For Quick Alerts
ALLOW NOTIFICATIONS  
For Daily Alerts

ಮೂಗಿನ ಒಳಗೆ ಮೊಡವೆಯೇ, ಈ ಮನೆಮದ್ದು ಟ್ರೈ ಮಾಡಿ

|

ಮುಖದಲ್ಲಿ ಅಥವಾ ದೇಹದ ಯಾವುದೇ ಭಾಗದಲ್ಲಿ ಮೊಡವೆಗಳು ಕಾಣಿಸಿಕೊಂಡರೆ ಅದು ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತವೆ. ನಮ್ಮ ಸಂಪೂರ್ಣ ಗಮನ ಅದನ್ನು ಹೋಗಲಾಡಿಸುವುದರಲ್ಲಿಯೇ ಇರುತ್ತದೆ. ಅದಕ್ಕಾಗಿ ಸಾಮಾನ್ಯವಾಗಿ ಎಲ್ಲರೂ ಕೈ ಉಗುರುಗಳನ್ನು ಬಳಸಿ ಮೊಡವೆಗಳನ್ನು ಒಡೆಯಲು ಪ್ರಯತ್ನಿಸುತ್ತಾರೆ. ಹೀಗಾಗಿ ಅದೆಷ್ಟೋ ಸಾರಿ ಆ ಮೊಡಮೆಗಳು ಹಾಗೆಯೇ ಕಲೆಗಳ ರೂಪದಲ್ಲಿ ಉಳಿದುಹೋಗುತ್ತವೆ. ಇದು ಇನ್ನಷ್ಟು ಯೋಚನೆಯನ್ನು ಉಂಟು ಮಾಡುತ್ತದೆ.

Best Home Remedies For Pimple Inside The Nose

ಗುಳ್ಳೆಗಳು ಅಥವಾ ಮೊಡವೆಗಳು ದೇಹದ ಯಾವುದೇ ಭಾಗದ ಮೇಲೆ ಬೇಕಾದರೂ ಸಂಭವಿಸಬಹುದು. ಮೂಗು ಕೂಡ ಇದಕ್ಕೆ ಹೊರತಾಗಿಲ್ಲ. ಮೂಗಿನ ಒಳಗೆ ಒಂದು ಗುಳ್ಳೆ ಅಥವಾ ಮೊಡವೆ ಎದ್ದರೆ ಅದು ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ ಹೆಚ್ಚು ನೋವಿನಿಂದ ಕೂಡಿರುತ್ತದೆ.

ಅವುಗಳನ್ನು ತೊಡೆದುಹಾಕಲು ಮತ್ತು ತಡೆಯಲು ಕೆಲವು ನೈಸರ್ಗಿಕ ಪರಿಹಾರಗಳಿವೆ. ಅದನ್ನು ನೀವು ಮನೆಯಲ್ಲಿಯೇ ತಯಾರಿಸಿ ಬಳಸಬಹುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ. ಮೂಗಿನೊಳಗಿನ ಮೊಡವೆಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುವ ಮನೆಮದ್ದುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

1. ವಾರ್ಮ್ ಕಂಪ್ರೆಸ್ (ಬೆಚ್ಚಗಿನ ಶಾಖ ಕೊಡುವುದು)

1. ವಾರ್ಮ್ ಕಂಪ್ರೆಸ್ (ಬೆಚ್ಚಗಿನ ಶಾಖ ಕೊಡುವುದು)

ಬೆಚ್ಚಗಿನ ಶಾಖ ನೀಡುವುದರಿಂದ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಪೀಡಿತ ಪ್ರದೇಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಇದು ಮೂಗಿನೊಳಗೆ ನೋವಿನ ಗುಳ್ಳೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಬೇಕಾಗುವ ಸಾಮಗ್ರಿಗಳು:

ವಾರ್ಮ್ ಕಂಪ್ರೆಸ್

ಮಾಡುವ ವಿಧಾನ:

ಮೂಗಿನ ಮೇಲೆ ಬೆಚ್ಚಗಿನ ಶಾಖವನ್ನು ಕೊಡಿ (ಇದಕ್ಕೆ ಸ್ವಚ್ಛವಾದ ಬಟ್ಟೆಯನ್ನು ಬಳಸಿ).

