For Quick Alerts
ALLOW NOTIFICATIONS  
For Daily Alerts

ವಿಚಿತ್ರ ಎನಿಸಿದರೂ, ಈ ಪದಾರ್ಥಗಳು ಸೌಂದರ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರಗಳಾಗಿವೆ!

|

ಒತ್ತಡದ ಜೀವನವು ನಮಗೆ ಯಶಸ್ಸಿನ ಜೊತೆಗೆ ಡಾರ್ಕ್ ಸರ್ಕಲ್, ಮೊಡವೆ, ಒಡೆದ ಹಿಮ್ಮಡಿ ಮೊದಲಾದವುಗಳನ್ನು ಕೊಡುಗೆಯಾಗಿ ನೀಡುವುದು. ಇದಕ್ಕೆ ಕಾರಣ ಯಶಸ್ಸಿನ ಹಿಂದೆ ಓಡುವ ಭರದಲ್ಲಿ ಸ್ವ ಆರೈಕೆಯನ್ನು ನಿರ್ಲಕ್ಷ್ಯ ಮಾಡಿರುವುದು. ಇಂತಹ ಸಂದರ್ಭದಲ್ಲಿ ಅದೇ ಹಳೆಯ ಮನೆಮದ್ದುಗಳು ಕೆಲಸಕ್ಕೆ ಬರುವುದಿಲ್ಲ.

ಇವುಗಳನ್ನು ತೆಗೆದುಹಾಕಲು ಪರಿಣಾಮಕಾರಿಯಾದ ವಿಭಿನ್ನ ಮಾರ್ಗಗಳನ್ನು ಹುಡುಕುವ ಅವಶ್ಯಕತೆ ಇರುತ್ತದೆ. ಇಲ್ಲಿ ನಾವು ನಿಮ್ಮ ದೇಹದ ವಿವಿಧ ಸಮಸ್ಯೆಗೆ ವಿಚಿತ್ರವಾದ ಆದರೆ ಬಹಳ ಪರಿಣಾಮಕಾರಿಯಾದ ಪರಿಹಾರಗಳನ್ನು ವಿವರಿಸಿದ್ದೇವೆ.

ವಿಲಕ್ಷಣವಾದ ಆದರೆ ಪರಿಣಾಮಕಾರಿಯಾದ ಪದಾರ್ಥಗಳು ಯಾವುವು ಎಂದು ತಿಳಿಯಲು ನಿಮಗೆ ಕುತೂಹಲವಿಲ್ಲವೇ? ಈ ಕೆಳಗೆ ನೋಡಿ:

1. ಮುಚ್ಚಿಹೋಗಿರುವ ರಂಧ್ರಗಳು:

1. ಮುಚ್ಚಿಹೋಗಿರುವ ರಂಧ್ರಗಳು:

ಆಕ್ಟಿವೇಟ್ ಕಾರ್ಬನ್ ನ 5-6 ಮಾತ್ರೆಗಳನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಜೆಲಾಟಿನ್ ಮತ್ತು 3 ಚಮಚ ಬಿಸಿನೀರನ್ನು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ ನಂತರ ಈ ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಬ್ರಷ್ ನಿಂದ ಹಚ್ಚಿ. ನಿಮ್ಮ ತ್ವರಿತ ಮತ್ತು ಸುಲಭವಾದ ಫೇಸ್ ಮಾಸ್ಕ್ ಸಿದ್ಧವಾಗುವುದು.

2. ಒಣಒಡೆದ ಹಿಮ್ಮಡಿ:

2. ಒಣಒಡೆದ ಹಿಮ್ಮಡಿ:

ಒಂದು ದೊಡ್ಡ ಆಸ್ಪಿರಿನ್ ಟ್ಯಾಬ್ಲೆಟ್ ತೆಗೆದುಕೊಂಡು ಅದನ್ನು ರೋಲಿಂಗ್ ಪಿನ್ ಬಳಸಿ ನುಣ್ಣಗೆ ಪುಡಿ ರೂಪಕ್ಕೆ ಪರಿವರ್ತಿಸಿ. ಈ ಆಸ್ಪಿರಿನ್ ಪುಡಿಯನ್ನು ಸಣ್ಣ ಬಟ್ಟಲಿಗೆ ಹಾಕಿ, ಅದಕ್ಕೆ 1 ಚಮಚ ಸಿಟ್ರಿಕ್ ಆಸಿಡ್ ಪೌಡರ್ ಮತ್ತು 1 ಚಮಚ ಬಿಸಿ ನೀರನ್ನು ಸೇರಿಸಿ.

