For Quick Alerts
ALLOW NOTIFICATIONS  
For Daily Alerts

ಸುಕ್ಕು ನಿವಾರಿಸುವ ಕೋಕೋ ಪುಡಿಯ ಸೌಂದರ್ಯ ರಹಸ್ಯ ನೀವು ತಿಳಿಯಲೇಬೇಕು

|

ಸೌಂದರ್ಯಪ್ರಜ್ಞೆ ಎಂಬ ವಿಚಾರ ಬಂದಾಗ ಪ್ರತಿಯೊಬ್ಬರೂ ಸಹ ಜಾಗೃತರಾಗಿ ಬಿಡುತ್ತಾರೆ. ಏಕೆಂದರೆ ನೋಡಲು ಅಂದವಾಗಿ ಕಾಣುವುದು ಎಲ್ಲರ ಆಸೆ ಮತ್ತು ಹಕ್ಕು. ತಮ್ಮ ಯೌವನವನ್ನು ದೀರ್ಘ ಕಾಲ ಕಾಪಾಡಿಕೊಳ್ಳಬೇಕು ಎನ್ನುವ ಬಯಕೆ ಎಲ್ಲರ ಮನಸ್ಸಿನಲ್ಲೂ ಇರುತ್ತದೆ. ಅದರಂತೆ ಸೌಂದರ್ಯ ತಜ್ಞರ ಸಲಹೆ ಪಡೆದುಕೊಂಡು ತಮ್ಮ ಅಂದವನ್ನು ಹೆಚ್ಚು ಮಾಡಿಕೊಳ್ಳುವಲ್ಲಿ ನಿರಂತರ ಶ್ರಮ ವಹಿಸಿ ಜನರು ತಮಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಬಹುದು.

ಜನರ ಸೌಂದರ್ಯವನ್ನು ನಿರ್ವಹಣೆ ಮಾಡುವ ಸಲುವಾಗಿ ಇಂದು ಬೀದಿ ಬೀದಿಗಳಲ್ಲಿ ಬ್ಯೂಟಿ ಪಾರ್ಲರ್ ಗಳು ತಲೆಯೆತ್ತಿ ನಿಂತಿವೆ. ಕೇವಲ ಯಾವುದಾದರೂ ಪಾರ್ಟಿ, ಮದುವೆ ಸಂದರ್ಭ ಇತ್ಯಾದಿಗಳಿಗೆ ಮಾತ್ರ ನಾವು ನೋಡಲು ಚೆನ್ನಾಗಿ ಕಾಣಬೇಕು ಎಂದು ಜನರು ಅಂದುಕೊಳ್ಳುವುದಿಲ್ಲ. ಬದಲಿಗೆ ನಾವು ಎಲ್ಲಾ ಸಂದರ್ಭದಲ್ಲೂ ಇದೇ ರೀತಿ ಅಂದವಾಗಿರಬೇಕು ಎಂಬ ಕಾತುರತೆ ಜನರ ಮನಸ್ಸಿನಲ್ಲಿ ಯಾವಾಗಲೋ ಬಂದು ಆಗಿದೆ. ಹಾಗಾಗಿ ವಾರಕ್ಕೆ ಒಮ್ಮೆಯಾದರೂ ಬ್ಯೂಟಿ ಪಾರ್ಲರ್ ಬಾಗಿಲು ತಟ್ಟದೆ ಇರಲು ಆಗುವುದಿಲ್ಲ. ಆದರೆ ಒಂದು ಅಚ್ಚರಿಯ ವಿಷಯವೆಂದರೆ ಬ್ಯೂಟಿ ಪಾರ್ಲರ್ ಪ್ರಯೋಜನಗಳು ಪ್ರತಿಯೊಬ್ಬರಿಗೂ ಸಿಗುವುದಿಲ್ಲ. ಕೆಲವರಿಗೆ ಅಲ್ಲಿಗೆ ಹೋಗಲು ಇಷ್ಟವಿರುವುದಿಲ್ಲ ಅಥವಾ ಆಗುವುದಿಲ್ಲ. ಇನ್ನು ಕೆಲವರಿಗೆ ಅಲ್ಲಿ ಬಳಕೆ ಮಾಡುವ ರಾಸಾಯನಿಕಗಳ ಕಾರಣದಿಂದ ಚರ್ಮದ ಅಡ್ಡ - ಪರಿಣಾಮಗಳು ಉಂಟಾಗುತ್ತವೆ.

