For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮಹಿಳೆಯರೇ, ಕೆಲವೇ ನಿಮಿಷಗಳಲ್ಲಿ ರೆಡಿಯಾಗಲು ಇಲ್ಲಿದೆ ಸಲಹೆಗಳು

|

ಮಹಿಳೆಯರು ಬೆಳಿಗ್ಗೆ ಎಷ್ಟೇ ಬೇಗ ಎದ್ದರೂ, ತಮ್ಮ ಆರೈಕೆಗಾಗಿ ಬಿಡುವು ಸಿಗುವುದಿಲ್ಲ. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರ ಪಾಡಂತೂ ಹೇಳತೀರದು. ಇಡೀ ದಿನದ ಪ್ಲಾನ್, ಉಪಹಾರ ಮತ್ತು ಆಹಾರ ತಯಾರಿಸುವುದು, ಮನೆಕೆಲಸ ಎಲ್ಲವನ್ನೂ ಬೆಳಿಗ್ಗೆಯೇ ಮಾಡಬೇಕಾಗುತ್ತದೆ. ಇದರ ನಡುವೆ ತಮಗೆ ರೆಡಿಯಾಗಲು ಸಮಯವೇ ಸಿಗುವುದಿಲ್ಲ.

ನೀವೇನಾದರೂ ಇದೇ ಗುಂಪಿಗೆ ಸೇರಿದವರಾಗಿದ್ದರೆ, ಕೆಲವೇ ನಿಮಿಷಗಳಲ್ಲಿ ಹೇಗೆ ರೆಡಿಯಾಗಬಹುದು ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ. ಈ ಬ್ಯೂಟಿ ಹ್ಯಾಕ್‌ಗಳನ್ನು ನೀವು ಅಳವಡಿಸಿಕೊಂಡು, ಬೇಗನೇ ಸಿದ್ದವಾಗಬಹುದು.

ವೇಗವಾಗಿ ಸಿದ್ದವಾಗಲು ಮಹಿಳೆಯರಿಗೆ ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸಿ:

ಮಲಗುವ ಮುನ್ನ ಮುಖವನ್ನು ಸ್ವಚ್ಛಗೊಳಿಸಿ:

ರಾತ್ರಿ ಮಲಗುವ ಮುನ್ನ ಚರ್ಮದ ಆರೈಕೆಯನ್ನು ಮಾಡಿ. ಮಲಗುವ ಮುನ್ನ, ಮುಖವನ್ನು ಫೇಸ್ ವಾಶ್‌ನಿಂದ ತೊಳೆಯಿರಿ. ಮುಖವನ್ನು ತೊಳೆದ ನಂತರ ರೋಸ್ ವಾಟರ್ ಅಥವಾ ನೈಟ್ ಕ್ರೀಮ್ ಮುಖಕ್ಕೆ ಹಚ್ಚಿ ಮಲಗಿಕೊಳ್ಳಿ. ನೈಟ್ ಕ್ರೀಮ್ ಹಚ್ಚುವುದರಿಂದ, ಬೆಳಿಗ್ಗೆ ನಿಮ್ಮ ಮುಖವು ಹೊಳೆಯುವ ಮತ್ತು ಫ್ರೆಶ್ ಆಗಿ ಕಾಣುತ್ತದೆ. ಹೀಗೆ ಮಾಡುವುದರಿಂದ ಬೆಳಿಗ್ಗೆ ಸಮಯದ ಕೊರತೆಯಿದ್ದರೆ, ಕಾಜಲ್ ಮತ್ತು ಲಿಪ್ ಗ್ಲಾಸ್ ಮಾತ್ರ ಹಚ್ಚಿಕೊಂಡು ಸಹ ನೀವು ಸುಂದರವಾಗಿ ಕಾಣಿಸಬಹುದು.

ಬಿಬಿ ಅಥವಾ ಸಿಸಿ ಕ್ರೀಮ್ ಬಳಸಿ:

ಬಿಬಿ ಅಥವಾ ಸಿಸಿ ಕ್ರೀಮ್ ಬಳಸಿ:

