For Quick Alerts
ALLOW NOTIFICATIONS  
For Daily Alerts

ನಿಮ್ಮ ಹುಬ್ಬಿನ ಅಂದ ಕೆಡಿಸುವ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ

|

ಸುಂದರವಾದ ಐ ಬ್ರೋ ಅಥವಾ ಹುಬ್ಬು ಯಾರಿಗೆ ಇಷ್ಟ ಇಲ್ಲ ಹೇಳಿ??? ಪ್ರತಿಯೊಂದು ಹೆಣ್ಣು ಸಹ ಸುಂದರವಾದ, ದಪ್ಪವಾದ ಹುಬ್ಬನ್ನೇ ಬಯಸುತ್ತಾಳೆ. ಅದಕ್ಕಾಗಿ ಆಗಾಗ, ಶೇಪ್ ಕೊಡೋದು, ಟ್ರಿಮ್ ಮಾಡೋದು, ಕಲರ್ ಮಾಡೋದು ಹೀಗೆ ನಾನಾ ಕೆಲಸಗಳನ್ನ ಮಾಡುತ್ತಿರುತ್ತಾರೆ. ಆದರೆ ಈ ಎಲ್ಲಾ ಕೆಲಸಗಳು ನಿಮ್ಮ ಹುಬ್ಬಿಗೆ ಒಳ್ಳೆಯದಲ್ಲ. ಇದರಿಂದ ಹುಬ್ಬುಗಳು ಚೆನ್ನಾಗಿ ಕಾಣುವ ಬದಲು, ಅದರ ಅಂದ ಕೆಡಬಹುದು. ಹಾಗಾದರೆ, ಅಂತಹ ಕೆಲಸಗಳು ಯಾವುವು ಎಂಬುದನ್ನು ನೋಡೋಣ.

ಹುಬ್ಬಿನ ಅಂದ ಕೆಡಿಸುವ ಕೆಲಸಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಎರಡೂ ಹುಬ್ಬುಗಳನ್ನು ಒಂದೇ ರೀತಿ ಮಾಡಲು ಪ್ರಯತ್ನಿಸುವುದು:

ಎರಡೂ ಹುಬ್ಬುಗಳನ್ನು ಒಂದೇ ರೀತಿ ಮಾಡಲು ಪ್ರಯತ್ನಿಸುವುದು:

ಹೌದು, ಹೆಚ್ಚಿನವರಿಗೆ ಎರಡು ಹುಬ್ಬುಗಳು ಒಂದೇ ರೀತಿ ಕಾಣಿಸಿಬೇಕು ಎನ್ನುವ ಆಸೆಯಿರುತ್ತೆ. ಅದೇ ಕಾರಣಕ್ಕಾಗಿ ಎರಡೂ ಹುಬ್ಬುಗಳಿಗೆ ಒಂದೇ ರೀತಿಯ ಆಕಾರ ನೀಡಲು ಅದನ್ನು ಕೀಳುತ್ತಾ ಹೋಗುತ್ತಾರೆ. ಹೀಗೆ ಮಾಡಿದಾಗ, ಹುಬ್ಬು ತೆಳ್ಳಗಾಗುವುದನ್ನು ಗಮನಿಸುವುದೇ ಇಲ್ಲ. ಅತಿಯಾದ ತೆಳ್ಳಗಿನ ಹುಬ್ಬು ಮುಖದ ಸೌಂದರ್ಯವನ್ನ ಹಾಳು ಮಾಡೋದ್ರಲ್ಲಿ ಯಾವುದೇ ಸಂದೇಹವಿಲ್ಲ. ನೆನಪಿಡಿ, ಹುಬ್ಬುಗಳಿಗೆ ಆಕಾರ ನೀಡೋದು ಒಳ್ಳೆಯದೇ, ಆದ್ರೆ ಅದಕ್ಕೆ ಒಂದೇ ರೀತಿಯ ಆಕಾರ ಕೊಡಬೇಕು ಅನ್ನೋದು ಇದರರ್ಥ ಅಲ್ಲ. ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವುದು ಸಾಮಾನ್ಯ.

ಐಬ್ರೋಗೆ ಡಾರ್ಕ್ ಕಲರ್ ಬಳಸುವುದು:

ಐಬ್ರೋಗೆ ಡಾರ್ಕ್ ಕಲರ್ ಬಳಸುವುದು:

ಕೆಲವರಿಗೆ ಹುಬ್ಬುಗಳ ನೈಸರ್ಗಿಕ ಕಲರ್ ಸಾಕಾಗುವುದಿಲ್ಲ. ಇದಕ್ಕಾಗಿ ಐಬ್ರೋಗೆ ಕಲರ್ ನೀಡಲು ಇಷ್ಟಪಡುತ್ತಾರೆ. ಇದು ಒಳ್ಳೆಯದೇ, ಯಾಕಂದ್ರೆ, ಕೆಲವರ ಹುಬ್ಬು ಲೈಟ್ ಆಗಿರುತ್ತೆ. ಅಂತಹವರಿಗೆ ಐಬ್ರೋ ಕಲರ್ ಸಹಕಾರಿ. ಅದ್ರೆ ಗಮನಿಸಿ, ನೈಸರ್ಗಿಕ ಕೂದಲಿನಂತೆ ಕಾಣಲು ಡಾರ್ಕ್ ಕಲರ್ ಬಳಸಲೇಬೇಡಿ. ಜತೆಗೆ ಈಗಾಗಲೇ, ದಪ್ಪವಾದ ಹುಬ್ಬು ಹೊಂದಿರುವವರು ಮತ್ತೆ ಕಲರ್ ಬಳಸುವುದು ಒಳ್ಳೆಯದಲ್ಲ.

