For Quick Alerts
ALLOW NOTIFICATIONS  
For Daily Alerts

ಕಣ್ಣಿನ ರೆಪ್ಪೆಯಲ್ಲಾಗುವ ಡ್ಯಾಂಡ್ರಫ್ ನಿವಾರಣೆಗೆ ಮನೆಮದ್ದುಗಳು...

By Sushma Charhra
|

ತಲೆಯಲ್ಲಿ ಡ್ಯಾಂಡ್ರಫ್ ಕಾಣಿಸಿಕೊಳ್ಳುವುದು ಹೆಚ್ಚಿನವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಆದರೆ ಡ್ಯಾಂಡ್ರಫ್ ಗಳು ನಿಮ್ಮ ಕಣ್ಣಿನ ರೆಪ್ಪೆಗಳಲ್ಲಿ ಮತ್ತು ಹುಬ್ಬುಗಳಲ್ಲೂ ಕಾಣಿಸಿಕೊಳ್ಳಬಹುದು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಎಸ್. ನೀವು ಸರಿಯಾಗೇ ಓದಿದ್ದೀರಿ. ಹಲವರಿಗೆ ಈ ರೀತಿಯ ಸಮಸ್ಯೆ ಇರುತ್ತದೆ.

ಬ್ಲೆಫರಿಟೀಸ್ ಅನ್ನುವ ಒಂದು ಸ್ಥಿತಿಯ ಕಾರಣದಿಂದಾಗಿ ಕಣ್ಣಿನ ರೆಪ್ಪೆಗಳಲ್ಲಿ ಉರಿಯೂತ ಕಾಣಿಸಿಕೊಂಡು ಅದರ ಪರಿಣಾಮದಿಂದಾಗಿ ಶಿಲೀಂಧ್ರಗಳಿಂದ ಅಥವಾ ಇನ್ನಿತರೆ ಯಾವುದೇ ಕಾರಣದಿಂದ ಸೋಂಕು ತಗುಲಿ ಕಣ್ಣಿನ ರೆಪ್ಪೆಗಳಲ್ಲಿ ಇಲ್ಲವೇ ಹುಬ್ಬುಗಳಲ್ಲಿ ಡ್ಯಾಂಡ್ರಫ್ ಕಾಣಿಸಿಕೊಳ್ಳುತ್ತದೆ.

Eyelashes

ಇದರ ಪರಿಣಾಮದಿಂದಾಗಿ ನಿಮ್ಮ ಕಣ್ಣಿನ ಸುತ್ತಲಿನ ಚರ್ಮವು ಶುಷ್ಕವಾಗುತ್ತೆ ಮತ್ತು ಸಿಪ್ಪೆ ತೆಗೆಯುವಂತಾಗುತ್ತದೆ. ಅದುವೇ ಡ್ಯಾಂಡ್ರಫ್ ರೀತಿ ಕಾಣುವುದು.ಇದು ನಿಮಗೆ ಕಿರಿಕಿರಿ ಉಂಟು ಮಾಡಬಹುದು ಅಥವಾ ತುರಿಕೆ ಮತ್ತು ಸುಟ್ಟಾಗ ಆಗುವ ಸಂವೇದನೆಯಂತ ಅನುಭವವನ್ನು ನಿಮ್ಮ ಕಣ್ಣಿನ ಸುತ್ತದ ಚರ್ಮದ ಪ್ರದೇಶದಲ್ಲಿ ಉಂಟು ಮಾಡಬಹುದು. ಆದರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ನೀವು ಕೆಲವು ಮನೆಮದ್ದುಗಳನ್ನು ಪ್ರಯೋಗ ಮಾಡಿದರೆ ಇದನ್ನು ಸುಲಭದಲ್ಲೇ ನಿವಾರಿಸಿಕೊಳ್ಳಬಹುದು. ಈ ಲೇಖನ ನಿಮಗೆ ಕೆಲವು ಸರಳವಾದ ಮನೆಮದ್ದುಗಳನ್ನು ತಿಳಿಸಿಕೊಡಲಿದೆ ಮತ್ತು ನಿಮ್ಮ ಕಣ್ಣಿನ ರೆಪ್ಪೆಯಲ್ಲಿ ಡ್ಯಾಂಡ್ರಫ್ ನಿವಾರಣೆಗೆ ಉಪಾಯಗಳನ್ನು ಹೇಳಲಿದೆ. ಹಾಗಾಗಿ ಈ ಲೇಖನ ಓದುವುದನ್ನು ಬಿಡಬೇಡಿ. ಮುಂದುವರಿಸಿ..