ಸುಮಾರು 5 ನಿಮಿಷಗಳ ಕಾಲ ಅದನ್ನು ಇರಿಸಿ ಮತ್ತು ತೆಗೆದುಹಾಕಿ.

ಬೇಕಿದ್ದರೆ, ನೀವು ಗುಳ್ಳೆಯನ್ನು ಬೆಚ್ಚಗಿನ ನೀರಿನಿಂದ ತೊಳೆಯಬಹುದು.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು?

ನೀವು ಇದನ್ನು ದಿನಕ್ಕೆ 2-3 ಬಾರಿ ಮಾಡಬಹುದು.

2. ತೈಲಗಳು

2. ತೈಲಗಳು

ಎ. ರೋಸ್ಮರಿ ಎಣ್ಣೆ

ರೋಸ್ಮರಿ ಎಣ್ಣೆಯು ನೋವು ನಿವಾರಕ, ಆಂಟಿಮೈಕ್ರೊಬಿಯಲ್, ಆಂಟಿಆಕ್ಸಿಡೆಂಟ್, ನಂಜುನಿರೋಧಕ, ಶಿಲೀಂಧ್ರನಾಶಕ ಮತ್ತು ಸಂಕೋಚಕ ಗುಣಗಳನ್ನು ಹೊಂದಿದೆ (1). ಈ ಗುಣಲಕ್ಷಣಗಳು ಗುಳ್ಳೆಗಳನ್ನು ವೇಗವಾಗಿ ಗುಣಪಡಿಸಲು ಮತ್ತು ಮತ್ತಷ್ಟು ತ್ವಚೆಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ನಿಮಗೆ ಬೇಕಾಗುವ ಸಾಮಗ್ರಿಗಳು:

ರೋಸ್ಮರಿ ಎಣ್ಣೆಯ 1-2 ಹನಿಗಳು

ತೆಂಗಿನ ಎಣ್ಣೆಯ 5 ಹನಿ

ಮಾಡುವ ವಿಧಾನ:

ತೆಂಗಿನ ಎಣ್ಣೆಯಂತಹ ಯಾವುದೇ ಎಣ್ಣೆಯೊಂದಿಗೆ ಒಂದರಿಂದ ಎರಡು ಹನಿ ರೋಸ್ಮರಿ ಎಣ್ಣೆಯನ್ನು ಮಿಶ್ರಣ ಮಾಡಿ.

ಮೊಡವೆಯಾದ ಸ್ಥಳಕ್ಕೆ ಈ ಮಿಶ್ರಣವನ್ನು ಅನ್ವಯಿಸಿ.

30 ನಿಮಿಷಗಳ ನಂತರ ಅದನ್ನು ತೊಳೆಯಿರಿ.

ಈ ಮಿಶ್ರಣವನ್ನು ರಾತ್ರಿ ಹಚ್ಚಿಕೊಂಡೂ ಮಲಗಬಹುದು.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು?

ಇದನ್ನು ದಿನಕ್ಕೆ 2-3 ಬಾರಿ ಮಾಡಿ.

ಬಿ. ಟೀ ಟ್ರೀ ಎಣ್ಣೆ

ಟೀ ಟ್ರಿ ಎಣ್ಣೆಯಲ್ಲಿ ಆಂಟಿಮೈಕ್ರೊಬಿಯಲ್, ಉರಿಯೂತ ವಿರೋದಿ ಮತ್ತು ಬ್ಯಾಕ್ಟೀರಿಯಾನಾಶಕ ಗುಣಗಳಿವೆ (2). ಎಣ್ಣೆಯಲ್ಲಿರುವ ಅಂಶಗಳು ಚರ್ಮಕ್ಕೆ ಆಳವಾಗಿ ತೂರಿಕೊಳ್ಳುತ್ತವೆ ಮತ್ತು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾದಿಂದ ಹಾನಿಗೊಳಗಾದ ಚರ್ಮದ ಚಿಕಿತ್ಸೆಗೆ ಸಹಕರಿಸುತ್ತವೆ.

ನಿಮಗೆ ಬೇಕಾಗುವ ಸಾಮಗ್ರಿಗಳು:

ಟೀ ಟ್ರಿ ಎಣ್ಣೆಯ 4 ಹನಿಗಳು

1 ಟೀ ಚಮಚ ತೆಂಗಿನ ಎಣ್ಣೆ

ನೀವು ಏನು ಮಾಡಬೇಕು?

