For Quick Alerts
ALLOW NOTIFICATIONS  
For Daily Alerts

ಬಣ್ಣದ ಆಟವಾಡುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ವಹಿಸಿ

By Jayasubramanya
|

ಬಣ್ಣದ ಹಬ್ಬವೆಂದೇ ಖ್ಯಾತಿ ಎತ್ತಿರುವ ಹೋಲಿ ಹಬ್ಬ ಬಂದೇ ಬಿಟ್ಟಿದೆ. ಬಣ್ಣಗಳ ಎರಚಾಟ ನಡೆಯುವಾಗ ಕೇಳಿ ಬರುವ ಮಾತೊಂದೇ ತಪ್ಪು ತಿಳಿಯಬೇಡಿ ಇದು ಹೋಲಿಯಾಗಿದೆ ಎಂದು. ಅಂದರೆ ಬಣ್ಣಗಳನ್ನು ನಿಮ್ಮ ಮೇಲೆ ಎಸೆಯುವಾಗ ಇಲ್ಲವೇ ಬಣ್ಣದ ನೀರಿನ ಓಕುಳಿ ನಡೆಯುವಾಗ ನೀವು ತಪ್ಪು ತಿಳಿಯದೆಯೇ ಒಂದಾಗಿ ಬೆರೆತು ಆಟವನ್ನು ಆಡಿ ಎಂಬ ಸಂದೇಶವನ್ನು ಇದು ನೀಡುತ್ತಿದೆ. ಬಣ್ಣಗಳ ಹಬ್ಬವೆಂದೇ ಕರೆಯಲಾಗುವ ಹೋಳಿ ಯಾ ಹೋಲಿ ಹಬ್ಬ ಉತ್ತರದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಈಗೀಗ ದಕ್ಷಿಣಭಾಗದ ಕಡೆಗಳಲ್ಲಿಯೂ ಕೂಡ ಹೋಲಿ ಹಬ್ಬಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ. ತಣಿಯದ ಉತ್ಸಾಹ, ತಾಜಾ ಅನುಭವ ಹೊಸ ವರ್ಷದ ನೂತನ ಆರಂಭ, ಅಂತೆಯೇ ಸಮಸ್ಯೆಗಳಿಗೆ ಕಡಿವಾಣ ಹಾಕಿ ಹೊಸತನದ ಕಡೆಗೆ ಮುನ್ನುಗ್ಗುವುದು ಮೊದಲಾದ ಅರ್ಥವನ್ನು ಹೋಲಿ ಪಡೆದುಕೊಂಡಿದೆ. ಬಣ್ಣಗಳ ಸಂಭ್ರಮದಲ್ಲಿ ಈಗೀಗ ಬರುವ ಬಣ್ಣಗಳು ಕೆಲವೊಮ್ಮೆ ತ್ವಚೆಯ ಮೇಲೆ ಪರಿಣಾಮವನ್ನು ಬೀರುವ ಸಂಭವ ಕೂಡ ಇದೆ. ಹೌದು ಈಗೀಗ ಬರುವ ಬಣ್ಣಗಳು ರಾಸಾಯನಿಕವನ್ನು ಒಳಗೊಂಡಿರುವುದರಿಂದ ನಿಮ್ಮ ಕೂದಲು ಮತ್ತು ತ್ವಚೆಯ ಬಗ್ಗೆ ಹೆಚ್ಚು ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ.

ಹೋಳಿ ಹಬ್ಬದಲ್ಲಿ ಮೈಮರೆತು, ಅಪಾಯಕ್ಕೆ ಆಹ್ವಾನ ನೀಡಬೇಡಿ!