ಆದರೆ, ನೇರವಾಗಿ ಕಣ್ಣಿಗೆ ಮೊದಲು ಪ್ರಯತ್ನಿಸುವ ಬದಲು ನಿಮ್ಮ ಚರ್ಮದ ಇತರೆ ಭಾಗದಲ್ಲಿ ಪ್ರಯತ್ನಿಸಿ, ಈ ಮನೆಮದ್ದುಗಳ ಪದಾರ್ಥಗಳು ನಿಮ್ಮ ಚರ್ಮದಲ್ಲಿ ಹೇಗೆ ವರ್ತಿಸುತ್ತದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.. ಯಾಕೆಂದರೆ ಕಣ್ಣಿನ ಸುತ್ತಲಿನ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಹೆಚ್ಚಿನ ಜಾಗೃತಿ ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಯಾವುದಾದರೂ ಸಮಸ್ಯೆ ಆಗುತ್ತೆ ಎಂದು ಅನ್ನಿಸಿದರೆ ನೀವು ಈ ಮನೆಮದ್ದುಗಳನ್ನು ಕಣ್ಣಿನ ಹತ್ತಿರ ಪ್ರಯತ್ನಿಸದೇ ಇರುವುದೇ ಸೂಕ್ತ.

*ಬಾದಾಮಿ ಎಣ್ಣೆ

*ಬಾದಾಮಿ ಎಣ್ಣೆ

ಕೆಲವೊಮ್ಮೆ ಚರ್ಮದ ಸತ್ತ ಜೀವಕೋಶಗಳು ಡ್ಯಾಂಡ್ರಫ್ ಗೆ ಕಾರಣವಾಗುತ್ತೆ. ಬಾದಾಮಿ ಎಣ್ಣೆ ಕಣ್ಣಿನ ಸುತ್ತ ಹೀಗೆ ಸತ್ತ ಜೀವಕೋಶಗಳಿಂದ ಉಂಟಾಗುವ ಡ್ಯಾಂಡ್ರಫ್ ನ್ನು ನಿವಾರಿಸು ಸಹಾಯ ಮಾಡುತ್ತೆ. ಇದರ ಜೊತೆಗೆ ಕಣ್ಣಿನ ರೆಪ್ಪೆಯಲ್ಲಿ ತೇವಾಂಶ ಕಾಯ್ದುಕೊಂಡಿರುವಂತೆ ಮಾಡಲು ಇದಲು ನೆರವಾಗುತ್ತೆ.

ಬೇಕಾಗುವ ವಸ್ತು :

  • 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆ
  • ಮಾಡುವ ವಿಧಾನ ಹೇಗೆ? :

    ಒಂದು ಟೇಬಲ್ ಸ್ಪೂನ್ ಬಾದಾಮಿ ಎಣ್ಣೆ ತೆಗೆದುಕೊಳ್ಳಿ ಮತ್ತು ಅದನ್ನು ಸ್ವಲ್ಪ ಬಿಸಿ ಮಾಡಿ. ಈಗ ಅದನ್ನು ನಿಮ್ಮ ಕಣ್ಣುಗಳ ರೆಪ್ಪೆಗಳಿಗೆ ಹಚ್ಚಿಕೊಳ್ಳಿ ಮತ್ತು ನಿಧಾನವಾಗಿ ಮಸಾಜ್ ಮಾಡಿ.ಒಂದು ರಾತ್ರಿ ಹಾಗೆಯೇ ಬಿಡಿ ಮತ್ತು ಮಾರನೆಯ ದಿನ ಬೆಳಿಗ್ಗೆ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ.ಉತ್ತಮ ಫಲಿತಾಂಶಕ್ಕಾಗಿ ನೀವಿದನ್ನು ಪ್ರತಿದಿನವೂ ಪ್ರಯತ್ನಿಸಬಹುದು.