ಒಂದು ಟೀ ಚಮಚ ತೆಂಗಿನ ಎಣ್ಣೆಯೊಂದಿಗೆ ನಾಲ್ಕು ಹನಿ ಟೀ ಟ್ರಿ ಎಣ್ಣೆಯನ್ನು ಸೇರಿಸಿ.

ಈ ಮಿಶ್ರಣವನ್ನು ಮೊಡವೆಯಾದ ಸ್ಥಳಕ್ಕೆ ಹಚ್ಚಿ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ.

ನಂತರ ಅದನ್ನು ನೀರಿನಿಂದ ತೊಳೆಯಿರಿ.

ನೀವು ಇದನ್ನು ರಾತ್ರಿಯಲ್ಲಿ ಕೂಡ ಹಚ್ಚಿ ಮಲಗಬಹುದು.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು?

ಟೀ ಟ್ರಿ ಎಣ್ಣೆಯನ್ನು ಪ್ರತಿದಿನ 2-3 ಬಾರಿ ಹಚ್ಚಿ.

3. ಬೇವಿನ ಎಣ್ಣೆ

3. ಬೇವಿನ ಎಣ್ಣೆ

ಬೇವು ಬಲವಾದ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ (3). ಬೇವಿನ ಈ ಗುಣಗಳು ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ನಿಮಗೆ ಬೇಕಾಗುವ ಸಾಮಗ್ರಿಗಳು:

ಬೇವಿನ ಎಣ್ಣೆಯ 2-3 ಹನಿಗಳು

ಮಾಡುವ ವಿಧಾನ:

ಬೇವಿನ ಎಣ್ಣೆಯನ್ನು ನೇರವಾಗಿ ನಿಮ್ಮ ಬೆರಳಿನಿಂದ ಗುಳ್ಳೆ ಅಥವಾ ಮೊಡವೆಗಳಿರುವ ಭಾಗಕ್ಕೆ ಹಚ್ಚಿ.

ಅದನ್ನು ತೊಳೆಯುವ ಮೊದಲು ಸುಮಾರು 30 ನಿಮಿಷಗಳ ಕಾಲ ಹಾಗೆಯೇ ಬಿಡಿ.

ನೀವು ಇದನ್ನು ಹಚ್ಚಿ ರಾತ್ರಿಯಿಡೀ ಹಾಗೆಯೇ ಬಿಡಬಹುದು.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು?

ಇದನ್ನು ದಿನಕ್ಕೆ 2-3 ಬಾರಿ ಮಾಡಿ.

4. ತೆಂಗಿನ ಎಣ್ಣೆ

4. ತೆಂಗಿನ ಎಣ್ಣೆ

ತೆಂಗಿನ ಎಣ್ಣೆ ಪ್ರಬಲ ಉರಿಯೂತ ವಿರೋಧಿ ಮತ್ತು ನೋವು ನಿವಾರಕ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತದೆ. ಮೊಡವೆಗಳಿಗೆ ಸಂಬಂಧಿಸಿದ ಕೆಂಪಗಾಗುವುದು ಮತ್ತು ಊತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ನಿಮಗೆ ಬೇಕಾಗುವ ಸಾಮಗ್ರಿಗಳು:

ಕೋಲ್ಡ್ ಪ್ರೆಸ್ಡ್ ತೆಂಗಿನ ಎಣ್ಣೆಯ ಕೆಲವು ಹನಿಗಳು

ನೀವು ಏನು ಮಾಡಬೇಕು?

ನಿಮ್ಮ ಮೂಗಿನೊಳಗಿನ ಗುಳ್ಳೆಗೆ ತೆಂಗಿನ ಎಣ್ಣೆಯನ್ನು ಹಚ್ಚಿ.

ಅದನ್ನು ಹಾಗೆಯೇ ಒಣಗಲು ಬಿಡಿ.

ಅಗತ್ಯವಿದ್ದರೆ ಮತ್ತೆ ಹಚ್ಚಿ.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು

ಇದನ್ನು ದಿನಕ್ಕೆ 2-3 ಬಾರಿ ಮಾಡಿ.