ಹೋಲಿ ಆಟವನ್ನು ಆಡುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ಪಾಲಿಸಿಕೊಂಡು ನಂತರಷ್ಟೇ ಆಟವನ್ನು ಆಡಲು ಮುಂದಾಗಿ. ಇಂದಿನ ಲೇಖನದಲ್ಲಿ ಈ ಹೋಲಿಗಾಗಿ ನೀವು ಅನುಸರಿಸಲೇಬೇಕಾದ ಹತ್ತು ಕ್ರಮಗಳನ್ನು ನಾವು ನೀಡುತ್ತಿದ್ದು ಇದು ಒಂದು ರೀತಿಯಲ್ಲಿ ನಿಮಗೆ ನಾವು ನೀಡುತ್ತಿರುವ ಸಲಹೆಯಾಗಿದೆ. ಹಾಗಿದ್ದರೆ ಬನ್ನಿ ಆ ಸಲಹೆಗಳೇನು ಎಂಬುದನ್ನು ಅರಿತುಕೊಂಡು ನಂತರ ಹೋಲಿ ಆಟಕ್ಕೆ ಮುಂದಾಗಿ....

ಬಣ್ಣದ ಬಟ್ಟೆಗಳನ್ನು ಧರಿಸಿ

ಬಣ್ಣದ ಬಟ್ಟೆಗಳನ್ನು ಧರಿಸಿ

ಸಲ್ವಾರ್ ಕಮೀಜ್‌ನಂತಹ ದಿರಿಸುಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ. ಆದಷ್ಟು ಹಳೆಯ ಬಣ್ಣದ ಬಟ್ಟೆಗಳನ್ನು ಬಳಕೆ ಮಾಡಿ. ನಿಮ್ಮ ತ್ವಚೆಯು ಹೆಚ್ಚು ಕಾಣುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಆ ಬಗೆಯಲ್ಲಿರುವ ದಿರಿಸನ್ನು ಧರಿಸಿ. ಇದರಿಂದ ನಿಮ್ಮ ತ್ವಚೆಯ ಮೇಲೆ ಉಂಟಾಗುವ ಪರಿಣಾಮವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ನಿಮ್ಮ ತ್ವಚೆಯನ್ನು ನಿರ್ಜಲೀಕರಣವು ಒಣಗಿಸಬಹುದು. ಈ ಬಣ್ಣಗಳು ನಿಮ್ಮ ದೇಹಕ್ಕೆ ಬಿದ್ದೊಡನೆ ಅವುಗಳು ರಾಸಾಯನಿಕ ರೀತಿಯಲ್ಲಿ ನಿಮ್ಮ ತ್ವಚೆಯ ಮೇಲೆ ಪರಿಣಾಮವನ್ನು ಬೀರಬಲ್ಲವು. ಇದನ್ನೆಲ್ಲಾ ನಿವಾರಿಸಿಕೊಳ್ಳುವುದಕ್ಕಾಗಿ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಿ. ತಾಜಾ ಹಣ್ಣಿನ ರಸ ಇಲ್ಲವೇ ಗ್ಲುಕೋಸ್ ಮೊದಲಾದ ಪಾನೀಯಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿ.

ನಿಮ್ಮ ತ್ವಚೆಗೆ ಮತ್ತು ತುಟಿಗೆ ಮಾಯಿಶ್ಚರೈಸ್ ಮಾಡಿಕೊಳ್ಳಿ

ನಿಮ್ಮ ತ್ವಚೆಗೆ ಮತ್ತು ತುಟಿಗೆ ಮಾಯಿಶ್ಚರೈಸ್ ಮಾಡಿಕೊಳ್ಳಿ

ನಿಮಗೆ ಗೊತ್ತೇ ಇರುವಂತೆ ನಿಮ್ಮ ತುಟಿ ಮತ್ತು ತ್ವಚೆ ಹೆಚ್ಚು ಸೂಕ್ಷ್ಮವಾಗಿವೆ. ಸಾಕಷ್ಟು ನೀರು ಕುಡಿಯುವುದು ನಿಮ್ಮ ಇತರ ಅಂಗಗಳನ್ನು ರಾಸಾಯನಿಕಗಳಿಂದ ರಕ್ಷಿಸಬಹುದು, ಆದರೆ ಕಿವಿ, ತುಟಿ ಮತ್ತು ಮುಖಕ್ಕೆ ಹೆಚ್ಚುವರಿ ಕಾಳಜಿಯನ್ನು ನೀವು ವಹಿಸಲೇಬೇಕಾಗುತ್ತದೆ. ಪೆಟ್ರೋಲಿಯಂ ಜೆಲ್ಲಿ ಅನ್ನು ನಿಮ್ಮ ಮುಖ, ಕಿವಿ ಮತ್ತು ತುಟಿಗಳಿಗೆ ಸವರಿ. ಲಿಪ್ ಬಾಬ್ ಸವರುವುದು ಕೂಡ ಉತ್ತಮವಾಗಿದೆ. ಇದರಿಂದ ಬಣ್ಣದ ಪರಿಣಾಮ ನಿಮ್ಮ ತುಟಿ, ಕಿವಿ ಮತ್ತು ಮುಖದ ಮೇಲೆ ಉಂಟಾಗುವುದಿಲ್ಲ.