ಈ ಮಿಶ್ರಣವನ್ನು ಪ್ಲಾಸ್ಟಿಕ್ ಚೀಲಕ್ಕೆ ಸುರಿಯಿರಿ ಮತ್ತು ನಿಮ್ಮ ಪಾದವನ್ನು ಆ ಚೀಲದೊಳಗೆ ಇಡಿ, ನಂತರ ಅದನ್ನು ಸಾಕ್ಸ್‌ ನಿಂದ ಮುಚ್ಚಿ. ಇದನ್ನು 15 ನಿಮಿಷಗಳ ಕಾಲ ಬಿಡಿ. ನೀವು ಇದನ್ನು ಪ್ರತಿದಿನ ಮಾಡಿದರೆ 5-7 ದಿನಗಳಲ್ಲಿ ನಿಮ್ಮ ಹಳೆಯ ಚರ್ಮವು ಎಫ್ಫೋಲಿಯೇಟ್ ಆಗುವುದನ್ನು ನೀವು ಗಮನಿಸಬಹುದು.

3. ಹೆಚ್ಚು ಮೊಡವೆ:

3. ಹೆಚ್ಚು ಮೊಡವೆ:

ಈ ಸಮಸ್ಯೆಯಿಂದ ತುಂಬಾ ಜನರು ಬಳಲುತ್ತಿರುತ್ತಾರೆ. ಇದಕ್ಕಾಗಿ ಬೆಳ್ಳುಳ್ಳಿಯನ್ನು ಅರ್ಧದಷ್ಟು ಕತ್ತರಿಸಿ ಅದನ್ನು ನೇರವಾಗಿ ನಿಮ್ಮ ಗುಳ್ಳೆಗೆ ಅಥವಾ ಮೊಡವೆಗೆ ಹಚ್ಚಿ. ಅದನ್ನು 5 ನಿಮಿಷಗಳ ಕಾಲ ಬಿಡಿ. ಇದರಿಂದ ನೀವು ತ್ವರಿತ ಫಲಿತಾಂಶಗಳನ್ನು ನೋಡುತ್ತೀರಿ.

4. ತಲೆಹೊಟ್ಟು:

4. ತಲೆಹೊಟ್ಟು:

ಒಂದು ಈರುಳ್ಳಿಯನ್ನು ತುರಿದುಕೊಳ್ಳಿ, ಇದರಿಂದ ಚಮಚವನ್ನು ಬಳಸಿ ನಿಮಗೆ ಸಾಧ್ಯವಾದಷ್ಟು ಈರುಳ್ಳಿ ರಸವನ್ನು ತೆಗೆಯಿರಿ. ಆ ಈರುಳ್ಳಿ ರಸವನ್ನು 1 ಚಮಚ ತೆಂಗಿನ ಎಣ್ಣೆ ಮತ್ತು 1 ಚಮಚ ಬರ್ಡಾಕ್ ಎಣ್ಣೆಯೊಂದಿಗೆ ಬೆರೆಸಿ. ಈ ಮಿಶ್ರಣವನ್ನು ನಿಮ್ಮ ನೆತ್ತಿಯ ಚೆನ್ನಾಗಿ ಹಚ್ಚಿ, ಇದಕ್ಕೆ ಸ್ಪ್ರೆ ಬಾಟಲಿ ಬಳಸಿ. 30 ನಿಮಿಷಗಳ ಕಾಲ ಬಿಡಿ, ನಂತರ ಅದನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

5. ಕೂದಲು ಉದುರುವುದು:

5. ಕೂದಲು ಉದುರುವುದು:

ಒಂದು ಚಮಚ ಬೇಕರಿ ಯೀಸ್ಟ್ ಮತ್ತು ಎರಡು ಚಮಚ ಬಿಸಿನೀರನ್ನು ಫೋರ್ಕ್ ಬಳಸಿ ಬೆರೆಸಿ. ಇದಕ್ಕೆ 1 ಚಮಚ ಜೇನುತುಪ್ಪ, ನಿಮ್ಮ ನೆಚ್ಚಿನ ಎಣ್ಣೆಯ 1 ಚಮಚ, 1 ಚಮಚ ವೋಡ್ಕಾ, ಮತ್ತು 1 ಮೊಟ್ಟೆಯ ಹಳದಿ ಲೋಳೆ ಸೇರಿಸಿ. ಅವೆಲ್ಲವನ್ನೂ ಚೆನ್ನಾಗಿ ಬೆರೆಸಿ, ಮಿಶ್ರಣವನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ, ಇದನ್ನು 1-2 ಗಂಟೆಗಳ ಕಾಲ ಬಿಡಿ ನಂತರ ಸೌಮ್ಯವಾದ ಶಾಂಪೂ ಮತ್ತು ಕಂಡಿಷನರ್ ಬಳಸಿ ತೊಳೆಯಿರಿ. ನಿರಂತರವಾಗಿ ಇದನ್ನು ಮಾಡಿದರೆ ಫಲಿತಾಂಶ ನೀವೇ ನೋಡುವಿರಿ.

English summary

Beauty Hacks with Weird but Effective Ingredients in Kannada

Here we talking about Beauty hacks with weird but effective ingredients in kannada, read on
Story first published: Tuesday, July 13, 2021, 12:25 [IST]
X
Desktop Bottom Promotion