ಕೂ ವೈದ್ಯಕೀಯ ಪರೀಕ್ಷೆ ಮಾಡಿದ ನಂತರವೇ ಸಮಸ್ಯೆಯನ್ನು ನಿರ್ಧರಿಸುವುದು ಸಾಧ್ಯ..

ತಣ್ಣನೆಯ ನೀರಲ್ಲಿ ಕೈ ಮುಳುಗಿಸಿಟ್ಟರೆ ನೇಲ್‌ಪಾಲಿಷ್‌ ಒಣಗುವುದೇ..?

ತಣ್ಣನೆಯ ನೀರಲ್ಲಿ ಕೈ ಮುಳುಗಿಸಿಟ್ಟರೆ ನೇಲ್‌ಪಾಲಿಷ್‌ ಒಣಗುವುದೇ..?

ನೇಲ್‌ ಪಾಲಿಶ್‌ ಹಚ್ಚಿದ ಮೇಲೆ ಕೆಲವರು ಕೈಬೆರಳನ್ನು ನೀರಿನಲ್ಲಿಯೋ ಅಥವಾ ಐಸ್‌ ನೀರಿನಲ್ಲಿಯೋ ಬೇಗ ಒಣಗಲೆಂದು ಇರಿಸುತ್ತಾರೆ, ಆದರೆ ನೇಲ್‌ ಪಾಲಿಷ್‌ ಒಣಗಬೇಕೆಂದರೆ ಅದರಲ್ಲಿನ ದ್ರಾವಕಗಳು ಆವಿಯಾಗಬೇಕು. ನೀರಿನಲ್ಲಿ ಕೈಯನ್ನು ಮುಳುಗಿಸುವುದಕ್ಕಿಂತ ಫ್ಯಾನ್‌ ಕೆಳಗೆ ಕೈಯನ್ನು ಆರಿಸಲು ಇಡುವುದು ನೇಲ್‌ ಪಾಲಿಷ್‌ ಒಣಗಿಸಲು ಅತ್ಯುತ್ತಮ ವಿಧಾನವಾಗಿದೆ. ನಿಮಗೆ ನೇಲ್ ಪಾಲಿಷ್‌ ಬೇಗನೇ ಒಣಗಬೇಕೆಂದರೆ ಉತ್ತಮ ಗುಣಮಟ್ಟದ ಜೆಲ್‌ ಪಾಲಿಷ್‌ಗಳನ್ನು ಬಳಸಿ. ಈ ಬಣ್ಣಗಳು ಬೇಗನೆ ಮಾಸುವುದೂ ಇಲ್ಲ.

ಉಗುರನ್ನು ಮುಂದಕ್ಕೆ ಎಳೆಯುವುದು

ಉಗುರನ್ನು ಮುಂದಕ್ಕೆ ಎಳೆಯುವುದು

ಉಗುರಿಗೆ ಆಕಾರವನ್ನು ನೀಡಲು, ಅಂದವನ್ನು ಹೆಚ್ಚಿಸಲು ನುರಿತ ನೇಲ್‌ ತಜ್ಞರು ನೈಸರ್ಗಿಕವಾಗಿ ಬೆಳೆಯುವ ಉಗುರನ್ನು ಹಿಂದಕ್ಕೆ ಮುಂದಕ್ಕೆ ಎಳೆಯುತ್ತಾರೆ. ಇದನ್ನು ಮಾಡಲು ಉತ್ತಮ ಉಪಕರಣಗಳನ್ನು ಬಳಸಬೇಕು. ಎಷ್ಟು ಒತ್ತಡ ಹಾಕಬೇಕೋ ಅಷ್ಟೇ ಹಾಕಿದಲ್ಲಿ ಉಗುರಿಗೆ, ಹಿಂದೆ ಇರುವ ಚರ್ಮಕ್ಕೆ ಹಾನಿಯಾಗದು. ಇದನ್ನು ಮಾಡುವುವವರು ನುರಿತ ನೇಲ್‌ ಆರ್ಟಿಸ್ಟ್‌ ಆಗಿರಬೇಕು. ಹಾಗಾಗಿ ಅನುಭವವಿರುವವರಿಗೆ ಮಾತ್ರ ನಿಮ್ಮ ಸುಂದರವಾದ ಕೈಗಳನ್ನು ಒಪ್ಪಿಸಿ.

ಹೊರಪೊರೆ ಕತ್ತರಿಸಬಹುದೇ..?

ಹೊರಪೊರೆ ಕತ್ತರಿಸಬಹುದೇ..?