ಇದಕ್ಕೆಲ್ಲ ಒಂದು ಸುಲಭ ಪರಿಹಾರ ಎಂದರೆ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಾವೇ ಏನಾದರೂ ದಾರಿ ಹುಡುಕಿಕೊಳ್ಳುವುದು. ನಿಸರ್ಗದತ್ತವಾದ ನೈಸರ್ಗಿಕ ಉತ್ಪನ್ನಗಳನ್ನು ಬಳಸಿದರೆ ಸ್ವಲ್ಪ ತಡವಾದರೂ ಸರಿ ತ್ವಚೆಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಇಂತಹ ಒಂದು ಅನುಕೂಲಕಾರಿ ನೈಸರ್ಗಿಕ ಉತ್ಪನ್ನ ಎಂದರೆ ಅದು ಕೋಕೋ ಪೌಡರ್. ಹಲವು ವಿಧಗಳಲ್ಲಿ ಕೋಕೋ ಪೌಡರ್ ಚರ್ಮಕ್ಕೆ ಆರೋಗ್ಯ ಪ್ರಯೋಜನಗಳನ್ನು ಮತ್ತು ಸೌಂದರ್ಯದ ಲಾಭಗಳನ್ನು ಒದಗಿಸಿಕೊಡುತ್ತದೆ. ಏಕೆಂದರೆ ಇದರಲ್ಲಿ ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಅಂಶಗಳು ಲಭ್ಯವಿದ್ದು ಚರ್ಮ ಹಾಗೂ ತಲೆ ಕೂದಲಿನ ಸಂರಕ್ಷಣೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಬನ್ನಿ ಈ ಲೇಖನದಲ್ಲಿ ಕೋಕೋ ಪೌಡರ್ ನ ಇಂತಹ ಹಲವಾರು ಸೌಂದರ್ಯದ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

