For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿ ಎಣ್ಣೆಗಿದೆ ಸರ್ವ ಸೌಂದರ್ಯ ಸಮಸ್ಯೆ ನಿವಾರಿಸುವ ಶಕ್ತಿ!

|

ಸಾಮಾನ್ಯವಾಗಿ ನವರಾತ್ರಿ ಸಮಯದಲ್ಲಿ ಬೆಳ್ಳುಳ್ಳಿ ಬಳಸಬಾರದೆಂಬ ನಿಯಮವಿದೆ. ಹಾಗಂತ ಇದನ್ನು ನಿಮ್ಮನ್ನು ಸೌಂದರ್ಯದ ವೃದ್ಧಿಗೆ ಬಳಕೆಮಾಡಬಾರದೆಂಬ ನಿಯಮವಿಲ್ಲ. ಅರೇ, ಇದೇನಪ್ಪ ಹೇಳ್ತಿದ್ದಾರೆ ಅಂತ ಯೋಚಿಸ್ತಿದ್ದೀರಾ? ಈ ಸ್ಟೋರಿ ಓದಿ..

ನವರಾತ್ರಿಯಲ್ಲಿ ಬಳಕೆ ನಿಷಿದ್ಧವಿರುವ ಬೆಳ್ಳುಳ್ಳಿಯ ಎಣ್ಣೆ ನಿಮ್ಮ ಸೌಂದರ್ಯದ ಮುಖ್ಯ ಭಾಗವಾದ ಕೂದಲು ಹಾಗೂ ತ್ವಚೆಗೆ ಬಹಳ ಉಪಕಾರಿ. ಅದು ಕೂದಲುದುರುವಿಕೆಯಿಂದ ಹಿಡಿದು, ಮೊಡವೆ ಸಮಸ್ಯೆಗಳನ್ನು ನಿವಾರಿಸುವವರೆಗೆ ಸಾಕಷ್ಟು ಪ್ರಯೋಜನ ಹೊಂದಿದೆ. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಬೆಳ್ಳುಳ್ಳಿ ಎಣ್ಣೆ ಕೂದಲು ಹಾಗೂ ಚರ್ಮದ ಸಮಸ್ಯೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಚರ್ಮ ಸಮಸ್ಯೆಗಳಿಗೆ ಪರಿಹಾರ:

ಚರ್ಮ ಸಮಸ್ಯೆಗಳಿಗೆ ಪರಿಹಾರ:

ನೀವು ಸಾರ್ವಕಾಲಿಕ ಚರ್ಮದ ಸಮಸ್ಯೆಗಳಿಗೆ ಒಳಗಾಗಿದ್ದರೆ, ಬೆಳ್ಳುಳ್ಳಿ ಎಣ್ಣೆ ನಿಮಗೆ ಸಹಾಯ ಮಾಡಲಿದೆ. ಜರ್ನಲ್ ಆಫ್ ನ್ಯೂಟ್ರಿಷನ್ ನಡೆಸಿದ ಅಧ್ಯಯನದ ಪ್ರಕಾರ , ಬೆಳ್ಳುಳ್ಳಿ ಅತ್ಯಂತ ತೀವ್ರವಾದ ಸೋಂಕುಗಳಿಗೆ ಚಿಕಿತ್ಸೆ ನೀಡಬಲ್ಲ ಶಿಲೀಂಧ್ರ-ವಿರೋಧಿ ಗುಣಗಳನ್ನು ಹೊಂದಿದೆ. ಸ್ವಲ್ಪ ಬೆಚ್ಚಗಿನ ಬೆಳ್ಳುಳ್ಳಿ ಎಣ್ಣೆಯನ್ನು ಪೀಡಿತ ಪ್ರದೇಶಗಳಲ್ಲಿ, ದಿನಕ್ಕೆ ಒಮ್ಮೆ ಬಳಸಿ. ನೀವು ದೊಡ್ಡ ವ್ಯತ್ಯಾಸವನ್ನು ಗಮನಿಸಬಹುದು.

ಮೊಡವೆಗಳ ವಿರುದ್ಧ ಹೋರಾಡುವುದು:

ಮೊಡವೆಗಳ ವಿರುದ್ಧ ಹೋರಾಡುವುದು:

