For Quick Alerts
ALLOW NOTIFICATIONS  
For Daily Alerts

ಅಡುಗೆಗೆ ಬಳಸುವ ಕಾರ್ನ್ ಫ್ಲೋರ್ ನ್ನು ಸೌಂದರ್ಯ ಸಮಸ್ಯೆಗೂ ಬಳಸಬಹುದು, ಹೇಗೆ ಎಂಬುದು ಇಲ್ಲಿದೆ..

|

ನಮ್ಮ ದೈನಂದಿನ ಅಡುಗೆಯಲ್ಲಿ ಕೆಲವೊಮ್ಮೆ ಗ್ರೇವಿಯನ್ನು ದಪ್ಪವಾಗಿಸಲು ಅಥವಾ ಚೈನೀಸ್ ಆಹಾರ ತಯಾರಿಸುವಾಗ ಕಾರ್ನ್ ಫ್ಲೋರ್ (ಜೋಳದ ಹಿಟ್ಟು) ಬಳಸುವುದುಂಟು. ಈಗ ಮಳೆಗಾಲವಾಗಿರುವುದರಿಂದ ಪಕೋಡ ಎಲ್ಲರ ಫೇವರೆಟ್, ಈ ಪಕೋಡ ಗರಿಗರಿಯಾಗಿ ಬರಲೆಂದು ಕಾರ್ನ್ ಫ್ಲೋರ್ ಸ್ವಲ್ಪ ಬಳಕೆ ಮಾಡುತ್ತಾರೆ. ಇಂತಹ ಅಡುಗೆ ಸಾಮಾಗ್ರಿಯೊಂದು ಅನೇಕ ಸೌಂದರ್ಯ ಪ್ರಯೋಜನಗಳನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ, ಬನ್ನಿ ಸೌಂದರ್ಯ ಸಮಸ್ಯೆಗಳಿಗೆ ಕಾರ್ನ್ ಫ್ಲೋರ್ ಬಳಸುವುದು ಹೇಗೆ ಎಂಬುದನ್ನು ನೋಡಿಕೊಂಡು ಬರೋಣ.

ನೀವು ಮನೆಯಲ್ಲಿ ಅಡುಗೆಗೆ ಬಳಸುವ ಕಾರ್ನ್ ಫ್ಲೋರ್ ನ್ನು ಸೌಂದರ್ಯ ಸಮಸ್ಯೆಗೆ ಬಳಸುವ ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ:

ಕೂದಲಿನ ಜಿಗುಟುತನಕ್ಕಾಗಿ:

ಕೂದಲಿನ ಜಿಗುಟುತನಕ್ಕಾಗಿ:

ಕೂದಲಿನ ಜಿಗುಟುತನವನ್ನು ಕಡಿಮೆ ಮಾಡಲು ಅಗ್ಗದ ಮತ್ತು ನೈಸರ್ಗಿಕ ವಿಧಾನವೆಂದರೆ ಈ ಕಾರ್ನ್ ಫ್ಲೋರ್. ನಿಮ್ಮ ಕೂದಲಿನ ಬೇರುಗಳು ಮತ್ತು ಬಾಚಣಿಗೆಗೆ ಸ್ವಲ್ಪ ಕಾರ್ನ್ ಫ್ಲೋರ್ ಅನ್ನು ಉದುರಿಸಿ. ಕಾರ್ನ್ ಪಿಷ್ಟವು ಕೂದಲಿನಿಂದ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಇದರಿಂದ ಜಿಗುಟುತನ ದೂರವಾಗಿ ನಿಮ್ಮ ಕೂದಲು ದಪ್ಪವಾಗಿರುತ್ತದೆ.