1 ತ್ವಚೆಯ ಮೇಲಿನ ಸುಕ್ಕುಗಳನ್ನು ನಿವಾರಣೆ ಮಾಡುತ್ತದೆ

1 ತ್ವಚೆಯ ಮೇಲಿನ ಸುಕ್ಕುಗಳನ್ನು ನಿವಾರಣೆ ಮಾಡುತ್ತದೆ

ಮನುಷ್ಯನಿಗೆ ಒಂದು ವಯಸ್ಸಿನ ಹಂತದವರೆಗೆ ಯೌವನ ತುಂಬಿರುತ್ತದೆ. ನಂತರದಲ್ಲಿ ಚರ್ಮದ ಮೇಲೆ ಅಲ್ಲಲ್ಲಿ ಸಣ್ಣ ಸಣ್ಣ ಗೆರೆಗಳು ಮತ್ತು ಚರ್ಮದ ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ಇದನ್ನು ವಯಸ್ಸಾಗುವಿಕೆ ಪ್ರಕ್ರಿಯೆ ಎಂದು ಕರೆಯುತ್ತಾರೆ ಮತ್ತು ಇದು ನಿಸರ್ಗದತ್ತವಾಗಿರುತ್ತದೆ. ಪ್ರತಿಯೊಬ್ಬರಿಗೂ ಸಹ ನಾವು ಹೊರ ಜಗತ್ತಿಗೆ ನೋಡಲು ಚಿಕ್ಕ ವಯಸ್ಸಿನವರಂತೆ ಕಾಣಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಬೇಕಾದ ತಯಾರಿಯಲ್ಲಿ ಮಾಡಿಕೊಳ್ಳಲು ಸಹ ಜನ ಸಿದ್ಧರಾಗುತ್ತಾರೆ. ಇಂತಹದೊಂದು ಅನುಕೂಲತೆಯನ್ನು ಕೋಕೋ ಪೌಡರ್ ಒದಗಿಸಿ ಕೊಡುತ್ತದೆ ಎಂದರೆ ಆಶ್ಚರ್ಯ ಪಡುವ ಅವಶ್ಯಕತೆ ಇಲ್ಲ. ಹೌದು ಇದು ನಿಜ. ಕೋಕೋ ಪೌಡರ್ ನಲ್ಲಿ ಕೆಫಿನ್ ಅಂಶ ಮತ್ತು ಥಿಯೊ ಬ್ರೊಮೈನ್ ಅಂಶಗಳು ಹೇರಳವಾಗಿ ಕಂಡು ಬರುತ್ತವೆ. ಇವು ದೇಹದ ಜೀವ ಕೋಶಗಳಿಂದ ಕೆಟ್ಟ ಕೊಬ್ಬಿನ ಪ್ರಮಾಣವನ್ನು ತಗ್ಗಿಸಿ ಆರೋಗ್ಯಕರವಾದ ತ್ವಚೆಯನ್ನು ಹೊಂದಲು ಅನುಕೂಲ ಮಾಡಿಕೊಡುತ್ತವೆ. ಇದರಿಂದ ಚರ್ಮದ ಸದೃಢತೆ ಸ್ವಯಂ ರೂಪುಗೊಳ್ಳುತ್ತದೆ. ಮತ್ತೆ ಮೊದಲಿನಂತೆ ದೇಹದ ಚರ್ಮ ಯಾವುದೇ ಸುಕ್ಕುಗಳು ಇಲ್ಲದಂತೆ ಕಾಣಿಸತೊಡಗುತ್ತದೆ.

2 ಬಿಸಿಲಿನಿಂದ ರಕ್ಷಣೆ ಕೊಡುತ್ತದೆ

2 ಬಿಸಿಲಿನಿಂದ ರಕ್ಷಣೆ ಕೊಡುತ್ತದೆ

ಪ್ರತಿಯೊಬ್ಬರಿಗೂ ಒಂದೇ ಬಗೆಯ ಚರ್ಮದ ಪ್ರಕಾರ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಒಣ ಚರ್ಮ ಇದ್ದರೆ, ಇನ್ನು ಕೆಲವರಿಗೆ ಎಣ್ಣೆಯ ಪ್ರಕಾರದ ಚರ್ಮ ಇರುತ್ತದೆ. ಹಾಗೂ ಕೆಲವರಿಗೆ ಇವೆರಡರ ಮಿಶ್ರ ಪ್ರಕಾರದ ಚರ್ಮ ಇರುತ್ತದೆ. ಅತ್ಯಂತ ಸೂಕ್ಷ್ಮ ಪ್ರಕಾರದ ಚರ್ಮ ಹೊಂದಿರುವವರು ಮನೆಯಿಂದ ಹೊರ ಹೋಗುವಾಗ ವಿಪರೀತ ಬಿಸಿಲಿನಿಂದ ತಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಸನ್ ಸ್ಕ್ರೀನ್ ಅತ್ಯಗತ್ಯವಾಗಿ ಬಳಕೆ ಮಾಡಬೇಕಾಗಿ ಬರುತ್ತದೆ. ಏಕೆಂದರೆ ಇದು ಸಾಕಷ್ಟು ಪರಿಣಾಮಕಾರಿಯೂ ಹೌದು ಎಂದು ಹೇಳುತ್ತಾರೆ. ಕೋಕೋ ಪೌಡರ್ ಈ ವಿಷಯದಲ್ಲಿ ನಿಮಗೆ ನೆರವಿಗೆ ಬರುತ್ತದೆ. ಏಕೆಂದರೆ ಇದರಲ್ಲಿ ' ಪಾಲಿಫಿನಾಲ್ ' ಎಂಬ ಶಕ್ತಿಯುತವಾದ ಆಂಟಿ - ಆಕ್ಸಿಡೆಂಟ್ ಅಂಶಗಳು ಹೇರಳ ಪ್ರಮಾಣದಲ್ಲಿ ಕಂಡು ಬರುತ್ತವೆ. ಇವುಗಳು ಹಾನಿಕಾರಕ ಸೂರ್ಯನ ಅತಿ ನೇರಳೆ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಇದಕ್ಕಾಗಿ ನೀವು ಪ್ರತಿ ದಿನ ನಿಮ್ಮ ಆಹಾರ ಪದ್ಧತಿಯಲ್ಲಿ ಯಾವುದಾದರೂ ಒಂದು ರೂಪದಲ್ಲಿ ಕೋಕೋ ಪೌಡರ್ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಅಷ್ಟೇ. ನೀವು ಕುಡಿಯುವ ಕಾಫಿ ತಯಾರಿಯಲ್ಲಿ 1 ಟೇಬಲ್ ಚಮಚ ಕೋಕೋ ಪೌಡರ್ ಮಿಶ್ರಣ ಮಾಡಿ ಸೇವಿಸಬಹುದು. ನಿಮ್ಮ ತ್ವಚೆಗೆ ಇದೊಂದು ನೈಸರ್ಗಿಕ ಸನ್ ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಜೊತೆಗೆ ಅತಿಯಾದ ತಾಪಮಾನದಿಂದ ಉಂಟಾಗುವ ತ್ವಚೆಯ ಸಮಸ್ಯೆಗಳಿಗೆ ಹಾಗೂ ಮಾರಕ ಚರ್ಮದ ಕ್ಯಾನ್ಸರ್ ಸಮಸ್ಯೆಗೆ ಇದು ಪರಿಹಾರವಾಗಿ ಕೆಲಸ ಮಾಡಬಲ್ಲದು ಎಂದು ಸಂಶೋಧನೆಯ ಒಂದು ವರದಿಯ ಮೂಲ ಹೇಳುತ್ತದೆ.