ಸನ್ ಗ್ಲಾಸ್ ಬಳಸಿ

ಸನ್ ಗ್ಲಾಸ್ ಬಳಸಿ

ಬಣ್ಣಗಳಲ್ಲಿರುವ ರಾಸಾಯನಿಕಗಳು ನೇರವಾಗಿ ನಿಮ್ಮ ಕಣ್ಣುಗಳ ಮೇಲೆ ಬೀಳದಿರುವಂತೆ ಮಾಡಲು ಸನ್ ಗ್ಲಾಸ್ ಬಳಸಿ. ಕಣ್ಣಿಗೆ ಬಣ್ಣ ಬಿದ್ದಿದೆ ಎಂದಾದಲ್ಲಿ ಕೂಡಲೇ ನೀರು ಬಳಸಿ ಕಣ್ಣನ್ನು ತೊಳೆದುಕೊಳ್ಳಿ. ನೀವು ಕಣ್ಣಿಗೆ ಬಿದ್ದ ಹುಡಿಯನ್ನು ಹಾಗೆಯೇ ಬಿಟ್ಟಿರಿ ಎಂದಾದಲ್ಲಿ ಕಣ್ಣುರಿ, ಕಣ್ಣಿನ ತುರಿಕೆ ಮೊದಲಾದ ಅಪಾಯಗಳಿಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಸನ್ ಗ್ಲಾಸ್ ಬಳಸಿಕೊಂಡು ಹೋಲಿ ಆಟವನ್ನಾಡಿ.

ಒಣ ಬಟ್ಟೆ ಧರಿಸಿ

ಒಣ ಬಟ್ಟೆ ಧರಿಸಿ

ಹೆಚ್ಚು ಸಮಯ ಒದ್ದೆ ಬಟ್ಟೆಯಲ್ಲಿಯೇ ನೀವು ಇದ್ದೀರಿ ಎಂದಾದಲ್ಲಿ ಕೂಡಲೇ ಒಣ ಬಟ್ಟೆಯನ್ನು ಧರಿಸಿಕೊಳ್ಳಿ. ಒದ್ದೆ ಬಟ್ಟೆಯಲ್ಲಿ ಎಲರ್ಜಿ ನಿಮ್ಮನ್ನು ಕಾಡಬಹುದು. ಮೊಸರು ಬಳಸಿ ಕೂಡ ನೀವು ಹೋಲಿ ಹಬ್ಬವನ್ನಾಡಬಹುದು. ಇದರಿಂದ ನಿಮ್ಮ ತ್ವಚೆಗೂ ಉತ್ತಮ ಸ್ವಾಸ್ಥ್ಯ ದೊರಕುತ್ತದೆ ಮತ್ತು ರಾಸಾಯನಿಕ ಪರಿಣಾಮ ಕೂಡ ಉಂಟಾಗುವುದಿಲ್ಲ.

ನೇಲ್ ಪಾಲಿಶ್ ಹಚ್ಚಿಕೊಳ್ಳಿ

ನೇಲ್ ಪಾಲಿಶ್ ಹಚ್ಚಿಕೊಳ್ಳಿ

ಹಬ್ಬದ ಸಮಯದಲ್ಲಿ ನೇಲ್ ಪಾಲಿಶ್ ಹಚ್ಚುವುದು ಉತ್ತಮ ಕ್ರಮವಾಗಿದೆ. ಸಾಧ್ಯವಾದಷ್ಟು ಹೆಚ್ಚಿನ ಕೋಟಿಂಗ್ ನೇಲ್ ಪಾಲಿಶ್ ಮಾಡಿಕೊಳ್ಳಿ. ಇದು ಬಣ್ಣಗಳಿಂದ ನಿಮ್ಮ ಉಗುರುಗಳನ್ನು ರಕ್ಷಿಸುತ್ತದೆ. ಆದಷ್ಟು ಗಾಢ ಬಣ್ಣವನ್ನು ಉಗುರಿಗೆ ಬಳಸಿ.