ಲಿಪ್ ಸ್ಟಿಕ್‌ಗೆ ಮ್ಯಾಟ್ ಫಿನಿಶ್ ನೀಡಲು:

ಲಿಪ್ ಸ್ಟಿಕ್‌ಗೆ ಮ್ಯಾಟ್ ಫಿನಿಶ್ ನೀಡಲು:

ನೀವು ಮ್ಯಾಟ್ ಫಿನಿಶ್ ಲಿಪ್ ಸ್ಟಿಕ್ ನ್ನು ಇಷ್ಟಪಡುತ್ತಿದ್ದರೆ, ಈ ಕಾರ್ನ್ ಫ್ಲೋರ್ ನಿಂದ ಮ್ಯಾಟ್ ಫಿನಿಶ್ ನೀಡಬಹುದು. ಲಿಪ್ಸ್ಟಿಕ್ ಅನ್ನು ಹಚ್ಚುವ ಮೊದಲು ನಿಮ್ಮ ತುಟಿಗಳಿಗೆ ಸ್ವಲ್ಪ ಕಾರ್ನ್ ಫ್ಲೋರ್ ವನ್ನು ಹಚ್ಚಿಕೊಳ್ಳಿ, ನಂತರ ಅದರ ಮೇಲೆ ನಿಮ್ಮ ಲಿಪ್ ಸ್ಟಿಕ್ ನ್ನು ಹಚ್ಚಿಕೊಳ್ಳಿ. ನೀವು ಕಾರ್ನ್ ಫ್ಲೋರ್ ಮತ್ತು ಲಿಪ್ಸ್ಟಿಕ್ ಮಿಶ್ರಣವನ್ನು ಲಿಪ್ ಬ್ರಷ್ನೊಂದಿಗೆ ಹಚ್ಚಿಕೊಳ್ಳಬಹುದು.

ಬಿಸಿಲಿನಿಂದಾದ ಟ್ಯಾನ್ ನಿವಾರಣೆಗೆ:

ಬಿಸಿಲಿನಿಂದಾದ ಟ್ಯಾನ್ ನಿವಾರಣೆಗೆ:

ಬಿಸಿಲಿನಿಂದ ಆದ ತ್ವಚೆಯ ಟ್ಯಾನ್ ನ್ನು ಗುಣಪಡಿಸುವ ಲಕ್ಷಣವನ್ನು ಕಾರ್ನ್ ಫ್ಲೋರ್ ಹೊಂದಿದೆ. ಇದಕ್ಕಾಗಿ ಕಾರ್ನ್ ಫ್ಲೋರ್ ನ್ನು ನೀರಿನೊಂದಿಗೆ ಬೆರೆಸಿ ಮತ್ತು ಬಿಸಿಲಿನಿಂದ ಸುಟ್ಟ ತ್ವಚೆಯ ಮೇಲೆ ಹಚ್ಚಿ, 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನೀವು ಕಡಿಮೆ ಸಮಯದಲ್ಲಿ ಫಲಿತಾಂಶವನ್ನು ಪಡೆಯುತ್ತೀರಿ.

ಅತೀ ಬೆವರುವಿಕೆಗೆ:

ಅತೀ ಬೆವರುವಿಕೆಗೆ:

ಬೆವರುವ ಪಾದಗಳು, ಕೈಗಳು ಮತ್ತು ಅಂಡರ್‌ಆರ್ಮ್‌ಗಳಿಂದ ಹೆಚ್ಚುವರಿ ಬೆವರನ್ನು ಹೀರಿಕೊಳ್ಳಲು ನೀವು ಕಾರ್ನ್ ಫ್ಲೋರ್ ವನ್ನು ಸಹ ಬಳಸಬಹುದು. ನಿಮ್ಮ ಕೈಕಾಲು ಮತ್ತು ಕೈಯಡಿಗೆ ಸ್ವಲ್ಪ ಕಾರ್ನ್ ಫ್ಲೋರ್ ನ್ನು ಹಚ್ಚಿ. ಇದರಿಂದ ನಿಮ್ಮ ಅತೀ ಬೆವರುವಿಕೆ ಸಮಸ್ಯೆ ನಿವಾರಣೆಯಾಗುವುದು.