3 ತ್ವಚೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ

3 ತ್ವಚೆಗೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ

ಸೌಂದರ್ಯ ಪ್ರಜ್ಞೆ ಇರುವ ಪ್ರತಿಯೊಬ್ಬರಿಗೂ ಸಹ ಕೋಕೋ ಪೌಡರ್ ಅನುಕೂಲಕರವಾಗಿ ಸಹಕಾರಿಯಾಗಿರುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ಒಣ ಚರ್ಮ ಹೊಂದಿದ ಜನರಿಗೆ ಕೋಕೋ ಪೌಡರ್ ಅತ್ಯದ್ಭುತ ಎಕ್ಸ್ಪೋಲೆಟರ್ ಆಗಿ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಒಳಗಿನಿಂದಲೇ ಇದು ಚರ್ಮವನ್ನು ತೇವವಾಗಿಸಿ ಚರ್ಮದ ಯಾವುದೇ ಭಾಗ ಅನಾರೋಗ್ಯಕ್ಕೆ ಗುರಿಯಾಗದಂತೆ ನೋಡಿಕೊಳ್ಳುತ್ತದೆ. ಇಂದಿಗೂ ಸಹ ಅನೇಕ ಬ್ಯೂಟಿ ಪಾರ್ಲರ್ ಗಳಲ್ಲಿ ಫೇಸ್ ಮಾಸ್ಕ್ ಹಾಗೂ ಫೇಸ್ ಪ್ಯಾಕ್ ಅನ್ವಯಿಸುವ ಸಂದರ್ಭದಲ್ಲಿ ನೈಸರ್ಗಿಕವಾದ ಕೋಕೋ ಪೌಡರ್ ಜನರ ಆಯ್ಕೆಯಲ್ಲಿರುತ್ತದೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