5. ನಿಂಬು

5. ನಿಂಬು

ನಿಂಬೆ ಹಣ್ಣು ಸಂಕೋಚಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಮೊಡವೆ ನಂತಹ ಚರ್ಮದ ಸೋಂಕನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ. ನಿಂಬೆ ಸಹ ಉರಿಯೂತ ವಿರೋಧಿ ಗುಣಗಳನ್ನು ಹೊಂದಿದೆ. ಇದು ಮೂಗಿನೊಳಗಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮಗೆ ಬೇಕಾಗುವ ಸಾಮಗ್ರಿಗಳು

ನಿಂಬೆ ರಸದ ಕೆಲವು ಹನಿಗಳು

ನೀರು (ಬೇಕಿದ್ದಲ್ಲಿ ಮಾತ್ರ)

ನೀವು ಏನು ಮಾಡಬೇಕು?

ತಾಜಾ ಹಿಂಡಿದ ನಿಂಬೆ ರಸವನ್ನು ಮೊಡವೆಗಳಿಗೆ ಹಚ್ಚಿ.

ನೀವು ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ನಿಂಬೆ ರಸವನ್ನು ಅನ್ವಯಿಸುವ ಮೊದಲು, ಸಮಾನ ಪ್ರಮಾಣದ ನೀರನ್ನು ಬೆರೆಸಿ.

30 ನಿಮಿಷಗಳ ನಂತರ ಅದನ್ನು ತೊಳೆಯಿರಿ.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು

ಇದನ್ನು ದಿನಕ್ಕೆ 1-2 ಬಾರಿ ಮಾಡಿ.

6. ಹೈಡ್ರೋಜನ್ ಪೆರಾಕ್ಸೈಡ್

6. ಹೈಡ್ರೋಜನ್ ಪೆರಾಕ್ಸೈಡ್

ಹೈಡ್ರೋಜನ್ ಪ್ರಬಲ ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಆದ್ದರಿಂದ, ಇದು ಬೇಗ ಮೊಡವೆಗಳನ್ನು ಗುಣಪಡಿಸುತ್ತದೆ.

ನಿಮಗೆ ಬೇಕಾಗುವ ಸಾಮಗ್ರಿಗಳು:

3% ಹೈಡ್ರೋಜನ್ ಪೆರಾಕ್ಸೈಡ್ (ಅಗತ್ಯಕ್ಕೆ ತಕ್ಕಂತೆ)

ಕೊಟನ್ ಬಡ್ಸ್ (ಹತ್ತಿ ಕಡ್ಡಿಗಳು)

ನೀವು ಏನು ಮಾಡಬೇಕು?

ಹತ್ತಿ ಕಡ್ಡಿಗಳನ್ನು 3% ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣದಲ್ಲಿ ನೆನೆಸಿ. ಹೆಚ್ಚು ಸೂಕ್ಷ್ಮ ಚರ್ಮ ಹೊಂದಿರುವವರು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಬಳಸಬಹುದು.

ಹತ್ತಿ ಕಡ್ದಿಯನ್ನು ಮೊಡವೆಯ ಮೇಲೆ ಒಂದು ನಿಮಿಷ ಇರಿಸಿ.

ಬಳಸಿದ ಕಡ್ಡಿಯನ್ನು ಮತ್ತೆ ಬಳಸಬೇಡಿ.

20 ನಿಮಿಷಗಳ ನಂತರ ನಿಮ್ಮ ಮೂಗು ತೊಳೆಯಿರಿ.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು

ಇದನ್ನು ದಿನಕ್ಕೆ 2-3 ಬಾರಿ ಮಾಡಿ.

7. ಆಪಲ್ ಸೈಡರ್ ವಿನೆಗರ್

7. ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಪ್ರದರ್ಶಿಸುತ್ತದೆ. ಈ ಗುಣಲಕ್ಷಣಗಳು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ನಿಮಗೆ ಬೇಕಾಗುವ ಸಾಮಗ್ರಿಗಳು:

ಕಚ್ಚಾ ಆಪಲ್ ಸೈಡರ್ ವಿನೆಗರ್ (ಅಗತ್ಯವಿರುವಂತೆ)

ಹತ್ತಿ ಕಡ್ಡಿಗಳು

ನೀವು ಏನು ಮಾಡಬೇಕು?

