For Quick Alerts
ALLOW NOTIFICATIONS  
For Daily Alerts

ನೀಳ ಕೇಶ, ಹೊಳೆಯುವ ತ್ವಚೆಗೆ ಆಲದ ಮರದ ಎಲೆಯನ್ನೊಮ್ಮೆ ಬಳಸಿ ನೋಡಿ

|

ಹಿಂದೂ ಸಂಪ್ರದಾಯದಲ್ಲಿ ಆಲದ ವೃಕ್ಷಕ್ಕೆ ಮಹತ್ತರವಾದ ಸ್ಥಾನವಿದೆ. ಆಲದ ವೃಕ್ಷವನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸಲಾಗುತ್ತದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಆಲದ ವೃಕ್ಷವು ನಮ್ಮ ರಾಷ್ಟ್ರೀಯ ವೃಕ್ಷ ಕೂಡ ಹೌದು. ನಿಮ್ಮ ಮನೆಯ ಬಳಿ ಯಾವುದಾದರೂ ದೊಡ್ಡ ಆಲದ ಮರವಿದ್ದರೆ ಅವುಗಳ ರೆಂಬೆಗಳಲ್ಲಿ ಜೋಕಾಲಿ ಆಡಿದ ಬಾಲ್ಯದ ನೆನಪು ಖಂಡಿತ ಕಾಡದೇ ಇರುವುದಿಲ್ಲ.

ತನ್ನ ದೊಡ್ಡ ದೊಡ್ಡ ರೆಂಬೆಗಳ ಮೂಲಕ ಜಗತ್ತನ್ನೇ ತನ್ನತ್ತ ಸೆಳೆದುಕೊಳ್ಳುವ ತಾಕತ್ತು ಈ ವೃಕ್ಷಕ್ಕಿದೆ. ಹಾಗಂತ ಇದು ಕೇವಲ ದೊಡ್ಡ ವೃಕ್ಷ ಎಂಬ ಕಾರಣಕ್ಕಾಗಲೀ ಅಥವಾ ರಾಷ್ಟ್ರೀಯ ವೃಕ್ಷ ಎಂಬ ಕಾರಣಕ್ಕಾಗಲೀ ಪ್ರಾಶಸ್ತ್ಯ ಪಡೆದಿರುವುದಲ್ಲ. ಬದಲಾಗಿ ಆಲದ ವೃಕ್ಷದಿಂದ ನಿಮ್ಮ ಸೌಂದರ್ಯವೂ ಕೂಡ ವೃದ್ಧಿಸಿಕೊಳ್ಳಬಹುದು ಎಂಬುದು ಅನೇಕರಿಗೆ ತಿಳಿದಿರದ ಸಂಗತಿಯಾಗಿದೆ.

ಆರೋಗ್ಯ ಮತ್ತು ಸೌಂದರ್ಯಕ್ಕೆ ಗಣನೀಯ ಕೊಡುಗೆ ನೀಡುವ ಆಲದ ಮರವು ನಮ್ಮ ಜೀವನದ ಒಂದು ಭಾಗವಾಗಿ ಇರಬೇಕಾಗಿರುವುದು ಬಹಳ ಮುಖ್ಯ. ಹಾಗಾದ್ರೆ ನಿಮಗೆ ತಿಳಿದಿರದ ಆಲದ ವೃಕ್ಷದ ಬಗೆಗಿನ ಕೆಲವು ಸೌಂದರ್ಯ ವರ್ಧಕ ವಿಚಾರಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಮುಂದೆ ಓದಿ.

ಚರ್ಮದ ಆರೋಗ್ಯಕ್ಕೆ ಸಹಕಾರಿ

ಚರ್ಮದ ಆರೋಗ್ಯಕ್ಕೆ ಸಹಕಾರಿ

ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಊರಿಯೂತ ಕಡಿಮೆ ಗೊಳಿಸುವ ತಾಕತ್ತಿದೆ.ಹಾಗಾಗಿ ಇದನ್ನು ಚರ್ಮ ಸಂಬಂಧಿ ರೋಗಗಳ ನಿವಾರಣೆಯಲ್ಲಿ ಇದರ ಎಲೆಗಳನ್ನು ಬಳಸಲಾಗುತ್ತದೆ. ಒಣಗಿಸಿದ ಆಲದ ವೃಕ್ಷದ ಎಲೆಗಳಿಂದ ಪೇಸ್ಟ್ ತಯಾರಿಸಿ ಅದಕ್ಕೆ ಮಲ್ಲಿಗೆ ಎಲೆಗಳು,ಚಂದನ, ಇತರೆ ಕೆಲವು ವಸ್ತುಗಳನ್ನು ಮಿಶ್ರಣ ಮಾಡಿ ತೊಂದರೆಯಾಗಿರುವ ಚರ್ಮದ ಭಾಗಕ್ಕೆ ಹಚ್ಚುವ ಮೂಲಕ ಸಮಸ್ಯೆಯಿಂದ ದೂರವಾಗಬಹುದು. ಚರ್ಮದ ಕಲೆಗಳ ನಿವಾರಣೆ ಮತ್ತು ನೋವು ನಿವಾರಣೆಗೂ ಕೂಡ ಇದು ಸಹಕಾರಿ.

