For Quick Alerts
ALLOW NOTIFICATIONS  
For Daily Alerts

ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ಈ ಎಲ್ಲಾ ಸೌಂದರ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ!

|

ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ಈ ಎಲ್ಲಾ ಸೌಂದರ್ಯ ಸಮಸ್ಯೆಗಳು ಉಂಟಾಗುತ್ತವೆ

ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಪ್ರಯೋಜನಗಳು ನಿಮ್ಮ ಆರೋಗ್ಯದಲ್ಲಿ ಮಾತ್ರವಲ್ಲದೇ ನಿಮ್ಮ ತ್ವಚೆ ಹಾಗೂ ಕೂದಲಿನಲ್ಲೂ ಪ್ರತಿಬಿಂಬಿತವಾಗುತ್ತವೆ. ದೇಹದಲ್ಲಿ ಯಾವುದೇ ಪೋಷಕಾಂಶ ಕೊರತೆಯಾದಾಗ ಅದು ನಮ್ಮ ತ್ವಚೆ ಅಥವಾ ಕೂದಲಿನ ಮೂಲಕ ಸೂಚನೆ ನೀಡುತ್ತದೆ. ಈ ಲೇಖನದಲ್ಲಿ ನಾವು ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾದಾಗ ನಿಮ್ಮ ಸೌಂದರ್ಯಕ್ಕೆ ಅಡ್ಡಿಯಾಗುವಂತಹ ಯಾವ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ವಿವರಿಸಿದ್ದೇವೆ.

ದೇಹದಲ್ಲಿ ಕಬ್ಬಿಣದ ಪ್ರಮಾಣ ಕಡಿಮೆಯಾದರೆ, ತ್ವಚೆ ಹಾಗೂ ಕೂದಲಿಗೆ ಸಂಬಂಧಿಸಿದ ಯಾವ್ಯಾವ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಹಿಳೆಯರಲ್ಲಿ ಕಬ್ಬಿಣದ ಕೊರತೆ:

ಮಹಿಳೆಯರಲ್ಲಿ ಕಬ್ಬಿಣದ ಕೊರತೆ:

ಮಹಿಳೆಯರಲ್ಲಿ ಕಬ್ಬಿಣದ ಕೊರತೆ ಸಾಮಾನ್ಯವಾಗಿದೆ, ವಿಶೇಷವಾಗಿ ಅವರ ಗರ್ಭಧಾರಣೆ ಹಾಗೂ ಬಾಣಂತನದ ದಿನಗಳಲ್ಲಿ. ಈ ಅಗತ್ಯ ಖನಿಜವು ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲವಾದ್ದರಿಂದ, ನೀವು ಸಾಕಷ್ಟು ಕಬ್ಬಿಣ ಸಮೃದ್ಧ ಆಹಾರವನ್ನು ಸೇವಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಅಥವಾ ಕಬ್ಬಿಣದ ಕೊರತೆಯನ್ನು ಸರಿಪಡಿಸಲು ಉತ್ತಮ ಮಾರ್ಗವನ್ನು ಸೂಚಿಸುವ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಇದು ಬೇರೆ ಬೇರೆ ಸಮಸ್ಯೆಗಳಿಗೆ ಎಡೆಮಾಡಿಕೊಡುವುದು. ಅಂತಹ ಸಮಸ್ಯೆಗಳಲ್ಲಿ ಕೂದಲು ಹಾಗೂ ತ್ವಚೆಗೆ ಸಂಬಂಧಿಸಿದ ವಿಚಾರಗಳೂ ಸೇರಿಕೊಂಡಿವೆ. ಅವುಗಳಾವುವು ಇಲ್ಲಿ ನೋಡೋಣ.

ಡಾರ್ಕ್ ಸರ್ಕಲ್:

ಡಾರ್ಕ್ ಸರ್ಕಲ್:

ದೇಹದಲ್ಲಿ ರಕ್ತದ ಉತ್ಪಾದನೆಗೆ ಕಬ್ಬಿಣವು ಅವಶ್ಯಕವಾಗಿದೆ. ಕಬ್ಬಿಣದ ಕೊರತೆ ಎಂದರೆ ಕಡಿಮೆ ಕೆಂಪು ರಕ್ತ ಕಣಗಳು. ದೇಹದಲ್ಲಿ ಕೆಂಪುರಕ್ತಕಣಗಳು ಕಡಿಮೆಯಾದಾಗ ಸಾಕಷ್ಟು ಆಮ್ಲಜನಕವು ಚರ್ಮದ ಅಂಗಾಂಶಗಳನ್ನು ತಲುಪುವುದಿಲ್ಲ. ಇದು ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವನ್ನು ಕಪ್ಪಾಗಿಸಲು ಕಾರಣವಾಗಬಹುದು. ಸಾಕಷ್ಟು ನಿದ್ರೆ ಮಾಡಿದ ನಂತರವೂ ನಿಮ್ಮ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಗಳು ಕಾಣಿಸಿಕೊಳ್ಳುತ್ತಿವೆ ಎಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಚರ್ಮದಲ್ಲಿ ತುರಿಕೆ:

