For Quick Alerts
ALLOW NOTIFICATIONS  
For Daily Alerts

ವಿನಿಗರ್‌ ಸ್ನಾನದಿಂದ ಕೂದಲು ಆರೋಗ್ಯದ ಜತೆಗೆ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ

|

ಕೆಲವು ಸಣ್ಣ ಸಣ್ಣ ಬದಲಾವಣೆಗಳು ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ. ಅಂಥಾ ಬದಲಾವಣೆಗಳಲ್ಲಿ ಒಂದು ನಿತ್ಯ ಸ್ನಾನ ಮಾಡುವ ನೀರಿಗೆ ವಿನಿಗರ್‌ ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ಸೌಂದರ್ಯ ವೃದ್ಧಿ ಜೊತೆಗೆ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ.

ಎಲ್ಲರ ಮನೆಗಳಲ್ಲೂ ಇತ್ತೀಚೆಗೆ ವಿನಿಗರ್‌ ಇದ್ದೇ ಇರುತ್ತದೆ, ಆದರೆ ಇದನ್ನು ಸ್ನಾನದ ನೀರಿಗೆ ಹಾಕಿ ಬಳಸಬೇಕು ಎಂಬುದು ಹಲವರಿಗೆ ಗೊತ್ತಿಲ್ಲ. ನಿಮಗೆ ಮತ್ತೊಂದು ವಿಷಯ ಗೊತ್ತೆ?, ವಿನಿಗರ್ ಅನ್ನು 10,000 ವರ್ಷಗಳಿಂದಲೂ ವಿವಿಧ ಚರ್ಮ ಮತ್ತು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳಾಗಿ ಬಳಸಲಾಗುತ್ತಿದೆ.

ಆಯುರ್ವೇದ ಪ್ರಕಾರ ವಿನಿಗರ್ ಮಿಶ್ರಿತ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವು ನಿವಾರಣೆ, ರೋಗನಿರೋಧಕ ಶಕ್ತಿ, ವಿವಿಧ ಚರ್ಮದ ಸಮಸ್ಯೆಗೆ ಪರಿಹಾರ ಸೇರಿದಂತೆ, ನಿರ್ವಿಶೀಕರಣ ಚಿಕಿತ್ಸೆಯಾಗಿ ಸಹ ಬಳಸಲಾಗುತ್ತದೆ.

ನಾವಿಂದು ವಿನಿಗರ್‌ ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ಸೌಂದರ್ಯದ ಮೇಲಾಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ:

ವಿನಿಗರ್‌ ಬಳಸುವುದು ಹೇಗೆ?

ವಿನಿಗರ್‌ ಬಳಸುವುದು ಹೇಗೆ?

ನಿಮ್ಮ ಸ್ನಾನದ ನೀರಿಗೆ 1-2 ಕಪ್ ವಿನಿಗರ್ ಬೆರೆಸಿ ಸ್ನಾನ ಮಾಡಿ. ಕನಿಷ್ಠ 20-30 ನಿಮಿಷಗಳ ಕಾಲ ವಿನಿಗರ್‌ ನೀರಿನಲ್ಲಿ ನಿಮ್ಮ ದೇಹ ನೆನೆಯಬೇಕು ನಂತರ ನಾರಿನಿಂದ ಸ್ವಚ್ಛಗೊಳಿಸಿ. ಇದು ನಿಮಗೆ ಪರಿಣಾಮಕಾರಿ ಪರಿಹಾರ ನೀಡುತ್ತದೆ.

1 ನಿರ್ವಿಶೀಕರಣ

1 ನಿರ್ವಿಶೀಕರಣ

ವಿನಿಗರ್‌ ಸ್ನಾನದಿಂದ ನಿಮ್ಮ ಚರ್ಮದಿಂದ ವಿಷವನ್ನು ಹೊರಹಾಕುವಲ್ಲಿ ಸಹಕಾರಿ. ಮೇಲೆ ಹೇಳಿದ ರೀತಿ ಸ್ನಾನದ ನೀರಿನಲ್ಲಿ ವಿನಿಗರ್‌ ಬೆರಸಿದರೆ ಮೃದು ಮತ್ತು ಸ್ವಚ್ಛವಾದ ತ್ವಚೆ ನಿಮ್ಮದಾಗುತ್ತದೆ, ಅಲ್ಲದೆ, ದೇಹದಲ್ಲಿ ಧೂಳು, ದುರ್ಗಂಧ ಹಾಗೂ ವಿಷವನ್ನು ಹೊರಹಾಕುತ್ತದೆ. ಒಮ್ಮೆ ದೇಹದಿಂದ ಜೀವಾಣು ಬಿಡುಗಡೆಯಾದಾಗ, ನೀವು ತಾಜಾ ಮತ್ತು ಆರಾಮವಾಗಿರುತ್ತೀರಿ. ನಿರ್ವಿಶೀಕರಣದಿಂದ ನಮ್ಮ ಮನಸ್ಸು ಮತ್ತು ದೇಹವನ್ನು ಸಡಿಲಗೊಳಿಸುತ್ತದೆ.