ಸನ್‌ಸ್ಕ್ರೀನ್ ಹಚ್ಚಿ

ಸನ್‌ಸ್ಕ್ರೀನ್ ಹಚ್ಚಿ

ಹೋಲಿ ಹಬ್ಬದ ಸಮಯದಲ್ಲಿ ಸನ್ ಸ್ಕ್ರೀನ್ ಇಲ್ಲದೆಯೇ ಆಟವನ್ನಾಡುವುದು ಒಳ್ಳೆಯದಲ್ಲ. ಗಂಟೆಗೊಮ್ಮೆ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ. ಬಿಸಿಲು ಕಾಲದಲ್ಲಿ ರಕ್ಷಣೆಯನ್ನು ಮಾಡುವುದರ ಜೊತೆಗೆ ನಿಮ್ಮ ತ್ವಚೆಯನ್ನು ಇದು ಕಾಪಾಡುತ್ತದೆ. ನಿಮ್ಮ ತ್ವಚೆಯ ಬಣ್ಣವನ್ನು ರಕ್ಷಿಸಲು ಸನ್ ಸ್ಕ್ರೀನ್ ಸಹಕಾರಿಯಾಗಿದೆ. ಹೋಲಿ ಮುಗಿದ ನಂತರ ನಿಮ್ಮ ಹಿಂದಿನ ಬಣ್ಣ ಹೋಗಿ ಸನ್ ಬರ್ನ್‌ನಂತಹ ಅಪಾಯಕ್ಕೆ ನೀವು ಒಳಗಾಗಬಾರದಲ್ಲವೇ?

ಡ್ರೈ ಹೋಲಿ ಆಡಿ

ಡ್ರೈ ಹೋಲಿ ಆಡಿ

ನಿಮ್ಮ ಕೂದಲು ಮತ್ತು ತ್ವಚೆಯನ್ನು ಕಾಪಾಡಿಕೊಳ್ಳಲು, ಬಣ್ಣಗಳ ಎರಚಾಟವನ್ನು ಮಾತ್ರ ಆಡಿ. ಬಣ್ಣದ ನೀರನ್ನು ಬಳಸುವುದನ್ನು ಕಡಿಮೆ ಮಾಡಿ. ಬಣ್ಣವನ್ನು ನೀವು ಕೂಡಲೇ ತೊಡೆದುಕೊಳ್ಳಬಹುದಾದ್ದರಿಂದ ನಿಮ್ಮ ತ್ವಚೆಗೆ ಇದರಿಂದ ಹೆಚ್ಚು ಪರಿಣಾಮ ಉಂಟಾಗುವುದಿಲ್ಲ. ಹೋಲಿ ಆಡುವಾಗ ಗಂಟೆಗೊಮ್ಮೆ ಮುಖ ತೊಳೆದುಕೊಳ್ಳುತ್ತಿರಿ.

ತೆಂಗಿನೆಣ್ಣೆ ಮತ್ತು ಸಾಸಿವೆ ಎಣ್ಣೆ ಬಳಸಿ

ತೆಂಗಿನೆಣ್ಣೆ ಮತ್ತು ಸಾಸಿವೆ ಎಣ್ಣೆ ಬಳಸಿ

ನೀವು ಹೋಲಿ ಆಟವನ್ನಾಡುವ ಮುನ್ನ ತೆಂಗಿನೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಮುಖಕ್ಕೆ ಇಲ್ಲವೇ ಕೂದಲಿಗೆ ಹಚ್ಚಿಕೊಂಡು ಆಟವಾಡಲು ಮುಂದಾಗಿ. ಈ ಎಣ್ಣೆಗಳು ರಾಸಾಯನಿಕಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ ಮತ್ತು ಬಣ್ಣಗಳನ್ನು ತೊಳೆದುಕೊಳ್ಳಲು ಈ ಎಣ್ಣೆಗಳು ನಿಮಗೆ ಸಹಾಯ ಮಾಡಲಿವೆ.