    ಆಲಿವ್ ಎಣ್ಣೆ

    ಆಲಿವ್ ಎಣ್ಣೆ

    ಆಲಿವ್ ಎಣ್ಣೆ ನಿಮ್ಮ ಕಣ್ಣಿನ ರೆಪ್ಪೆಯನ್ನು ಹೈಡ್ರೇಟ್ ಮಾಡಲು ಸಹಾಯಕವಾಗಿದೆ ಮತ್ತು ಆ ಮೂಲಕ ನಿಮ್ಮ ಕಣ್ಣಿನ ರೆಪ್ಪೆಯಲ್ಲಿ ಮಾಯ್ಚರ್ ಕಾಯ್ದುಕೊಳ್ಳುವಂತಾಗುತ್ತದೆ. ಇದು ನಿಮ್ಮ ಕಣ್ಣಿನ ಸುತ್ತದ ಚರ್ಮವು ಶುಷ್ಕವಾಗುವುದನ್ನು ತಡೆಯುತ್ತದೆ ಮತ್ತು ಆ ಮೂಲಕ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡುತ್ತದೆ.

    ಬೇಕಾಗುವ ಪದಾರ್ಥಗಳು :

    • 1 ಟೇಬಲ್ ಸ್ಪೂನ್ ಆಲಿವ್ ಎಣ್ಣೆ

    • ನೀರು

    • ತೊಳೆಯಲು ಬಟ್ಟೆ

    ಮಾಡುವ ವಿಧಾನ ಹೇಗೆ? :

    ಮೊದಲಿಗೆ, ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿ ಮತ್ತು ನಿಮ್ಮ ಕಣ್ಣಿನ ರೆಪ್ಪೆಗಳ ಸುತ್ತ ಹಚ್ಚಿ ಮಸಾಜ್ ಮಾಡಿ ಮತ್ತು ಕಣ್ಣನ್ನೂ ಮಸಾಜ್ ಮಾಡಿ.. ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಮತ್ತು ಆ ಬಟ್ಟೆಯನ್ನು ನಿಮ್ಮ ಕಣ್ಣಿನ ರೆಪ್ಪೆಯ ಮೇಲೆ 15 ನಿಮಿಷ ಹಾಗೆಯೇ ಬಿಡಿ. ಹೆಚ್ಚಾದ ಎಣ್ಣೆಯ ಅಂಶವನ್ನು ಹದವಾಗಿ ಬಿಸಿಯಾದ ನೀರಿನಿಂದ ತೊಳೆಯಿರಿ. ಡ್ಯಾಂಡ್ರಫ್ ನಿಂದ ಮುಕ್ತಿ ಪಡೆಯಲು ಪ್ರತಿ ದಿನ ಎರಡು ಬಾರಿ ಪ್ರಯತ್ನಿಸಿ.

    ಅಲೋವೆರಾ

    ಅಲೋವೆರಾ

    ಅಲವೀರಾವು ಯಾವುದೇ ರೀತಿಯ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರ ಗಳಿಂದ ನಿಮ್ಮ ಕಣ್ಣಿನ ರೆಪ್ಪೆಯಲ್ಲಿ ಉಂಟಾಗುವ ಯಾವುದೇ ರೀತಿಯ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು ನೆರವು ನೀಡುತ್ತದೆ. ಅಷ್ಟೇ ಅಲ್ಲ, ಕಣ್ಣಿನ ರೆಪ್ಪೆಗಳ ಬೆಳವಣಿಗೆಗೂ ಕೂಡ ಇದು ಸಹಕಾರಿಯಾಗಿದೆ.