2 ಚರ್ಮ ಮತ್ತು ಕೂದಲಿನ ಸಮಸ್ಯೆಗೆ ರಾಮಬಾಣ

2 ಚರ್ಮ ಮತ್ತು ಕೂದಲಿನ ಸಮಸ್ಯೆಗೆ ರಾಮಬಾಣ

ವಿನಿಗರ್ ಸ್ನಾನ ನಮ್ಮ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸಲು ಉತ್ತಮ ಮಾರ್ಗವಾಗಿದೆ. ಅಂದರೆ ಒಣ ಚರ್ಮ, ಫ್ಲಾಕಿ ಸ್ಕಿನ್ ನಿವಾರಿಸುತ್ತದೆ. ಅಷ್ಟೇ ಅಲ್ಲದೆ ಕೂದಲ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಡ್ಯಾಂಡ್ರಫ್ ನಿಂದ ಬಳಲುತ್ತಿದ್ದರೆ ಇಂದೇ ತಪ್ಪದೇ ವಿನಿಗರ್ ಬಾತ್ ಮಾಡಿ.

3 ದೇಹದ ವಾಸನೆಯನ್ನು ಕಡಿಮೆ ಮಾಡುವುದು

3 ದೇಹದ ವಾಸನೆಯನ್ನು ಕಡಿಮೆ ಮಾಡುವುದು

ದೇಹದ ದುರ್ಗಂಧವನ್ನು ಹೊರಹಾಕಲು ನಾವು ಹಲವು ವಿಧದ ಡಿಯೋಡರೆಂಟ್‌ಗಳು, ಬಾಡಿ ಸ್ಪ್ಲಾಶ್, ಸುಗಂಧ ದ್ರವ್ಯಗಳು, ರೋಲ್ ಆನ್‌ಗಳನ್ನು ಬಳಸುತ್ತೇವೆ. ಆದರೆ ಇದರ ಪರಿಣಾಮವು ತಾತ್ಕಾಲಿಕವಾಗಿರುತ್ತದೆ. ಆದರೆ ವಿನಿಗರ್ ಸ್ನಾನವು ಈ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ದೇಹದ ವಾಸನೆಯು ದೇಹದ ಬೆವರಿನೊಂದಿಗೆ ಬೆರೆಯುವ ಬ್ಯಾಕ್ಟೀರಿಯಾದ ಶೇಖರಣೆಯಿಂದ ಉಂಟಾಗುತ್ತದೆ. ವಿನಿಗರ್ ಸ್ನಾನವು ಆ ಬ್ಯಾಕ್ಟೀರಿಯಾವನ್ನು ಕೊಲ್ಲುವುದಲ್ಲದೆ ಅವುಗಳನ್ನು ತಡೆಯುತ್ತದೆ.

4 ಪೋಷಿಸುವ ಚರ್ಮ ಮತ್ತು ಕೂದಲು

4 ಪೋಷಿಸುವ ಚರ್ಮ ಮತ್ತು ಕೂದಲು

ಆಪಲ್ ಸೈಡರ್ ವಿನಿಗರ್ ವಿವಿಧ ಚರ್ಮ ಸ್ನೇಹಿ ಜೀವಸತ್ವಗಳು ಮತ್ತು ಖನಿಜಗಳ ಶಕ್ತಿಕೇಂದ್ರವಾಗಿದೆ. ನೀವು ವಿನಿಗರ್ ಬೆರೆಸಿದ ನೀರಿನಲ್ಲಿ ನಿಮ್ಮನ್ನು ನೆನೆಸಿಕೊಂಡಾಗ, ಇದರಲ್ಲಿರುವ ವಿಟಮಿನ್ ಮತ್ತು ಖನಿಜಗಳನ್ನು ಹೀರಿಕೊಳ್ಳಲು ಚರ್ಮಕ್ಕೆ ಸಹಾಯ ಮಾಡುತ್ತದೆ. ಪರಿಣಾಮವಾಗಿ, ನೀವು ಹೊಳೆಯುವ ಚರ್ಮ ಮತ್ತು ಮೃದುವಾದ, ಆರೋಗ್ಯಕರ ಕೂದಲನ್ನು ಪಡೆಯಬಹುದು.

5 ಮೊಡವೆಗಳನ್ನು ಗುಣಪಡಿಸುತ್ತದೆ

5 ಮೊಡವೆಗಳನ್ನು ಗುಣಪಡಿಸುತ್ತದೆ

ಮೊಡವೆಗಳು ಎಲ್ಲರಿಗೂ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ಇದಕ್ಕಾಗಿ ಅನೇಕ ಮನೆಮದ್ದುಗಳು, ಕಾಸ್ಮೆಟಿಕ್ ಪರಿಹಾರಗಳು, ಔಷಧಿಗಳನ್ನು ಪ್ರಯತ್ನಿಸಿರುತ್ತೇವೆ. ಯಾವುದು ಉತ್ತಮ ಪರಿಹಾರ ನೀಡಿರುವುದಿಲ್ಲ, ಅದಕ್ಕೆ ಇಂದೇ ವಿನಿಗರ್ ಸ್ನಾನವನ್ನು ಪ್ರಯತ್ನಿಸಿ. ವಿನಿಗರ್ ಆಮ್ಲೀಯವಾಗಿದೆ ಹೀಗಾಗಿ ಇದು ಚರ್ಮದ ಅಧಿಕ ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತದೆ ಮತ್ತು ಚರ್ಮದ ಪಿಎಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ತೊಂದರೆಗೊಳಗಾದ ಚರ್ಮವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

English summary

Beauty Benefits Of Taking Vinegar Bath for Skin and Hair in Kannada

Here we are discussing about Beauty Benefits Of Taking Vinegar Bath for Skin and Hair in Kannada. Read more.
Story first published: Tuesday, October 12, 2021, 15:38 [IST]
X
Desktop Bottom Promotion