ನಮ್ಮ ಹಿರಿಯರು ಉಗುರನ್ನು ಕೆರೆಯಬಾರದು ಎಂದು ಬೈಯುತ್ತಾರೆ. ಆದರೆ ಪಾರ್ಲರ್‌ಗಳಲ್ಲಿ ಉಗುರಿನ ಶೈನಿಂಗ್‌ ಹೆಚ್ಚಿಸಲು ಹಾಗೂ ಆಕಾರವನ್ನು ನೀಡಲು, ಉಗುರಿನ ಮೇಲ್ಮೈ ಪೊರೆಯನ್ನು ಕೆರೆಯುತ್ತಾರೆ. ಎಪೊಚಿನಿಯಮ್‌ ಎಂದು ಕರೆಯಲ್ಪಡುವ ಉಗುರಿನ ಮೇಲಿನ ಚರ್ಮವನ್ನು ಕೆರೆಯಬಾರದು. ಉಗುರಿನ ಹೊರ ಪೊರೆಯು ಸತ್ತ ಚರ್ಮವಾಗಿರುತ್ತದೆ, ಎಪೋಚಿನಿಯಮ್‌ ಜೀವಂತ ಚರ್ಮವಾಗಿರುತ್ತದೆ, ಇದನ್ನು ಕೆರೆಯುವುದು ಸೋಂಕುಗಳಿಗೆ ಕಾರಣವಾಗಬಹುದು.

ನಿಮ್ಮದೇ ಉಪಕರಣಗಳನ್ನು ಸಲೂನ್‌ಗೆ ಕೊಂಡೊಯ್ಯಬಹುದೇ..?

ನಿಮ್ಮದೇ ಉಪಕರಣಗಳನ್ನು ಸಲೂನ್‌ಗೆ ಕೊಂಡೊಯ್ಯಬಹುದೇ..?

ಕೋವಿಡ್‌ ಸಾಂಕ್ರಾಮಿಕ ರೋಗ ಜಗತ್ತನ್ನು ತಲ್ಲಣಗೊಳಿಸಿದ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ಮೊದಲನೇಯದಾಗಿ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವುದನ್ನು ಅರಿತಿದ್ದೇವೆ.ಹೆಚ್ಚಿನ ಸಲೂನ್‌ಗಳಲ್ಲಿ ಬಳಸಿದ ಉಪಕರಣಗಳನ್ನು ಸ್ಯಾನಿಟೈಝ್‌ ಮಾಡುವುದೋ, ಸ್ಟೆರಿಲೈಜ್‌ ಮಾಡುವುದೋ ಮಾಡುತ್ತಾರೆ. ಆದರೂ ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿವಹಿಸಬೇಕಾದ ಅಗತ್ಯವಿರುವುದರಿಂದ ಇದರ ಬಗ್ಗೆ ಸಲೂನ್‌ನಲ್ಲಿ ಕೇಳುವುದಕ್ಕೆ ಮುಜುಗರ ಪಡಬೇಡಿ.

ಕೆಲವೊಮ್ಮೆ ನಿಮ್ಮದೇ ನೇಲ್‌ ಕಿಟ್‌ ಉಪಯೋಗಿಸುವುದಾದರೆ ಅದಕ್ಕೆ ಅವಕಾಶವಿದೆಯೇ ನೋಡಿ. ಇತ್ತೀಚೆಗೆ ಅಂತರರಾಷ್ಟ್ರೀಯ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿ ಅದರಂತೆ ನಡೆದುಕೊಳ್ಳುವುದು, ಸೋಂಕು ನಿವಾರಕಗಳನ್ನು ಬಳಸುವುದು ಕಡ್ಡಾಯವಾಗಿದೆ. ಹಾಗಾಗಿ ನೀವು ಭೇಟಿ ನೀಡುವ ಸಲೂನ್‌ ಅಥವಾ ಸ್ಪಾದಲ್ಲಿ ಸೋಂಕು ನಿವಾರಕ ಪ್ರಕ್ರಿಯೆ ಅಥವಾ ಸ್ಯಾನಿಟೈಝ್‌ ಮಾಡುತ್ತಾರೆಯೇ ಎನ್ನುವುದನ್ನು ತಿಳಿದುಕೊಂಡು ಮುಂದುವರಿಯುವುದೇ ಉತ್ತಮ. ಶುಚಿತ್ವಕ್ಕೆ ಆದ್ಯತೆ ನೀಡುವ ನೇಲ್‌ ಸ್ಪಾ, ಸಲೂನ್‌ ನಿಮ್ಮ ಆಯ್ಕೆಯಾಗಿರಲಿ.

English summary

Common nail myths busted in kannada

you must know these true facts about nail products and nail health. Read more.
Story first published: Thursday, June 9, 2022, 12:55 [IST]
X
Desktop Bottom Promotion