4 ಚರ್ಮದ ಹಾನಿಯನ್ನು ತಪ್ಪಿಸುತ್ತದೆ

4 ಚರ್ಮದ ಹಾನಿಯನ್ನು ತಪ್ಪಿಸುತ್ತದೆ

ತಮ್ಮ ತ್ವಚೆಗೆ ಯಾರು ಈಗಾಗಲೇ ಚಾಕ್ಲೇಟ್ ಮಾಸ್ಕ್ ಅನ್ವಯಿಸಿಕೊಂಡು ಲಾಭ ಪಡೆದಿರುತ್ತಾರೆ ಅವರಿಗೆ ಕೋಕೋ ಪೌಡರ್ ಸೌಂದರ್ಯ ಪ್ರಯೋಜನಗಳ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಅವರೇ ತಮ್ಮ ಸ್ವಂತ ಸಕಾರಾತ್ಮಕ ಅನುಭವದ ಮೂಲಕ ಇತರರಿಗೆ ತಿಳಿಸುತ್ತಾರೆ. ತ್ವಚೆಯ ಚೈತನ್ಯವನ್ನು ಹೆಚ್ಚು ಮಾಡಿಕೊಳ್ಳಲು ಕೋಕೋ ಪೌಡರ್ ಬಳಕೆಯಾಗುತ್ತದೆ. ಬಹಳಷ್ಟು ಕಡಿಮೆ ಸಮಯದಲ್ಲಿ ಚಮತ್ಕಾರಿ ಅನುಭವಗಳನ್ನು ಕೋಕೋ ಪೌಡರ್ ಕೊಡುತ್ತದೆ ಎಂದರೆ ಅದರ ಪರಿಣಾಮಕಾರಿ ಪ್ರಭಾವಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಶುದ್ಧವಾದ ನೈಸರ್ಗಿಕ ಕೋಕೋ ಪೌಡರ್ ನಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳು, ವಿಟಮಿನ್ ' ಸಿ ' ಅಂಶ, ಮೆಗ್ನೀಷಿಯಂ ಮತ್ತು ಒಮೆಗಾ - 6 ಫ್ಯಾಟಿ ಆಸಿಡ್ ಅಂಶಗಳ ಪ್ರಮಾಣ ತುಂಬಾ ಹೇರಳವಾಗಿ ಕಂಡು ಬರುತ್ತದೆ. ಚರ್ಮದ ರಕ್ಷಣೆಯಲ್ಲಿ ಎಲ್ಲಾ ಅಂಶಗಳು ಕೆಲಸ ಮಾಡುತ್ತವೆ. ದೇಹದಲ್ಲಿ ನಡೆಯುವ ಫ್ರೀ - ರಾಡಿಕಲ್ ಗಳ ಚಟುವಟಿಕೆಯನ್ನು ತಡೆ ಹಾಕಿ, ಬಿಸಿಯ ಪ್ರಭಾವದಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಿ ತ್ವಚೆಯ ಭಾಗದ ಪ್ರತಿಯೊಂದು ಜೀವ ಕೋಶಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಕೋಕೋ ಪೌಡರ್ ಮಾಡುತ್ತದೆ ಎಂದು ಹೇಳಬಹುದು.

5 ನಿಮ್ಮ ತ್ವಚೆಯನ್ನು ಪೌಷ್ಟೀಕರಿಸುತ್ತದೆ

5 ನಿಮ್ಮ ತ್ವಚೆಯನ್ನು ಪೌಷ್ಟೀಕರಿಸುತ್ತದೆ

ಮೊದಲೇ ಹೇಳಿದಂತೆ ಕೋಕೋ ಪೌಡರ್ ನಲ್ಲಿ ಆಂಟಿ - ಆಕ್ಸಿಡೆಂಟ್ ಅಂಶಗಳ ಪ್ರಮಾಣ ಸಾಕಷ್ಟು ಕಂಡು ಬರುತ್ತದೆ. ಎಂದಾದರೂ ನಿಮಗೆ ಗಾಯಗಳು ಉಂಟಾದ ಸಂದರ್ಭದಲ್ಲಿ ಕೋಕೋ ಪೌಡರ್ ಸಾಕಷ್ಟು ಅನುಕೂಲಕಾರಿಯಾಗಿ ಬಹಳ ಬೇಗನೆ ಗಾಯಗಳನ್ನು ವಾಸಿ ಮಾಡುವಲ್ಲಿ ಹಾಗೂ ನಿಮ್ಮ ಚರ್ಮ ಮತ್ತು ಮೊದಲಿನಂತೆ ಆಗುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕುತ್ತಿಗೆಯ ಭಾಗದಲ್ಲಿ ಕಂಡು ಬರುವ ಚರ್ಮದ ಸುಕ್ಕುಗಳಿಗೆ ಕೋಕೋ ಪೌಡರ್ ದೇಹದ ಒಳಗಿನಿಂದಲೇ ಕೆಲಸ ಮಾಡುವ ಮೂಲಕ ಅವುಗಳನ್ನು ಮಾಯ ಮಾಡುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುವ ಪ್ರಮೇಯ ತಪ್ಪುತ್ತದೆ.