    ಬೇಕಾಗುವ ಪದಾರ್ಥಗಳು :

    • ಅಲವೀರಾ ಜೆಲ್

    • ಹತ್ತಿಯ ತುಂಡು ಗಳು ಇಲ್ಲವೇ ಬಾಲ್ ಗಳು

    ಮಾಡುವ ವಿಧಾನ ಹೇಗೆ? :

    ಅಲವೀರಾದ ಎಲೆಯನ್ನು ಕತ್ತರಿಸಿ, ಅದರ ಜೆಲ್ ನ್ನು ಹೊರ ತೆಗೆಯಿರಿ. ಹತ್ತಿಯನ್ನು ಅಥವಾ ಕಾಟನ್ ಬಟ್ಟೆಯನ್ನು ಬಳಸಿ, ನಿಮ್ಮ ಕಣ್ಣಿನ ಸುತ್ತ ಅದನ್ನು ಅಪ್ಲೈ ಮಾಡಿ. ಸುಮಾರು 5 ನಿಮಿಷ ಅದು ಹಾಗೆಯೇ ಇರಲಿ, ನಂತರ ಹದವಾಗಿ ಬೆಚ್ಚಗಿರುವ ನೀರಿನಲ್ಲಿ ಕಣ್ಣುಗಳನ್ನು ತೊಳೆದುಕೊಳ್ಳಿ. ಪ್ರತಿದಿನವೂ ಈ ರೆಮಿಡಿಯನ್ನು ಪ್ರಯತ್ನಿಸಿ. ಆ ಮೂಲಕ ಆದಷ್ಟು ಬೇಗ ನಿಮ್ಮ ಕಣ್ಣಿನ ರೆಪ್ಪೆಯಲ್ಲಿನ ಡ್ಯಾಂಡ್ರಫ್ ನ್ನು ನಿವಾರಿಸಿಕೊಳ್ಳಬಹುದು.

    ನಿಂಬೆಯ ರಸ

    ನಿಂಬೆಯ ರಸ

    ನಿಂಬೆಯ ರಸವು ಸಿಟ್ರಿಕ್ ಆಸಿಡ್ ಅಂಶವನ್ನು ಒಳಗೊಂಡಿರುತ್ತೆ, ಅದು ನಿಮ್ಮ ಶಿಲೀಂದ್ರಗಳಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸುವಲ್ಲಿ ಇದು ನೆರವು ನೀಡುತ್ತದೆ.

    ಬೇಕಾಗುವ ಪದಾರ್ಥಗಳು :

    • ನಿಂಬೆಯ ರಸ

    • ನೀರು

    • ಹತ್ತಿಯ ತುಂಡುಗಳು

    ಮಾಡುವ ವಿಧಾನ ಹೇಗೆ? :

    ¼th ಕಪ್ ನೀರಿಗೆ, ಕೆಲವು ಹನಿ ನಿಂಬೆರಸ ಸೇರಿಸಿ ಅದನ್ನು ಮಿಕ್ಸ್ ಮಾಡಿ.ಈಗ ಅದಕ್ಕೆ ಕಾಟನ್ ಬಟ್ಟೆಯನ್ನು ಅದ್ದಿ, ಅದನ್ನು ನಿಮ್ಮ ಕಣ್ಣಿನ ರೆಪ್ಪೆಗೆ ಮತ್ತು ಕಣ್ಣಿನ ಸುತ್ತ ಅಪ್ಲೈ ಮಾಡಿ.. ಸುಮಾರು 5 ನಿಮಿಷ ಈ ಮಿಶ್ರಣ ಹಾಗೆಯೇ ನಿಮ್ಮ ಕಣ್ಣುಗಳ ಬಳಿ ಇರಲಿ. ನಂತರ ತಣ್ಣನೆಯ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ.ಪ್ರತಿದಿನವೂ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

    ಪೆಟ್ರೋಲಿಯಂ ಜೆಲ್ಲಿ

    ಪೆಟ್ರೋಲಿಯಂ ಜೆಲ್ಲಿ

    ಪೆಟ್ರೋಲಿಯಂ ಜೆಲ್ಲಿ ಯಾವಾಗಲೂ ಕೂಡ ಶುಷ್ಕವಾದ ಮತ್ತು ಸಿಪ್ಪೆ ಸುಲಿಯುವಂತಾಗುವ ಚರ್ಮಕ್ಕೆ ಉತ್ತಮ ಪರಿಹಾರವಾಗಿದೆ. ಇದರ ಜೊತೆಗೆ ನಿಮ್ಮ ಕಣ್ಣಿನ ರೆಪ್ಪೆಯನ್ನು ಹೈಡ್ರೇಟ್ ಮಾಡಲು ಇದು ಅನುಕೂಲಕರವಾಗಿರುತ್ತದೆ.