ನೈಲ್ ಪಾಲಿಶ್ ಗೆ ಮ್ಯಾಟ್ ಫಿನಿಶ್ ನೀಡಲು:

ನೈಲ್ ಪಾಲಿಶ್ ಗೆ ಮ್ಯಾಟ್ ಫಿನಿಶ್ ನೀಡಲು:

ಉಗುರು ಬಣ್ಣಕ್ಕೆ ಮ್ಯಾಟ್ ಫಿನಿಶ್ ನೀಡಲು ಸುಲಭವಾದ ಮಾರ್ಗವೆಂದರೆ ಕಾರ್ನ್ ಫ್ಲೋರ್ ನ್ನು ಬಳಸುವುದು. ನಿಮ್ಮ ನೆಚ್ಚಿನ ಉಗುರು ಬಣ್ಣವನ್ನು ಕಾರ್ನ್ ಫ್ಲೋರ್ ನೊಂದಿಗೆ ಬೆರೆಸಿ ಮತ್ತು ನಿಮ್ಮ ಉಗುರುಗಳ ಮೇಲೆ ಹಚ್ಚಿ. ಇದರಿಂದ ನಿಗೆ ಉತ್ತಮವಾದ ಫಿನಿಶಿಂಗ್ ಲುಕ್ ಸಿಗುವುದು.

ಫೇಸ್ ಲಿಫ್ಟಿಂಗ್ ಮಾಸ್ಕ:

ಫೇಸ್ ಲಿಫ್ಟಿಂಗ್ ಮಾಸ್ಕ:

ಜೋಳದ ಪಿಷ್ಟದ ಸಹಾಯದಿಂದ ನಿಮ್ಮ ಚರ್ಮ ಸಡಿಲಗೊಳ್ಳದಂತೆ ತಡೆಯಬಹುದು. ವಯಸ್ಸಾದಂತೆ ನಿಮ್ಮ ಚರ್ಮ ಸ್ಥಿರತೆ ಕಳೆದುಕೊಂಡು, ಜೋತು ಬೀಳಲು ಕಾರಣವಾಗಬಹುದು. ಆದರೆ ಈ ಮಾಸ್ಕ್ ಬಳಸುವುದರಿಂದ ನಿಮ್ಮ ಚರ್ಮ ಬಿಗಿಯಾಗುವುದಲ್ಲದೇ, ಕಲ್ಮಶಗಳನ್ನು ತೆಗೆದು, ತೇವಾಂಶದಿಂದ ಕೂಡಿರುವಂತೆ ಮಾಡುವುದು. ಇದಕ್ಕಾಗಿ ಮೊಟ್ಟೆಯ ಬಿಳಿಭಾಗವನ್ನು ಕಾರ್ನ್ ಫ್ಲೋರ್ ನೊಗೆ ಬೆರೆಸಿ ಮುಖಕ್ಕೆ ಹಚ್ಚಿ, 20 ನಿಮಿಷಗಳ ನಂತರ ಮುಖವನ್ನು ತೊಳೆದು ಉತ್ತಮ ಮಾಯಿಶ್ಚರೈಸರ್ ಹಚ್ಚಿ. ಉತ್ತಮ ಫಲಿತಾಂಶಕ್ಕಾಗಿ ವಾರಕ್ಕೆ ಮೂರು ಬಾರಿಯಾದರೂ ಇದನ್ನು ಹಚ್ಚಿ.

ಗಮನಿಸಿ: ಕಾರ್ನ್ ಫ್ಲೋರ್ ಮತ್ತು ಕಾರ್ನ್ ಸ್ಟ್ರಾಚ್ ಗಳನ್ನು ದೈನಂದಿನ ಜೀವನದಲ್ಲಿ ಬಳಕೆ ಮಾಡುತ್ತೇವೆ. ಮೇಲೆ ಹೇಳಿರುವುದು, ಹೆಚ್ಚಾಗಿ ಗ್ರೇವಿ ದಪ್ಪವಾಗಿಸಲು ಬಳಸುವ ಬಿಳಿ ಬಣ್ಣದ ಕಾರ್ನ್ ಫ್ಲೋರ್ ಬಗ್ಗೆ. ಹೆಚ್ಚಿನ ಕಡೆ ಈ ಎರಡು ಪದಾರ್ಥಗಳ ಬಗ್ಗೆ ಗೊಂದಲಗಳಿವೆ.

English summary

Beauty Benefits of Corn Flour for Skin and Hair in Kannada

Here we talking about Beauty Benefits of Corn Flour for Skin and Hair in Kannada, read on
Story first published: Thursday, July 15, 2021, 13:40 [IST]
X
Desktop Bottom Promotion