ಮೊಡವೆಗಳು ತುಂಬಾ ದೊಡ್ಡ ನೋವನ್ನು ಉಂಟುಮಾಡಬಹುದು, ಆದರೆ ನಿಮಗೆ ಸಹಾಯ ಮಾಡಲು ಬೆಳ್ಳುಳ್ಳಿ ಎಣ್ಣೆ ಇರುವಾಗ ತಲೆಕೆಡಿಸಿಕೊಳ್ಳಬೇಡಿ. ಇದು ಅಗತ್ಯವಾದ ಪೋಷಕಾಂಶಗಳಿಂದ ತುಂಬಿದ್ದು, ಸೆಲೆನಿಯಮ್, ಅಲ್ಲಿಸಿನ್, ವಿಟಮಿನ್ ಸಿ ಮತ್ತು ಬಿ 6, ತಾಮ್ರ ಮತ್ತು ಸತುವನ್ನು ಹೊಂದಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ಉರಿಯೂತವನ್ನು ನಿಯಂತ್ರಿಸುವುದರಿಂದ ಮೊಡವೆಗಳನ್ನು ಕಡಿಮೆ ಆಗುವುದು. ಇದಕ್ಕಾಗಿ ನೀವು ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್‌ಗೆ ಕೆಲವು ಹನಿಗಳನ್ನು ಸೇರಿಸಬಹುದು

ಕೂದಲು ಉದುರುವಿಕೆ ತಡೆಯುವುದು:

ಕೂದಲು ಉದುರುವಿಕೆ ತಡೆಯುವುದು:

ನೀವು ಉದ್ದವಾದ ಮತ್ತು ಬಲವಾದ ಕೇಶರಾಶಿ ಬಯಸಿದರೆ, ಬೆಳ್ಳುಳ್ಳಿ ಎಣ್ಣೆ ಉತ್ತಮ ಆಯ್ಕೆಯಾಗಬಹುದು. ಏಕೆಂದರೆ ಇದರಲ್ಲಿ ಸಲ್ಫರ್, ವಿಟಮಿನ್ ಇ ಮತ್ತು ಸಿ ಇದ್ದು ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಉದುರುವುದನ್ನು ತಡೆಯುತ್ತದೆ. ಅದಕ್ಕಿಂತ ಹೆಚ್ಚಾಗಿ, ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಆದ್ದರಿಂದ, ಬೆಳ್ಳುಳ್ಳಿ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ನೆತ್ತಿಗೆ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೆಯೇ ಬಿಡಿ ಮತ್ತು ಉತ್ತಮ ಶಾಂಪೂ ಬಳಸಿ ತೊಳೆಯಿರಿ.

ತಲೆಹೊಟ್ಟು ನಿವಾರಿಸುವುದು:

ತಲೆಹೊಟ್ಟು ನಿವಾರಿಸುವುದು:

ತಲೆಹೊಟ್ಟು ಸಾಮಾನ್ಯವಾಗಿ ಬ್ಯಾಕ್ಟೀರಿಯಾದ ಸೋಂಕು ಅಥವಾ ನೆತ್ತಿಯ ಉರಿಯೂತದಿಂದ ಉಂಟಾಗುವ ಸಾಮಾನ್ಯ ಸಮಸ್ಯೆಯಾಗಿದೆ. ನೀವು ಬೆಳ್ಳುಳ್ಳಿ ಎಣ್ಣೆಯನ್ನು ಬಳಸಿದಾಗ, ಆ ಎರಡೂ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ನಿಮ್ಮ ಕೂದಲಿಗೆ ಎಣ್ಣೆ ಹಚ್ಚಲು ಯೋಚಿಸಿದಾಗ, ಬೆಳ್ಳುಳ್ಳಿ ಎಣ್ಣೆಯನ್ನು ಬಳಸಿ.

ಮನೆಯಲ್ಲಿ ಬೆಳ್ಳುಳ್ಳಿ ಎಣ್ಣೆಯನ್ನು ಹೇಗೆ ತಯಾರಿಸುವುದು?:

ಮನೆಯಲ್ಲಿ ಬೆಳ್ಳುಳ್ಳಿ ಎಣ್ಣೆಯನ್ನು ಹೇಗೆ ತಯಾರಿಸುವುದು?:

ಕೆಲವು ಬೆಳ್ಳುಳ್ಳಿ ಎಸಳನ್ನು ಜಜ್ಜಿಮಾಡಿ, ಅದನ್ನು ಕೆಲವು ಹನಿ ಆಲಿವ್ ಎಣ್ಣೆಯೊಂದಿಗೆ ಹುರಿಯಿರಿ. 5-8 ನಿಮಿಷಗಳ ಕಾಲ ಚೆನ್ನಾಗಿ ಕಾಯಲು ಬಿಡಿ. ಮುಂದೆ, ಸ್ಟವ್ ಆಫ್ ಮಾಡಿ. ಮಿಶ್ರಣವನ್ನು ಗಾಳಿಯಾಡದ ಜಾರ್ನಲ್ಲಿ ಹಾಕಿಡಿ, ಅವಶ್ಯವಿದ್ದಾಗ ಬಳಸಿ.

English summary

Beauty Benefits of Garlic Oil for Skin and Hair in Kannada

Here we talking about Beauty benefits of garlic oil for skin and hair in kannada, read on
Story first published: Tuesday, October 12, 2021, 18:10 [IST]
X
Desktop Bottom Promotion