6 ತಲೆ ಕೂದಲಿನ ಆರೋಗ್ಯದ ಬಗ್ಗೆ ಚಿಂತಿಸಬೇಕಿಲ್ಲ

6 ತಲೆ ಕೂದಲಿನ ಆರೋಗ್ಯದ ಬಗ್ಗೆ ಚಿಂತಿಸಬೇಕಿಲ್ಲ

ಕೇವಲ ಚರ್ಮದ ಭಾಗಕ್ಕೆ ಮಾತ್ರ ಕೋಕೋ ಪೌಡರ್ ಅನುಕೂಲಕಾರಿಯಾಗಿದೆ ಎಂದು ತಿಳಿದು ಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಇದು ತಲೆ ಕೂದಲಿನ ಸಂರಕ್ಷಣೆಯಲ್ಲಿ ಸಹ ಕೆಲಸ ಮಾಡುತ್ತದೆ. ತಲೆ ಕೂದಲಿನ ಬೇರುಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸಿ ನೈಸರ್ಗಿಕವಾಗಿ ತುಂಬಾ ಹೊಳಪಿನಿಂದ ಕೂಡಿರುವ ತಲೆ ಕೂದಲು ನಿಮ್ಮದಾಗುವಂತೆ ಮಾಡುತ್ತದೆ. ಬಹಳಷ್ಟು ಜನರಿಗೆ ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುವುದು, ತಲೆಯಲ್ಲಿ ಹೊಟ್ಟು, ತಲೆ ಕೂದಲು ಉದುರುವಿಕೆ, ಸೀಳು ಕೂದಲು ಇತ್ಯಾದಿಗಳ ಸಮಸ್ಯೆ ಸಾಕಷ್ಟಿರುತ್ತದೆ. ಇಂತಹ ಎಲ್ಲಾ ಸಮಸ್ಯೆಗಳಿಗೂ ಕೋಕೋ ಪೌಡರ್ ಉತ್ತರ ಕೊಡುತ್ತದೆ. ಪ್ರತಿ ದಿನ ನಿಯಮಿತವಾಗಿ ತಮ್ಮ ಆಹಾರ ಪದ್ಧತಿಯಲ್ಲಿ ಕೋಕೋ ಪೌಡರ್ ಅನ್ನು ಬಳಕೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು ಅಷ್ಟೇ.

ನೋಡಿದಿರಲ್ಲ !! ಇದುವರೆಗೂ ನಿಮಗೆ ಗೊತ್ತಿರದ ಕೋಕೋ ಪೌಡರ್ ಸೌಂದರ್ಯ ಉಪಯೋಗಗಳನ್ನು. ಹಾಗಾಗಿ ಯಾವುದೇ ಅಡ್ಡ - ಪರಿಣಾಮಗಳನ್ನು ತೋರಿಸದೆ ಇರುವ ಕೋಕೋ ಪೌಡರ್ ಅನ್ನು ಇನ್ನು ಮುಂದೆ ನೀವು ಸಹ ಬಳಕೆ ಮಾಡಿ ಇದರಿಂದ ಪ್ರಯೋಜನ ಪಡೆದುಕೊಂಡು ಇತರರಿಗೂ ಸಹ ತಿಳಿಸಿ ಹೇಳಿ.

English summary

Beauty Benefits of Cocoa Powder on skin and hair in kannada

Here we are discussing about Beauty Benefits of Cocoa Powder on skin and hair in kannada. make a cocoa powder face mask to repair your skin cells and rejuvenate your face! Read more.
X