ಚರ್ಮದಲ್ಲಿ ತುರಿಕೆ:

ಕಬ್ಬಿಣದ ಕೊರತೆಯ ಚರ್ಮದಲ್ಲಿ ತುರಿಕೆಯನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿದೆ. ಕಬ್ಬಿಣದ ಕೊರತೆಯು ಎಸ್ಜಿಮಾ ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಜೊತೆಗೆ ಕಡಿಮೆ ಕಬ್ಬಿಣದ ಮಟ್ಟವು ಶುಷ್ಕ ಮತ್ತು ಒಣ ಚರ್ಮವನ್ನು ನಮಗೆ ನೀಡುತ್ತವೆ. ಆದ್ದರಿಂದ ಚರ್ಮದಲ್ಲಿ ಇದ್ದಕ್ಕಿದ್ದಂತೆ ತುರಿಕೆ ಕಾಣಿಸಿಕೊಂಡರೆ ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯಾಗಿದೆ ಎಂದರ್ಥ.

ಕೂದಲು ಉದುರುವಿಕೆ:

ಕೂದಲು ಉದುರುವಿಕೆ:

ಕಬ್ಬಿಣದ ಕೊರತೆಯು ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಲು ಕಾರಣವಾಗುತ್ತದೆ. ಈ ಹಿಮೇಗ್ಲೋಬಿನ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಜೀವಕೋಶಗಳು ಸೇರಿದಂತೆ ದೇಹದ ಇತರ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಲಸ ಮಾಡುತ್ತದೆ. ಯಾವಾಗ ಈ ಹಿಮೋಗ್ಲೋಬಿನ್ ಕಡಿಮೆಯಾಗುವುದೋ ಆಗ ಆಮ್ಲಜನಕ ಕಡಿಮೆಯಾಗಿ ನಿಮ್ಮ ಕೂದಲು ಮಂದವಾಗಿ ಕಾಣುವಂತೆ ಮಾಡುತ್ತದೆ ಮತ್ತು ಸಾಕಷ್ಟು ಪ್ರಮಾಣದ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ನಿಮ್ಮ ಮುಟ್ಟಿನ ದಿನಗಳಲ್ಲಿ ಕೆಲವೊಮ್ಮೆ ಹೆಚ್ಚು ಕೂದಲು ಉದುರುವುದೇ ಎಂಬುದನ್ನು ಗಮನಿಸಿ. ಆ ದಿನಗಳಲ್ಲಿ ರಕ್ತಸ್ರಾವ ಹೆಚ್ಚಾಗಿದ್ದರೆ, ಆ ಸಮಯದಲ್ಲಿ ನಿಮ್ಮ ಕಬ್ಬಿಣದ ಮಟ್ಟವು ಕಡಿಮೆಯಾಗಿದೆ ಎಂಬುದೇ ಇದಕ್ಕೆ ಕಾರಣ.

ಕಬ್ಬಿಣದ ಕೊರತೆಗೆ ಪರಿಹಾರ:

ಕಬ್ಬಿಣದ ಕೊರತೆಗೆ ಪರಿಹಾರ:

ಈ ಸೌಂದರ್ಯದ ಯಾವುದೇ ಸಮಸ್ಯೆಯನ್ನು ಅನುಭವಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ಕಬ್ಬಿಣದ ಕೊರತೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸರಿಯಾಗಿ ಗುರುತಿಸಿ. ನಿಮಗೆ ಕೊರತೆಯಿದ್ದರೆ ವೈದ್ಯರು ಕಬ್ಬಿಣದ ಪೂರಕಗಳನ್ನು ಶಿಫಾರಸು ಮಾಡಬಹುದು. ಆದರೆ ನಿಮ್ಮ ಆಹಾರದಲ್ಲಿ ಬೀಜಗಳು, ಮಸೂರ, ಬೀನ್ಸ್, ಪಾಲಕ, ಧಾನ್ಯಗಳಂತಹ ಕಬ್ಬಿಣಾಂಶಯುಕ್ತ ಆಹಾರವನ್ನು ಸೇರಿಸುವ ಮೂಲಕ ಕೊರತೆಯ ಅಪಾಯವನ್ನು ನೀವು ತಡೆಯಬಹುದು.

English summary

Beauty Concerns That Can Be Signs Of Iron Deficiency in Kannada

Here we talking about Beauty Concerns That Can Be Signs Of Iron Deficiency in Kannada, read on
Story first published: Thursday, July 22, 2021, 10:44 [IST]
X
Desktop Bottom Promotion