ಬೆಳಿಗ್ಗೆ ಮುಖಕ್ಕೆ ಫೌಂಡೇಶನ್ ಮತ್ತು ಕನ್ಸೀಲರ್ ಹಚ್ಚಲು ಸಮಯವಿಲ್ಲದಿದ್ದರೆ, ನೀವು ಬಿಬಿ ಅಥವಾ ಸಿಸಿ ಕ್ರೀಮ್ ಹಚ್ಚಿಕೊಳ್ಳಬಹುದು. ಬಿಬಿ ಕ್ರೀಮ್ ಉತ್ತಮ ಆಧಾರವಾಗಿ ಕಾರ್ಯನಿರ್ವಹಿಸಿ, ನಿಮ್ಮ ದೈನಂದಿನ ನೋಟವನ್ನು ಹೆಚ್ಚಿಸುತ್ತದೆ. ನಿಮ್ಮ ಚರ್ಮ ಕೆಂಪಾಗಿದ್ದರೆ ಅಥವಾ ಹೆಚ್ಚು ಸೂಕ್ಷ್ಮವಾಗಿದ್ದರೆ ಸಿಸಿ ಕ್ರೀಮ್ ಅನ್ನು ಹಚ್ಚಿ. ಬಿಬಿ ಮತ್ತು ಸಿಸಿ ಕ್ರೀಮ್‌ಗಳು ನಿಮ್ಮ ತ್ವಚೆಯೊಂದಿಗೆ ಚೆನ್ನಾಗಿ ಬೆರೆತು ನಿಮ್ಮ ಮುಖಕ್ಕೆ ಸಮ, ಮೃದು ಮತ್ತು ಹೊಳೆಯುವ ಮೈಬಣ್ಣವನ್ನು ನೀಡುತ್ತದೆ.

ಐಲೈನರ್ ಸಾಕು:

ಐಲೈನರ್ ಸಾಕು:

ಕಣ್ಣಿನ ಸೌಂದರ್ಯ ಹೆಚ್ಚಿಸಲು ಐಲೈನರ್ ಅಥವಾ ಮಸ್ಕರಾ ಬಳಸಿದರಷ್ಟೇ ಸಾಕು. ಇದನ್ನು ಆದಷ್ಟು ದಪ್ಪಕ್ಕೆ ಹಚ್ಚಿಕೊಂಡರೆ ಒಳ್ಳೆಯದು, ಏಕೆಂದರೆ ಕಣ್ಣನ್ನು ಹೈಲೈಟ್ ಮಾಡುವುದು. ಒಂದು ವೇಳೆ ದಪ್ಪಕ್ಕೆ ಹಚ್ಚಿಕೊಳ್ಳುವುದು ಇಷ್ಟವಿಲ್ಲದಿದ್ದರೆ, ಅಗತ್ಯವಿರುವಂತೆ ನೋಡಿಕೊಂಡು ಹಚ್ಚಿಕೊಳ್ಳಿ.

 ಲಿಪ್ ಗ್ಲಾಸ್ ಜೊತೆಗಿರಲಿ:

ಲಿಪ್ ಗ್ಲಾಸ್ ಜೊತೆಗಿರಲಿ:

ನಿಮಗೆ ಸಮಯವಿಲ್ಲದಿದ್ದರೆ, ನಿಮ್ಮ ಪರ್ಸ್‌ನಲ್ಲಿ ಲಿಪ್ ಗ್ಲಾಸ್ ಅನ್ನು ಇಟ್ಟುಕೊಳ್ಳಬೇಕು. ಲಿಪ್ ಗ್ಲಾಸ್ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಜೊತೆಗೆ ನಿಮ್ಮನ್ನು ಆಕರ್ಷಕವಾಗಿ ಮಾಡುತ್ತದೆ. ನೀವು ಕಣ್ಣುಗಳ ಮೇಲೆ ಲಿಪ್ ಗ್ಲಾಸ್‌ಗಳನ್ನು ಕೂಡ ಬಳಸಬಹುದು, ಇದು ನಿಮ್ಮ ನೋಟವನ್ನು ಸುಧಾರಿಸುತ್ತದೆ.

ಕೂದಲನ್ನು ಈ ರೀತಿ ನೋಡಿಕೊಳ್ಳಿ:

ಕೂದಲನ್ನು ಈ ರೀತಿ ನೋಡಿಕೊಳ್ಳಿ:

ಕೂದಲಿಗೆ ಶಾಂಪೂ ಮಾಡಲು ಸಮಯವಿಲ್ಲದಿದ್ದರೆ, ನಂತರ ಕೂದಲಿನ ಬೇರುಗಳಿಗೆ ಟಾಲ್ಕಂ ಪೌಡರ್ ಸಿಂಪಡಿಸಿ, ಕೂದಲು ಬಾಚಿಕೊಳ್ಳಿ. ಇದರಿಂದ ನಿಮ್ಮ ಕೂದಲು ಎಣ್ಣೆಮುಕ್ತವಾಗಿ ಕಾಣುವಂತೆ ಮಾಡುತ್ತದೆ. ಏಕೆಂದರೆ, ಟಾಲ್ಕಂ ಪೌಡರ್ ನಿಮ್ಮ ಕೂದಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಆದರೆ, ಇದಕ್ಕಿಂತ ರಾತ್ರಿ ನಿಮ್ಮ ಕೂದಲನ್ನು ತೊಳೆದು ಮಲಗುವುದು ಉತ್ತಮ.

English summary

Beauty Tips to Get Ready in Few Minutes in the Morning in Kannada

Here we talking about Beauty Tips to Get Ready in Few Minutes in the Morning in Kannada, read on
Story first published: Thursday, October 21, 2021, 15:53 [IST]
X
Desktop Bottom Promotion