    ಮಾಡುವ ವಿಧಾನ ಹೇಗೆ? :

    ನೀವು ಯಾವಾಗಲೂ ಪೆಟ್ರೋಲಿಯಂ ಜೆಲ್ಲಿಯನ್ನು ನಿಮ್ಮ ಕಣ್ಣಿನ ರೆಪ್ಪೆಗಳಿಗೆ ಹಚ್ಚಿಕೊಳ್ಳುವ ರೂಢಿಯನ್ನು ಇಟ್ಟುಕೊಳ್ಳಿ. ಮತ್ತು ನಿಧಾನವಾಗಿ ನಿಮ್ಮ ಕಣ್ಣುಗಳನ್ನು ಮಸಾಜ್ ಮಾಡಿ, ರಾತ್ರಿ ಪೂರ್ತಿ ಹಾಗೆಯೇ ಇರಲು ಬಿಡಿ. ಮಾರನೆಯ ದಿನ ಬೆಳಿಗ್ಗೆ ಎದ್ದ ಕೂಡಲೇ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಪ್ರತಿ ದಿನ ರಾತ್ರಿಯೂ ಈ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು.

    ಉಪ್ಪು

    ಉಪ್ಪು

    ಉಪ್ಪು ನಿಮ್ಮ ಕಣ್ಣಿನ ಬುಡದಲ್ಲಿರುವ ಮತ್ತು ಕಣ್ಣಿನ ರೆಪ್ಪೆಯಲ್ಲಿರುವ ಅತಿಯಾದ ಎಣ್ಣೆಯ ಅಂಶವನ್ನು ತೆಗೆಯಲು ನೆರವು ನೀಡುತ್ತದೆ.

    ಬೇಕಾಗುವ ಪದಾರ್ಥಗಳು :

    • 1 ಟೇಬಲ್ ಸ್ಪೂನ್ ಉಪ್ಪು

    • ನೀರು

    ಮಾಡುವ ವಿಧಾನ ಹೇಗೆ? :

    ¼ ಕಪ್ ನಷ್ಟು ನೀರನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ ಮತ್ತು ಅದಕ್ಕೆ 1 ಟೇಬಲ್ ಸ್ಪೂನ್ ಉಪ್ಪನ್ನು ಸೇರಿಸಿ ಮತ್ತು ಚೆನ್ನಾಗಿ ಕರಗಿಸಿ. ಈ ಉಪ್ಪು ನೀರಿನಲ್ಲಿ ಒಂದು ಹತ್ತಿಯನ್ನು ಅದ್ದಿ, ಅದರಿಂದ ನಿಮ್ಮ ಕಣ್ಣಿನ ರೆಪ್ಪೆಯನ್ನು ಮತ್ತು ಕಣ್ಣಿಗೆ ಅಪ್ಲೈ ಮಾಡಿ, 10 ನಿಮಿಷ ಹಾಗೆಯೇ ಇರಲಿ ನಂತರ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. ಉತ್ತಮ ಫಲಿತಾಂಶ ಪಡೆಯಲು ಪ್ರತಿದಿನವೂ ಇದನ್ನು ಮಾಡಿ ಪ್ರಯತ್ನಿಸಿ ನೋಡಿ.,

English summary

Remedies For Dandruff On Eyelashes

Did you know that dandruff can even appear on your eyelashes and eyebrows? You can easily deal with this if you try out some homemade remedies. Ingredients like almond oil, petroleum jelly, aloe vera, etc., can help you with this. These ingredients nourish the minute hair on the eyelashes and remove dandruff for good.
X
Desktop Bottom Promotion