ಹತ್ತಿ ಕಡ್ಡಿಗಳನ್ನು ಆಪಲ್ ಸೈಡರ್ ವಿನೆಗರ್ ನಲ್ಲಿ ಅದ್ದಿ.

ಅದನ್ನು ಮೊಡವೆ ಮೇಲೆ ಇರಿಸಿ.

ಸುಮಾರು 30 ನಿಮಿಷಗಳ ಕಾಲ ಮೊಡವೆ ಮೇಲೆ ಹಾಗೆಯೇ ಇರಲಿ.

ನಂತರ ಅದನ್ನು ತೊಳೆಯಿರಿ.

ನೀವು ಇದನ್ನು ಎಷ್ಟು ಬಾರಿ ಮಾಡಬೇಕು?

ದಿನಕ್ಕೆ ಒಮ್ಮೆ ಇದನ್ನು ಮಾಡಿ.

ಮೊಡವೆ ಮರುಕಳಿಸದಂತೆ ತಡೆಗಟ್ಟುವ ಸಲಹೆಗಳು

ಮೊಡವೆ ಮರುಕಳಿಸದಂತೆ ತಡೆಗಟ್ಟುವ ಸಲಹೆಗಳು

ನಿಮ್ಮ ಮೂಗನ್ನು ಹೆಚ್ಚು ಮುಟ್ಟಿಕೊಳ್ಳುವುದನ್ನು ತಪ್ಪಿಸಿ.

ನಿಮ್ಮ ಮೂಗನ್ನು ತುಂಬಾ ಗಟ್ಟಿಯಾಗಿ ಅಥವಾ ಹೆಚ್ಚಾಗಿ ಹಿಂಡುವುದನ್ನು (ಶೀತವಾದಾಗ, ಸೀನಿದಾಗ).

ವಿಟಮಿನ್-ಡಿ ಸಮೃದ್ಧ ಆಹಾರಗಳ ಸೇವನೆಯನ್ನು ಮಾಡಿ.

ಒತ್ತಡವನ್ನು ನಿಯಂತ್ರಣದಲ್ಲಿಡಿ.

ಸೌಮ್ಯವಾದ ಕ್ಲೆನ್ಸರ್ ಬಳಸಿ ನಿಮ್ಮ ಮುಖವನ್ನು ಪ್ರತಿದಿನ ಎರಡು ಬಾರಿ ತೊಳೆಯಿರಿ.

ಕಡಿಮೆ ಮೇಕಪ್ ಬಳಸಿ.

ನಿಮ್ಮ ಮುಖ ಅಥವಾ ಮೂಗನ್ನು ಹೆಚ್ಚಾಗಿ ಮುಟ್ಟುತ್ತಿರಬೇಡಿ.

ಸೂರ್ಯನ ನೇರವಾದ ಕಿರಣಗಳಿಂದ ದೂರವಿರಿ.

ದಿನವೂ ವ್ಯಾಯಾಮ ಮಾಡಿ.

ಈ ಮೇಲಿನ ಸಲಹೆಗಳು ಮತ್ತು ಪರಿಹಾರಗಳು ಮೊಡವೆ ಅಥವಾ ಗುಳ್ಳೆಯ ಸುತ್ತಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಜೊತೆಗೆ ಮೊಡವೆಗಳು ಮತ್ತೆ ಮರುಕಳಿಸದಂತೆ ತಡೆಯುತ್ತವೆ. ಈ ಎಲ್ಲಾ ಪರಿಹಾರಗಳನ್ನು ಮತ್ತು ಸೂಚನೆಗಳನ್ನು ಅನುಸರಿಸಿದರೂ, ಮೊಡವೆಗಳು ಗುಣವಾಗದಿದ್ದರೆ ಅಥವಾ ಇನ್ನೂ ಹೆಚ್ಚಾದರೆ, ಇದು ಗಂಭೀರ ಸೋಂಕು ಎಂದು ಅನ್ನಿಸಿದರೆ ಕೂಡಲೇ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

English summary

Best Home Remedies For Pimple Inside The Nose

Here we are discussing about Best Home Remedies For Pimple Inside The Nose. There are some natural remedies one can follow to get rid of and prevent them. Read on to know more. Read more.
X
Desktop Bottom Promotion