ಮುಖ ಕಾಂತಿ ಹೆಚ್ಚಿಸುತ್ತದೆ

ಮುಖ ಕಾಂತಿ ಹೆಚ್ಚಿಸುತ್ತದೆ

ಆಲದ ಹೂವುಗಳು ಕೂಡ ಸೌಂದರ್ಯ ವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ. ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಿಸುವುದಕ್ಕೆ ಇದು ಖಂಡಿತ ಸಹಕಾರಿ.

ಕೂದಲು ಹೆಚ್ಚಳವಾಗುವುದಕ್ಕೆ ಇದು ನೆರವು ನೀಡುತ್ತದೆ:

ಚರ್ಮದ ಕಾಂತಿ ಹೆಚ್ಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ದಟ್ಟನೆಯ ಕಪ್ಪು ಕೂದಲು ಬೇಕು ಎಂದು ಬಯಸುವವರೂ ಕೂಡ ಇದನ್ನು ಬಳಸಬಹುದು.ಆಲದ ಎಲೆಯ ಪುಡಿಯನ್ನು ಎಣ್ಣೆಯೊಂದಿಗೆ ಬಳಸಿ ನಿಮ್ಮ ಕೂದಲಿಗೆ ಮಸಾಜ್ ಮಾಡಿಕೊಳ್ಳುವ ಮೂಲಕ ದಟ್ಟನೆಯ ಕೂದಲು ಪಡೆಯಬಹುದು. ಈ ಮಸಾಜ್ ಎಣ್ಣೆಯಿಂದ ಬೊಕ್ಕತಲೆಯಾಗುವುದನ್ನೂ ಕೂಡ ನಿಯಂತ್ರಿಸಿಕೊಳ್ಳಬಹುದಾಗಿದೆ. ಹಾಗಾಗಿ ಪುರುಷ,ಮಹಿಳೆ ಎಂಬ ಬೇಧಭಾವವಿಲ್ಲದೆ ಇಬ್ಬರೂ ಕೂಡ ತಮ್ಮ ಕೂದಲಿನ ಸೌಂದರ್ಯ ವೃದ್ಧಿಸಿಕೊಳ್ಳಲು ಆಲದ ವೃಕ್ಷದ ಎಲೆಗಳನ್ನು ಬಳಸಬಹುದು.

ಕೂದಲಿನ ಇತರೆ ಸಮಸ್ಯೆಗೂ ಪರಿಣಾಮಕಾರಿ

ಕೂದಲಿನ ಇತರೆ ಸಮಸ್ಯೆಗೂ ಪರಿಣಾಮಕಾರಿ

ಆಂಟಿಫಂಗಲ್ ಗುಣಗಳೂ ಕೂಡ ಇದರಲ್ಲಿ ಇರುವುದರಿಂದಾಗಿ ಕೂದಲಿನ ಇತರೆ ಸಮಸ್ಯೆಗಳಾಗಿರುವ ಡ್ಯಾಂಡ್ರಫ್ ಸೇರಿದಂತೆ ಕೂದಲು ಅಂಟುಅಂಟಾಗಿ ಆರೋಗ್ಯ ಹಾಳಾಗುವ ಸಮಸ್ಯೆಯಲ್ಲೂ ಕೂಡ ಆಲದ ವೃಕ್ಷದ ಎಲೆಗಳನ್ನು ಬಳಸಬಹುದು. ಆಲದ ವೃಕ್ಷದ ಎಲೆಗಳಿಂದ ತೆಗೆದಿರುವ ಎಣ್ಣೆಯು ನಿಮಗೆ ಈ ಸಮಸ್ಯೆಯ ನಿವಾರಣೆಯಲ್ಲಿ ಸಹಕಾರಿಯಾಗಿರುತ್ತದೆ.

ಉದ್ದನೆ ಹೊಳೆಯುವ ಕೂದಲು ನೀಡುತ್ತದೆ

ಉದ್ದನೆ ಹೊಳೆಯುವ ಕೂದಲು ನೀಡುತ್ತದೆ

ಆಲದ ಮರದ ಬೇರುಗಳು ದಪ್ಪವಾಗಿ,ಉದ್ದವಾಗಿ ಇರುತ್ತದೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಕೇವಲ ಆಲದ ಮರದ ಎಲೆಗಳು ಮಾತ್ರವಲ್ಲ ಬದಲಾಗಿ ಅವುಗಳ ಬೇರುಗಳಲ್ಲೂ ಕೂಡ ಕೂದಲಿನ ಆರೋಗ್ಯ ಹೆಚ್ಚಿಸುವ ಕೆಲವು ಅಂಶಗಳಿವೆ. ಹೌದು ಆಲದ ಬೇರುಗಳಿಂದ ತಯಾರಿಸಿದ ಎಣ್ಣೆಯನ್ನು ಬಳಸುವ ಮೂಲಕ ನೀವು ಉದ್ದನೆಯ ಹೊಳೆಯುವ ಕೂದಲು ಪಡೆಯುವುದಕ್ಕೆ ಸಾಧ್ಯವಿದೆ.

English summary

Beauty Benefits of a Banyan Tree on Skin and Hair in Kannada

Here we are discussing about Beauty Benefits of a Banyan Tree on Skin and Hair in Kannada. Being loaded with tons of nutrients, the huge tree is associated with numerous health benefits. Surprisingly, they are also known for magical beauty benefits. Read more.
Story first published: Saturday, June 19, 2021, 18:04 [IST]
X
Desktop Bottom Promotion