ಹುಬ್ಬುಗಳನ್ನು ಅತಿಯಾಗಿ ಕೀಳುವುದು:

ಹುಬ್ಬುಗಳನ್ನು ಅತಿಯಾಗಿ ಕೀಳುವುದು:

ನಿಮ್ಮ ಹುಬ್ಬಗಳಿಗೆ ಒಂದೊಳ್ಳೆ ಆಕಾರ ನೀಡುವುದು ಉತ್ತಮ. ಆದ್ರೆ ಅತಿಯಾಗಿ ಕೀಳಿ, ಅದನ್ನು ತೆಳ್ಳಗೆ ಮಾಡುವುದು ಸರಿಯಲ್ಲ. ಇದು ನಿಮ್ಮ ಮುಖದ ಆಕಾರವನ್ನ ಕೆಡಿಸುತ್ತದೆ. ಇದರಿಂದ ನಿಮ್ಮ ಹುಬ್ಬಿನ ನೈಸರ್ಗಿಕತೆ ಮರೆಯಾಗುತ್ತದೆ, ತದನಂತರ ಇದಕ್ಕೆ ಎಂತಹ ಕಲರ್ ಅಥವಾ ಪೌಡರ್ ಬಳಸಿದರೂ ಸಹ, ಅದಕ್ಕೆ ನೈಜ ಲುಕ್ ಸಿಗಲು ಸಾಧ್ಯವಿಲ್ಲ.

ತಪ್ಪಾದ ಬ್ರಷ್ ಬಳಸುವುದು:

ತಪ್ಪಾದ ಬ್ರಷ್ ಬಳಸುವುದು:

ನಿಮ್ಮ ಹುಬ್ಬಿಗೆ ಆಕಾರ ನೀಡಲು ಅಥವಾ ಕ್ರೀಮ್, ಪೌಡರ್ ಫಿಲ್ಲರ್ ಬಳಸಲು ಸರಿಯಾದ ಬ್ರಷ್ ಆಯ್ಕೆ ಮಾಡುವುದು ಮುಖ್ಯ. ಯಾವುದೋ ಹಳೆಯ-ಅಗಲವಾದ ಬ್ರಷ್ ನಿಮ್ಮ ಹುಬ್ಬಿಗೆ ಬಳಸಿದರೆ, ಅದರಿಂದ, ನಿಮ್ಮ ಹುಬ್ಬಿನ ಆಕಾರ ಹದಗೆಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಸಣ್ಣದಾದ ಹುಬ್ಬಗೆಂದೇ ಇರುವ ಬ್ರಷ್ ಬಳಸಿ.

ಐಬ್ರೋ ಜೆಲ್ ಬಳಸದೇ ಇರುವುದು:

ಐಬ್ರೋ ಜೆಲ್ ಬಳಸದೇ ಇರುವುದು:

ನಿಮ್ಮ ಹುಬ್ಬಿನ ಕೂದಲುಗಳು ಒಂದೇ ರೀತಿ ಇರಲು ಐ ಬ್ರೋ ಜೆಲ್ ಬಳಸುವುದು ಮುಖ್ಯವಾಗಿದೆ. ಅಷ್ಟೇ ಅಲ್ಲ, ಹಬ್ಬುಗೂದಲಿಗೆ ಒಂದು ರೀತಿಯ ಹೊಳಪನ್ನು ನೀಡುವ ಕೆಲಸ ಈ ಜೆಲ್ ಮಾಡುತ್ತದೆ. ಆದ್ದರಿಂದ ಹೆಚ್ಚು ಸಮಯ ನಿಮ್ಮ ಹುಬ್ಬು ಒಂದೇ ರೀತಿಯಾಗಿರಲು ಜೆಲ್ ಬಳಸುವುದು ಒಳ್ಳೆಯದು. ಆದರೆ ಹೆಚ್ಚಿನವರು ಇದನ್ನ ಬಳಸುವುದಿಲ್ಲ. ಇದರಿಂದ ನಿಮ್ಮ ಹುಬ್ಬು ಕಳೆಗುಂದುವುದು.

ಹುಬ್ಬಿನ ಕೊನೆ ಕತ್ತರಿಸುವುದು:

ಹೌದು, ಕೆಲವರಿಗೆ ಹುಬ್ಬಿನ ಕೊನೆ ಅಥವಾ ಬಾಲವನ್ನು ಕತ್ತರಿಸುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಇದು ಸರಿಯಲ್ಲ. ಮೊನಚಾದ ಹುಬ್ಬು ಮುಖಕ್ಕೆ ಉತ್ತಮವಾದ ಆಕಾರ ನೀಡುತ್ತದೆ. ಅಷ್ಟೇ ಅಲ್ಲ, ಇದು ಹಬ್ಬು ಉದ್ದಕ್ಕೆ ಬೆಳೆಯಲು ಸಹಾಯ ಮಾಡುವುದು. ಅದರೆ ನೀವು ಅದನ್ನ ಕತ್ತರಿಸಿದರೆ ಅಥವಾ ಟ್ರಿಮ್ ಮಾಡಿದರೆ, ಮುಖದ ಆಕಾರ ಹಾಳಾಗುವುದರ ಜೊತೆಗೆ ಹುಬ್ಬು ಬೆಳವಣಿಗೆಯೂ ನಿಲ್ಲುವುದು.

English summary

Common Eyebrow Mistakes in Kannada

Here we talking about Common eyebrow mistakes in Kannada, read on
X
Desktop Bottom Promotion