ಹರ್ಬಲ್ ಬಣ್ಣ ಬಳಸಿ

ಹರ್ಬಲ್ ಬಣ್ಣ ಬಳಸಿ

ಬಣ್ಣಗಳ ಆಯ್ಕೆಯನ್ನು ಮಾಡುವಾಗ ಆದಷ್ಟು ಹರ್ಬಲ್ ಇಲ್ಲವೇ ನೈಸರ್ಗಿಕವಾಗಿರುವ ಬಣ್ಣಗಳನ್ನು ಬಳಸಿ. ಬಿಳಿ, ಹಸಿರು ಇವೇ ಮೊದಲಾದ ಹೆಚ್ಚು ಗಾಢವಾಗಿಲ್ಲದ ಬಣ್ಣಗಳನ್ನು ಬಳಸಿ. ಇದರಿಂದ ಇತರರೂ ನಿಮ್ಮನ್ನು ಅನುಸರಿಸುತ್ತಾರೆ ಮತ್ತು ತ್ವಚೆಯ ರಕ್ಷಣೆಯನ್ನು ನಿಮಗೆ ಮಾಡಿಕೊಳ್ಳಬಹುದು.

ಬಣ್ಣಗಳನ್ನು ತೆಗೆಯುವುದು

ಬಣ್ಣಗಳನ್ನು ತೆಗೆಯುವುದು

ಬಣ್ಣಗಳನ್ನು ಆಟವಾಡಿದ ನಂತರ ಅದನ್ನು ತೊಳೆಯವ ಕೆಲಸ ಬಾಕಿ ಇರುತ್ತದೆ. ನಿಮ್ಮ ಮೈಗೆ ಕಡಿಮೆ ಬಣ್ಣ ಮೆತ್ತಿಕೊಂಡಿದ್ದರೂ ಅದನ್ನು ತೆಗೆಯಲು ನಿರ್ಲಕ್ಷ್ಯಪಡಬೇಡಿ. ಅವುಗಳು ಒದ್ದೆ ಇರುವಾಗಲೇ ಬಣ್ಣವನ್ನು ತೊಡೆಯಲು ಪ್ರಯತ್ನಿಸಿ. ಬಣ್ಣ ಒಣಗಿದ ನಂತರ ತೊಡೆದು ಹಾಕುವುದು ಕಷ್ಟಕರವಾಗಿರುತ್ತದೆ.

ಹೋಲಿಯಾಟದ ನಂತರದ ಸ್ನಾನ

ಹೋಲಿಯಾಟದ ನಂತರದ ಸ್ನಾನ

ನಿಮ್ಮ ದೇಹದಿಂದ ನೀವು ಹೋಲಿ ಬಣ್ಣವನ್ನು ತೊಡೆದುಕೊಂಡಿದ್ದರೂ ನಿಮ್ಮ ದೇಹಕ್ಕೆ ಸಾಕಷ್ಟು ಮಾಯಿಶ್ಚರೈಸರ್ ಅನ್ನು ಬಳಸಿ. ಇದರಿಂದ ರಾಸಾಯನಿಕಗಳ ಹಾನಿಯನ್ನು ತಗ್ಗಿಸಿಕೊಳ್ಳಬಹುದಾಗಿದೆ.

English summary

New and innovative ways to take care of your skin this holi

The time of the year when all the dullness of our lives vanishes and a new rush of colour, hope and positivity sets in is almost here. Yes, we are talking about that one festival all of us have been looking forward to throughout the year; the festival of colours, the festival of Holi. While this festival brings along unrestrained joy and promises of fresh start and new beginnings, it also ushers in a whole new set of problems. Yes, we are talking about skin care problems.
Story first published: Friday, March 2, 2018, 13:06 [IST]
X
Desktop Bottom Promotion